December 12 Horoscope: ಶುಕ್ರವಾರ ನಿಮಗಿದೆ ದಿಢೀರ್ ಶುಭಫಲ

ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 12 (December 12 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನ ಬಹಳ ಅನುಕೂಲಕರವಾಗಿರಲಿದೆ. ಇಂದು ನಿಮ್ಮ ಹಲವು ಕನಸಿನ ಕೆಲಸವನ್ನು ಪೂರ್ಣ ಮಾಡುವಿರಿ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣವೊಂದು ಕೈ ಸೇರಬಹುದು. ನಿಮ್ಮ ವಾಹನ ಖರೀದಿಯ ಆಸೆಗೆ ಇಂದು ಒಂದು ಹೆಜ್ಜೆ ಮುನ್ನುಡಿ ಬರೆಯುವಿರಿ.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಆಪ್ತರೊಬ್ಬರಿಗೆ ನೀವು ಹಣ ನೀಡಬೇಕಾಗಿ ಬರಬಹುದು. ಅದರಿಂದ ನಿಮ್ಮ ಭವಿಷ್ಯದಲ್ಲಿ ಹಣಕಾಸು ಸಮಸ್ಯೆಗೆ ದಾರಿಯಾಗಬಹುದು, ಆರೋಗ್ಯ ಹದಗೆಡುವ ಸಂಭವವೂ ಇದೆ.

December-12-2025-daily-horoscope

ಮಿಥುನ ರಾಶಿ

ಮಿಥುನ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗಬೇಕಾದ ದಿನವಾಗಬಹುದು. ಅನೇಕರು ಅತೀ ದೊಡ್ಡ ಕೆಲಸಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವಾಹನ ಸಂಬಂಧಿತ ಲಾಭಗಳಿವೆ. ನಿಮ್ಮ ಮನೆಯಲ್ಲಿ ಶಾಂತಿ ಇರಲಿದೆ. ಕೌಟುಂಬಿಕ ವಿಚಾರದಲ್ಲಿ ಗೆಲುವಿದೆ.

ಕರ್ಕ ರಾಶಿ

ಕರ್ಕ ರಾಶಿಯವರಲ್ಲಿ ಇಂದು ದೊಡ್ಡ ಮಟ್ಟದ ಲಾಭವಿದೆ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಯಾರಿಗೂ ಹಣ ನೀಡಲು ಮುಂದಾಗಬೇಡಿ. ಶಿಕ್ಷಣ ಕ್ಷೇತ್ರದಲ್ಲಿರುವ ಮಂದಿಗೆ ಇಂದು ಆರಾಮದಾಯಕ ದಿನವಾಗುತ್ತಿದೆ. ಉದ್ಯೋಗದಲ್ಲಿನ ಮಂದಿಗೆ ಇಂದು ಖುಷಿಯ ದಿನವಾಗುತ್ತಿದೆ.

ಸಿಂಹ ರಾಶಿ

ಸಿಂಹ ರಾಶಿಯ ಗೃಹಿಣಿಯರಿಗೆ ಇಂದು ಸವಾಲಿನ ದಿನವಾಗಬಹುದು. ಬಹಳ ದಿನದ ಆರ್ಥಿಕ ಸಮಸ್ಯೆಯೊಂದನ್ನು ಪರಿಹರಿಸಲು ನೀವು ಶ್ರಮ ಹಾಕಬಹುದು. ಆಹಾರ ಸಂಬಂಧಿತ ಖರ್ಚು ಹೆಚ್ಚಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿ ಜನರಿಗೆ ಇಂದು ಸುಖಕರ ಪ್ರಯಾಣವಿದೆ. ನೀವು ಅಂದುಕೊಂಡಿದ್ದ ಯೋಜನೆಗೆ ಇಂದು ಕೆಲಸ ಮಾಡಬೇಕಾಗಿ ಬರಬಹುದು. ಆಸ್ತಿ ಸಂಬಂಧಿತ ವಿಚಾರವಾಗಿ ಉತ್ತಮ ಫಲ ಅನುಭವಿಸಬಹುದು. ಸಂಬಂಧಿಕರ ಮನೆಗೆ ನೀವು ಭೇಟಿ ನೀಡಬಹುದು.

ತುಲಾ ರಾಶಿ

ತುಲಾ ರಾಶಿ ಜನರಿಗೆ ಇಂದು ಅನುಕೂಲಕರ ದಿನ. ನಿಮ್ಮ ಹಲವು ಕೆಲಸಗಳು ನೀವು ಅಂದುಕೊಂಡಂತೆ ಇರಲಿದೆ. ನಿಮಗೆ ಸಿಗಬೇಕಿದ್ದ ವಸ್ತುವೊಂದು ಕೈ ಸೇರಲಿದೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿ ಜನರಿಗೆ ಇಂದು ಸವಾಲುಗಳಿಂದ ತುಂಬಿದ ದಿನ. ನಿಮ್ಮ ಉದ್ಯೋಗ ಸ್ಥಳದಲ್ಲಿದ್ದ ಸಮಸ್ಯೆಗಳು ನಿವಾರಣೆಯಾಗಬಹುದು. ಯಾರಿಗೂ ಇಂದು ಹಣ ನೀಡಲು ಮುಂದಾಗದೆ ಇರುವುದು ಉತ್ತಮ. ಪ್ರೀತಿ ವಿಚಾರದಲ್ಲಿ ಉತ್ತಮ ದಿನ. ಆದ್ರೆ ಕೌಟುಂಬಿಕ ವಿಚಾರವಾಗಿ ಸವಾಲುಗಳಿವೆ.

ಧನು ರಾಶಿ

ಧನು ರಾಶಿಯವರಿಗೆ ಇಂದು ಬಹಳ ಉತ್ತಮ ದಿನವಾಗಿರಲಿದೆ. ನಿಮ್ಮ ಅನೇಕ ಕೆಲಸಗಳು ನೀವು ಅಂದುಕೊಂಡಂತೆ ನಡೆಯಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿನ ಅಡೆತಡೆ ನಿವಾರಣೆಯಾಗಲಿದೆ ಮಾನಸಿಕ ಆರೋಗ್ಯದ ಕಡೆ ಗಮನವಿಡಿ.

ಮಕರ ರಾಶಿ

ಮಕರ ರಾಶಿಯವರು ಮಿಶ್ರಫಲ ಅನುಭವಿಸಲಿದ್ದಾರೆ. ನಿಮ್ಮ ಪೋಷಕರಿಂದ ನಿಮಗೆ ಎಲ್ಲಾ ಕೆಲಸದಲ್ಲಿಯೂ ಬೆಂಬಲ ಸಿಗಲಿದೆ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಬರಬಹುದು. ಆಪ್ತರಿಂದ ಸಹಾಯಕ್ಕೆ ಮನವಿ ಬರಬಹುದು. ಕೆಲಸದ ಸ್ಥಳದಲ್ಲಿ ಅಶಾಂತಿ ಮೂಡಬಹುದು.

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಇಂದು ಸಮಸ್ಯೆಗಳು ಬರುವ ದಿನ, ನಿಮ್ಮ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಲಾಭವಿದ್ದರೂ ಶ್ರಮ ಹೆಚ್ಚು ಹಾಕಬೇಕಾಗಿ ಬರುವ ಕಾರಣ ನಿಮ್ಮಲ್ಲಿ ಸಮಸ್ಯೆಗಳು ಬರಬಹುದು. ಸ್ವಂತ ಉದ್ಯಮಿಗಳು ಲಾಭ ಮಾಡಬಹುದಾದರು ಅವಕಾಶಗಳನ್ನು ಹುಡುಕಬೇಕಾಗುತ್ತದೆ.

ಮೀನ ರಾಶಿ

ಮೀನ ರಾಶಿಯವರು ಇಂದು ಅನಾರೋಗ್ಯ ಸಂಬಂಧವಾಗಿ ನೀವು ಆಸ್ಪತ್ರೆಗೆ ಭೇಟಿ ನೀಡಬಹುದು. ವಾಹನ ಸಂಬಂಧಿ ಖರ್ಚು ಇರಬಹುದು. ಗೃಹಿಣಿಯರಲ್ಲಿ ಖರ್ಚು ಹೆಚ್ಚಾಗಬಹುದು.

Story first published: Friday, December 12, 2025, 5:00 [IST]
X
Desktop Bottom Promotion