December 28 Horoscope: ಈ ದಿನ ಯಾರಿಗೆಲ್ಲಾ ಅಚ್ಚರಿ ಫಲಿತಾಂಶ!

ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 28 (December 28 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲಕರ ಆಗಿರಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಶುಭವಾಗುತ್ತಿದೆ. ಆಪ್ತರ ಬಳಿ ನಿಮ್ಮ ಕಷ್ಟಗಳ ಹೇಳಿಕೊಳ್ಳುವಿರಿ. ನಿಮ್ಮಿಂದ ಸಂಬಂಧಿಕರೊಬ್ಬರಿಗೆ ಸಹಾಯವಾಗಲಿದೆ. ದಾಂಪತ್ಯದಲ್ಲಿನ ಮುನಿಸುವ ಅಥವಾ ಮನಸ್ತಾಪ ನಿವಾರಣೆಯಾಗುತ್ತಿದೆ.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಈ ದಿನವು ಮಿಶ್ರಫಲ. ಗೃಹಿಣಿಯರು ಅನಾರೋಗ್ಯಕ್ಕೆ ತುತ್ತಾಗಬಹುದು, ನಿಮ್ಮ ಕೆಲಸಗಳಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಮನೆಯ ವಿಚಾರದಲ್ಲಿ ನಿಮಗೆ ಶುಭವಿದೆ. ವಾಹನ ವಿಚಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ.

December-28-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿರಬಹುದು. ನಿಮ್ಮಿಂದಾಗಿ ಹಲವು ಕೆಲಸಗಳು ಮುಂದೂಡಲ್ಪಡುತ್ತವೆ. ಸುಧೀರ್ಘ ಪ್ರಯಾಣಗಳಲ್ಲಿ ನಿಮಗೆ ಶುಭವಿದೆ. ತಂದೆ ತಾಯಿಯ ಮಾತಿನ್ನು ನಿರ್ಲಕ್ಷ್ಯ ಮಾಡಬೇಡಿ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನವು ಅನುಕೂಲಕರ. ನಿಮ್ಮಿಂದ ಹಲವು ಕೆಲಸಗಳ ಮಾಡುತ್ತೀರಿ. ಹಲವರು ಇಂದು ದೀರ್ಘ ಪ್ರಯಾಣ ಮಾಡಬಹುದು. ಆಪ್ತರ ಸಲಹೆಯಂತೆ ನಿಮಗೆ ಹಣಕಾಸು ಪಡೆಯುವ ದಾರಿ ಸಿಗಬಹುದು.

ಸಿಂಹ ರಾಶಿ

ಸಿಂಹ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಪ್ರಯತ್ನಗಳಲ್ಲಿ ಇಂದು ಲಾಭವಿದೆ. ನಿಮ್ಮ ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯಹುದು. ಪ್ರೀತಿಯ ವಿಚಾರದಲ್ಲಿ ನೋವಿನ ದಿನವಾಗಬಹುದು. ನಿಮ್ಮ ವಿವಾಹ ಸಂಬಂಧಿ ವಿಚಾರದಲ್ಲಿ ನಿಮ್ಮ ನಿರ್ಧಾರ ಆಲೋಚಿಸುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿವೆ. ಬೇರೆಯವರ ಕೆಲಸ ಸಂಬಂಧವಾಗಿ ಇಂದು ಪ್ರಯಾಣಗಳ ಮಾಡುವಿರಿ. ನಿಮ್ಮಿಂದಾಗಿ ಯಾರಿಗಾದರು ಸಮಸ್ಯೆಗಳು ಬರಬಹುದು. ತಾಯಿಯ ಆರೋಗ್ಯದ ಕಡೆ ಇಂದು ವಿಶೇಷ ಗಮನವಿಡಿ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ವ್ಯವಹಾರ ಸಮಸ್ಯೆಗಳನ್ನು ಇಂದು ಬಗೆಹರಿಸಿಕೊಳ್ಳುವಿರಿ. ಪ್ರೀತಿಯ ವಿಚಾರದಲ್ಲಿ ಇಂದು ಮಧುರ ಕ್ಷಣಗಳ ಅಪೇಕ್ಷಿಸಬಹುದು. ಮನೆಯ ಹಳೆಯ ಸಮಸ್ಯೆಯೊಂದು ಇಂದು ಮತ್ತೆ ಕಾಡಬಹುದು. ನಿಮಗೆ ಹಲವು ಕೆಲಸಗಳು ವಹಿಸಿಕೊಳ್ಳಬೇಕಾದ ಸ್ಥಿತಿಯೂ ಬರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ಗೃಹಿಣಿಯರು ಮಾಡುವ ಖರ್ಚುಗಳು ಮುಂದೆ ಬಿಕ್ಕಟ್ಟಿಗೆ ಕಾರಣವಾಗಬಹುದು. ಮಕ್ಕಳ ಆರೋಗ್ಯದ ಕುರಿತಾಗಿ ತುಸು ಹೆಚ್ಚು ಗಮನವಿಡುವುದು ಉತ್ತಮ. ಮನೆಗಾಗಿ ನೀವು ಮಾಡುವ ಕೆಲಸ ಕಡೆಗಣಿಸಬಹುದು.

ಧನು ರಾಶಿ

ಧನು ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ಧನಲಾಭದ ಅವಕಾಶಗಳು ಕೈತಪ್ಪಬಹುದು. ಯಾರಿಗಾದರು ನೀವು ಸಾಲ ನೀಡಲು ಆಲೋಚಿಸಿದ್ದರೆ ಮುಂದೂಡುವುದು ಉತ್ತಮ. ಅವಿವಾಹಿತರಲ್ಲಿ ಈ ದಿನ ಖರ್ಚು ಹೆಚ್ಚಾಗುವ ದಿನವಾಗಬಹುದು.

ಮಕರ ರಾಶಿ

ಮಕರ ರಾಶಿಯವರಿಗೆ ಇಂದು ಶುಭವಾಗುವ ಸಮಯ. ನೀವು ಹಲವು ಕೆಲಸಗಳನ್ನು ಇಂದು ವಿಳಂಬವಾಗು ಮುಗಿಸಬಹುದು. ಪ್ರಯಾಣ ಮಾಡಬಹುದು. ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ. ಹಣಕಾಸಿನ ವಿಚಾರದಲ್ಲಿ ಒತ್ತಡಗಳಿವೆ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ಪ್ರಯಾಣಗಳಲ್ಲಿ ತೊಡಗುತ್ತಾರೆ. ನಿಮ್ಮ ಹಲವು ಕೆಲಸಗಳನ್ನು ಇಂದು ಮಾಡಿ ಮುಗಿಸುವ ಅವಕಾಶ ಪಡೆಯುತ್ತೀರಿ. ಮನೆಯ ವಾತಾವರಣದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಚರ್ಚೆಗಳು ನಡೆಯಲಿವೆ. ನಿಮಗೆ ಬೇಕಿದ್ದ ವಸ್ತುವೊಂದನ್ನು ಖರೀದಿಸಬಹುದು.

ಮೀನ ರಾಶಿ

ಮೀನ ರಾಶಿ ಜನರು ಇಂದು ಮಿಶ್ರಫಲ ಅನುಭವಿಸುವಿರಿ. ಗೃಹಿಣಿಯರಿಗೆ ಪ್ರಯಾಣ ಮಾಡುವ ದಿನ. ಯಾರ ಬಳಿಯಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ನಿಮ್ಮ ಸಮಯ ಹಾಳು ಮಾಡುವ ಘಟನೆಗಳು ನಡೆಯಬಹುದು.

English summary

December-28-2025-daily-horoscope-prediction-for-12-zodiac-signs-in-kannada

Here is Horoscope Today, 28 December Horoscope: Daily Horoscope Prediction For 12 Zodiac signs In Kannada
Story first published: Sunday, December 28, 2025, 5:00 [IST]
X
Desktop Bottom Promotion