Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಡಿಸೆಂಬರ್ 14 ದಿನ ಭವಿಷ್ಯ: ಮಕರ ರಾಶಿಗೆ ಅದೃಷ್ಟದ ದಿನ, ಉಳಿದ ರಾಶಿಗಳಿಗೆ ಹೇಗಿರಲಿದೆ?
ಜ್ಯೋತಿಷ್ಯ ಪ್ರಕಾರ ಡಿಸೆಂಬರ್ 14 ದ್ವಾದಶ ರಾಶಿಗಳಿಗೆ ಹೇಗಿರಲಿದೆ, ನೋಡೋಣ:
ಮೇಷ ರಾಶಿ
ನೀವು ನಿಮಗೆ ವಹಿಸಿರುವ ಕೆಲಸವನ್ನು ಸಮಯಕ್ಕೆ ಪೂರ್ಣಗೊಳಿಸಬೇಕು, ಏಕೆಂದರೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸ ಗಮನಿಸುತ್ತಿರುತ್ತಾರೆ, ಚಿಕ್ಕ ತಪ್ಪಿಗೆ ದೊಡ್ಡ ದಂಡ ತೆರಬೇಕಾಗುತ್ತದೆ, ಹಾಗಾಗಿ ಜಾಗ್ರತೆವಹಿಸಿ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಅನುಕೂಲಕರವಾಗಿದೆ.

ವೃಷಭ ರಾಶಿ
ಅನಗ್ಯತ ಚಿಂತೆಗಳನ್ನು ಬಿಟ್ಟು ನಿಮ್ಮ ಕೆಲಸ ಕಾರ್ಯದತ್ತ ಗಮನಹರಿಸಿ. ವ್ಯಾಪಾರಿಗಳು ಈ ದಿನ ಚಿಕ್ಕ ಅವಕಾಶ ಅಂತ ನಿರ್ಲಕ್ಷ್ಯ ಮಾಡಬೇಡಿ. ಕುಟುಂಬದ ಕಡೆಗೆ ಗಮನಹರಿಸಿ, ಅವರ ಸಲಹೆಯನ್ನು ನಿರ್ಲಕ್ಷ್ಯ ಮಾಡಬೇಡಿ, ಆರ್ಥಿಕವಾಗಿ ನೋಡುವುದಾದರೆ ಈ ದಿನ ನಿಮಗೆ ಉತ್ತಮವಾಗಿರಲಿದೆ.
ಮಿಥುನ ರಾಶಿ
ಕೆಲವೊಂದು ಕೆಲಸ ಬಾಕಿಯುಳಿದಿರುವುದರಿಂದ ಕೆಲಸದ ಒತ್ತಡ ಅಧಿಕವಿರಲಿದೆ. ಆರ್ಥಿಕವಾಗಿ ಈ ದಿನ ನಿಮಗೆ ಉತ್ತಮವಾಗಿರಲಿದೆ. ನೀವು ಈ ದಿನ ಧನಾತ್ಮಕವಾಗಿರಿ, ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಆರ್ಥಿಕವಾಗಿ ಕೂಡ ಈ ದಿನ ಸರಾಸರಿಯಾಗಿರಲಿದೆ.
ಕರ್ಕ ರಾಶಿ
ವೃತ್ತಿ ಬದುಕಿನಲ್ಲಿ ಕೆಲವು ಒತ್ತಡ ಇರಲಿದೆ, ಅನಗ್ಯತ ವಿಷಯಗಳ ಕಡೆ ಗಮನಹರಿಸಬೇಡಿ, ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಕುಟುಂಬ ಜೀವನ, ಆರ್ಥಿಕ ಜೀವನ ತುಂಬಾ ಚೆನ್ನಾಗಿರಲಿದೆ.
ಸಿಂಹ ರಾಶಿ
ವೃತ್ತಿ ಬದುಕಿನ ದೃಷ್ಟಿಯಿಂದ ಈ ಅವಧಿಯಲ್ಲಿ ನೀವು ತುಂಬಾನೇ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬಹುದು. ನೀವು ಅನಗ್ಯತ ಚಿಂತೆ ಬಿಡಿ, ನಿಮ್ಮ ಗುರಿಯತ್ತ ಗಮನಹರಿಸಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕನ್ಯಾ ರಾಶಿ
ಈ ದಿನ ಕೆಲ ಸವಾಲುಗಳು ಇರಬಹುದು, ಆದರೆ ಅವಕಾಶಗಳು ನಿಮ್ಮ ಕೈ ತಪ್ಪದಂತೆ ಜಾಗ್ರತೆವಹಿಸಬೇಕು. ಹೆಚ್ಚಿನ ಶ್ರಮ ಹಾಕಿ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಆರೋಗ್ಯದ ಕಡೆಗೆ ಗಮನಹರಿಸಿ.
ತುಲಾ ರಾಶಿ
ಈ ದಿನ ಆರ್ಥಿಕವಾಗಿ ಉತ್ತಮವಾಗಿರಲಿದೆ, ಬಜಟ್ ಮೀರಿ ಖರ್ಚು ಮಾಡಲು ಹೋಗಬೇಡಿ. ನಿಮ್ಮ ಆತ್ಮವಿಶ್ವಾಸ ಚೆನ್ನಾಗಿರಲಿದೆ. ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ, ಆರೋಗ್ಯ ಸಮಸ್ಯೆ ಇದ್ದರೆ ಸರಿಯಾದ ಸಮಯಕ್ಕೆ ಔಷಧಿ ತೆಗೆದುಕೊಳ್ಳಿ.
ವೃಶ್ಚಿಕ ರಾಶಿ
ಆರ್ಥಿಕವಾಗಿ ಈ ದಿನ ಉತ್ತಮವಲ್ಲ, ವೃತ್ತಿ ಬದುಕಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ, ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ದಿನ ಉತ್ತಮವಾಗಿದೆ.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಅನುಕೂಲಕರವಾಗಿರಲಿದೆ. ಈ ದಿನ ಆರ್ಥಿಕವಾಗಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯ ಉಂಟಾಗಬಹುದು. ಕುಟುಂಬದ ಕಡೆಗೆ ಗಮನಹರಿಸಬೇಕು.
ಮಕರ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನಮಗೆ ಸಂತೋಷ ಕೊಡುವ ಶುಭ ಸುದ್ದಿ ಪಡೆಯುತ್ತೀರಿ, ಆರೋಗ್ಯ ಸಮಸ್ಯೆ ಇದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.
ಕುಂಭ ರಾಶಿ
ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು, ಪ್ರಮುಖ ದಾಖಲೆಗಳನ್ನು ಸರಿಯಾಗಿಡಿ, ಡಾಕ್ಯೂಮೆಂಟ್ ಮಾಡಿಸುವಾಗ ಕೂಡ ಜಾಗ್ರತೆವಹಿಸಬೇಕು. ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ.
ಮೀನ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ಕುಟುಂಬಕ್ಕೆ ಸಮಯ ನೀಡಿ, ಸಂಗಾತಿ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಪ್ರಯತ್ನಿಸಿ, ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿಲಿದೆ, ಆರ್ಥಿಕವಾಗಿ ಕೂಡ ಅನುಕೂಲಕರವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications