Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 08 Horoscope: ಸೋಮವಾರದ ಅದೃಷ್ಟ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 08 (December 08 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರು ಇಂದು ದೊಡ್ಡ ಮಟ್ಟದ ಕೆಲಸಗಳನ್ನು ಮಾಡುವಿರಿ. ಒತ್ತಡದ ಕೆಲಸಗಳಲ್ಲಿ ಪ್ರಾಮಾಣಿಕ ಪ್ರಯತ್ನವಿರಲಿ. ಪ್ರಯಾಣ ಮಾಡುವಿರಿ. ಆಸ್ಪತ್ರೆ ಸಂಬಂಧಿತ ವಿಚಾರದಲ್ಲಿ ಸಮಯ ಕಳೆಯುವಿರಿ. ನಿಮ್ಮಿಂದ ಬೇರೆಯವರಿಗೆ ಸಹಾಯವಾಗುವ ದಿನವಿದು.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗುತ್ತದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಹುದು. ಯಾರಿಗಾದರು ಹಣ ನೀಡುವುದು ಬಾಕಿ ಉಳಿಸಿಕೊಂಡಿದ್ದರೆ ಈ ದಿನ ನೀಡಬೇಕಾಗಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ವಾಹನ ವಿಚಾರದಲ್ಲಿ ಎಚ್ಚರ ವಹಿಸಿ.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಇಂದು ಉತ್ತಮ ದಿನವಾಗುತ್ತಿದೆ. ನೀವು ಪ್ರಯಾಣಗಳಲ್ಲಿ ಭಾಗಿಯಾಗುವುದು ಹಲವು ಸಮಸ್ಯೆ ತರಬಹುದು. ದಿನದ ಅಂತ್ಯದಲ್ಲಿ ಪ್ರಶಾಂತ ವಾತಾವರಣ ಇರಲಿದೆ. ವಾಹನ ಸಂಬಂಧಿ ಖರ್ಚು ಬರಬಹುದು, ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕರ್ಕ ರಾಶಿ
ಕರ್ಕ ರಾಶಿಯವರು ಮಿಶ್ರಫಲ ನೋಡಲಿದ್ದೀರಿ. ಬಹಳ ಸಮಯದಿಂದ ಸರಿಪಡಿಸಲಾಗದೆ ಇದ್ದ ಸಮಸ್ಯೆಯೊಂದನ್ನು ಪರಿಹರಿಸಲು ಉತ್ತಮ ದಿನ. ಸಂಬಂಧಿಕರೊಬ್ಬರ ಭೇಟಿಯಿಂದ ಸಂತಸ ಇರಲಿದೆ. ಯಾರಿಂದಾದರು ಹಣ ಸಾಲವಾಗಿ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಆರೋಗ್ಯದಲ್ಲಿ ಸುಧಾರಣೆ ನೋಡಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಮಿಶ್ರಫಲವಿದೆ. ದೂರ ಪ್ರಯಾಣಗಳ ಕೈಗೊಳ್ಳಬಹುದು. ನಿರುದ್ಯೋಗಿಗಳಿಗೆ ಇಂದು ಉತ್ತಮ ಅವಕಾಶ ಪಡೆಯಬಹುದು. ನಿಮ್ಮ ಕೆಲಸದಲ್ಲಿ ಹಾಕುವ ಶ್ರಮ ವ್ಯರ್ಥವಾಗುವುದಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇಂದು ಉತ್ತಮ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಹೊಸ ಆರಂಭಗಳು ಉಂಟಾಗಬಹುದು. ಅವಿವಾಹಿತರಲ್ಲಿ ಖರ್ಚಿನ ದಿನ. ಪಡೆದ ಹಣ ಮರಳಿಸುವಂತೆ ಒತ್ತಡಗಳು ಬರಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ದಿನದ ಆರಂಭವು ಚೆನ್ನಾಗಿರಲಿದೆ. ಆದ್ರೆ ದಿನದ ಅಂತ್ಯದಲ್ಲಿ ಸಮಸ್ಯೆಗಳು ಬರಬಹುದು. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು. ಕೆಲಸದ ಕಾರಣಕ್ಕೆ ನೀವು ಕೈಗೊಳ್ಳುವ ಪ್ರಯಾಣಗಳಿಂದ ಇಂದು ನಿರೀಕ್ಷಿತ ಫಲ ಸಿಗದೆ ಇರಬಹುದು. ಹಣಕಾಸು ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಸವಾಲುಗಳು ಎದುರಾಗಬಹುದು. ನಿಮ್ಮ ಹಣಕಾಸಿಗೆ ಸಂಬಂಧಿಸಿದ ನಿರ್ಧಾರವು ನಿಮಗೆ ಸಮಸ್ಯೆ ತರಬಹುದು. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಚಿಂತೆ ಇದೆ. ಮನೆಯ ನವೀಕರಣ ಸಂಬಂಧವಾಗಿ ಆಲೋಚಿಸಬಹುದು. ನಿಮ್ಮ ಪ್ರಯಾಣಗಳು ನೀವು ಅಂದುಕೊಂಡ ಫಲಿತಾಂಶ ಕೊಡದೆ ಇರಬಹುದು.
ಧನು ರಾಶಿ
ಧನು ರಾಶಿಯವರಲ್ಲಿ ಇಂದು ಒತ್ತಡ ದಿನವಾಗುತ್ತಿದೆ. ದಿನದ ಆರಂಭದಲ್ಲಿ ದೊಡ್ಡ ಸವಾಲು ಎದುರಾಗಬಹುದು. ಮಹಿಳೆಯರು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಅನೇಕರಲ್ಲಿ ಸಾಲ ಹೆಚ್ಚಾಗುವ ಸಮಯವಿದು. ತಂದೆ ತಾಯಿ ಆರೋಗ್ಯ ಕುರಿತ ಚಿಂತೆ ದೊಡ್ಡದಾಗಬಹುದು.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲ ನೋಡಬಹುದು. ನಿಮ್ಮ ಕೆಲಸಗಳಲ್ಲಿ ಇಂದು ಸಣ್ಣ ಪುಟ್ಟ ಅಡೆತಡೆಗಳು ನೋಡಬಹುದು. ಹಲವರಿಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರಿಗಳು ನಷ್ಟದಿಂದ ಹೊರಬರುವ ಅವಕಾಶ ಪಡೆಯುವ ಸಾಧ್ಯತೆ ಇದೆ.
ಮೀನ ರಾಶಿ
ಮೀನ ರಾಶಿ ಮಂದಿಗೆ ಇಂದು ಸಾಧಾರಣ ದಿನ. ನೀವು ಬಯಸಿದಂತಹ ಹಣಕಾಸು ಸ್ಥಿರತೆ ಸಿಗದೆ ಇರಬಹುದು. ದೂರ ಸಂಬಂಧಿಕರ ವಿಚಾರದಲ್ಲಿ ಚಿಂತೆ ಕಾಡಬಹುದು. ಯಾರಿಂದಾದರು ಹಣ ಬಯಸಿದ್ದರೆ ಈ ಸಮಯದಲ್ಲಿ ಕೈಗೂಡುವುದು ಕಷ್ಟವಾಗಬಹುದು.



Click it and Unblock the Notifications










