Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
December 24 Horoscope: ಮನೆ ಸಮಸ್ಯೆಗಳ ನಿರ್ಲಕ್ಷಿಸಬೇಡಿ.!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 24 (December 24 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿಂದ ತುಂಬಿರಬಹುದು. ನಿಮ್ಮ ದೊಡ್ಡ ಕೆಲಸದಲ್ಲಿ ಹಿನ್ನಡೆ ಅನುಭವಿಸುವಿರಿ. ಅದ್ರಲ್ಲೂ ಹಣಕಾಸಿಗೆ ಸಂಬಂಧಿಸಿದ ಯಾವುದಾದರು ಕೆಲಸವು ನಿಮ್ಮ ದಿನದಲ್ಲಿ ಚಿಂತಿಸುವಂತೆ ಮಾಡಬಹುದು.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಮಿಶ್ರಫಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿ ಅನುಭವಿಸಬಹುದು. ದೂರ ಪ್ರಯಾಣಗಳಲ್ಲಿ ನಿಮಗೆ ಅಂದುಕೊಂಡ ಫಲಿತಾಂಶ ಸಿಗದೆ ಇರಬಹುದು. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗುವ ದಿನವಾಗಲಿದೆ. ನಿಮ್ಮ ಹಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು, ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯು ಈಡೇರದೆ ಇರಬಹುದು. ಸಾಲದ ಕಡೆ ಗಮನವಿಡಿ. ಸರ್ಕಾರಿ ಕೆಲಸಗ ವಿಚಾರದಲ್ಲಿ ಶುಭವಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ಸಮಯದಲ್ಲಿ ಲಾಭವಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಮರಳಿ ಪಡೆಯುವ ದಿನವಿದು. ನಿಮ್ಮ ದೊಡ್ಡ ವ್ಯವಹಾರವೊಂದು ನಿಮಗೆ ಲಾಭದಾಯಕವಾಗಬಹುದು. ವಾಹನ ವಿಚಾರದಲ್ಲಿ ಶುಭವಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ದೊಡ್ಡ ಲಾಭದಾಯಕ ದಿನ. ಪ್ರೀತಿಯ ವಿಚಾರವಾಗಿ ಇಂದು ಮಧುರ ದಿನ. ನಿಮ್ಮ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹಾರ ಮಾಡುವುದು ಉತ್ತಮ. ನಿಮಗಾಗಿ ವಸ್ತುವೊಂದನ್ನು ಖರೀದಿಸಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ದೊಡ್ಡ ಸವಾಲಿನ ದಿನ. ನಿಮ್ಮ ಹಣಕಾಸಿನ ಸಮಸ್ಯೆಗಳು ಇಂದು ದೊಡ್ಡದಾಗಬಹುದು. ಒಂದು ದೊಡ್ಡ ಕೆಲಸಕ್ಕಾಗಿ ನೀವು ಪ್ರಯಾಣ ಮಾಡಬಹುದು. ಪ್ರೀತಿಯ ವಿಚಾರದಲ್ಲಿ ನಿಮಗಿಂದು ಕಠಿಣ ದಿನವಾಗುತ್ತದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಪ್ರಯಾಣಗಳ ಮಾಡಬಹುದು. ನಿಮ್ಮಿಂದಾಗಿ ಯಾರಿಗಾದರು ಸಹಾಯವಾಗಬಹುದು. ಆಸ್ಪತ್ರೆ ಕುರಿತಾದ ವಿಚಾರದಲ್ಲಿ ಖರ್ಚುಗಳಿವೆ. ನಿಮ್ಮ ಕೆಲಸದ ಸ್ಥಳದಲ್ಲಿ ಒತ್ತಡಗಳು ಹೆಚ್ಚಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಬಹಳ ಸಮಸ್ಯೆಯ ದಿನವಾಗಬಹುದು. ವ್ಯಾಪಾರಿ ವಲಯ ಇಂದು ಕಠಿಣ ನಿರ್ಧಾರಗಳ ತೆಗೆದುಕೊಳ್ಳಬೇಕಾಗುತ್ತದೆ. ಪ್ರೀತಿಯ ವಿಚಾರವಾಗಿ ನೀವು ನೋವು ಅನುಭವಿಸಬಹುದು. ಸಂಬಂಧಿಕರಿಂದ ಕಹಿ ಸುದ್ದಿ ಕೇಳಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಲಾಭದಾಯಕ ದಿನ. ಈ ದಿನ ಗೃಹಿಣಿಯರಲ್ಲಿ ಹಣದ ಹರಿವು ನೋಡಬಹುದು. ನಿಮ್ಮ ವ್ಯವಹಾರಗಳಲ್ಲಿ ಇಂದು ಒತ್ತಡಗಳ ನೋಡಬಹುದು. ಯಾರಿಗೂ ಹಣವನ್ನು ನೀಡುವುದು ನಿಮಗೆ ದುಬಾರಿಯಾಗಹುದು.
ಮಕರ ರಾಶಿ
ಮಕರ ರಾಶಿ ಜನರು ಆದಾಯಕ್ಕಿಂತ ಹೆಚ್ಚು ಖರ್ಚುಗಳ ಮಾಡಬಹುದು. ನಿಮ್ಮ ವ್ಯಾಪಾರದಲ್ಲಿ ಶುಭವಿದೆ. ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಸಮಸ್ಯೆಗಳಿವೆ. ಯಾರಿಗೂ ಸಾಲ ನೀಡದೆ ಇರುವುದು ಉತ್ತಮ. ಮನೆಯ ಕಿರಿಯ ಸದಸ್ಯರ ವಿಚಾರದಲ್ಲಿ ಚಿಂತೆ ಕಾಡಬಹುದು.
ಕುಂಭ ರಾಶಿ
ಕುಂಭ ರಾಶಿ ಜನರು ಇಂದು ಯಾರಿಂದಾದರು ನೋವು ಅನುಭವಿಸಬಹುದು. ಹಳೆಯ ಕಲಹಗಳು, ಸಮಸ್ಯೆಗಳು ಇಂದು ಕಾಡಬಹುದು. ಪ್ರೀತಿಯ ವಿಚಾರವಾಗಿ ಮಧುರ ದಿನ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು.
ಮೀನ ರಾಶಿ
ಮೀನ ರಾಶಿ ಜನರು ಇಂದು ಮಿಶ್ರ ಫಲ ಅನುಭವಿಸಬಹುದು. ನಿಮ್ಮ ವ್ಯವಹಾರಗಳು ಇಂದು ಒತ್ತಡ ನೀಡಬಹುದು. ಯಾರ ಜೊತೆಯಾದರು ಸಣ್ಣ ಪುಟ್ಟ ಕಲಹಗಳಲ್ಲಿ ನೀವು ಭಾಗಿಯಾಗಬಹುದು. ಮನೆಯ ಹಿರಿಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.



Click it and Unblock the Notifications











