Latest Updates
-
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ -
ಬಿಸಿಗಾಳಿ ಕಾಟ: ಮದುವೆ ಡೇಟಿಂಗ್ ಪ್ಲಾನ್ ಹಾಳಾಗದಂತೆ ತಡೆಯುವುದು ಹೇಗೆ? -
ಬಾಲ್ಕನಿ ಅಲಂಕಾರ: ಹಬ್ಬದ ಸಂಭ್ರಮಕ್ಕೆ 10 ನಿಮಿಷದ ಮ್ಯಾಜಿಕ್ -
ಬಿಸಿಲಿನ ಬೇಗೆಗೆ ಈ ಪಾನೀಯಗಳೇ ಮದ್ದು, ತಂಪಾಗಿರಿ ಹೀಗೆ! -
ಬೈಸಾಕಿ ಮತ್ತು ವಿಷು ಹಬ್ಬದ ಲುಕ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್
December 23 Horoscope: ನಿಮ್ಮ ಮನೆ ಸಮಸ್ಯೆಗಳ ನಿವಾರಣೆ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 23 (December 23 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ನಿಮ್ಮ ಹಲವು ಕೆಲಸಗಳು ಅಡ್ಡಿಗಳಿಂದ ಕೂಡಿರಬಹುದು, ಯಾರಿಂದಾದರು ಹಣ ಪಡೆದರೆ ಮರಳಿ ನೀಡಬೇಕಾಗುತ್ತದೆ. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ತು ಅಥವಾ ಹಣ ಮುಂದೂಡಲ್ಪಡುತ್ತದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತದೆ. ನಿಮ್ಮ ಹಲವು ಕೆಲಸಗಳು ಅದೃಷ್ಟದಿಂದ ಕೂಡಿರಲಿದೆ. ನಿಮಗಾಗಿ ಹೊಸ ವಸ್ತುವನ್ನು ಖರೀದಿಸಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಗೃಹಿಣಿಯರಿಗೆ ಶುಭದಾಯಕ ಸಮಯ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಈ ದಿನವು ಅನುಕೂಲಕರವಾಗಲಿದೆ. ಆರಂಭದಲ್ಲಿ ಖರ್ಚುಗಳಿದ್ದರೂ ದಿನದ ಅಂತ್ಯವು ನಿಮಗೆ ನೆಮ್ಮದಿಯ ತರಲಿದೆ, ಅವಿವಾಹಿತರಲ್ಲಿ ಅನಾರೋಗ್ಯಕ್ಕೆ ಕಾರಣವಾಗುವ ಘಟನೆಗಳು ನಡೆಯಬಹುದು. ಪ್ರಯಾಣಗಳಲ್ಲಿ ಎಚ್ಚರಿಕೆಯಿಂದಿರಿ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲಗಳ ತರಲಿದೆ, ನಿಮ್ಮ ಹಣಕಾಸು ಸ್ಥಿತಿಯಲ್ಲಿನ ಸುಧಾರಣೆ ನಿಮಗೆ ದೊಡ್ಡ ಗೆಲುವು ಹಾಗೆ ನೆಮ್ಮದಿಗೆ ಕಾರಣವಾಗಲಿದೆ. ನಿಮ್ಮ ಆಪ್ತ ಬಳಗದಿಂದ ಶುಭ ಸುದ್ದಿಯೊಂದು ಬರಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನ ಸಮಸ್ಯೆಗಳು ಬರಬಹುದು. ನಿಮ್ಮ ಹಲವು ವಿಚಾರಗಳಲ್ಲಿ ದ್ವಂದ್ವ ನಿಲುವುಗಳ ತಾಳುವುದು ಒಂದಿಷ್ಟು ಗೊಂದಲಗಳಿಗೆ ಕಾರಣವಾಗಲಿದೆ. ವ್ಯವಹಾರದಲ್ಲಿ ಲಾಭ ನೋಡುವುದು ವಿಳಂಬವಾಗುತ್ತದೆ. ದಿನದ ಅಂತ್ಯದಲ್ಲಿ ಕೈಗೊಳ್ಳುವ ಪ್ರಯಾಣ ನೀವು ಅಂದುಕೊಂಡಂತೆ ನಡೆಯದೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಈ ದಿನ ದೊಡ್ಡ ಮಟ್ಟದ ಲಾಭಗಳಿವೆ. ನಿಮ್ಮಿಂದಾಗಿ ಹಣಕಾಸಿನ ವಿಚಾರದಲ್ಲಿ ಬೇರೆಯವರಿಗೆ ಚಿಂತೆ ಮೂಡಬಹುದು. ವಾಹನ ವಿಚಾರದಲ್ಲಿ ತರಾತುರಿಯ ನಿರ್ಧಾರಗಳ ತೆಗೆದುಕೊಳ್ಳಬೇಡಿ. ನಿಮ್ಮ ಹಲವು ಬೇಡಿಕೆಗಳನ್ನು ಕುಟುಂಬದ ಮುಂದಿಡಲು ಇಂದು ಸಕಾಲ.
ತುಲಾ ರಾಶಿ
ತುಲಾ ರಾಶಿ ಜನರು ಇಂದು ಪ್ರಯಾಣಗಳ ಮಾಡುವಿರಿ. ನಿಮ್ಮಲ್ಲಿ ಆಯಾಸದ ಕಾರಣ ಯಾವುದೇ ಕೆಲಸದಲ್ಲಿ ಯಶಸ್ಸು ಪಡೆಯುವುದು ಕಷ್ಟವಾಗಬಹುದು. ಸವಾಲುಗಳ ಎದುರಿಸುವ ನಿಮ್ಮ ಗುಣವನ್ನು ಇತರರು ಹೊಗಳುವರು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಅನುಕೂಲಕರ ದಿನವಾಗುತ್ತಿದೆ, ಸಂಬಂಧಿಕರು ನಿಮ್ಮ ಭೇಟಿಯಾಗಬಹುದು. ಹಳೆಯ ವಸ್ತುಗಳ ಸಂಬಂಧವಾಗಿದ್ದ ಚಿಂತೆಯೊಂದು ಮರೆಯಾಗಬಹುದು. ಪ್ರೀತಿಯ ವಿಚಾರದಲ್ಲಿ ನೆಮ್ಮದಿ ದಿನ.
ಧನು ರಾಶಿ
ಧನು ರಾಶಿ ಜನರು ಇಂದು ಪ್ರಯಾಣಗಳ ಮಾಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ದಾಂಪತ್ಯ ವಿಚಾರದಲ್ಲಿ ನಿಮಗೆ ಇದ್ದ ಸವಾಲುಗಳು ಮರೆಯಾಗುವುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ದೊಡ್ಡ ಸವಾಲುಗಳಿವೆ. ನಿಮ್ಮ ಹಣಕಾಸು ವಿಚಾರದಲ್ಲಿ ನಿರ್ಧಾರಗಳು ತೊಡಕುಗಳಿಗೆ ಕಾರಣವಾಗಬಹುದು. ಪ್ರೀತಿಯ ವಿಚಾರವಾಗಿಯೂ ನಿಮಗೆ ಸವಾಲುಗಳಿವೆ. ಹಣ ಪಡೆಯುವ ನಿಮ್ಮ ಪ್ರಯತ್ನಗಳು ಫಲ ನೀಡಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನವು ಅನುಕೂಲವಿದೆ. ಹಾಗೆ ನಿಮ್ಮ ದಾಂಪತ್ಯ ಮತ್ತು ಉದ್ಯೋಗದಲ್ಲಿನ ಸಮಸ್ಯೆಗಳು ಇಂದು ನಿವಾರಣೆಯಾಗಲಿದೆ. ನಿಮ್ಮ ಬಹುದಿನದ ಅಪೂರ್ಣ ಕೆಲಸಗಳು ಪೂರ್ಣವಾಗಲಿದೆ. ನಿಮ್ಮ ಕೆಲಸಗಳಲ್ಲಿ ಇದ್ದ ಅಡ್ಡಿಯನ್ನು ನಿವಾರಿಸುವ ನಿಮ್ಮ ಪ್ರಯತ್ನ ಫಲ ನೀಡಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಸವಾಲಿನ ದಿನವಾಗಲಿದೆ, ಅಪಾಯಕಾರಿ ಕೆಲಸಗಳ ಮಾಡುವವರು ಈ ದಿನ ಎಚ್ಚರಿಕೆಯಿಂದ ಇರುವುದು ಉತ್ತಮ. ಯಾರಿಗಾದರು ಹಣ ನೀಡುವ ಮುನ್ನ ಹಲವು ಬಾರಿ ಆಲೋಚಿಸುವುದು ಉತ್ತಮ.



Click it and Unblock the Notifications











