Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 16 Horoscope: ಗೃಹಿಣಿಯರು ಇಂದು ನಷ್ಟ ಅನುಭವಿಸಬಹುದು!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 16 (December 16 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಇಂದು ಸಮಸ್ಯೆಯ ದಿನ. ಯಾರಿಂದಾದರು ದೊಡ್ಡ ಸಾಲ ನೀಡುವ ನಿಮ್ಮ ಆಲೋಚನೆಯನ್ನು ಬದಲಾಯಿಸುವುದು ಉತ್ತಮ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು. ಪ್ರೀತಿಯ ವಿಚಾರದಲ್ಲಿ ಇಂದು ಶುಭಕರ ದಿನ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ ದಿನವಾಗಲಿದೆ. ಇಂದು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಮ್ಮಿಂದಾಗಿ ಹೊಸ ವಿಚಾರಗಳು ನಡೆಯಬಹುದು. ವ್ಯಾಪಾರದಲ್ಲಿ ಲಾಭವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಆಪ್ತರೊಂದಿಗೆ ನೀವು ಚರ್ಚೆಗಳು ಮಾತುಕಥೆಯಲ್ಲಿ ತೊಡಗಬಹುದು. ಆಸ್ಪತ್ರೆ ಕುರಿತಾದ ವಿಚಾರದಲ್ಲಿ ಶುಭವಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಲಾಭದಾಯಕ ವಿಚಾರಗಳನ್ನು ನೋಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ನೀವು ತೊಡಗಿದ್ದರೆ ಇಂದು ಲಾಭಗಳ ನೋಡಬಹುದು. ನಿಮ್ಮಿಂದ ಆಪ್ತರಿಗೆ ಸಹಾಯವಿದೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲ. ಉದ್ಯೋಗ ಸಂಬಂಧಿತ ವಿಚಾರದಲ್ಲಿ ಯಾರಿಂದಾದರು ಹಣ ಪಡೆಯುವ ಆಲೋಚನೆಯಲ್ಲಿ ಅಡ್ಡಿ ಇದೆ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ. ದಾಂಪತ್ಯ ಕುರಿತಾದ ವಿಚಾರದಲ್ಲಿ ಮಧುರ ದಿನ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಪ್ರಯಾಣಗಳಿಂದ ತುಂಬಿರಲಿದೆ. ಗೃಹಿಣಿಯರಲ್ಲಿ ಖರ್ಚುಗಳು ಬರುವ ದಿನ. ಮಕ್ಕಳ ಕುರಿತಾದ ಚಿಂತೆಯೊಂದು ನಿಮಗೆ ಕಾಡಬಹುದು. ಶಾಲೆಗೆ ತೆರಳುವ ಮಕ್ಕಳ ಕುರಿತಾಗಿ ಎಚ್ಚರಿಕೆ ಇಡಿ. ಮನೆಯ ಸದಸ್ಯರ ನಡುವೆ ಮನಸ್ತಾಪ ಬರಬಹುದು.
ತುಲಾ ರಾಶಿ
ತುಲಾ ರಾಶಿ ಜನರು ಇಂದು ದೊಡ್ಡ ಲಾಭ ನೋಡುವ ಸಮಯ. ಯಾರಿಗಾದರು ಹಣ ನೀಡುವ ನಿಮ್ಮ ಆಲೋಚನೆಯನ್ನು ಮತ್ತೆ ಪರಿಶೀಲಿಸಿ. ದೊಡ್ಡ ಮಟ್ಟದ ಒಪ್ಪಂದಗಳ ಮಾಡಿಕೊಳ್ಳದೆ ಇರುವುದು ಉತ್ತಮ. ಪತ್ನಿಯ ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು. ವ್ಯಾಪಾರಿ ವಲಯವು ಇಂದು ಮಿಶ್ರದಿನವಾಗಿ ನೋಡಲಿದ್ದಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಉತ್ತಮ ದಿನ. ಹಣಕಾಸು ವಿಚಾರವಾಗಿ ಬಹು ಸಮಯದಿಂದ ನೀವು ಅನುಭವಿಸಿದ್ದ ಅಡ್ಡಿಯೊಂದು ದೂರಾಗಲಿದೆ. ಆಪ್ತರೊಂದಿಗೆ ಸಂತಸದ ಕ್ಷಣಗಳ ಕಳೆಯುವಿರಿ. ದಿನದ ಅಂತ್ಯದಲ್ಲಿ ಮಾಡುವ ಪ್ರಯಾಣ ನಿಮಗೆ ಆಯಾಸ ತರಬಹುದು. \
ಧನು ರಾಶಿ
ಧನು ರಾಶಿ ಜನರಿಗೆ ಇಂದು ಮಿಶ್ರಫಲ. ನಿಮ್ಮ ಖರ್ಚುಗಳ ಮೇಲೆ ಹಿಡಿತ ಸಾಧಿಸಿ. ಅನಗತ್ಯ ವಿಚಾರಗಳಿಗೆ ಮಾಡುವ ಖರ್ಚುಗಳನ್ನು ತಡೆಯುವುದು ಉತ್ತಮ. ಗೃಹಿಣಿಯರು ಇಂದು ಪ್ರಯಾಣಗಳ ಮಾಡಬಹುದು. ನಿಮ್ಮ ಮನೆಯಲ್ಲಿ ಕೆಲಸಗಳು ನಡೆಯಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ತರಲಿವೆ. ದಾಂಪತ್ಯ ವಿಚಾರದಲ್ಲಿ ನಿಮಗೆ ಸಂತೋಷ ತರುವ ದಿನ. ಯಾರಿಗೂ ಹಣ ನೀಡಲು ಮುಂದಾಗದೆ ಇರುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಸಮಸ್ಯೆಗಳು ಎದುರಾಗಬಹುದು. ದಿನದ ಆರಂಭದಲ್ಲಿ ಸಣ್ಣ ಪುಟ್ಟ ಕಲಹಗಳಿಗೆ ಎದುರಾಗಬಹುದು. ವಾಹನ ಸಂಬಂಧಿ ಸಮಸ್ಯೆ ಇರಬಹುದು. ಖರ್ಚುಗಳ ಮೇಲೆ ಹಿಡಿತ ಇಟ್ಟುಕೊಳ್ಳುವುದು ಉತ್ತಮ. ಹೊಸ ವಸ್ತುಗಳ ಖರೀದಿಸಬಹುದು. ಪ್ರಯಾಣ ಮಾಡುವಾಗ ಎಚ್ಚರದಿಂದ ಇರಿ.
ಮೀನ ರಾಶಿ
ಮೀನ ರಾಶಿ ಜನರಿಗೆ ಕೆಲವು ಪ್ರಯಾಣಗಳು ನಿಮ್ಮಲ್ಲಿ ಲಾಭಕ್ಕೆ ಕಾರಣವಾಗಬಹುದು. ಅಪೂರ್ಣವಾಗಿರುವ ಕೆಲಸಗಳನ್ನು ಪೂರ್ಣ ಮಾಡುವಿರಿ. ಆರೋಗ್ಯದಲ್ಲಿ ಏರುಪೇರು ಸಂಭವ.



Click it and Unblock the Notifications