Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
December 14 Horoscope: ಭಾನುವಾರ ಯಾರಿಗಿದೆ ಧನಲಾಭ?
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 14 (December 14 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಈ ದಿನ ಬಹಳ ಅನುಕೂಲ ನೋಡಲಿದ್ದಾರೆ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಇಂದು ಕೈ ಸೇರಬಹುದು. ಯಾರೊಂದಿಗಾದರು ಮನಸ್ತಾಪಗಳಿದ್ದರೆ ನಿವಾರಣೆಯಾಗಲಿದೆ.
ವೃಷಭ ರಾಶಿ
ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಿದ್ದ ಘಟನೆಯೊಂದರಿಂದ ನಿಮಗೆ ಮುಕ್ತಿ ಪಡೆಯುವ ಸಮಯ ಆಗಿರಲಿದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ವ್ಯಾಪಾರಿಗಳು ಇಂದು ವಿಶ್ರಾಂತಿಗಿಂತ ತಮ್ಮ ವ್ಯವಹಾರದಲ್ಲಿ ತೊಡಗುವುದು ಲಾಭ ತರಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ಹಣ ಮಾಡುವ ದಿನ. ನೀವು ಪ್ರಯಾಣದ ದೃಷ್ಟಿಯಿಂದ ಕೈಗೊಂಡ ಕೆಲಸಗಳು ಶುಭ ನೀಡಲಿವೆ. ಸಂಬಂಧಿಕರೊಬ್ಬರ ಭೇಟಿ ಸಾಧ್ಯತೆ ಇದೆ, ವಾಹನ ವಿಚಾರವಾಗಿ ನಿಮ್ಮ ನಿರ್ಧಾರ ಬದಲಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಇಂದು ಖರ್ಚುಗಳಿಂದ ತುಂಬಿರುವ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಅಡೆತಡೆ ನೋಡಬಹುದು. ಯಾರಿಗೂ ಹಣ ನೀಡುವ ಮುನ್ನ ಎಚ್ಚರ ವಹಿಸಿ. ಮನೆಯಲ್ಲಿ ಶಾಂತಿ ಇರಲಿದೆ. ಗೃಹಿಣಿಯರು ಇಂದು ಪ್ರಯಾಣ ಮಾಡಬೇಕಾಗಿ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನ ಪ್ರಯಾಣ ಮಾಡಬೇಕಾಗುತ್ತೆ. ಒಂದಿಷ್ಟು ದಿನದಿಂದ ಮುಂದೂಡಿಕೊಂಡು ಬಂದಿದ್ದ ಕೆಲಸಗಳನ್ನು ಇಂದು ಪೂರ್ಣ ಮಾಡುವಿರಿ. ಯಾರಿಗಾದರು ಹಣ ನೀಡುವ ಮುನ್ನ ಮತ್ತೊಮ್ಮೆ ಆಲೋಚಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯವರು ಇಂದು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಮನೆಗಾಗಿ ಹೊಸ ವಸ್ತುವೊಂದನ್ನು ಇಂದು ಖರೀದಿಸಬಹುದು. ದಾಂಪತ್ಯ ವಿಚಾರವಾಗಿ ಇದ್ದ ಮನಸ್ತಾಪ ದೂರ ಮಾಡಿಕೊಳ್ಳುವಿರಿ. ಸಂಜೆ ಸಮಯದಲ್ಲಿನ ಪ್ರಯಾಣ ಸುಖಕರವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ಉದ್ಯೋಗ ಸಂಬಂಧಿತ ಸಮಸ್ಯೆಗಳಿಂದ ತಾತ್ಕಾಲಿಕ ಪರಿಹಾರ ಪಡೆಯಬಹುದು. ನಿಮ್ಮ ಅನುಕೂಲಕರ ಕೆಲಸವನ್ನು ಬಹುಬೇಗ ಮಾಡಿ ಮುಗಿಸುವ ಆತುರದಲ್ಲಿ ದುಡುಕಬೇಡಿ. ಗೃಹಿಣಿಯರಿಗೆ ಖರ್ಚುಗಳ ನಿಭಾಯಿಸುವ ಕಲೆ ತಿಳಿದಿರಬೇಕಾಗುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಸಮಸ್ಯೆಗಳಿಂದ ತುಂಬಿದ ದಿನವಾಗಿ ನೋಡಲಿದ್ದಾರೆ, ದಿನದ ಆರಂಭದಿಂದಲೂ ಒತ್ತಡದಿಂದ ತುಂಬಿರುವ ದಿನವಾಗುತ್ತದೆ. ಹಾಗೆ ನಿಮ್ಮಲ್ಲಿ ಹಣಕಾಸು ಸಂಬಂಧಿತ ಯಾವುದಾದರು ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನೀವು ಮುಂದಾಗಿದ್ದರೆ ಅದರಿಂದ ಹೊರಬರುವುದು ಕಷ್ಟವಾಗಬಹುದು.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಮಿಶ್ರಫಲವಿದೆ. ಯಾರಿಂದಾದರು ಪಡೆದಿದ್ದ ಹಣವನ್ನು ಮರಳಿ ನೀಡಬೇಕಾದ ಒತ್ತಡ ಎದುರಿಸುತ್ತೀರಿ. ನಿಮ್ಮ ಆಲೋಚನೆಗಳಲ್ಲಿ ಇಂದು ಬದಲಾವಣೆ ನೋಡಬಹುದು. ಸ್ನೇಹಿತರಿಂದ ಹಿತನುಡಿಗಳ ಕೇಳಬಹುದು.
ಮಕರ ರಾಶಿ
ಮಕರ ರಾಶಿಯವರು ವಾಹನ ಚಾಲನೆ ವೇಳೆ ಇಂದು ಎಚ್ಚರಿಕೆ ವಹಿಸಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ನೀವು ವಿಫಲರಾಗಬಹುದು. ವ್ಯಾಪಾರಿಗಳು ಬುದ್ದಿವಂತಿಕೆ ಪ್ರದರ್ಶಿಸಬೇಕು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ದೊಡ್ಡ ಲಾಭವಿದೆ. ನಿಮ್ಮ ಹೊಸ ವ್ಯಾಪಾರ ಅಥವಾ ಹಣಕಾಸು ವ್ಯವಹಾರಗಳಲ್ಲಿ ಶುಭವಾಗುವುದು. ಬೀದಿ ಬದಿ ವ್ಯಾಪಾರಿಗಳು ಲಾಭ ಮಾಡುವ ದಿನ. ಮನೆಯಲ್ಲಿ ನಿಮ್ಮಿಂದಾಗಿ ಸಂತೋಷ ಇರಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಮಿಶ್ರಫಲ. ದಿನದ ಆರಂಭದಲ್ಲಿ ನಿಮಗೆ ಸಂತೋಷ ಇರಲಿದೆ. ಅಂತ್ಯದ ಸಮಯದಲ್ಲಿ ಖರ್ಚುಗಳು ಬರಲಿವೆ. ಮನೆಗಾಗಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗುತ್ತೀರಿ. ಅನೇಕರಲ್ಲಿ ನೆಮ್ಮದಿ ಇರಲಿದೆ.



Click it and Unblock the Notifications
