Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 11 Horoscope: ಗುರುವಾರ ಯಾರಿಗೆ ತರಲಿದೆ ಅದೃಷ್ಟ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 11 (December 11 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಬಹಳ ಅನುಕೂಲವಿದೆ. ಯಾವುದಾದರು ಕೆಲಸಗಳನ್ನು ಅರ್ಧಕ್ಕೆ ಬಿಟ್ಟಿದ್ದರೆ ಇಂದು ಮುಗಿಸುವಿರಿ. ಆಪ್ತರೊಬ್ಬರಿಂದ ನಿಮಗೆ ಸಹಾಯವಿದೆ. ಕೆಲಸದ ವಿಚಾರದಲ್ಲಿ ನಿಮ್ಮ ಹಣಕಾಸು ಒತ್ತಡ ಕಡಿಮೆಯಾಗಲಿದೆ. ಆಹಾರ ಸಂಬಂಧಿತ ವಿಚಾರವಾಗಿ ಎಚ್ಚರಿಕೆಯಿಂದಿರಿ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಮತ್ತೆ ಕೆಲಸವೊಂದು ಮುಂದೂಡಲ್ಪಡುತ್ತದೆ. ಈ ಕೆಲಸ ಮಾಡಲು ಶ್ರಮ ಹೆಚ್ಚು ಬೇಕಾಗುತ್ತದೆ. ಆಪ್ತರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಇಂದು ಉತ್ತಮ ದಿನ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗುತ್ತಿದೆ. ಹಣಕಾಸಿನ ಕೆಲಸಗಳು ಸುಸೂತ್ರವಾಗಿ ನಡೆಯಲಿದೆ. ಪ್ರೀತಿಯ ವಿಚಾರದಲ್ಲಿ ನಿಮಗೆ ಉತ್ತಮ ದಿನವಾಗುತ್ರದೆ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಸಮಸ್ಯೆಗಳ ಎದುರಿಸಬಹುದು. ಯಾರಿಂದಾದರು ಹಣ ಪಡೆಯಲು ನೀವು ಬೇಡಿಕೆ ಇಟ್ಟಿದ್ದರೆ ಇಂದು ಪಡೆಯಬಹುದು. ಅನೇಕರಲ್ಲಿ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗುತ್ತದೆ. ದೇವಾಲಯ ಭೇಟಿಯ ಸಂಭವವಿದೆ. ನಿಮ್ಮ ಅನೇಕ ಕೆಲಸಗಳು ಪ್ರಯಾಣಗಳಿಂದ ಕೂಡಿರಲಿವೆ.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಇಂದು ಅನುಕೂಲಕರ ದಿನವಾಗಿರಲಿದೆ. ಆಸ್ಪತ್ರೆ ಸಂಬಂಧಿತ ವಿಚಾರವಾಗಿ ನೀವು ಪ್ರಯಾಣ ಅಥವಾ ಹಣ ಖರ್ಚು ಮಾಡಬೇಕಾಗಿ ಬರಬಹುದು. ವ್ಯವಹಾರ ಅಥವಾ ವ್ಯಾಪಾರ ಸಂಬಂಧಿತ ವಿಚಾರವಾಗಿ ಧನಾತ್ಮಕ ದಿನವಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಸಮಸ್ಯೆಗಳಾದ ಹಣಕಾಸು ಮತ್ತು ನಿರುದ್ಯೋಗ ಬಗೆಹರಿಯಬಹುದು. ಯಾರಿಂದಾದರು ಹಣ ಪಡೆಯುವ ನಿಮ್ಮ ಬಯಕೆಯೊಂದು ಈಡೇರಲಿದೆ. ಆರೋಗ್ಯ ಸಮಸ್ಯೆಗಳಿಗೆ ಹಣ ಖರ್ಚು ಮಾಡಬೇಕಾಗುತ್ತದೆ.
ತುಲಾ ರಾಶಿ
ತುಲಾ ರಾಶಿ ಜನರಲ್ಲಿ ಇಂದು ಪ್ರಯಾಣದ ದಿನ. ದೂರ ಪ್ರಯಾಣಗಳು ಹಾಗೆ ಶ್ರಮಗಳಿವೆ. ಆಪ್ತರಿಂದ ಬರಬೇಕಿದ್ದ ಹಣಕ್ಕಾಗಿ ಪ್ರಯತ್ನ ಮುಂದುವರೆಸುವುದು ಉತ್ತಮ. ಯಾರಿಂದಾದರು ಸಹಾಯ ಪಡೆದಿದ್ದರೆ ಅವರು ನೆನೆಯುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಇಂದು ಉತ್ತಮ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳನ್ನು ಬಹಳ ಆತ್ಮತೃಪ್ತಿಯಿಂದ ಮಾಡಿ ಮುಗಿಸುವಿರಿ. ಸಾಲ ನೀಡಲು ಇಂದು ಮುಂದಾಗದೆ ಇರುವುದು ಉತ್ತಮ. ಸವಾಲುಗಳನ್ನು ಎದುರಿಸುವುದು ದಿನದ ಅಂತ್ಯದಲ್ಲಿ ನೆಮ್ಮದಿ ತರಲಿದೆ.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಉತ್ತಮ ಹಣ ಸಂಪಾದನೆಯ ದಿನವಾಗುತ್ತಿದೆ. ನಿಮ್ಮ ಸ್ವಂತ ಉದ್ಯೋಗಗಳಿಂದ ನಿಮಗೆ ಶುಭವಿದೆ. ಅವಿವಾಹಿತರಿಗೆ ಪ್ರಯಾಣ ಮಾಡಬೇಕಾದ ದಿನ. ನಿಮ್ಮ ಕೆಲಸಗಳನ್ನು ಬೇರೆಯವರಿಗೆ ಒಪ್ಪಿಸಬೇಡಿ. ಹಿರಿಯರ ಸಲಹೆಯನ್ನು ಪಾಲಿಸುವುದು ಉತ್ತಮ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳು ಅಂದುಕೊಂಡಂತೆ ನಡೆಯಲಿವೆ. ವಾಹನ ವಿಚಾರದಲ್ಲಿ ಶುಭವಿದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ಮಿಶ್ರಫಲ ನೋಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳು ಬರಬಹುದು. ಬ್ಯಾಂಕಿಂಗ್ ಸಾಲ ಅಥವಾ ಅಡಮಾನ ಸಂಬಂಧಿತ ವಿಚಾರವಾಗಿ ಇಂದು ಹಲವು ಸಮಸ್ಯೆಗಳಿರಬಹುದು. ದಾಂಪತ್ಯ ವಿಚಾರದಲ್ಲಿ ಮುನಿಸು ಇರಲಿದೆ.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ಪ್ರಯಾಣಗಳಲ್ಲಿ ತೊಡಗಬೇಕಾದ ದಿನ. ಯಾರಿಂದಾದರು ಹಣ ಪಡೆದಿದ್ದರೆ ಅವರಿಗೆ ಮರಳಿ ನೀಡುವುದು ಬಹಳ ಉತ್ತಮ. ವಾಹನ ವಿಚಾರದಲ್ಲಿ ಮಹಿಳೆಯರು ಇಂದು ಎಚ್ಚರಿಕೆಯಿಂದ ಇರಬೇಕು. ಹಣಕಾಸಿನ ತೊಂದರೆಗಳು ದೂರಾಗಬಹುದು. ಆರೋಗ್ಯದಲ್ಲಿ ಸಣ್ಣಪುಟ್ಟ ಏರಿಳಿತ ಇರಬಹುದು.



Click it and Unblock the Notifications