Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 10 Horoscope: ಈ ಬುಧವಾರ ಯಾರಿಗೆ ಧನಲಾಭ?
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 10 (December 10 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಸಮಸ್ಯೆಗಳು ಬರಲಿವೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳಿವೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಾಗದೆ ಇರಬಹುದು. ನಿಮ್ಮ ದಾಂಪತ್ಯ ವಿಚಾರವು ಹಣಕಾಸು ಸಂಬಂಧವಾಗಿ ಕಲಹಗಳಿಗೆ ಕಾರಣವಾಗಬಹುದು. ಸಾಲದ ಪ್ರಮಾಣದಲ್ಲಿ ಹೆಚ್ಚಳ ನೋಡಬಹುದು.
ವೃಷಭ ರಾಶಿ
ನಿಮಗಿಂದು ಪ್ರಯಾಣ ಹಾಗೂ ಪ್ರಾಯಾಸದ ದಿನವಾಗುತ್ತಿದೆ, ಸಂಬಂಧಿಕರ ನಿವಾಸ ಅಥವಾ ಆಸ್ಪತ್ರೆ ಕುರಿತ ವಿಚಾರವಾಗಿ ಪ್ರಯಾಣಿಸಬೇಕಾಗುತ್ತದೆ. ಒತ್ತಡದಲ್ಲಿ ಕಳೆಯುವ ಸಮಯದಲ್ಲಿ ಶಾಂತವಾಗಿರಿ. ನಿಮ್ಮಿಂದಾಗಿ ದೊಡ್ಡ ಕೆಲಸಗಳ ಮಾಡಬೇಕಾಗುತ್ತದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಪ್ರಯಾಣದ ದಿನ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಇಂದು ನೀಡಬೇಕಾಗಬಹುದು. ಗೃಹಿಣಿಯರು ಇಂದು ಹೆಚ್ಚು ಸಮಯ ಕೆಲಸಗಳಲ್ಲಿ ಕಳೆಯಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಸಣ್ಣ ಮೊತ್ತವೊಂದು ಕೈ ಸೇರಬಹುದು. ಬ್ಯಾಂಕಿಂಗ್ ವಿಚಾರದಲ್ಲಿ ನಿಮಗೆ ಅನುಕೂಲಕರ ದಿನ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಬಹಳ ಅನುಕೂಲವಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ಒತ್ತಡವಿದ್ದರೂ ಅದನ್ನು ಸರಿಯಾಗಿ ನಿಭಾಯಿಸುತ್ತೀರಿ. ಆಪ್ತರೊಬ್ಬರು ನಿಮಗೆ ಹಣಕಾಸಿನ ಸಹಾಯ ಮಾಡಲಿದ್ದಾರೆ. ಲಘು ಪ್ರಯಾಣಗಳ ಮಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ಗೃಹಿಣಿಯರು ಇಂದು ಪ್ರಯಾಣಗಳಲ್ಲಿ ಭಾಗಿಯಾಗಬಹುದು. ನಿಮ್ಮ ಮೇಲೆ ಆಪಾದನೆಗಳು, ಆರೋಪಗಳು ಬರುವ ಸಾಧ್ಯತೆ ಇದೆ. ವ್ಯಾಪಾರಿ ವಲಯದಲ್ಲಿ ಇಂದು ಹಣಕಾಸು ಸಂಬಂಧಿತ ಒತ್ತಡಗಳಿವೆ. ಹೊಸ ಕೆಲಸಗಳ ಮಾಡುವ ಅವಕಾಶಗಳು ಬರಲಿವೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ದೊಡ್ಡ ಕೆಲಸಗಳ ಮಾಡಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸಬೇಕಾದ ಒತ್ತಡದಲ್ಲಿರುವಿರಿ. ಉದರ ಸಂಬಂಧಿ ಸಮಸ್ಯೆಗಳ ಎದುರಿಸಬಹುದು. ಮನೆಯ ಸದಸ್ಯರೊಬ್ಬರ ನಡುವೆ ಸಣ್ಣ ಪುಟ್ಟ ಮನಸ್ತಾಪ ಬರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಮಿಶ್ರಫಲ. ಆದಾಯದಷ್ಟೇ ಖರ್ಚು ಕೂಡ ಇರಲಿದೆ. ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡ್ಡಿಗಳನ್ನು ಎದುರಿಸಬಹುದು. ಹಾಗೆ ಆಪ್ತರೊಬ್ಬರ ಜೊತೆಗಿನ ಪ್ರಯಾಣವು ದುಬಾರಿಯಾಗಬಹುದು. ತಂದೆ ತಾಯಿಯ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ಧನು ರಾಶಿ
ಧನು ರಾಶಿಗೆ ಈ ದಿನ ಉತ್ತಮ ದಿನ. ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಹಾಗೆ ಹಲವು ದಿನದಿಂದ ನೀವು ಅನುಭವಿಸಿದ್ದ ಅನಾರೋಗ್ಯ ಸಮಸ್ಯೆಯಿಂದ ಮುಕ್ತರಾಗಬಹುದು. ಮನೆ ವಾತಾವರಣ ಶಾಂತವಾಗಿರಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚವಹಿಸಿ.
ಮಕರ ರಾಶಿ
ಮಕರ ರಾಶಿಯವರು ಇಂದು ಮಿಶ್ರಫಲ ಹೊಂದಿರಲಿದ್ದಾರೆ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ನೋಡಬಹುದು. ಕೆಲಸದ ವಿಚಾರವಾಗಿ ಪ್ರಯಾಣಗಳಿವೆ. ಯಾರಿಗೂ ಹಣ ನೀಡುವುದು ಅಥವಾ ಸಾಲ ನೀಡುವ ಕಾರ್ಯಕ್ಕೆ ಮುಂದಾಗಬೇಡಿ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಸವಾಲುಗಳ ದಿನ. ನಿಮ್ಮ ಹಲವು ಕೆಲಸಗಳಲ್ಲಿ ಶುಭವಾದರು, ಅದರಿಂದ ತೃಪ್ತಿ ಪಡೆಯದೆ ಇರಬಹುದು. ದಾಂಪತ್ಯ ವಿಚಾರವಾಗಿ ಕಲಹಗಳಿವೆ. ವಾಹನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಹಣಕಾಸು ಕುರಿತಾದ ಚಿಂತೆಗಳಿವೆ. ಮಕ್ಕಳ ಕುರಿತಾದ ದೊಡ್ಡ ವಿಚಾರವೊಂದು ಹಣ ಖರ್ಚಿಗೆ ಕಾರಣವಾಗಬಹುದು. ವಾಹನ ಚಲಾವಣೆಯ ಸಮಯದಲ್ಲಿ ಗೃಹಿಣಿಯರು ಎಚ್ಚರಿಕೆಯಿಂದ ಇರಬೇಕು.



Click it and Unblock the Notifications




