Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 26 Horoscope: ಈ ಶುಕ್ರವಾರ ಯಾರಿಗೂ ಸಾಲ ನೀಡಬೇಡಿ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 26 (December 26 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಇಂದು ಸಮಸ್ಯೆಗಳ ನೋಡಬಹುದು. ಇಂದು ನಿಮ್ಮ ಮನೆಯಲ್ಲಿ ಅಶಾಂತಿಯ ವಾತಾವರಣಗಳು ಎದುರಾಗಬಹುದು. ಪ್ರೀತಿಯ ವಿಚಾರವಾಗಿ ನಿಮ್ಮಲ್ಲಿ ಸಮಸ್ಯಾತ್ಮಕ ದಿನವಾಗುತ್ತಿದೆ. ಆಪ್ತರೊಬ್ಬರಿಂದ ಕಹಿ ಸುದ್ದಿ ಕೇಳಬಹುದು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳನ್ನು ಸಮಯದ ಒಳಗೆ ನೀವು ಮಾಡಿ ಮುಗಿಸುವಿರಿ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯೂ ಈಡೇರಲಿದೆ. ಪ್ರೇಮಿಗಳಿಗೆ ಈ ದಿನ ಮಧುರವಾಗಿರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನ. ನಿಮ್ಮ ಕೆಲಸಗಳಲ್ಲಿ ಇಂದು ಶುಭವಾಗಲಿದೆ. ಆಪ್ತರ ಬಳಿ ಇದ್ದ ವಸ್ತು ನಿಮಗೆ ಸಿಗಬಹುದು. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ನೀಡಬೇಕಾಗುತ್ತದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನ ಸಾಮಾನ್ಯವಾಗಿರಲಿದೆ. ನಿಮ್ಮಲ್ಲಿ ಹಣಕಾಸಿನ ತೊಂದರೆಗಳು ಎದುರಾಗಬಹುದು. ಪ್ರೀತಿಯ ವಿಚಾರದಲ್ಲಿ ಇಂದು ಅಡ್ಡಿಗಳನ್ನು ಎದುರು ನೋಡುವಿರಿ. ಯಾರಿಂದಾದರು ನಿಮಗೆ ಹಣ ಪಡೆಯುವ ಅವಕಾಶಗಳಿದ್ದರೆ ಬಳಸಿಕೊಳ್ಳಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಪ್ರಯಾಣ ಮಾಡಬೇಕಾದ ದಿನವಾಗಬಹುದು, ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುತ್ತಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗುವ ನಿರೀಕ್ಷೆ ಇದೆ. ನಿಮ್ಮಿಂದ ಯಾರಾದರು ಹಣಕಾಸಿನ ಸಹಾಯ ಪಡೆಯಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಯಾರಿಂದಾದರು ಸಹಾಯ ಸಿಗಲಿದೆ. ನಿಮ್ಮ ವಾಹನ ಕುರಿತಾದ ವಿಚಾರದಲ್ಲಿ ಶುವಾಗುತ್ತದೆ. ಪ್ರೀತಿಯ ವಿಚಾರವಾಗಿ ನಿಮಗೆ ಮಧುರ ಕ್ಷಣಗಳಿವೆ. ಕೆಲಸಗಳಲ್ಲಿ ನೀವು ಅಂದುಕೊಂಡ ಫಲಿತಾಂಶ ಪಡೆಯಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗಬೇಕಾದ ದಿನವಾಗುತ್ತಿದೆ. ಇಂದು ಸಾಲ ನೀಡಲು ಮುಂದಾಗಬೇಡಿ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ನಿಮ್ಮ ವ್ಯಾಪಾರಗಳು ಲಾಭಗಳಿಸಬಹುದು. ನಿಮ್ಮಲ್ಲಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ದೊಡ್ಡ ಕೆಲಸಗಳ ಮಾಡಬೇಕಾಗುತ್ತದೆ. ನಿಮ್ಮಿಂದಾದ ಸಹಾಯವನ್ನು ಬೇರೆಯವರು ಮರೆಯುವ ಸಾಧ್ಯತೆ ಇದೆ. ಯಾರಿಗೂ ಹಣ ನೀಡುವ ಬದಲಾಗಿ ಮತ್ತೆ ಆಲೋಚಿಸಿ. ಕೃಷಿ ಸಂಬಂಧಿತ ವಿಚಾರವಾಗಿ ಇಂದು ಬಹಳ ಅನುಕೂಲವಿದೆ.
ಧನು ರಾಶಿ
ಧನು ರಾಶಿ ಜನರಿಗೆ ಜನರಿಗೆ ಮಿಶ್ರಫಲವಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಲು ಮುಂದಾಗಬೇಡಿ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ಸಹಾಯವಿದೆ. ಗೃಹಿಣಿಯರು ಇಂದು ಪ್ರಯಾಣಗಳ ಮಾಡಬೇಕಾಗುತ್ತದೆ. ದಿನದ ಅಂತ್ಯದಲ್ಲಿ ಒತ್ತಡದಿಂದ ಕಳೆಯಬೇಕಾಗುತ್ತದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ಸಮಯ. ನಿಮ್ಮ ಹಲವು ಕೆಲಸಗಳನ್ನು ಆಪ್ತರೊಬ್ಬರ ಸಹಕಾರದಿಂದ ಮಾಡಿ ಮುಗಿಸುವಿರಿ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕ ಸ್ಥಿತಿ ಇರಲಿದೆ. ವ್ಯಾಪಾರ ವ್ಯವಹಾರಗಳು ಸಲೀಸಾಗಿ ನಡೆಯಲಿವೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿರಬಹುದು. ಯಾರಿಗಾದರು ಹಣ ನೀಡಿದ್ದರೆ ಮರಳಿ ಪಡೆಯುವ ನಿಮ್ಮ ಪ್ರಯತ್ನ ಫಲ ನೀಡದೆ ಇರಬಹುದು. ಕೆಲಸಗಳು ಕಷ್ಟಕರವಾಗಬಹುದು. ಉದ್ಯೋಗದ ಸ್ಥಳದಲ್ಲಿ ಒತ್ತಡವಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ದಿನವು ಅಚ್ಚರಿ ಫಲಿತಾಂಶಗಳ ತರಬಹುದು. ನಿಮ್ಮ ಹಣಕಾಸಿನ ಒತ್ತಡವೊಂದು ನಿವಾರಣೆಯಾಗಲಿದೆ. ಹಲವು ಕೆಲಸಗಳಲ್ಲಿ ಧನಾತ್ಮಕ ಬದಲಾವಣೆಗಳಿವೆ.



Click it and Unblock the Notifications










