Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
December 15 Horoscope: ಸೋಮವಾರದಂದು ಶುಭ ಕ್ಷಣಗಳಿವೆ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 15 (December 15 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಇಂದು ಪ್ರಬಲ ಯೋಗವನ್ನು ನೋಡಬಹುದು. ನಿಮ್ಮ ಹಲವು ಕಷ್ಟಗಳನ್ನು ಇಂದು ಪರಿಹರಿಸಿಕೊಳ್ಳಲು ಅವಕಾಶಗಳ ಪಡೆಯುವುದು ನೋಡಬಹುದು. ಆಪ್ತರಿಂದ ನಿಮಗೆ ಬರಬೇಕಾದ ಯಾವುದಾದರು ವಸ್ತು ನಿಮ್ಮ ಕೈ ಸೇರಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಅದರಲ್ಲೂ ಗೃಹಿಣಿಯರಿಗೆ ಇಂದು ಶುಭದಿನ. ನಿಮ್ಮ ಆಸೆಯಂತೆ ವಸ್ತುವೊಂದು ನಿಮ್ಮ ಕೈ ಸೇರುವ ಸಮಯ ಹತ್ತಿರವಾಗಲಿದೆ. ಪುರುಷದಲ್ಲಿ ಇಂದು ಪ್ರಯಾಣಗಳು ಹೆಚ್ಚಾಗುತ್ತದೆ. ಆಪ್ತರು ನಿಮಗಾಗಿ ಶುಭ ಸುದ್ದಿ ಕೊಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ದೊಡ್ಡ ಲಾಭವಿದೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡ ಸಮಯಕ್ಕೆ ಮುಗಿಸುವಿರಿ. ನಿಮ್ಮ ಹಲವು ವಿಚಾರದಿಂದ ಅನೇಕರು ಮುನಿಸಿಕೊಳ್ಳುವ ಸಂಭವವಿದೆ. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಅವಿವಾಹಿತರು ಇಂದು ಹಣಕಾಸು ಸಂಬಂಧಿತ ವಿಚಾರದಲ್ಲಿ ದೊಡ್ಡ ಸಮಸ್ಯೆಗಳ ಎದುರಿಸಬಹುದು. ನಿಮ್ಮ ಹಲವು ಕೆಲಸಗಳು ಅಡೆತಡೆಯಿಂದ ಕೂಡಿರಲಿದೆ. ಪ್ರಯಾಣ ಮಾಡುವುದು ನಿಮಗೆ ಆಯಾಸ ತರಬಹುದು. ಹಾಗೆ ಖರ್ಚಿಗೆ ಕಾರಣವಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಇಂದು ಪ್ರಯಾಣದಲ್ಲಿ ತೊಡಗಬೇಕಾದ ದಿನವಾಗಬಹುದು. ನಿಮ್ಮ ಸಮಸ್ಯೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಹಣಕಾಸು ವಿಚಾರದಲ್ಲಿ ನೆಮ್ಮದಿಯ ದಿನವಾಗುತ್ತದೆ. ಹಲವು ದಿನದ ಆರ್ಥಿಕ ಸಮಸ್ಯೆಗಳು ತಾತ್ಕಾಲಿಕವಾಗಿ ಮರೆಯಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನ. ದಾಂಪತ್ಯ ವಿಚಾರದಲ್ಲಿ ನಿಮಗಿಂದು ಮಧುರತೆ ಇರಲಿದೆ. ಯಾರಿಗೂ ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ. ರಾತ್ರಿ ಪ್ರಯಾಣಗಳಿಂದ ದೂರ ಉಳಿಯುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಜನರು ಇಂದು ಸಮಸ್ಯೆಗಳ ಎದುರಿಸಬಹುದು. ವ್ಯಾಪಾರಿಗಳು ತಮ್ಮ ಹಣಕಾಸು ಸಂಬಂಧಿತ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮತ್ತಷ್ಟು ಕಷ್ಟಪಡಬೇಕಾಗುತ್ತದೆ. ಬಾಡಿಗೆದಾರರಿಗೆ ಇಂದು ಸಮಸ್ಯೆಗಳಿವೆ. ಆಸ್ತಿ ಸಂಬಂಧಿತ ವಿಚಾರ ಹೊಸ ಚಿಂತೆ ತರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಮಂದಿ ಇಂದು ಮಿಶ್ರ ಫಲವನ್ನು ಎದುರಿಸಲಿದ್ದಾರೆ. ನಿಮ್ಮ ಆದಾಯದಷ್ಟೇ ಖರ್ಚು ಸಹ ಇರಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಎಂದಿನಂತೆ ಮುಂದುವರೆಯಲಿದೆ. ಮನೆಯ ಹಿರಿಯ ಸದಸ್ಯರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಪ್ರಯಾಣದ ದಿನ. ಆಸ್ಪತ್ರೆ ಸಂಬಂಧಿತ ಓಡಾಟಗಳಿರಬಹುದು. ದಿನದ ಅಂತ್ಯದಲ್ಲಿ ನೋವಿನ ಅಥವಾ ಕಹಿ ಸುದ್ದಿ ಕೇಳಬಹುದು. ವಾಹನ ಸಂಬಂಧಿತ ಖರ್ಚುಗಳಿವೆ. ಸ್ವಂತ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರು ಹೆಚ್ಚು ಶ್ರಮಹಾಕಬೇಕಿದೆ. ನವವಿವಾಹಿತರಲ್ಲಿ ಮುನಿಸುಗಳು ಬರಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಲಾಭದಾಯಕ ದಿನ, ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗಿದ್ದ ವಿಚಾರವೊಂದರಿಂದ ಹೊರಬರಬಹುದು. ವ್ಯಾಪಾರಿಗಳಿಗೆ ಲಾಭದಾಯಕ ದಿನ. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯನ್ನು ಈಡೇರಿಸಿಕೊಳ್ಳಬಹುದು. ಅದೃಷ್ಟ ನಂಬದೆ ಶ್ರಮದ ಮೇಲೆ ನಂಬಿಕೆ ಇಡಿ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಇಂದು ದೊಡ್ಡ ಮಟ್ಟದ ಲಾಭ ನೋಡಬಹುದು. ನೀವು ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಒತ್ತಡ ಬರುವುದು, ಹಾಗೆ ನೀವು ಹಣ ನೀಡಿ ಚಿಂತೆ ದೂರ ಮಾಡಿಕೊಳ್ಳಬಹುದು. ಮನೆ ಸಂಬಂಧವಾಗಿ ಇದ್ದ ಮುನಿಸು ಶಮನ ಆಗಲಿದೆ.
ಮೀನ ರಾಶಿ
ಮೀನ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗುವಿರಿ, ಹೀಗಾಗಿ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ಎಚ್ಚರ ಇಡಿ.



Click it and Unblock the Notifications
