Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
December 02 Horoscope: ಈ ದಿನ ಪ್ರಯಾಣಗಳಲ್ಲಿ ಎಚ್ಚರ ಇರಲಿ!!
ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 02 (December 02 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ದಿನವು ಬಹಳ ಅನುಕೂಲಕರವಾಗಿರಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವಿರಿ. ನಿಮ್ಮ ಆಪ್ತರಿಂದ ನಿಮಗೆ ಬರಬೇಕಾದ ಹಣ ಕೂಡ ಕೈ ಸೇರಲಿದೆ. ವಾಹನ ಸಂಬಂಧಿತ ವಿಚಾರದಲ್ಲಿ ಖರ್ಚುಗಳಿವೆ.
ವೃಷಭ ರಾಶಿ
ನಿಮಗಿಂದು ಅನಾರೋಗ್ಯ ಮುಂದುವರೆಯಲಿದೆ. ನಿಮ್ಮಲ್ಲಿದ್ದ ಹಣಕಾಸಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಯಲಿದೆ. ಗೃಹಿಣಿಯರಿಗೆ ಈ ದಿನ ಒತ್ತಡದಿಂದ ತುಂಬಿದ ದಿನವಾಗಿರಲಿದೆ. ನಿಮ್ಮ ಹಲವು ಕೆಲಸಗಳಲ್ಲಿ ಅಡ್ಡಿಗಳು ಎದುರಾಗಬಹುದು.

ಮಿಥುನ ರಾಶಿ
ಮಿಥುನ ರಾಶಿ ಜನರಿಗೆ ಮಿಶ್ರಫಲದ ದಿನ. ನಿಮ್ಮ ಎಲ್ಲಾ ವಿಚಾರಗಳಲ್ಲಿ ಧನಾತ್ಮಕ ವಿಚಾರಗಳಿದ್ದರೂ ದಿನದ ಅಂತ್ಯದಲ್ಲಿ ನಿಮಗೆ ಆಯಾಸಗಳು ಕಾಡಬಹುದು. ದೇವಾಲಯ ಭೇಟಿ ಅಥವಾ ಪ್ರಯಾಣಗಳಲ್ಲಿ ನೀವು ತೊಡಗುತ್ತೀರಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಇಂದು ಪ್ರಯಾಣ ಮಾಡುವ ದಿನ. ನಿಮ್ಮ ಹಲವು ಕೆಲಸಗಳ ಸಂಬಂಧವಾಗಿ ನೀವು ಪ್ರಯಾಣ, ಓಡಾಟದಲ್ಲಿ ತೊಡಗಬಹುದು. ಗೃಹಿಣಿಯರು ಆಪ್ತರೊಬ್ಬರೊಂದಿಗೆ ಮನಸ್ತಾಪಗಳೂ ಉಂಟಾಗಬಹುದು. ಯಾರಿಗಾದರು ಹಣ ನೀಡುವುದನ್ನು ಮುಂದೂಡುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿ ಜನರಲ್ಲಿ ಇಂದು ಉತ್ತಮ ದಿನ. ನಿಮ್ಮ ಹಣಕಾಸಿನ ಒತ್ತಡ ಕಡಿಮೆಯಾಗಲಿದೆ. ದಿನವಿಡಿ ನೀವು ಪ್ರಯಾಣ ಮಾಡಬಹುದು. ನಿದ್ರೆ ಸಂಬಂಬಂಧಿತ ವಿಚಾರವಾಗಿ ನೀವು ಸಮಸ್ಯೆಗಳ ಎದುರಿಸಬಹುದು. ಯಾರಿಗೂ ಹಣ ನೀಡಲು ಮುಂದಾಗಬೇಡಿ.
ಕನ್ಯಾ ರಾಶಿ
ಕನ್ಯಾ ರಾಶಿ ಜನರು ಇಂದು ಪ್ರಯಾಣಗಳಲ್ಲಿ ತೊಡಗುವಿರಿ, ಯಾರಿಂದಾದರು ಹಣ ಪಡೆಯುವ ನಿಮ್ಮ ಉದ್ದೇಶ ಈಡೇರಲಿದೆ. ಗೃಹಿಣಿಯರು ಇಂದು ತಾಳ್ಮೆಯಿಂದ ವರ್ತಿಸಬೇಕಿದೆ. ನಿಮ್ಮ ಖರ್ಚುಗಳ ಮೇಲೆಯೂ ನಿಗಾ ಇಡಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡಬಹುದು.
ತುಲಾ ರಾಶಿ
ತುಲಾ ರಾಶಿ ಜನರು ಇಂದು ಉತ್ತಮ ದಿನವನ್ನಾಗಿ ನೋಡಲಿದ್ದೀರಿ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು. ಆಹಾರ ಸಂಬಂಧಿತ ಅಥವಾ ಉದರ ಸಂಬಂಧಿ ಸಮಸ್ಯೆಗಳ ಎದುರಿಸಬಹುದು. ಮಕ್ಕಳ ಕುರಿತಾಗಿ ಇಂದು ಎಚ್ಚರಿಕೆಯಿಂದ ಇರಬೇಕು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಧನಲಾಭದ ದಿನ. ನಿಮ್ಮ ಬಹುದಿನದ ಉಳಿತಾಯವನ್ನು ಅನುಭವಿಸುವ ದಿನ. ಪ್ರೀತಿಯ ವಿಚಾರವಾಗಿ ಇಲ್ಲವೆ ದಾಂಪತ್ಯದ ವಿಚಾರದಲ್ಲಿ ಶುಭವಾಗಲಿದೆ. ಆಪ್ತರ ಭೇಟಿ ಮಾಡುವಿರಿ. ಮನೆಯ ಹೊರಗಿನ ಆಹಾರ ನಿಮಗೆ ಸಮಸ್ಯೆ ತರಬಹುದು. ಮಕ್ಕಳಿಂದ ಶುಭ ಸುದ್ದಿ ಬರಬಹುದು.
ಧನು ರಾಶಿ
ಧನು ರಾಶಿ ಜನರಿಗೆ ಇಂದು ಸಂತೋಷದ ದಿನವಾಗುತ್ತಿದೆ. ಮನೆಗಾಗಿ ನೀವು ಖರ್ಚು ಮಾಡುವಿರಿ. ತಾತ್ಕಾಲಿಕ ಹಣಕಾಸು ಸಮಸ್ಯೆ ಕಾಡಬಹುದು. ದಾಂಪತ್ಯದಲ್ಲಿನ ಮನಸ್ತಾಪಗಳ ನಿವಾರಿಸಿಕೊಳ್ಳುವುದು ಉತ್ತಮ. ತಂದೆ ತಾಯಿಯ ಆರೋಗ್ಯದಲ್ಲಿ ಏರುಪೇರು ಸಂಭವ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಅಚ್ಚರಿಗೊಳಿಸುವ ಫಲಿತಾಂಶಗಳ ತರಬಹುದು. ಬಹುದಿನದಿಂದ ನೀವು ಮಾಡಲು ಯತ್ನಿಸುತ್ತಿದ್ದ ಕೆಲಸಗಳನ್ನು ಮಾಡಿ ಮುಗಿಸುವಿರಿ. ಪ್ರೀತಿಯ ವಿಚಾರದಲ್ಲಿ ಮಧುರವಾಗಿರಲಿದೆ. ವ್ಯಾಪಾರಗಳಿಗೆ ಧನಲಾಭದ ಸಮಯ. ಸಂಜೆಯ ದಿಢೀರ್ ಪ್ರಯಾಣವು ನಿಮಗೆ ಅದೃಷ್ಟಕರ.
ಕುಂಭ ರಾಶಿ
ಕುಂಭ ರಾಶಿ ಜನರಿಗೆ ಈ ದಿನವು ಅದೃಷ್ಟಕರ. ಗೃಹಿಣಿಯರು ಬಹು ಸಮಯದಿಂದ ಮಾಡಬೇಕೆಂದು ಬಯಸಿದ್ದ ಕೆಲಸ ಮಾಡಿ ಮುಗಿಸುವಿರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವಿರಿ, ಇದರಿಂದ ನೆಮ್ಮದಿ ಇರಲಿದೆ.
ಮೀನ ರಾಶಿ
ಮೀನ ರಾಶಿ ಜನರಿಗೆ ಇಂದು ಪ್ರಯಾಣಗಳಲ್ಲಿ ತೊಡಗುವ ದಿನ. ನಿಮ್ಮ ಹಲವು ಕೆಲಸಗಳನ್ನು ಆರ್ಧಕ್ಕೆ ನಿಲ್ಲಿಸುವಿರಿ, ಬ್ಯಾಕಿಂಗ್ ವಿಚಾರಗಳಲ್ಲಿ ಚಿಂತೆ ಇದೆ, ಮಕ್ಕಳ ವಿದ್ಯಾಭ್ಯಾಸ ಕುರಿತ ವಿಚಾರದಲ್ಲಿ ಒತ್ತಡಗಳಿವೆ. ಅನೇಕರು ಪ್ರಯಾಣದಲ್ಲಿ ಸಮಸ್ಯೆಗಳ ಎದುರಿಸಬಹುದು.



Click it and Unblock the Notifications