Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 17 Horoscope: ಪ್ರಯಾಣಗಳ ಮುಂದೂಡುವುದು ಉತ್ತಮ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 17 (December 17 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧದಲ್ಲಿ ನಿಲ್ಲಿಸಿದ್ದರೆ ಇಂದು ಪೂರ್ಣ ಮಾಡುವಿರಿ. ಉತ್ತಮ ಫಲಿತಾಂಶ ಪಡೆಯಲು ನೀವು ಮತ್ತಷ್ಟು ಶ್ರಮ ಹಾಕುತ್ತೀರಿ. ಹಣಕಾಸು ವಿಚಾರವಾಗಿ ಎಚ್ಚರಿಕೆಯಿಂದ ಇರುವುದು ಒಳಿತು.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ಹಲವು ಕೆಲಸಗಳನ್ನು ಪೂರ್ಣ ಮಾಡುವಿರಿ. ವ್ಯಾಪಾರಿಗಳಿಗೆ ಬಹಳ ಅನುಕೂಲಕರ ದಿನ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿಸಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಪ್ರಯಾಣದ ದಿನ. ಗೃಹಿಣಿಯರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಆಪ್ತರೊಬ್ಬರ ಆಹ್ವಾನದ ಮೇರೆಗೆ ನೀವು ಇಂದು ಪ್ರಯಾಣಿಸಬೇಕಾಗುತ್ತದೆ. ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮ ದಿನ. ಸಹೋದರರೊಂದಿಗೆ ಯಾವುದಾದರು ಮನಸ್ತಾಪ ಇದ್ದರೆ ನಿವಾರಣೆಯಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸಿನ ಪರಿಸ್ಥಿತಿ ಸುಧಾರಿಸಲು ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆನ್‌ಲೈನ್ ಸಂಬಂಧಿತ ವಿಚಾರದಲ್ಲಿ ನೀವು ಎಚ್ಚರಿಕೆಯಿಂದಿರಿ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಮಿಶ್ರಫಲ. ನೀವು ಪ್ರಯಾಣಗಳ ಮಾಡುತ್ತೀರಿ, ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ನೀವು ಹಣಕಾಸಿನ ವಿಚಾರದಲ್ಲಿ ಬಹಳ ಒತ್ತಡದ ದಿನವಾಗಬಹುದು. ಯಾರಿಗೂ ಸಾಲ ನೀಡುವಂತಹ ಕೆಲಸಕ್ಕೆ ಇಂದು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಮಿಶ್ರಫಲ. ಈ ಬುಧವಾರದಂದು ನೀವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಕೆಲಸಗಳಲ್ಲಿ ಯಾರಿಂದಾದರು ಸಹಕಾರ ಪಡೆಯಬಹುದು. ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮ ದಿನವಲ್ಲ. ಮನೆಯ ವಾತಾವರಣದಲ್ಲಿ ಸ್ವಲ್ಪ ಏರುಪೇರು ನೋಡಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ನೀವು ಮಾಡಬೇಕಾದ ಕೆಲಸದ ಮೇಲೆ ಗಮನವಿಡಿ. ನೀವಿಂದು ಬಹಳಷ್ಟು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ, ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅವರಿಗೆ ಮರಳಿ ನೀಡಬೇಕಾದ ಒತ್ತಡದಲ್ಲಿ ಇರುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ನೀವು ಅಂದುಕೊಂಡ ಕೆಲಸಗಳ ಮಾಡಲು ಸಾಧ್ಯವಾಗದೆ ಇರುವ ಒತ್ತಡ ಅಥವಾ ಚಿಂತೆ ಕಾಡಬಹುದು. ನಿಮ್ಮ ದಾಂಪತ್ಯ ಕುರಿತಾದ ವಿಚಾರದಲ್ಲಿ ನಿಮ್ಮಿಂದಾಗಿ ತಪ್ಪು ನಿರ್ಧಾರ ಇರಬಹುದು. ಬೆಂಕಿ ಅಥವಾ ಅಪಾಯಕಾರಿ ವಸ್ತುಗಳಿಂದ ದೂರವಿರಿ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಆರಾಮದಾಯಕ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಇಂದು ಅಡ್ಡಿಗಳ ನೋಡಬಹುದು. ಗೃಹಿಣಿಯರು ಇಂದು ಪ್ರಯಾಣ ಮಾಡಬೇಕಾಗಬಹುದು. ದಿನದ ಅಂತ್ಯದಲ್ಲಿ ಖರ್ಚುಗಳಿವೆ.
ಮಕರ ರಾಶಿ
ಮಕರ ರಾಶಿ ಜನರು ಇಂದು ದೊಡ್ಡ ಮಟ್ಟದ ಕೆಲಸಗಳಲ್ಲಿ ತೊಡಗುತ್ತಾರೆ, ವ್ಯಾಪಾರಿಗಳು ಸಹ ಇಂದು ದೊಡ್ಡ ಕೆಲಸಗಳ ಮಾಡಬಹುದು. ವಾಹನ ಸವಾರರು ಇಂದು ಎಚ್ಚರಿಕೆ ವಹಿಸಬೇಕು. ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಉತ್ತಮ ದಿನ. ಪಾಲುದಾರಿಕೆ ವ್ಯವಹಾರದಲ್ಲಿ ಇಂದು ನಿಮಗೆ ಶುಭವಿದೆ. ದಿನದ ಆರಂಭದಲ್ಲಿ ಆಯಾಸದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ಮೀನ ರಾಶಿ
ಮೀನ ರಾಶಿ ಜನರು ಇಂದು ದೊಡ್ಡ ಪ್ರಯಾಣಗಳ ಮಾಡಬಹುದು. ನೀವು ಯಾರಿಂದಾದರು ಹಣ ಪಡೆಯುವ ಆಲೋಚನೆಯಲ್ಲಿದ್ದರೆ ಶುಭವಾಗಲಿದೆ. ವ್ಯಾಪಾರಿಗಳಿಗೆ ಈ ದಿನ ಬಹಳ ಶುಭವಿದೆ. ನಿಮ್ಮ ಮನೆಯ ದೊಡ್ಡ ಕೆಲಸಗಳು ಅಥವಾ ಮುಂಬರುವ ದಿನಗಳಿಗೆ ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಬಹುದು.



Click it and Unblock the Notifications