Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 27 Horoscope: ಈ ಶನಿವಾರ ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 27 (December 27 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಉತ್ತಮ ದಿನವಾಗಿದೆ. ನಿಮ್ಮ ಆಪ್ತರೊಬ್ಬರಿಂದ ನಿಮಗೆ ನಷ್ಟ ಅನುಭವಿಸಬಹುದು. ವ್ಯಾಪಾರ ಸಂಬಂಧವಾಗಿ ನಿಮಗೆ ದೊಡ್ಡ ವ್ಯವಹಾರಗಳ ಮಾಡಬೇಕಾಗುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಯಶಸ್ಸು ಪಡೆಯಬಹುದು. ಅದ್ರಲ್ಲೂ ಗೃಹಿಣಿಯರಿಗೆ ಇಂದು ಸಂತೋಷದಾಯಕ ದಿನ. ನೀವು ಬಯಸಿದ ವಸ್ತುವೊಂದನ್ನು ಇಂದು ಖರೀದಿಸುತ್ತೀರಿ. ಪ್ರಯಾಣ ಮಾಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿಯ ಗೃಹಿಣಿಯರಿಗೆ ಇಂದು ಹಣಕಾಸು ಖರ್ಚಿನ ದಿನ. ಅಗತ್ಯ ವಸ್ತುಗಳ ಖರೀದಿಗಾಗಿ ನೀವು ಹಣ ವ್ಯಯಿಸಬೇಕಾಗುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಅಚ್ಚರಿಯ ಫಲಿತಾಂಶಗಳಿವೆ. ಪಾಲುದಾರಿಕೆ ವ್ಯವಹಾರವು ಸಾಮಾನ್ಯವಾಗಿರಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಈ ದಿನ ಬಹಳ ಅನುಕೂಲವಿದೆ. ಆಪ್ತರೊಬ್ಬರ ಆಹ್ವಾನದ ಮೇರೆಗೆ ನೀವು ಪ್ರಯಾಣಕ್ಕೆ ಮುಂದಾಗಬಹುದು. ನಿಮ್ಮ ವಿಚಾರವೊಂದರಿಂದ ಮನೆಯಲ್ಲಿ ಅಶಾಂತಿ ಮೂಡಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಮಿಶ್ರಫಲ ಪಡೆಯುವ ದಿನ. ನಿಮ್ಮ ಶ್ರಮದಾಯಕ ಕೆಲಸಗಳು ಅಂದುಕೊಂಡ ಪ್ರತಿಫಲ ನೀಡದೆ ಇರಬಹುದು. ಹಣಕಾಸು ವಿಚಾರದಲ್ಲಿ ಗೊಂದಲು ಮೂಡಬಹುದು. ದಿನದ ಅಂತ್ಯದಲ್ಲಿ ಖರ್ಚುಗಳು ಕೂಡ ಬರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಈ ದಿನ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದು. ಆರೋಗ್ಯದಲ್ಲಿನ ಅಡೆತಡೆಗಳು ಇಂದಿನ ಕೆಲಸಗಳ ಮೇಲೆ ಪ್ರಭಾವ ಉಂಟು ಮಾಡಬಹುದು. ವ್ಯಾಪಾರಿಗಳಿಗೆ ನಷ್ಟದ ದಿನ.
ತುಲಾ ರಾಶಿ
ತುಲಾ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವ ದಿನವಾಗಿರಲಿದೆ. ನೀವು ಬಹುದಿನದಿಂದ ಮಾಡದೆ ಉಳಿಸಿಕೊಂಡಿದ್ದ ಕೆಲಸಗಳಲ್ಲಿ ಶುಭವಿದೆ. ಮನೆಗಾಗಿ ಖರ್ಚುಗಳ ಮಾಡುವಿರಿ. ಪ್ರಯಾಣಗಳಲ್ಲಿ ಶುಭ ನೋಡುವಿರಿ. ನಿರುದ್ಯೋಗಿಗಳು ಉದ್ಯೋಗ ಹುಡುಕುವ ಪ್ರಯತ್ನಗಳ ಬಿಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ನೀವು ಬಹು ದಿನದಿಂದ ಖರೀದಿಸಬೇಕು ಎಂದುಕೊಂಡಿದ್ದ ವಸ್ತು ಪಡೆಯಬಹುದು. ಆಪ್ತರೊಂದಿಗಿನ ಭೇಟಿ ನೆಮ್ಮದಿ ತರಲಿದೆ. ತಂದೆ ತಾಯಿಯ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ. ಹೂವು, ಹಣ್ಣು ವ್ಯಾಪಾರಿಗಳಿಗೆ ಅತ್ಯಂತ ಶುಭಕರ.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸಿಗೆ ಸಂಬಂಧಿಸಿದ ಹಲವು ವಿಚಾರದಲ್ಲಿ ಹಿನ್ನಡೆ ಅನುಭವಿಸಬಹುದು. ಕೆಲಸದ ಸ್ಥಳದಲ್ಲಿನ ಒತ್ತಡವು ನಿಮಗೆ ಸಮಸ್ಯೆಗಳ ತರಬಹುದು. ವಾಹನ ಕುರಿತಾದ ವಿಚಾರದಲ್ಲಿಯೂ ಇಂದು ಖರ್ಚುಗಳು ಹೆಚ್ಚಾಗಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಇಂದು ಆರಾಮದಾಯಕ ದಿನ. ಬಹು ಸಮಯದ ನಿಮ್ಮ ಬಯಕೆಯೊಂದನ್ನು ಇಂದು ಈಡೇರಿಸಿಕೊಳ್ಳುವಿರಿ. ಕೃಷಿ ಸಂಬಂಧಿತ ವಿಚಾರದಲ್ಲಿ ಇಂದು ಶುಭವಿದೆ. ದೇವಾಲಯ ಭೇಟಿಗೆ ಮುಂದಾಗುತ್ತೀರಿ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ನೀವು ಯಾರಿಂದಾದರು ಹಣ ಪಡೆಯಲು ಮುಂದಾದರೆ ಇಂದು ಸುಲಭವಾಗಿ ಪಡೆಯಬಹುದು. ನಿಮ್ಮ ಸಾಲ ಪಡೆಯುವ ಆಲೋಚನೆಗಳಿಗೆ ಪುಷ್ಠಿ ನೀಡುವ ಕಲಸ ಆಗರಲಿದೆ. ಮನೆಯಲ್ಲಿ ನಿಮಗೆ ಅಚ್ಚರಿ ಫಲಿತಾಂಶ ಸಿಗಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಸಮಸ್ಯೆಯ ದಿನ. ನೀವು ಮಾಡಿದ್ದ ಸಾಲದ ಪ್ರಮಾಣ ಮತ್ತೆ ಏರಿಕೆಯಾಗಬಹುದು. ಯಾರಿಂದಾದರು ಬರಬೇಕಿದ್ದ ಹಣ ಮತ್ತೆ ಮುಂದಕ್ಕೆ ಹೋಗಬಹುದು. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ಪ್ರೀತಿಯ ವಿಚಾರದಲ್ಲಿ ಇಂದು ನೋವು ಅನುಭವಿಸಬಹುದು.



Click it and Unblock the Notifications