Latest Updates
-
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು!
December 2025 Horoscope: ಡಿಸೆಂಬರ್ ಮಾಸಿಕ ರಾಶಿಫಲ ಯಾರಿಗೆ ಈ ತಿಂಗಳು ಧನಲಾಭ?
ಡಿಸೆಂಬರ್ 2025ರ ನಿಮ್ಮ ಮಾಸಿಕ ರಾಶಿಫಲ (December 2025 Horoscope)
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಡಿಸೆಂಬರ್‌ನಲ್ಲಿ ಮಿಶ್ರ ಫಲಗಳು ಎದುರಾಗುತ್ತವೆ, ತಿಂಗಳ ಮೊದಲಾರ್ಧವು ನೀವು ಅಂದುಕೊಂಡ ಕೆಲಸಗಳ ಮಾಡುವ ಸಮಯ ಆಗಿರಲಿದೆ, ಹಾಗೆ ಬಹುತೇಕ ಕೆಲಸಗಳಲ್ಲಿ ನಿಮಗೆ ಶುಭವಾಗುವ ಸಮಯ ಆಗಿರಲಿದೆ. ಉದ್ಯೋಗ ಸಂಬಂಧಿತ ವಿಚಾರದಲ್ಲಿ ನೀವು ದೊಡ್ಡ ಹೆಜ್ಜೆ ಇಡುವಿರಿ. ಹಾಗೆ ವಾಹನ ಖರೀದಿಯಂತಹ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ನಿಮಗೆ ಶುಭ ತರಲಿದೆ. ತಿಂಗಳ ದ್ವಿತಿಯಾರ್ಧದಲ್ಲಿ ಒಂದಿಷ್ಟು ಅಡ್ಡಿಗಳಿವೆ. ನೀವು ಕೆಲಸಕ್ಕಾಗಿ ಪ್ರಯಾಣಿಸುತ್ತೀರಿ ಮತ್ತು ನಿರೀಕ್ಷಿತ ಫಲಿತಾಂಶ ಪಡೆಯುವುದು ಕಷ್ಟವಾಗಬಹುದು. ಕೆಲವು ವಿಷಯಗಳ ಬಗ್ಗೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಭೂಮಿ/ಆಸ್ತಿಯನ್ನು ಖರೀದಿಸಲು ಉತ್ತಮ ಅವಕಾಶ ಹೊರಹೊಮ್ಮುತ್ತಿದೆ. ಸ್ವಂತ ಉದ್ಯಮಗಳು ಯಥಾಸ್ಥಿತಿ ಇರಲಿದೆ.
ವೃಷಭ ರಾಶಿ
ಡಿಸೆಂಬರ್ ತಿಂಗಳು ವೃಷಭ ರಾಶಿಯವರಿಗೆ ಉತ್ತಮ ಯಶಸ್ಸನ್ನು ತರಲಿದೆ. ಆರ್ಥಿಕ ಲಾಭದ ಅವಕಾಶಗಳು ನಿಮ್ಮ ಕೆಲಸಗಳ ಮೂಲಕ ಸಿದ್ಧಿ ಮಾಡಿಕೊಳ್ಳುವ ಅವಕಾಶಗಳಿವೆ. ಹಣ ಗಳಿಸುವ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಬಹುದು. ನಿರುದ್ಯೋಗಿಗಳು ಬಹಳ ಸಮಯದಿಂದ ಉತ್ತಮ ಕೆಲಸ ಹುಡುಕುತ್ತಿದ್ದರೆ ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸ ನಿಮ್ಮದಾಗಲಿದೆ. ನಿಮಗೆ ಈಗಾಗಲೇ ಮಕ್ಕಳಿದ್ದರೆ ಅವರ ಭವಿಷ್ಯ ಕುರಿತಾದ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ದೊಡ್ಡ ಕೆಲಸವೊಂದನ್ನು ಈ ತಿಂಗಳಿನಲ್ಲಿ ಮಾಡಿ ಮುಗಿಸಬಹುದು. ಆರೋಗ್ಯ ವಿಚಾರದಲ್ಲಿ ಡಿಸೆಂಬರ್ ಬಹು ಉತ್ತಮ ತಿಂಗಳಾಗುತ್ತಿದೆ. ನೀವು ಅರೆಕಾಲಿಕ ವ್ಯವಹಾರದಲ್ಲಿಯೂ ಸಹ ಉತ್ತಮ ಲಾಭ ನೋಡಬಹುದು.

ಮಿಥುನ ರಾಶಿ
ಡಿಸೆಂಬರ್‌ನಲ್ಲಿ ಮಿಥುನ ರಾಶಿ ಜನರಿಗೆ ಉತ್ತಮ ಪ್ರತಿಫಲಗಳ ಅನುಭವಿಸುವ ತಿಂಗಳು. ಅದ್ರಲ್ಲೂ ಈ ತಿಂಗಳಿನಲ್ಲಿ ನಿಮ್ಮ ಹೂಡಿಕೆ, ಉಳಿತಾಯಗಳು ಹೆಚ್ಚಾಗಲಿದೆ. ನಿಮ್ಮ ಸಾಲದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದು ನೋಡಬಹುದು. ಪ್ರಯಾಣಗಳ ಕೈಗೊಳ್ಳುವುದು ಬಹುದೊಡ್ಡ ಸಂತೋಷದ ಕ್ಷಣಗಳನ್ನು ತರಲಿದೆ. ದಾಂಪತ್ಯ ವಿಚಾರದಲ್ಲಿ ಸುಖ ನೋಡುವಿರಿ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಕಾಣುತ್ತಾರೆ. ಕುಟುಂಬದಲ್ಲಿನ ಒತ್ತಡದ ದಿನಗಳು ದೂರಾಗಲಿದೆ. ನಿಮ್ಮ ಪಿತ್ರಾರ್ಜಿತ ಆಸ್ತಿ, ವ್ಯವಹಾರದಲ್ಲಿ ಸ್ವಲ್ಪ ಮಟ್ಟದ ಏಳುಬೀಳುಗಳಿವೆ. ಗೃಹಿಣಿತರಿಗೆ ಶುಭ ತರುವ ತಿಂಗಳು ಇದು.
ಕರ್ಕಾಟಕ ರಾಶಿ
ಡಿಸೆಂಬರ್ ತಿಂಗಳು ಕರ್ಕ ರಾಶಿಗೆ ಉತ್ತಮ ದಿನಗಳಿವೆ. ತಿಂಗಳ ಆರಂಭದಲ್ಲಿ ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸುಭದ್ರ ವಾತಾವರಣ ಇರಲಿದೆ. ಆಪ್ತರೊಬ್ಬರಿಂದ ಬರಬೇಕಿದ್ದ ಹಣ ನಿಮ್ಮ ಕೈ ಸೇರಲಿದೆ. ಅನೇಕ ಶುಭ ಕಾರ್ಯ ಸಂಬಂಧವಾಗಿ ನೀವು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ಅದ್ರಲ್ಲೂ ವಿದೇಶ ಪ್ರವಾಸದ ಕನಸು ಕಂಡವರಿಗೆ ಶುಭವಾಗಲಿದೆ. ಹೊಸ ಮನೆ, ನಿವೇಶನ, ವಾಹನ ಖರೀದಿಯ ಸಂಬಂಧವಾಗಿ ದೊಡ್ಡ ಹೆಜ್ಜೆ ಮುಂದಿಡುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ಸಮಯ ಶುಭವೆಂದು ತೋರುತ್ತದೆ. ಮಹಿಳೆಯರಿಗೆ ಯಶಸ್ಸಿನ ಬಾಗಿಲುಗಳು ತೆರೆಯಬಹುದು. ಈ ತಿಂಗಳು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡವರಿಗೆ ಶುಭ ಹಾಗೂ ಲಾಭಕರ ತಿಂಗಳಲಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ತಿಂಗಳು ಮಿಶ್ರಫಲವಿದೆ. ತಿಂಗಳ ಆರಂಭದಲ್ಲಿ ನಿಮ್ಮ ಆರ್ಥಿಕ ವಿಚಾರದಲ್ಲಿ ಶುಭವಾಗುತ್ತಿದೆ. ಹಾಗೆ ನೀವು ಪ್ರಯಾಣಗಳಲ್ಲಿ ತೊಡಗುವಿರಿ. ಖರ್ಚುಗಳು ಕಡಿಮೆಯಾಗಲಿದೆ. ದೊಡ್ಡ ಉಳಿತಾಯ ಕಾರ್ಯದಲ್ಲಿ ನೀವು ತೊಡಗಿಸಿಕೊಳ್ಳುವಿರಿ. ಸಹೋದರರು ಮತ್ತು ಕುಟುಂಬದಿಂದ ಪ್ರಯೋಜನಗಳ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯ ಮೂಲಕ ನೀವು ಸಂಪತ್ತನ್ನು ಗಳಿಸಬಹುದು. ವ್ಯವಹಾರವು ಅಭೂತಪೂರ್ವ ಬೆಳವಣಿಗೆಯನ್ನು ಕಾಣಲಿದೆ. ತಿಂಗಳು ರಾಜಕೀಯದಲ್ಲಿ ತೊಡಗಿರುವವರಿಗೆ ಹೊಸ ಬದಲಾವಣೆಗಳು, ಅವಕಾಶಗಳು ಒಲಿದು ಬರಲಿವೆ. ಆಹಾರ ಸಂಬಂಧಿತ ವಿಚಾರವಾಗಿ ಖರ್ಚುಗಳಿದ್ದರೂ ಅದನ್ನು ಸರಿಯಾಗಿ ನಿಭಾಯಿಸುವಿರಿ. ಕೌಟುಂಬಿಕ ವಿಚಾರದಲ್ಲಿ ಶುಭವಾಗಲಿದೆ.
ಕನ್ಯಾ ರಾಶಿ
ಈ ತಿಂಗಳು ನಿಮ್ಮ ನಾಯಕತ್ವದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ನೀವು ಎಲ್ಲಾ ಕಡೆಯಿಂದ ಗೌರವ ಮತ್ತು ಮನ್ನಣೆಯನ್ನು ಪಡೆಯುತ್ತೀರಿ. ಯಾವುದೇ ಆಸ್ತಿ ವಿವಾದಗಳು ಈ ತಿಂಗಳು ಬಗೆಹರಿಯಬಹುದು. ಸಾಲದ ವಿಚಾರವಾಗಿ ನೀವು ಬ್ಯಾಂಕಿಂಗ್ ಕುರಿತು ಓಡಾಟದಲ್ಲಿದ್ದರೆ ಈ ಸಮಯದಲ್ಲಿ ಶುಭವಾಗುತ್ತದೆ. ತಿಂಗಳ ದ್ವಿತಿಯಾರ್ಧದಲ್ಲಿ ನೀವು ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾಗುವ ನಿರೀಕ್ಷೆಗಳಿವೆ. ಪ್ರೀತಿ ವಿಚಾರವಾಗಿ ಕ್ಷಣಗಳು ಮಧುರವಾಗಿರಲಿದೆ. ಐಷಾರಾಮಿ ವಸ್ತುವೊಂದನ್ನು ಖರೀದಿಸಲು ನೀವು ಹಣ ಒಟ್ಟು ಮಾಡಬಹುದು. ದಾಂಪತ್ಯ ವಿಚಾರದಲ್ಲಿ ಶುಭ ಕ್ಷಣಗಳ ಅನುಭವಿಸಲು ನೀವು ಪ್ರಯತ್ನಿಸುವಿರಿ.
ತುಲಾ ರಾಶಿ
ಈ ತಿಂಗಳು ತುಲಾ ರಾಶಿಯವರಲ್ಲಿ ಅಸಮತೋಲನಗಳು ಉಂಟಾಗುವುದು ನೋಡಬಹುದು. ಗ್ರಹಗಳ ಸಂಚಾರದಿಂದಾಗಿ ಈ ಸಮಯದಲ್ಲಿ ಹಲವು ಏರುಪೇರುಗಳ ಎದುರಿಸುತ್ತೀರಿ. ಉದ್ಯಮಿಗಳು, ಸ್ವಂತ ಉದ್ಯೋಗಿಗಳು, ಖಾಸಗಿ ಸಂಸ್ಥೆಯಲ್ಲಿನ ಉದ್ಯೋಗಿಗಳಿಗೆ ಈ ಡಿಸೆಂಬರ್ ಲಾಭದಾಯಕವಲ್ಲ.
ವ್ಯಾಪಾರ ಪ್ರವಾಸಗಳು ಸಹ ನಿಮ್ಮ ಬಯಕೆಯಂತೆ ಈಡೇರದೆ ಇರಬಹುದು. ದೊಡ್ಡ ಹುದ್ದೆಯಲ್ಲಿರುವವರನ್ನು ನೀವು ಭೇಟಿಯಾಗಿ ನಿಮ್ಮ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಬಹುದು. ವಿವಾಹಿತರಲ್ಲಿ ಖರ್ಚು ಹೆಚ್ಚಾಗುತ್ತದೆ. ಪಂಚೇಂದ್ರಿಯ ಸಂಬಂಧಿತ ವಿಚಾರದಲ್ಲಿ ಈ ತಿಂಗಳು ನಿಮಗೆ ಸಮಸ್ಯೆಗಳು ಇರಬಹುದು. ಸಾಲ ಮಾಡುವ ಹಲವು ಸನ್ನಿವೇಶಗಳನ್ನು ನೀವು ಎದುರಿಸಬಹುದು.
ವೃಶ್ಚಿಕ ರಾಶಿ
ಡಿಸೆಂಬರ್ ತಿಂಗಳು ಸಂಬಂಧಗಳಲ್ಲಿ ಮನಸ್ತಾಪಗಳ ಉಂಟು ಮಾಡುವ ಸಮಯ ಆಗಿರಲಿದೆ. ನಿಮ್ಮ ಓಡಾಟಗಳು ಹೆಚ್ಚಾಗಬಹುದು. ಅದ್ರಲ್ಲೂ ಸರ್ಕಾರಿ ದಾಖಲೆಗಳು, ನಿಮ್ಮ ವೈಯಕ್ತಿಕ ದಾಖಲೆಗಳ ಪಡೆಯುವ ನಿಮ್ಮ ಓಡಾಟಗಳು ಹೆಚ್ಚಾಗಲಿದೆ. ಕುಟುಂಬದಲ್ಲಿ ಯಾರೊಂದಿಗಾದರೂ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವಿದ್ಯಾರ್ಥಿಗಳು ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ನ್ಯಾಯಾಲಯದ ಪ್ರಕರಣಗಳು ಬಾಕಿ ಉಳಿದಿದ್ದರೆ ಈ ತಿಂಗಳು ಬಗೆಹರಿಸಿಕೊಳ್ಳುವ ನಿರೀಕ್ಷೆಗಳಿವೆ. ಯಾವುದೇ ವ್ಯವಹಾರದಲ್ಲಿ ದಿಢೀರ್ ಅಥವಾ ತರಾತುರಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಧನು ರಾಶಿ
ಡಿಸೆಂಬರ್ ತಿಂಗಳಲ್ಲಿ ಧನು ರಾಶಿಯವರಿಗೆ ಮಿಶ್ರಫಲ ನೋಡಬಹುದು. ಅನಗತ್ಯ ವಿಚಾರವಾಗಿ ನಿಮ್ಮಲ್ಲಿ ಗೊಂದಲದ ವಾತಾವರಗಳು ಉಂಟಾಗುತ್ತದೆ. ಅದ್ರಲ್ಲೂ ನಿಮ್ಮ ಹಣಕಾಸಿನ ವಿಚಾರವಾಗಿ ದೊಡ್ಡ ನಿರ್ಧಾರಗಳ ತೆಗೆದುಕೊಳ್ಳಬಹುದು. ವಾಹನ ಖರೀದಿಗೆ ಇದು ಸೂಕ್ತ ಕಾಲವಾಗಿರಲಿದೆ. ನಿಮ್ಮ ಆದಾಯ ದ್ವಿಗುಣ ಆಗುವ ಅವಕಾಶ ಪಡೆಯಬಹುದು. ಕಾಲೋಚಿತ ಕಾಯಿಲೆಗಳು ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಮೇಲೆ ಅನೇಕ ರೀತಿಯ ಆರೋಪಗಳು ಬರಬಹುದು. ಹಾಗೆ ನಿಮ್ಮ ಪ್ರಯಾಣಗಳಲ್ಲಿ ಲಾಭ ನೀವಂದುಕೊಂಡಂತೆ ಸಿಗದಿರಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ತಿಂಗಳು ಶುಭಕರ ದಿನಗಳಿವೆ. ನಿಮ್ಮ ಆದಾಯ ದ್ವಿಗುಣ ಮಾಡಿಕೊಳ್ಳುವ ಅವಕಾಶಗಳು ಬರಲಿವೆ. ವಿವಾಹ ಸಂಬಂಧಿತ ವಿಚಾರದಲ್ಲಿ ನೀವು ಅಂದುಕೊಂಡ ಸಮಯ ಇದಾಗಿರಲಿದೆ. ಈ ತಿಂಗಳು ವಾಹನ ಖರೀದಿಸಲು ನೀವು ಆಸಕ್ತಿ ಹೊಂದಿದ್ದರೆ ಶುಭವಾಗಲಿದೆ. ರಿಯಲ್ ಎಸ್ಟೇಟ್, ಮನೆ ನಿರ್ಮಾಣ, ಕಟ್ಟಡ ವಿಚಾರದಲ್ಲಿ ನಿಮ್ಮ ಬಹುದಿನದ ಕನಸುಗಳನ್ನು ಈಡೇರಿಸಿಕೊಳ್ಳಲಿದ್ದೀರಿ. ಪ್ರವಾಸಗಳು, ದೇವಾಲಯ ಭೇಟಿ, ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗುವ ನಿರೀಕ್ಷೆ ಇದೆ. ಆರೋಗ್ಯದಲ್ಲಿನ ಸುಧಾರಣೆಯಿಂದ ನಿಮ್ಮ ಕೆಲಸ ಕಾರ್ಯದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ. ನಿಮ್ಮ ಬ್ಯಾಂಕಿಂಗ್ ವಿಚಾರಗಳಲ್ಲಿ ಶುಭವಿದೆ.
ಕುಂಭ ರಾಶಿ
ಈ ತಿಂಗಳು ಕುಂಭ ರಾಸಿಯವರಿಗೆ ಅನುಕೂಲಕರ ದಿನಗಳಿವೆ. ನೀವು ಬಹು ಸಮಯದಿಂದ ಮಾಡಬೇಕೆಂದಿದ್ದ ಕೆಲಸವನ್ನು ಈ ತಿಂಗಳಲ್ಲಿ ಮಾಡಿ ಮುಗಿಸುವಿರಿ. ತಿಂಗಳ ಆರಂಭದಲ್ಲಿ ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮಗೆ ಸಮಸ್ಯೆಗಳ ತರಬಹುದು. ಆದ್ರೆ ದ್ವಿತಿಯಾರ್ಧದಲ್ಲಿ ನೀವು ಅಂದುಕೊಂಡಿದ್ದ ಹಲವು ಕೆಲಸಗಳ ಮಾಡಿ ಮುಗಿಸುವಿರಿ. ವ್ಯಾಪಾರಿಗಳು ಲಾಭ ಗಳಿಸುವಿರಿ ಮತ್ತು ನಿಮ್ಮ ಜೀವನವು ಆಹ್ಲಾದಕರವಾಗಿರುತ್ತದೆ. ರಾಜಕೀಯದಲ್ಲಿ ತೊಡಗಿರುವವರು ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ವೈವಾಹಿಕ ಸಂಬಂಧದಲ್ಲಿ ಶುಭ ಸುದ್ದಿ ಕೇಳುವಿರಿ. ವಾಹನ ಲಾಭವಿದೆ. ಗೃಹಿಣಿಯರು ಈ ತಿಂಗಳಲ್ಲಿ ದೀಢಿರ್ ಪ್ರಯಾಣಗಳಲ್ಲಿ ಭಾಗಿಯಾಗುವುದು ಹೆಚ್ಚಾಗಲಿದೆ.
ಮೀನ ರಾಶಿ
ಡಿಸೆಂಬರ್ ತಿಂಗಳಲ್ಲಿ ಮೀನ ರಾಶಿಯವರ ಪಾಲಿಗೆ ಉತ್ತಮವಾಗಿರಲಿದೆ. ನಿಮ್ಮ ವೆಚ್ಚಗಳು ಕಡಿಮೆಯಾಗುವುದು ನೋಡಬಹುದು. ನಿಮ್ಮ ಹಲವು ಕೆಲಸಗಳನ್ನು ಅಚ್ಚರಿಯ ರೀತಿಯಲ್ಲಿ ಮುಗಿಸುವಿರಿ. ಆಪ್ತರಿಂದ ಬರಬೇಕಿದ್ದ ಹಣವನ್ನು ಈ ತಿಂಗಳಲ್ಲಿ ಮರಳಿ ಪಡೆಯಬಹುದು. ಅವಿವಾಹಿತರ ಯುವತಿಯರ ಆರೋಗ್ಯದಲ್ಲಿನ ಏರುಪೇರು ನಿಮ್ಮ ಹಣಕಾಸು ಸ್ಥಿತಿಯನ್ನು ಮತ್ತೆ ಏರುಪೇರು ಉಂಟು ಮಾಡಲಿದೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ. ನಿಮ್ಮ ದೊಡ್ಡ ಕೆಲಸವೊಂದಕ್ಕೆ ಕುಟುಂಸ್ಥರಿಂದ ದೊಡ್ಡ ಬೆಂಬಲ ಪಡೆಯಲಿದ್ದೀರಿ.



Click it and Unblock the Notifications












