Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 09 Horoscope: ಮಂಗಳವಾರ ನಿಮಗಿದೆ ಹಣಕಾಸು ಸಮಸ್ಯೆ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 09 (December 09 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಇಂದು ಉತ್ತಮ ದಿನ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ. ವಾಹನದಿಂದ ಲಾಭವಿದೆ. ಉಪಕರಣ ಸಂಬಂಧಿ ವ್ಯಾಪಾರಿಗಳು ಲಾಭ ಮಾಡುವ ದಿನವಿದು. ಮನೆಯ ಹಿರಿಯ ಸದಸ್ಯರ ಆರೋಗ್ಯಕ್ಕೆ ಶ್ರಮ ವಹಿಸಬೇಕಿದೆ. ದಾಂಪತ್ಯದಲ್ಲಿ ಇದ್ದ ಧನ ಸಮಸ್ಯೆ ನಿವಾರಣೆಯಾಗಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ನೀವು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಕಾಶವಿದೆ. ಆಪ್ತರಿಂದ ಉತ್ತಮ ಸುದ್ದಿಯೊಂದನ್ನು ಕೇಳುವಿರಿ. ವಾಹನ ಸಂಬಂಧ ನಿಮ್ಮಲ್ಲಿ ಶುಭವಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಮಿಶ್ರಫಲ. ಇಂದು ಯಾರೊಂದಿಗಾದರು ಹಣದ ವಿಚಾರದಲ್ಲಿ ಮನಸ್ತಾಪ ಮೂಡಬಹುದು. ವಾಹನ ವಿಚಾರದಲ್ಲಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ನಿಮಗೆ ಶುಭವಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಸಾಧಾರಣ ದಿನ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗಬಹುದು. ವ್ಯಾಪಾರಿಗಳಿಗೆ ಇಂದು ಶುಭಫಲದ ದಿನವಾಗುತ್ತಿದೆ. ನಿಮ್ಮ ಬಹುದಿನದ ಆಸೆಯೊಂದನ್ನು ಈಡೇರಿಸಿಕೊಳ್ಳಬಹುದು. ವ್ಯವಹಾರದಲ್ಲಿ ಸಂಪೂರ್ಣ ಲಾಭ ಮಾಡಬಹುದು. ಪ್ರಗತಿಯ ಹಾದಿಯಲ್ಲಿ ಅಡ್ಡಿಗಳಿರಬಹುದು.
ಸಿಂಹ ರಾಶಿ
ಸಿಂಹ ರಾಶಿ ಜನರು ಇಂದು ಪ್ರಯಾಣ ಮಾಡಬೇಕಾದ ದಿನವಾಗಲಿದೆ. ವೈವಾಹಿಕ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಪೋಷಕರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಸಂಪತ್ತಿನ ಹೆಚ್ಚಳದಿಂದಾಗಿ ನಿಮ್ಮ ಸಂತೋಷವು ಅಪರಿಮಿತವಾಗಿರುತ್ತದೆ. ಸ್ನೇಹಿತರ ಭೇಟಿಯಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ದೊಡ್ಡ ಮಟ್ಟದ ಲಾಭ ನೋಡುವ ದಿನ. ನಿಮ್ಮ ಇಡೀ ದಿನ ಆಪ್ತರೊಬ್ಬರ ಸಹಕಾರ ಮಾಡುವ ಸಮಯವಾಗಿ ಕಳೆಯಬಹುದು. ನಿಮ್ಮ ದೂರ ಪ್ರಯಾಣಗಳಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡಬೇಕಾಗುತ್ತದೆ.
ತುಲಾ ರಾಶಿ
ತುಲಾ ರಾಶಿ ಜನರು ಇಂದು ಪ್ರಯಾಣಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಹಲವು ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ಯಾರಿಗೂ ಹಣ ನೀಡುವುದು ಅಥವಾ ವಸ್ತುಗಳ ನೀಡುವಾಗ ಎಚ್ಚರ ವಹಿಸಿ. ಮನೆಗೆ ಅತಿಥಿಗಳ ಆಗಮನದ ನಿರೀಕ್ಷೆ ಇಡಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಉತ್ತಮ ದಿನ. ಆರ್ಥಿಕ ವಿಚಾರವಾಗಿ ನಿಮ್ಮ ದಿನವು ಶುಭವಾಗುತ್ತಿದೆ. ಪ್ರಮುಖ ಒಪ್ಪಂದವನ್ನು ಅಂತಿಮಗೊಳಿಸುವವರು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಉತ್ತಮ ರಾಜಕೀಯ ಪ್ರಭಾವವನ್ನು ಹೊಂದಿರುತ್ತೀರಿ. ವಾಹನ ಬಳಸುವಾಗ ಎಚ್ಚರಿಕೆ ಇಡಿ.
ಧನು ರಾಶಿ
ಧನು ರಾಶಿಯವರಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಹಲವು ಕೆಲಸಗಳಲ್ಲಿ ಧನಾತ್ಮಕತೆ ನೋಡಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶ ಸಿಕ್ಕರೆ ಬಳಸಿಕೊಳ್ಳಿ. ಪ್ರೀತಿಯ ವಿಚಾರದಲ್ಲಿ ಈ ದಿನ ಬಹಳ ಅನುಕೂಲವಿದೆ. ಹಣಕಾಸು ಸಂಬಂಧಿ ವಿಚಾರವಾಗಿ ದುಡುಕಬೇಡಿ.
ಮಕರ ರಾಶಿ
ಮಕರ ರಾಶಿಯವರು ಇಂದು ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಗಮನಹರಿಸಬೇಕಾಗುತ್ತದೆ, ನೀವು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಚಿಂತಿತರಾಗುತ್ತೀರಿ. ಉದರ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು. ನಿಗದಿತ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ.
ಕುಂಭ ರಾಶಿ
ನಿಮಗಿಂದು ವ್ಯವಹಾರದ ದೃಷ್ಟಿಯಿಂದ ಉತ್ತಮ ದಿನ. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಅವರಿಂದ ಮರುಪಾವತಿಯ ಒತ್ತಡ ಬರಬಹುದು. ದೂರ ಸಂಬಂಧಿಕರ ಭೇಟಿ ಸಂಭವವಿದೆ. ಬ್ಯಾಂಕಿಂಗ್ ವಿಚಾರವಾಗಿ ಸಮಸ್ಯೆಯ ದಿನವಾಗಬಹುದು.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ಪ್ರಯಾಣ ಮಾಡಬೇಕಾದ ದಿನ. ನಿಮ್ಮ ಮಕ್ಕಳ ಕೆಲಸ ಸಂಬಂಧವಾಗಿ ಚಿಂತೆಯೊಂದು ಕಾಡಬಹುದು. ಪ್ರೇಮಿಗಳಿಗೆ ಉತ್ತಮ ದಿನವಲ್ಲ. ದಿನದ ಅಂತ್ಯದಲ್ಲಿನ ಖರ್ಚುಗಳ ಮೇಲೆ ನಿಗಾ ಇಡಬೇಕಿದೆ.



Click it and Unblock the Notifications











