Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 04 Horoscope: ಹುಣ್ಣಿಮೆಯ ದಿನ ಯಾರಿಗೆಲ್ಲಾ ಲಾಭಕರ!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 04 (December 04 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಲ್ಲಿ ಇಂದು ಉತ್ತಮ ದಿನವಾಗುವ ಅವಕಾಶವಿದೆ. ನಿಮ್ಮ ಹಲವು ಕೆಲಸಗಳನ್ನು ನಿಗದಿತ ಸಮಯದೊಳಗೆ ಮುಗಿಸುವಿರಿ. ಆಪ್ತರೊಬ್ಬರ ಕೆಲಸದ ಕಾರಣ ನೀವು ಪ್ರಯಾಣ ಮಾಡುವಿರಿ. ಪ್ರೀತಿ ಸಂಬಂಧಗಳು ಗಟ್ಟಿಯಾಗಲಿದೆ.
ವೃಷಭ ರಾಶಿ
ವೃಷಭ ರಾಶಿ ಜನರಲ್ಲಿ ಇಂದು ಅನುಕೂಲಕರ ದಿನ. ನಿಮ್ಮ ಕೆಲಸಗಳನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಿ ಮುಗಿಸಿ. ಹಲವರಲ್ಲಿ ಹಣಕಾಸು ಕುರಿತ ಒತ್ತಡ ಇರಬಹುದು. ಆಪ್ತರಿಂದ ನಿಮಗೆ ನೆರವು ಬರಲಿದೆ. ಅದ್ರಲ್ಲೂ ಕೆಲಸದ ವಿಚಾರದಲ್ಲಿ ನೀವು ಅವರೊಂದಿಗೆ ಪ್ರಯಾಣ ಮಾಡಬೇಕಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶ್ರದ್ಧೆ ಇರಲಿ. ಯಾರಿಗಾದರು ಹಣ ನೀಡಿದ್ದರೆ ಮರಳಿ ನೀಡುವ ನಿಮ್ಮ ಪ್ರಯತ್ನ ಫಲ ನೀಡದೆ ಇರಬಹುದು. ಕೆಲಸದ ಸ್ಥಳದಲ್ಲಿ ಇಂದು ಸವಾಲುಗಳು ಎದುರಾಗಲಿದೆ. ಪ್ರಯಾಣಗಳಲ್ಲಿ ಸುಖವಿದೆ.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ಹುಣ್ಣಿಮೆಯ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ. ನಿಮ್ಮ ದಾಂಪತ್ಯದಲ್ಲಿನ ಮನಸ್ತಾಪಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದೀರಿ. ಅನೇಕರಿಗೆ ಸುಖಕರ ಪ್ರಯಾಣಗಳಿವೆ. ವಾಹನ ಸಂಬಂಧವಾಗಿ ನಿಮಗೆ ಸಮಸ್ಯೆಗಳು ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ದಿನ ಶುಭಕರ. ನಿಮ್ಮ ಹಣಕಾಸು ವಿಚಾರದಲ್ಲಿ ನೆಮ್ಮದಿ ಇದೆ. ಕೆಲಸದ ಒತ್ತಡ ಇದ್ದರೂ ದಿನದ ಅಂತ್ಯದಲ್ಲಿ ನೆಮ್ಮದಿ ಇರಲಿದೆ. ಯಾರಿಂದಾದರು ಪ್ರಯಾಣದ ಆಹ್ವಾನ ಪಡೆಯಲಿದ್ದೀರಿ, ರಾತ್ರಿ ಸಮಯದ ಪ್ರಯಾಣಗಳನ್ನು ಮುಂದೂಡುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿ ಜನರಲ್ಲಿ ಇಂದು ಆದಾಯಗಳಿಕೆಯ ದಿನವಾಗಲಿದೆ. ನೀವು ಸಹಾಯ ಮಾಡುವ ಮಂದಿ ನಿಮ್ಮ ಸಹಾಯವನ್ನು ಮರೆಯಬಹುದು. ಹಣ ವಿನಿಯೋಗಿಸುವ ಮುನ್ನ ಎಚ್ಚರಿಕೆಯಿಂದ ವ್ಯವಹಾರ ಮಾಡಿ. ನಿಮ್ಮ ವ್ಯಾಪಾರ ಪ್ರಗತಿಯ ಕಾರಣದಿಂದಾಗಿ ನಿಮ್ಮ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿವೆ. ನಿಮ್ಮ ಹಣಕಾಸು, ಚಿನ್ನಾಭರಣ ವಿಚಾರದಲ್ಲಿ ಒತ್ತಡಗಳಿವೆ. ವ್ಯಾಪಾರಿಗಳಿಗೂ ಕೂಡ ಇಂದು ಶುಭವಿಲ್ಲ, ಆದಾಯವನ್ನು ಬೇರೊಂದು ವಿಚಾರವಾಗಿ ನಿವಿಯೋಗಿಸುತ್ತೀರಿ. ಸಹೋದರರೊಂದಿಗೆ ನಿಮ್ಮ ಸಂಬಂಧವು ಮನಸ್ತಾಪದಿಂದ ಕೂಡಿರಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಅನಗತ್ಯ ಖರ್ಚು ಅಥವಾ ಪ್ರಯಾಣಗಳಲ್ಲಿ ತೊಡಗುವರು. ನೀವು ಅಂದುಕೊಂಡ ಕೆಲಸದಲ್ಲಿ ಬಯಸಿದ ಫಲಿತಾಂಶ ಪಡೆಯದೆ ಇರಬಹುದು. ಉದ್ಯೋಗ ಹುಡುಕುತ್ತಿದ್ದ ಮಂದಿ ಮತ್ತಷ್ಟು ಶ್ರಮ ಹಾಕಬೇಕಿದೆ. ಅನೇಕರು ಹೊಸ ವಸ್ತು ಖರೀದಿಯಲ್ಲಿ ತಪ್ಪು ಮಾಡಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಉತ್ತಮ ದಿನ. ನಿಮ್ಮ ಕೆಲಸ ಕಾರ್ಯಗಳಲ್ಲಿ ಶುಭವಿದೆ. ಆಸ್ಪತ್ರೆ ಸಂಭಂದಿತ ವಿಚಾರವಾಗಿ ಖರ್ಚು ಮಾಡಬೇಕಿದೆ. ಮಕ್ಕಳ ವಿಚಾರದಲ್ಲಿ ನಿಮ್ಮ ದೃಢ ನಿರ್ಧಾರವನ್ನು ಬದಲಾಯಿಸದೆ ಇರುವುದು ಉತ್ತಮ. ಮನೆಯ ಸದಸ್ಯರೊಬ್ಬರ ಆರೋಗ್ಯದಲ್ಲಿ ಏರುಪೇರು ಸಂಭವವಿದೆ.
ಮಕರ ರಾಶಿ
ಮಕರ ರಾಶಿ ಜನರಲ್ಲಿ ಇಂದು ದೊಡ್ಡ ಮಟ್ಟದ ಲಾಭವಿದೆ. ಉಳಿತಾಯ ಹೆಚ್ಚಾಗಲಿದೆ, ಹಾಗೆ ನಿಮ್ಮ ಹೂಡಿಕೆಗಳಿಂದ ಲಾಭ ನೋಡಬಹುದು. ಯಾವ ಮೂಲದಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ನಿಮ್ಮ ಕೈ ಸೇರುವ ಸಮಯ ಇದಾಗಿರಲಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಇಂದು ಮಿಶ್ರ ಫಲವಿದೆ. ನಿಮ್ಮ ಆದಾಯದಷ್ಟೇ ಖರ್ಚುಗಳಿವೆ. ಆಪ್ತರೊಬ್ಬರ ಮನೆಗೆ ನೀವು ಭೇಟಿ ನೀಡುವಿರಿ. ವಾಹನ ಕುರಿತಾದ ಚಿಂತೆಯಿಂದ ದೂರಾಗುವಿರಿ. ಮನೆಗಾಗಿ ವಸ್ತುವನ್ನು ಖರೀದಿಸಬಹುದು. ಅನೇಕರಿಗೆ ಸವಾಲಿನಿಂದ ತುಂಬಿದ ದಿನವಾಗಬಹುದು, ಅದ್ರಲ್ಲೂ ಕೆಲಸದ ಒತ್ತಡವು ನಿಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಬಹುದು.
ಮೀನ ರಾಶಿ
ಮೀನ ರಾಶಿ ಜನರಲ್ಲಿ ಇಂದು ದೊಡ್ಡ ಲಾಭವಿದೆ. ಯಾರಿಗಾದರು ಹಣ ನೀಡುವ ಮುನ್ನ ಆಲೋಚಿಸಿ. ತಂದೆ ತಾಯಿಯರ ಜೊತೆಗಿನ ಮನಸ್ತಾಪಗಳನ್ನು ದೂರ ಮಾಡಿಕೊಳ್ಳುವುದು ಉತ್ತಮ. ದಾಂಪತ್ಯ ವಿಚಾರವಾಗಿ ಮುನಿಸು ಇರಲಿದೆ. ಅವಿವಾಹಿತರು ಅನಗತ್ಯ ವಿಚಾರಕ್ಕೆ ಖರ್ಚು ಮಾಡಬಹುದು.



Click it and Unblock the Notifications