Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
December 06 Horoscope: ಈ ಶನಿವಾರ ನಿಮ್ಮಿಂದ ತಪ್ಪಾಗಬಹುದು!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 06 (December 06 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ಶನಿವಾರವು ಹಲವು ವಿಧವಾಗಿ ಶುಭವಾಗಿರಲಿದೆ. ನಿಮ್ಮ ಕನಸೊಂದನ್ನು ಈಡೇರಿಸಿಕೊಳ್ಳುವ ಸಲುವಾಗಿ ಇಂದು ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಅನೇಕರಿಗೆ ಇಂದು ಸವಾಲಿನ ದಿನವಾಗಿದ್ದರು, ಅದನ್ನು ನಿಭಾಯಿಸುತ್ತೀರಿ. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡುವಿರಿ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಸಮಸ್ಯೆಗಳ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ನಿಮ್ಮ ತಪ್ಪು ನಿರ್ಧಾರಗಳು ಸಮಸ್ಯೆಗಳ ತರಬಹುದು. ಖರ್ಚುಗಳ ಕಡಿಮೆ ಮಾಡುವುದು ಉತ್ತಮ. ಯಾರಿಂದಾದರು ವಸ್ತುಗಳನ್ನು ಪಡೆದಿದ್ದರೆ ಅವರಿಗೆ ಮರಳಿ ನೀಡುವುದು ಒಳಿತು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ದಿನವು ಬಹಳ ಅನುಕೂಲವಾಗಿರಲಿದೆ, ನಿಮ್ಮ ಹಲವು ಕನಸುಗಳನ್ನು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಸಾಗುವಿರಿ. ದಾಂಪತ್ಯ ಸಂಬಂಧವಾಗಿದ್ದ ಒಂದು ಮನಸ್ತಾಪ ನಿವಾರಣೆಯಾಗಲಿದೆ. ಪ್ರಯಾಣ ಮಾಡುವಿರಿ.
ಕರ್ಕ ರಾಶಿ
ಕರ್ಕ ರಾಶಿ ಮಂದಿಗೆ ಇಂದು ಉತ್ತಮ ದಿನ. ನಿಮ್ಮ ಹಲವು ಕೆಲಸಗಳನ್ನು ಪೂರ್ಣ ಮಾಡುವ ಹಿನ್ನೆಲೆ ಶ್ರಮ ಹಾಕುವಿರಿ. ಎಲ್ಲರಿಗೂ ಒಳ್ಳೆಯದನ್ನು ಮಾಡುವ ನಿಮ್ಮ ಮನಸ್ಸಿಗೆ ಸಂಬಂಧಿಕರಿಂದ ಅಥವಾ ಆಪ್ತರಿಂದ ನೋವಾಗುವ ಸನ್ನಿವೇಶಗಳು ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಇಂದು ಸಮಸ್ಯೆಯ ದಿನ. ನಿಮ್ಮ ಆರ್ಥಿಕ ವಿಚಾರಗಳಲ್ಲಿ ಅಡ್ಡಿಗಳಿವೆ. ನಿಮಗೆ ಬರಬೇಕಿದ್ದ ಹಣ ಮತ್ತೊಮ್ಮೆ ಸಿಲುಕಬಹುದು. ಸಾದ ಪ್ರಮಾಣ ಇಳಿಕೆಯಾದರೂ ನಿಮ್ಮ ಚಿಂತೆ ದೂರಾಗುವುದಿಲ್ಲ. ಸ್ನೇಹ, ಪ್ರೀತಿ ವಿಚಾರವಾಗಿ ನಿಮ್ಮಲ್ಲಿ ಮಧುರ ದಿನವಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಇಂದು ಪ್ರಯಾಣ ಮಾಡಬೇಕಾದ ದಿನವಾಗುತ್ತಿದೆ. ನಿಮ್ಮ ಹಲವು ಕೆಲಸಗಳ ಮುಗಿಸಬೇಕಾದ ಅನಿವಾರ್ಯ ಸ್ಥಿತಿಗೆ ತಲುಪುವಿರಿ. ಕುಟುಂಬಸ್ಥರೊಂದಿಗೆ ಪ್ರಯಾಣ ಮಾಡಬಹುದು. ನಿಮ್ಮ ವಾಹನ ಸಂಬಂಧಿತ ವಿಚಾರವಾಗಿ ಇದ್ದ ಕೆಲಸಗಳು ಪೂರ್ಣವಾಗಲಿದೆ.
ತುಲಾ ರಾಶಿ
ನಿಮ್ಮ ವ್ಯವಹಾರ ಸಂಬಂಧಿ ವಿಚಾರಗಳು ಮುಂದೂಡಲ್ಪಡುತ್ತವೆ. ದೇವಾಲಯ ಭೇಟಿ ಸಂಭವವಿದೆ. ಮನೆಯ ಸದಸ್ಯರು ಅಥವಾ ತಮ್ಮ ಆರೋಗ್ಯದಲ್ಲಿನ ಏರುಪೇರು ನಿಮಗೆ ಚಿಂತೆ ತರಬಹುದು. ಗೃಹಿಣಿಯರು ಹಣಕಾಸು ವಿಚಾರದಲ್ಲಿ ಎಚ್ಚರದಿಂದ ಇರಬೇಕಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಬಹಳ ಅನುಕೂಲವಿದೆ. ನೀವು ಬಯಸಿದ್ದಂತೆ ಹಣಕಾಸು ನಿಮ್ಮ ಕೈ ಸೇರಬಹುದು. ಹಾಗೆ ದಿನದ ಅಂತ್ಯದಲ್ಲಿ ಖರ್ಚುಗಳು ಸಹ ಹೆಚ್ಚಾಗಬಹುದು. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಪ್ರಯಾಣ ಸಂಭವವಿದೆ. ಮನೆಯಲ್ಲಿ ಶಾಂತಿ ಇರಲದೆ. ನಿರುದ್ಯೋಗಿಗಳಿಗೆ ಆರ್ಥಿಕ ಸಮಸ್ಯೆ ಇದೆ.
ಧನು ರಾಶಿ
ಧನು ರಾಶಿ ಜನರಲ್ಲಿ ಇಂದು ಉತ್ತಮ ದಿನ. ಬಹು ದಿನದಿಂದ ನಿಮ್ಮಲ್ಲಿದ್ದ ಬೇಡಿಕೆಯೊಂದನ್ನ ಈಡೇರಿಸಿಕೊಳ್ಳಬಹುದು. ಅವಿವಾಹಿತರಲ್ಲಿ ಇಂದು ಹೆಚ್ಚ ಖರ್ಚು ಮಾಡುವ ದಿನ. ಪ್ರಯಾಣಗಳಲ್ಲಿ ಶುಭ ಹಾಗೂ ಸುಖವಿದೆ. ಮಕ್ಕಳ ಕುರಿತ ಚಿಂತೆಯೊಂದು ದೂರಾಗಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಪ್ರಯಾಣಗಳ ಮಾಡುವಿರಿ. ನಿಮ್ಮ ಹಲವು ಕೆಲಸಗಳಲ್ಲಿ ದೊಡ್ಡ ಧನಾತ್ಮಕ ವಿಚಾರಗಳು ಎದುರಾಗಲಿದೆ. ಸ್ನೇಹಿತರ ಕೆಲಸವೊಂದಕ್ಕೆ ನಿಮ್ಮ ಸಹಾಯ ಇರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿರುವ ಮಂದಿಗೆ ಇಂದು ಶುಭವಾಗುತ್ತಿದೆ. ನಿಮ್ಮ ಹೊಸ ಆದಾಯ ಮೂಲದಿಂದ ತೃಪ್ತಿ ಇದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲ ನೋಡಬಹುದು. ನೀವು ಯಾರಿಂದಾದರು ಹಣ ಪಡೆಯುವ ಬಯಕೆ ಮುಂದಿಟ್ಟಿದ್ದರೆ ಇನ್ನಷ್ಟು ಪ್ರಯತ್ನ ಬೇಕಾಗುತ್ತದೆ. ಯಾರೊಂದಿಗೂ ಅನಗತ್ಯ ಚರ್ಚೆಗಳಲ್ಲಿ ತೊಡಗಬೇಡಿ. ಹಣದೊಂದಿಗೆ ನಿಮ್ಮ ಇತರ ಮೌಲ್ಯಯುತ ವಸ್ತುಗಳ ಮೇಲೆಯೂ ಗಮನವಿರಲಿ.
ಮೀನ ರಾಶಿ
ಮೀನ ರಾಶಿಯವರು ಇಂದು ದೊಡ್ಡ ಒಪ್ಪಂದಗಳಿಗೆ ಮುಂದಾಗಬಹುದು. ಯಾರೊಂದಿಗಾದರು ಕಲಹದಲ್ಲಿ ತೊಡಗಬಹುದು. ಆಪ್ತರಿಂದ ನಿಮಗೆ ಸಿಗುವ ಸಲಹೆಯನ್ನು ಕಡೆಗಣಿಸಬೇಡಿ. ಅನಾರೋಗ್ಯ ಸಂಬಂಧ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications