Latest Updates
-
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ -
ಶುಕ್ರ-ಶನಿಯ ಮೀನ ಸಂಚಾರದಿಂದ ಮಾಲವ್ಯ ಯೋಗ: ಈ 5 ರಾಶಿಯವರ ಜೀವನದಲ್ಲಿ ಬಹುದೊಡ್ಡ ಬದಲಾವಣೆ! -
ರಾತ್ರಿ ಉಳಿದ ಅನ್ನದಿಂದ ಬೆಳಗ್ಗೆ ಈ ಈರುಳ್ಳಿ ರೈಸ್ ಮಾಡಿ! ಸುಲಭದ ಟೇಸ್ಟಿ ರೆಸಿಪಿ
December 25 Horoscope: ಇಂದು ನಿಮ್ಮ ಆರ್ಥಿಕ ಸ್ಥಿತಿ ಸುಧಾರಣೆ!
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳ ಎದುರಿಸಬುದಾದರು ದಿನದ ಅಂತ್ಯದಲ್ಲಿ ನಿಮಗೆ ಶುಭವಿದೆ. ಗೃಹಿಣಿಯರು ಇಂದು ಶರಮದಾಯಕ ಕೆಲಸಗಳಲ್ಲಿ ಭಾಗಿಯಾಗುವಿರಿ.
ವೃಷಭ ರಾಶಿ
ವೃಷಭ ರಾಶಿಯವರು ಇಂದು ಮಿಶ್ರಫಲ ಅನುಭವಿಸಬಹುದು. ಮನೆಯಲ್ಲಿ ನಿಮಗೆ ಅಚ್ಚರಿ ಫಲಿತಾಂಶಗಳು ಸಿಗಬಹುದು. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣವನ್ನು ಪಡೆಯಬಹುದು. ಉದ್ಯೋಗಿಗಳು ಇಂದು ವಿಶ್ರಾಂತಿಯ ದಿನವಾಗಿ ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಮಿಶ್ರಫಲದ ದಿನ. ನೀವು ಯಾರಿಂದಾದರು ಹಣ ಪಡೆಯುವ ಆಲೋಚನೆಯಲ್ಲಿದ್ದರೆ ಇಂದು ಅದರ ಪ್ರತಿಫಲ ನೋಡುವಿರಿ. ಹಳೆಯ ಸಾಲ ಮರುಪಾವತಿಗೂ ಸಹ ಇದು ಉತ್ತಮ ಸಮಯ ಆಗುತ್ತಿದೆ. ವ್ಯಾಪಾರಿ ವಲಯವು ಖರ್ಚುಗಳಲ್ಲಿ ಮುಳುಗಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳನ್ನು ಶ್ರಮ ಹಾಕಿ ಮಾಡಬೇಕಾಗುತ್ತದೆ. ಮನೆ ವಾತಾವರಣವು ಶಾಂತಿ ಇಂದ ಕೂಡಿರಲಿದೆ. ದಾಂಪತ್ಯ ವಿಚಾರದಲ್ಲಿನ ಮುನಿಸುಗಳು ನಿವಾರಣೆಯಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಆರ್ಥಿಕ ಲಾಭದ ದಿನ. ನಿಮ್ಮಿಂದಾಗಿ ಬೇರೆಯವರಿಗೆ ಸಹಾಯವಾಗಲಿದೆ. ನಿಮ್ಮ ಹಳೆಯ ಸಾಲವೊಂದು ಮರುಪಾವತಿಯಾಗಲಿದೆ. ಬೇರೆಯವರಿಂದ ಹಣ ಬರುವುದು ಬಾಕಿ ಉಳಿದರೆ ಮತ್ತೆ ಮುಂದಕ್ಕೆ ಹೋಗಬಹುದು. ಪ್ರಯಾಣಗಳಲ್ಲಿ ಎಚ್ಚರ ಇರಲಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು. ಮನೆಯ ಸದಸ್ಯರಿಂದ ಕಿರಿಕಿರಿ ಇರಬಹುದು. ಗೃಹಿಣಿಯರು ಇಂದು ಪ್ರಯಾಣಗಳಲ್ಲಿ ಭಾಗಿಯಾಗುವುದು ಶುಭ ಸೂಚಕವಲ್ಲ. ನಿಮ್ಮ ಹಣಕಾಸಿನ ವಿಚಾರಗಳಲ್ಲಿ ತರಾತುರಿಯ ನಿರ್ಧಾರ ಬೇಡ.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿವೆ. ಈ ದಿನ ನಿಮ್ಮ ಹಣಕಾಸು ವಿಚಾರದಲ್ಲಿ ದುಡುಕಿನ ನಿರ್ಧಾರವು ನಷ್ಟಕ್ಕೆ ಕಾರಣವಾಗಬಹುದು. ಪ್ರೀತಿಯ ವಿಚಾರದಲ್ಲಿ ನಿಮಗೆ ನೋವಿನ ದಿನವಾಗುತ್ತಿದೆ, ಸಾಲ ಮರುಪಾವತಿಯ ಒತ್ತಡ ಹೆಚ್ಚಾಗುವ ದಿನ. ಕೆಲಸದಲ್ಲಿ ಅನಾರೋಗ್ಯ ನಿಮಗೆ ಅಡ್ಡಿ ತರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ನಿಮಗೆ ಹಲವು ದಿನದ ಅನಾರೋಗ್ಯ ಮತ್ತೆ ಕಾಣಿಸಿಕೊಳ್ಳಬಹುದು. ನಿಯೋಜಿತ ಕೆಲಸಗಳು ಅಂದುಕೊಂಡಂತೆ ನಡೆಯದೆ ಇರಬಹುದು. ಪ್ರಯಾಣಗಳು ಸಹ ಆಯಾಸ ಹಾಗೆ ಫಲಿತಾಂಶಗಳು ತೃಪ್ತಿ ತರದೆ ಇರಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನ. ನಿಮ್ಮದಲ್ಲದ ಕೆಲಸಗಳ ಸಂಬಂಧವಾಗಿ ಇಂದು ಪ್ರಯಾಣಗಳ ಮಾಡುವಿರಿ. ಯಾರಿಂದಾದರು ಹಣ ಪಡೆಯುವ ನಿಮ್ಮ ಆಲೋಚನೆಗಳು ಫಲ ನೀಡದೆ ಇರಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ದೊಡ್ಡ ಮಟ್ಟದ ಲಾಭದ ದಿನ. ನೀವು ವ್ಯಾಪಾರಿಗಳಾಗಿದ್ದರೆ ನಿಮ್ ಬುದ್ದಿವಂತಿಕೆಯ ಕಾರಣ ನಿಮ್ಮ ವ್ಯಾಪಾರ ಪ್ರಗತಿ ನೋಡಬಹುದು. ಈ ರಾಶಿಯವರಲ್ಲಿ ಇಂದು ದೊಡ್ಡ ಬಿಕ್ಕಟ್ಟು ನಿವಾರಣೆಯಾಗಲಿದೆ. ಮನೆಯ ಸಮಸ್ಯೆಗೆ ಪರಿಹಾರ ಸಿಗಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಆರಾಮದಾಯಕ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶ್ರಮ ಹಾಕುತ್ತೀರಿ. ದೈನಂದಿನ ಕೆಲಸಗಳಿಂದ ವಿಶ್ರಾಂತಿ ಪಡೆಯುತ್ತೀರಿ. ಸವಾಲುಗಳನ್ನು ಎದುರಿಸುವಿರಿ. ಗೃಹಿಣಿಯರು ಉದರ ಸಂಬಂಧಿ ಸಮಸ್ಯೆಗಳಿಂದ ಕಿರಿಕಿರಿ ಅನುಭವಿಸಬಹುದು.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಉತ್ತಮ ದಿನ. ಬಹಳ ದಿನದ ನಿಮ್ಮ ಬಯಕೆಯೊಂದನ್ನ ಈಡೇರಿಸಿಕೊಳ್ಳುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡಬೇಕಾಗುತ್ತದೆ. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಅನಗತ್ಯ ಖರ್ಚು ಮಾಡಬೇಡಿ.



Click it and Unblock the Notifications











