Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 05 Horoscope: ಈ ಶುಕ್ರವಾರ ಯಾರಿಗೂ ಸಾಲ ನೀಡಬೇಡಿ!!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 05 (December 05 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನ ದೊಡ್ಡ ಲಾಭಗಳಿವೆ. ನಿಮ್ಮ ವ್ಯವಹಾರದಲ್ಲಿ ಇಂದು ಉನ್ನತಿ ನೋಡಬಹುದು. ಕುಟುಂಬದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ನೀವು ಬಹಳ ದಿನದಿಂದ ಬಯಸಿದ ವಸ್ತುವೊಂದು ನಿಮ್ಮ ಕೈ ಸೇರಲಿದೆ. ಆರ್ಥಿಕ ವಿಚಾರಾಗಿ ನಿರಾಳರಾಗುವ ಸಮಯ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕನಸುಗಳನ್ನು ಈಡೇರಿಸಿಕೊಳ್ಳಲು ಇಂದು ಉಳಿತಾಯದ ಹಣ ಬಳಸಬೇಕಾಗಬಹುದು. ನಿಮ್ಮ ಕೆಲಸಗಳು ಸುದೀರ್ಘ ಸಮಯ ತೆಗೆದುಕೊಳ್ಳಬಹುದು. ವಾಹನ ಸಂಬಂಧ ವಿಚಾರದಲ್ಲಿ ಖರ್ಚುಗಳಿವೆ. ಆಪ್ತರ ಭೇಟಿಯಾಗುತ್ತೀರಿ.

ಮಿಥುನ ರಾಶಿ
ಮಿಥುನ ರಾಶಿ ಜನರು ಇಂದು ಉತ್ತಮ ದಿನವನ್ನಾಗಿ ನೋಡಲಿದ್ದೀರಿ. ಗೃಹಿಣಿಯರಿಗೆ ಇಂದು ಉತ್ತಮ ಹಣ ಪಡೆಯುವ ದಿನ, ಗೃಹಿಣಿಯರ ವ್ಯವಹಾರಗಳು ಶುಭವಾಗುತ್ತದೆ. ದಿನದ ಅಂತ್ಯದಲ್ಲಿ ಖರ್ಚುಗಳಿವೆ. ದೇವಾಲಯ ಭೇಟಿಯ ಸಂಭವವಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ದೊಡ್ಡ ಕೆಲಸಗಳ ಮಾಡುವಾಗ ಎಚ್ಚರ ವಹಿಸಿ. ಪ್ರೇಮಿಗಳಿಗೆ ಇಂದು ಶುಭ ದಿನ. ನಿಮ್ಮ ಆದಾಯ ಪಡೆಯುವ ಹೊಸ ಮೂಲವನ್ನು ಕಳೆದುಕೊಳ್ಳಬಹುದು. ವಾಹನ ವಿಚಾರದಲ್ಲಿ ಖರ್ಚುಗಳನ್ನು ನಿಭಾಯಿಸಿ.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಹಣಕಾಸು ಸ್ಥಿತಿಯಲ್ಲಿ ಚಿಂತೆಯ ದಿನ. ನೀವಿಂದು ಸಾಲ ಪಡೆಯಲು ಮುಂದಾಗಬಹುದು. ಆರೋಗ್ಯದಲ್ಲಿನ ಏರುಪೇರುಗಳು ನಿಮ್ಮ ಕೆಲಸದಲ್ಲಿ ಅಡ್ಡಿ ತರಬಹುದು. ಯಾರಿಂದಾದರು ಸಹಾಯ ಪಡೆಯಬಹುದು. ದಾಂಪತ್ಯ ವಿಚಾರದಲ್ಲಿ ನಿಮಗೆ ಶುಭ ದಿನ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಮಿಶ್ರ ಫಲ. ನಿಮ್ಮ ಪ್ರಯಾಣಗಳ ಸಂಬಂಧವಾಗಿ ನೀವು ಚಿಂತೆಗೆ ಒಳಗಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ನಿಮ್ಮ ಸಂಪತ್ತನ್ನು ಪ್ರದರ್ಶನ ಮಾಡುವುದು ಮುಂದೆ ದೊಡ್ಡ ಸಮಸ್ಯೆ ತರಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಸಮಸ್ಯೆಗಳ ದಿನ. ನಿಮ್ಮ ಹಣಕಾಸು ವಿಚಾರದಲ್ಲಿ ಒತ್ತಡವಿದೆ. ಸಾಲ ಮರಳಿ ನೀಡಬೇಕಾದ ಕರೆ ಸ್ವೀಕರಿಸುತ್ತೀರಿ. ದಿನದ ಅಂತ್ಯದಲ್ಲಿ ಮನೆಗಾಗಿ ವಸ್ತುವೊಂದನ್ನು ಖರೀದಿಸಬೇಕಾಗುತ್ತದೆ. ಪ್ರಯಾಣ ಮಾಡಬೇಕಾಗುತ್ತದೆ. ತಲೆ ನೋವಿನ ಸಮಸ್ಯೆ ಎದುರಿಸಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಹಲವು ವಿಚಾರಗಳಲ್ಲಿ ಶುಭವಿದೆ. ಯಾರಿಗೂ ಇಂದು ಸಾಲ ನೀಡಲು ಮುಂದಾಗಬೇಡಿ, ಇಂದು ಲಕ್ಷ್ಮಿ ದೇವಿಯ ಪೂಜಿಸುವುದು ನಿಮಗೆ ಶುಭ ತರಲಿದೆ, ಗೃಹಿಣಿಯರು ಅನಿರೀಕ್ಷಿತ ಧನಲಾಭ ನೋಡಲಿದ್ದೀರಿ.
ಧನು ರಾಶಿ
ಧನು ರಾಶಿ ಜನರು ಇಂದು ದೊಡ್ಡ ಲಾಭ ನೋಡಬಹುದು. ನಿಮ್ಮ ಬಹಳ ಹಳೆಯ ಸಮಸ್ಯೆಯೊಂದು ಬಗೆಹರಿಯಲಿದೆ. ಬಹುಸಮಯದಿಂದ ಸಿಲುಕಿದ್ದ ಹಣ ನಿಮ್ಮ ಕೈ ಸೇರಬಹುದು. ಬ್ಯಾಂಕಿಂಗ್ ವಿಚಾರವಾಗಿ ನಿಮಗೆ ಧನಾತ್ಮಕ ದಿನ. ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ಏರುಪೇರು ಸಂಭವಿಸಬಹುದು.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಇಂದು ಸಮಸ್ಯೆಗಳಿಂದ ಕೂಡಿರುವ ದಿನ. ವ್ಯಾಪಾರಿಗಳು ದುಂದುವೆಚ್ಚ ಅಥವಾ ಅನಗತ್ಯ ವೆಚ್ಚಗಳಿಗೆ ಒಳಗಾಗಬಹುದು. ನಿಮ್ಮ ಮನೆಗೆ ಅತಿಥಿಗಳ ಆಗಮನ ನಿರೀಕ್ಷೆ ಇದೆ. ಯಾರಿಗೂ ಸಾಲ ನೀಡುವ ಮುನ್ನ ಹಲವು ಬಾರಿ ಆಲೋಚಿಸುವುದು ಉತ್ತಮ. ನಿಮ್ಮ ಉದ್ಯೋಗ ಸಂಬಂಧಿತ ವಿಚಾರದಲ್ಲಿ ಶುಭವಿದೆ.
ಕುಂಭ ರಾಶಿ
ಕುಂಭ ರಾಶಿ ಜನರಲ್ಲಿ ಇಂದು ಉತ್ತಮ ದಿನ. ಪ್ರಯಾಣಗಳಲ್ಲಿ ತೊಡಗುವಿರಿ. ಕುಟುಂಬದೊಂದಿಗೆ ದೇವಾಲಯ ಭೇಟಿಯ ಸಂಭವವಿದೆ. ನಿಮ್ಮಿಂದಾಗಿ ಶುಭ ಕಾರ್ಯವೊಂದು ನಡೆಯಲಿದೆ. ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಿದೆ.
ಮೀನ ರಾಶಿ
ಮೀನ ರಾಶಿಯವರು ಇಂದು ರಾತ್ರಿ ಪ್ರಯಾಣಗಳ ಮುಂದೂಡಬೇಕಿದೆ. ನಿಮ್ಮ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಲು ನೀವು ತೆಗೆದುಕೊಳ್ಳುವ ನಿರ್ಧಾರಗಳು ಸರಿಯಾಗಿರಲಿದೆ. ಆಪ್ತರಿಂದ ಹಣ ಪಡೆಯುವ ನಿಮ್ಮ ಬಯಕೆ ಅಥವಾ ಬೇಡಿಕೆ ಈಡೇರಲಿದೆ.



Click it and Unblock the Notifications