Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
December 03 Horoscope: ನಿಮ್ಮ ಸಹಾಯಕ್ಕೆ ಬೆಲೆ ಇಲ್ಲದ ದಿನ
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 03 (December 03 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನ ಸಮಸ್ಯೆಗಳಿಂದ ತುಂಬಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳ ನೋಡಬಹುದು. ಆಪ್ತರೊಬ್ಬರಿಂದ ನಿಮ್ಮ ಶುಭಕೆಲಸಕ್ಕೆ ಮುಂದಾಗುವ ದಿನವನ್ನು ಮುಂದೂಡಬಹುದು. ಬ್ಯಾಂಕಿಂಗ್ ವಿಚಾರದಲ್ಲಿ ನಿಮಗೆ ಸಮಸ್ಯೆಗಳಿವೆ. ಪ್ರಯಾಣಗಳಲ್ಲಿ ಅಡ್ಡಿಗಳಿವೆ.
ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಸ್ನೇಹಿತರಿಂದ ಹಣ ಪಡೆಯುವ ದಿನ ಎನ್ನಬಹುದು. ನಿಮ್ಮ ಆರ್ಥಿಕ ಸಮಸ್ಯೆಗಳು ದೂರಾಗುವ ಸಮಯ. ಬ್ಯಾಂಕಿಂಗ್ ವಿಚಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ. ಐಷಾರಾಮಿ ವಸ್ತುಗಳ ಬಳಸುವಾಗ ಎಚ್ಚರ ವಹಿಸಿ.

ಮಿಥುನ ರಾಶಿ
ಮಿಥುನ ರಾಶಿ ಜನರು ಈ ದಿನ ಪ್ರಯಾಣಗಳ ಮಾಡಬಹುದು. ನಿಮ್ಮ ವಾಹನ ಸಂಬಂಧಿತ ವಿಚಾರಗಳಲ್ಲಿ ಶುಭವಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾಗುತ್ತದೆ. ಗೃಹಿಣಿಯರು ಇಂದು ಪ್ರಯಾಣ ಮಾಡುವಿರಿ, ಗೃಹಿಣಿಯರು ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು.
ಕರ್ಕ ರಾಶಿ
ಕರ್ಕ ರಾಶಿ ಜನರು ಇಂದು ಮಿಶ್ರ ಫಲದ ದಿನವಾಗುತ್ತದೆ. ಮನೆಯಿಂದ ಹೊರಗಿನ ಕೆಲಸಗಳು ನಿಮಗೆ ಶ್ರಮದಾಯಕವಾಗಬಹುದು. ಆಸ್ಪತ್ರೆ ಸಂಬಂಧಿತ ಖರ್ಚುಗಳು ಹೆಚ್ಚಾಗಲಿವೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡಬೇಕಾದ ಅನಿವಾರ್ಯತೆ ಅಥವಾ ಒತ್ತಡ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಬಹಳ ಅನುಕೂಲಕರ. ನಿಮ್ಮ ಹಲವು ಕೆಲಸಗಳನ್ನು ಸುಲಭವಾಗಿ ಮುಗಿಸುವ ಯತ್ನದಲ್ಲಿ ಆಪತ್ತುಗಳ ಎದುರಿಸಬಹುದು. ವಾಹನ ಸಂಬಂಧಿ ವಿಚಾರದಲ್ಲಿ ಶುಭವಿದೆ. ಪ್ರಯಾಣ ಮಾಡುವಿರಿ. ದಿನದ ಅಂತ್ಯದಲ್ಲಿ ಖರ್ಚು ಮಾಡುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವಿರಿ. ಆಪ್ತರಿಂದ ನಿಮ್ಮ ಹಣಕಾಸು ಸಮಸ್ಯೆಗಳು ಬಗೆಹರಿಯಲಿದೆ. ಅನೇಕರು ನಿಮ್ಮಿಂದ ಸಹಾಯ ಪಡೆಯಬಹುದು. ಸಂಬಂಧಿಕರು ನಿಮ್ಮ ಉದ್ಯೋಗ ಸಂಬಂಧಿ ವಿಚಾರವಾಗಿ ಚರ್ಚೆಗೆ ಬರಬಹುದು. ದೂರದ ಸ್ನೇಹಿತರೊಬ್ಬರು ನಿಮಗೆ ಕರೆ ಮಾಡಿ ಶುಭ ಕಾರ್ಯ ಸಂಬಂಧ ಆಹ್ವಾನ ನೀಡಬಹುದು.
ತುಲಾ ರಾಶಿ
ತುಲಾ ರಾಶಿ ಜನರಿಗೆ ಇಂದು ಪ್ರಯಣದಲ್ಲಿ ತೊಡಗಬೇಕಾಗಬಹುದು. ಗೃಹಿಣಿಯರು ಇಂದು ಉದರ ಸಂಬಂಧಿ ಸಮಸ್ಯೆಗಳಿಂದ ತೊಂದರೆಗೆ ಒಳಗಾಗಬಹುದು. ಮಕ್ಕಳ ಕುರಿತಾದ ವಿಚಾರವಾಗಿ ಎಚ್ಚರಿಕೆಯಿಂದ ಇರಿ. ವಾಹನ ಸವಾರರು ಇಂದು ದೊಡ್ಡ ಪ್ರಯಾಣಗಳಿಂದ ದೂರವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಇಂದು ಶುಭ ದಿನ. ದಾಂಪತ್ಯದಲ್ಲಿನ ಸಮಸ್ಯೆಯೊಂದು ಬಗೆಹರಿಯಲಿದೆ. ಆಪ್ತರೊಬ್ಬರು ನಿಮ್ಮ ಭೇಟಿಗೆ ಆಗಮಿಸಬಹುದು. ದಿನದ ಅಂತ್ಯದಲ್ಲಿ ನಿಮ್ಮ ಖರ್ಚು ಹೆಚ್ಚಾಗುವ ನಿರೀಕ್ಷೆ ಇದೆ. ರಾತ್ರಿ ಸಮಯದಲ್ಲಿ ಪ್ರಯಾಣಗಳ ಮುಂದೂಡುವುದು ಉತ್ತಮ.
ಧನು ರಾಶಿ
ಧನು ರಾಶಿಯವರಿಗೆ ಇಂದು ಮಿಶ್ರ ಫಲ. ಸಾಲ, ಬ್ಯಾಂಕಿಂಗ್ ವಿಚಾರವಾಗಿ ಚಿಂತೆ ಇರಲಿದೆ. ದೈನಂದಿನ ಕೆಲಸಗಳು ನಷ್ಟಗಳಿಂದ ತುಂಬಿರಬಹುದು. ಆಪ್ತರೊಬ್ಬರಿಗೆ ನೀವು ಹಣ ಖರ್ಚು ಮಾಡಬೇಕಾಗಿ ಬರಬಹುದು. ಗೃಹಿಣಿಯರು ಕೈಗೊಂಡ ಕೆಲಸ ಅರ್ಧಕ್ಕೆ ಬಿಡಬೇಕಾಗಬಹುದು.
ಮಕರ ರಾಶಿ
ಮಕರ ರಾಶಿ ಜನರಿಗೆ ಈ ದಿನವು ಅತ್ಯುತ್ತಮ ಫಲ ತರಲಿದೆ, ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಇಂದು ಪೂರ್ಣ ಮಾಡಿ. ಹಣಕಾಸು ವಿಚಾರದಲ್ಲಿ ಎಚ್ಚರಿಕೆ ಇಡಿ. ಯಾರಿಗೂ ಸಾಲ ನೀಡಲು ಇಂದು ಮುಂದಾಗಬೇಡಿ. ದೊಡ್ಡ ಒಪ್ಪಂದಗಳನ್ನು ಬಹಳ ಚರ್ಚೆಗಳ ಮೂಲಕ ಕೈಗೊಳ್ಳಿ.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ಪ್ರಯಾಣಗಳಲ್ಲಿ ತೊಡಗಬಹುದು. ನಿಮ್ಮ ಬಹುದೊಡ್ಡ ಕೆಲಸಗಳಲ್ಲಿ ನೀವು ತೊಡಗುವುದು ಶ್ರಮ ಹೆಚ್ಚಾಗುವಂತೆ ಮಾಡಬಹುದು. ನಿಮ್ಮ ಹಣಕಾಸು ಸಂಬಂಧಿತ ವಿಚಾರದಲ್ಲಿ ಶುಭವಿದೆ. ಆಪ್ತರಿಗೆ ನೀಡಿದ್ದ ಹಣ ನಿಮ್ಮ ಕೈ ಸೇರಬಹುದು. ಯಾರಿಂದಾದರು ಹಣ ಪಡೆದರೆ ಮರಳಿ ನೀಡುವುದು ಉತ್ತಮ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗಬೇಕಾಗುತ್ತದೆ. ನಿಮ್ಮ ಅನೇಕ ಕೆಲಸಗಳಲ್ಲಿ ಶುಭವಾಗುತ್ತದೆ. ದಾಂಪತ್ಯದಲ್ಲಿ ಹೊಸ ವಿಚಾರಗಳಿಗೆ ನೀವು ತೆರೆದುಕೊಳ್ಳುವಿರಿ. ಮಕ್ಕಳಿಗೆ ಹಣ ನೀಡುವ ಮುನ್ನ ಆಲೋಚಿಸುವುದು ಉತ್ತಮ.



Click it and Unblock the Notifications