Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 07 Horoscope: ಭಾನುವಾರ ಧನಲಾಭ ಯಾರಿಗೆಲ್ಲಾ?
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 07 (December 07 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಬಹಳ ಶುಭವಿದೆ. ನಿಮ್ಮ ಮನಸ್ಸಿನ ತಳಮಳವೊಂದು ನಿವಾರಣೆಯಾಗಲಿದೆ. ನಿಮ್ಮಿಂದಾಗಿ ಹೊಸ ಕೆಲಸಗಳು ಆರಂಭಗೊಳ್ಳಬಹುದು. ನೀವು ಹಣ ಪಡೆಯುವ ಉದ್ದೇಶದಿಂದ ಯಾರಿಗಾದರು ಕರೆ ಮಾಡಿದರೆ ಹಣ ನಿಮ್ಮ ಕೈ ಸೇರಬಹುದು.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ಇಂದು ಉತ್ತಮ ದಿನ. ಹಲವು ಸಮಸ್ಯೆಗಳಿಂದ ಮುಕ್ತರಾಗಬಹುದು. ಯಾರಿಗೂ ಹಣ ನೀಡಲು ಮುಂದಾಗಬೇಡಿ. ಪಾಲುದಾರಿಕೆ ವ್ಯವಹಾರದಲ್ಲಿ ನಿಮಗೆ ಲಾಭದ ದಿನ. ಖರ್ಚುಗಳು ಹೆಚ್ಚಾಗುವ ದಿನವಿದು. ಪ್ರಯಣಗಳ ಮಾಡುವಿರಿ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಸಮಸ್ಯೆಗಳಿವೆ. ನಿಮ್ಮ ಹಣಕಾಸು ವಿಚಾರವಾಗಿ ಅಡ್ಡಿ ಆತಂಕಗಳಿವೆ. ನಿಮ್ಮ ಮೇಲೆ ಆರೋಪವೊಂದು ಬರಬಹುದು. ವಾಹನ ವಿಚಾರದಲ್ಲಿ ನಿಮಗೆ ಖರ್ಚು ಸಂಭವ. ಮನೆ ವಾತಾವರಣದಲ್ಲಿ ಕೆಲವು ಕಲಹ ಇರಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಪ್ರಯಾಣಗಳ ಮಾಡುವಿರಿ. ಶುಭ ಕಾರ್ಯ ಸಂಬಂಧಿತ ವಿಚಾರವಾಗಿ ಭಾಗಿಯಾಗಬಹುದು. ನಿಮ್ಮ ವಸ್ತುಗಳು ಕಳೆದು ಹೋಗುವ ಭೀತಿ ಇದೆ. ಆರೋಗ್ಯ ಸಂಬಂಧವಾಗಿ ನಿಮ್ಮಲ್ಲಿ ಸಮಸ್ಯೆ ಇರಬಹುದು. ಹೊಸ ಆದಾಯ ಮೂಲದಿಂದ ನಿಮಗೆ ಶುಭವಿದೆ.
ಸಿಂಹ ರಾಶಿ
ಸಿಂಹಬ ರಾಶಿ ಜನರಿಗೆ ಈ ದಿನವು ಅತ್ಯುತ್ತಮವಾಗಿರಲಿದೆ. ನಿಮಗಾಗಿ ಹಣ ನೀಡುವ ಮಂದಿ ಮುಂದೆ ಬರಬಹುದು. ವ್ಯವಹಾರದಲ್ಲಿನ ಚಿಂತೆಯೊಂದು ದೂರಾಗಬಹುದು. ಯಾರಿಂದಾದರು ಹಣ ಪಡೆದರೆ ಮರಳಿ ನೀಡುವಿರಿ. ನಿಮ್ಮ ಉಳಿತಾಯ ಹೆಚ್ಚಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಕುಟುಂಬದಲ್ಲಿನ ಸಮಸ್ಯೆಯೊಂದನ್ನು ಎಲ್ಲರ ಸಮ್ಮುಖದಲ್ಲಿ ನಿವಾರಿಸಲಿದ್ದೀರಿ. ದಿನದ ಅಂತ್ಯದಲ್ಲಿ ಖರ್ಚುಗಳಿವೆ. ಪ್ರಯಾಣದಲ್ಲಿನ ಸಮಸ್ಯೆಗಳು ದೂರಾಗಲಿವೆ.
ತುಲಾ ರಾಶಿ
ತುಲಾ ರಾಶಿಯವರ ಆರೋಗ್ಯದಲ್ಲಿ ಇಂದು ಸಣ್ಣ ಪುಟ್ಟ ಏರಿಳಿತವಿದೆ. ಗೃಹಿಣಿಯರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರುವುದು ಉತ್ತಮ. ನಿಮ್ಮ ಕೆಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಬಹುದು. ಹೊಸ ಆಲೋಚನೆಗಳನ್ನು ಜಾರಿ ಮಾಡಲು ಇಂದು ನೀವು ಮುಂದಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಯಾರಿಂದಾದರು ಹಣ ಪಡೆದರೆ ಮರಳಿ ನೀಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಯಾರಿಗೂ ಸಾಲ ನೀಡಬೇಡಿ. ಹೂಡಿಕೆ ಮಾಡುವ ಮುನ್ನ ಆಲೋಚಿಸಿ. ವ್ಯಾಪಾರಿಗಳು ಲಾಭ ನೋಡಬಹುದು. ಸಂಬಂಧಿಕರ ಭೇಟಿ ಸಂಭವವಿದೆ.
ಧನು ರಾಶಿ
ಧನು ರಾಶಿಯವರಿಗೆ ಮಿಶ್ರಫಲದ ದಿನ. ಗೃಹಿಣಿಯರ ಆರೋಗ್ಯದಲ್ಲಿ ಏರುಪೇರು ಆಗಬಹುದು. ದಿನದ ಅಂತ್ಯದಲ್ಲಿ ಪ್ರಯಾಣಗಳಲ್ಲಿ ಜಾಗರೂಕರಾಗಿರಿ. ಯಾರೊಂದಿಗೂ ಅನಗತ್ಯ ಕಲಹಗಳಲ್ಲಿ ಭಾಗಿಯಾಗಬೇಡಿ. ಆರ್ಥಿಕ ವಿಚಾರವಾಗಿ ನಿಮಗೆ ಅನುಕೂಲವಿದೆ.
ಮಕರ ರಾಶಿ
ಮಕರ ರಾಶಿ ಜನರಿಗೆ ಇಂದು ದೊಡ್ಡ ಸವಾಲುಗಳು ಎದುರಾಗಬಹುದು. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬಹುದು. ಇಡೀ ದಿನ ನೀವು ಬೇರೆಯವರ ಕೆಲಸವನ್ನು ಮಾಡಬೇಕಾಗಬಹುದು. ಪ್ರೀತಿಯ ವಿಚಾರದಲ್ಲಿ ಉತ್ತಮ ದಿನ. ದಾಂಪತ್ಯದಲ್ಲಿ ಮಧುರತೆ ಇರಲಿದೆ.
ಕುಂಭ ರಾಶಿ
ಕುಂಭ ರಾಶಿ ಜನರು ಇಂದು ಮಿಶ್ರಫಲ ನೋಡುವಿರಿ. ನೀವು ಅಂದುಕೊಂಡ ರೀತಿಯ ಫಲಿತಾಂಶ ಪಡೆಯಲು ಪ್ರಯಾಣಿಸುತ್ತೀರಿ. ನಿಮ್ಮ ಹಲವು ಕೆಲಸಗಳನ್ನು ಒಂಟಿಯಾಗಿ ಮಾಡಿ ಮುಗಿಸಬೇಕಾಗುತ್ತದೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಈ ದಿನ ನೀವು ಅಂದುಕೊಂಡಂತೆ ಇರಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಗೃಹಿಣಿಯರು ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ಯಾರಿಗೂ ಹಣಕಾಸಿನ ನೆರವು ನೀಡುವ ಮುನ್ನ ಮತ್ತೊಮ್ಮೆ ಷರತ್ತುಗಳ ಹೇಳಿ. ಆಪ್ತರಿಂದ ನಿಮಗೆ ಹಣ ಮರಳಿ ಸಿಗಬಹುದು.



Click it and Unblock the Notifications