Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 18 Horoscope: ಗೃಹಿಣಿಯರಿಗೆ ಇಂದು ಲಾಭದಾಯಕ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 18 (December 18 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಶುಭವಾಗುವ ದಿನ. ನಿಮ್ಮ ಮನೆಯಲ್ಲಿ ಬಹಳ ದಿನದಿಂದ ಇದ್ದಂತಹ ಹಣಕಾಸಿನ ಒತ್ತಡದೊಂದು ನಿವಾರಣೆಯಾಗಲಿದೆ. ಇದು ನಿಮಗೆ ಮಾನಸಿಕ ಶಾಂತಿಗೆ ಕಾರಣವಾಗಲಿದೆ. ಮನೆಯ ಹಿರಿಯರು ಪ್ರಯಾಣ ಮಾಡುವಾಗ ಎಚ್ಚರ ವಹಿಸಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಮಿಶ್ರಫಲವಿದೆ. ಹಲವು ದಿನದಿಂದ ನೀವು ಮಾಡದೆ ಉಳಿಸಿಕೊಂಡ ಕೆಲಸಗಳನ್ನು ಪೂರ್ಣ ಮಾಡುವಿರಿ. ಪ್ರಯಾಣಗಳಲ್ಲಿ ತೊಡಗಿದ್ದರೆ ಇಂದು ಶುಭವಾಗುತ್ತಿದೆ. ಹಣಕಾಸು ವಿಚಾರವಾಗಿ ಮುಖ್ಯ ನಿರ್ಧಾರ ತೆಗೆದುಕೊಳ್ಳುವಿರಿ.

ಮಿಥುನ ರಾಶಿ
ಮಿಥುನ ರಾಶಿ ಜನರು ಮನೆಯ ವಿಚಾರದಲ್ಲಿ ಪ್ರಯಾಣ ಮಾಡುವಿರಿ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಚರ್ಚೆಗಳು ನಡೆಯಬಹುದು. ಪ್ರಯಾಣಗಳಲ್ಲಿ ಎಚ್ಚರ ವಹಿಸಿ. ವ್ಯಾಪಾರಿಗಳಿಗೆ ಈ ದಿನ ಮಿಶ್ರಫಲವಿದೆ. ದೊಡ್ಡ ಸರಕುಗಳಿಗೆ ಹಣ ಖರ್ಚು ಮಾಡುವಿರಿ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ದೊಡ್ಡ ಮಟ್ಟದಲ್ಲಿ ಶುಭವಾಗುತ್ತದೆ. ನಿಮ್ಮ ದಾಂಪತ್ಯ ವಿಚಾರದಲ್ಲಿ ಶುಭವಿದೆ. ಮಕ್ಕಳ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವು ಅವರಲ್ಲಿ ನೋವು ಉಂಟು ಮಾಡಬಹುದು. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನ ದೊಡ್ಡ ಲಾಭದಾಯಕ ಕೆಲಸಗಳ ಮಾಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಗಳು ಈಡೇರಲಿದೆ. ಕುಟುಂಬಸ್ಥರ ಜೊತೆ ನೀವು ದೇವಾಲಯ ಭೇಟಿಗೆ ಮುಂದಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಈ ದಿನ ಸವಾಲುಗಳ ಎದುರಿಸುವಿರಿ. ಹಣಕ್ಕೆ ಸಂಬಂಧಿಸಿದಂತೆ ಈ ದಿನ ನೀವು ಒತ್ತಡ ಎದುರಿಸಬಹುದು. ಮನೆಗಾಗಿ ನೀವಿಂದು ಖರ್ಚು ಮಾಡಬಹುದು. ಸವಾಲುಗಳ ಎದುರಿಸುವ ನಿಮ್ಮ ಧೈರ್ಯಕ್ಕೆ ಇಂದು ಪೆಟ್ಟು ಬೀಳಬಹುದು. ಅಪಾಯಕಾರಿ ವಸ್ತುಗಳಿಂದ ದೂರವಿರಿ.
ತುಲಾ ರಾಶಿ
ತುಲಾ ರಾಶಿ ಜನರು ಇಂದು ಬಹಳಷ್ಟು ಆಯಾಸದಿಂದ ಕೂಡಿದ ದಿನವಾಗಿ ನೋಡಬಹುದು. ನಿಮ್ಮ ಹಲವಾರು ಕೆಲಸಗಳಲ್ಲಿ ಇಂದು ಅಡ್ಡಿಗಳಿವೆ. ಅದ್ರಲ್ಲೂ ವ್ಯವಹಾರ ಹಾಗೂ ವ್ಯಾಪಾರ ಸಂಬಂಧಿತ ವಿಚಾರದಲ್ಲಿ ನಿಮಿಗೆ ಮಿಶ್ರಫಲಗಳ ಬರುವ ದಿನ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಮಿಶ್ರಫಲ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ನಿಮಗಾಗಿ ಇಂದು ಖರ್ಚು ಮಾಡುವಿರಿ. ಪ್ರೇಮಿಗಳಿಗೆ ಈ ದಿನ ಬಹಳ ಅನುಕೂವಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ ಕೂಡ ಇರಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನ ಅನುಕೂಲಕರ ದಿನ. ನಿಮ್ಮಿಂದ ಬೇರೆಯವರಿಗೆ ಹಣಕಾಸಿನ ಸಹಾಯ ಸಿಗಬಹುದು. ನಿಮ್ಮ ದೊಡ್ಡ ಕೆಲಸವೊಂದಕ್ಕೆ ಹಣದ ಅಗತ್ಯತೆ ಬರಬಹುದು. ಗೃಹಣಿಯರು ಸವಾಲುಗಳ ಎದುರಿಸಬಹುದು. ಸಹೋದರರೊಂದಿಗೆ ಸಂಬಂಧ ಗಟ್ಟಿಯಾಗಲಿದೆ.
ಮಕರ ರಾಶಿ
ಮಕರ ರಾಶಿ ಜನರು ಇಂದು ದೊಡ್ಡ ವ್ಯವಹಾರಗಳ ಮಾಡಬಹುದು. ನಿಮ್ಮ ವ್ಯವಹಾರ ಸಂಬಂಧವಾಗಿ ಪ್ರಭಾವಿ ಜನರ ಭೇಟಿ ಮಾಡಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬೇಡಿಕೆಗಳು ಈಡೇರಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಪ್ರಬಲ ಉದ್ದೇಶದ ಕಾರಣಕ್ಕೆ ಪ್ರಯಾಣ ಮಾಡಬಹುದು. ಆರೋಗ್ಯ ವಿಚಾರದಲ್ಲಿ ನಿಮಗೆ ಇಂದು ಸವಾಲಿನ ದಿನ. ಶುಭ ಕಾರ್ಯ ಸಂಬಂಧವಾಗಿ ಮನೆಯಲ್ಲಿನ ಮಾತುಕತೆ ನಿಮಗೆ ಕಿರಿಕಿರಿಯ ಅನುಭವಕ್ಕೆ ಕಾರಣವಾಗಬಹುದು.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ಪ್ರಯಾಣದಲ್ಲಿ ತೊಡಗುವ ದಿನ. ನೀವು ಅನಗತ್ಯ ವಿಚಾರದಲ್ಲಿ ಪ್ರಯಾಣ ಮಾಡುವಿರಿ. ಯಾರಿಗೂ ಹಣಕಾಸಿನ ವಿಚಾರವಾಗಿ ಮಾತು ನೀಡಬೇಡಿ.



Click it and Unblock the Notifications