Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಶುಕ್ರ-ಶನಿಯಿಂದಾಗಿ ದಶಾಂಕ ಯೋಗ: ಸಾಡೇಸಾತಿ ಸಮಸ್ಯೆಯಿಂದ ಮುಕ್ತಿ ಪಡೆಯೋದ್ಯಾರು?
ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ನ್ಯಾಯ ಹಾಗೂ ಶಿಕ್ಷಿಸುವಂತಹ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಶನಿ ಕರ್ಮಗಳ ಲೆಕ್ಕಚಾರದ ಅನುಗುಣವಾಗಿ ಪ್ರತೊಯೊಬ್ಬರ ನ್ಯಾಯ ಮಾಡುತ್ತಾನೆ ಎಂದು ನಂಬಲಾಗಿದೆ. ಅದರಲ್ಲೂ ನಿಮಗೆ ಶುಭ ಹಾಗೂ ಅಶುಭ ಕಾರಕಗಳಿಗೆ ಶನಿ ಕಾರಣ ಎಂದು ಹೇಳಲಾಗುತ್ತದೆ.
ಶನಿ ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ಕೂಡ ನಾವು ನೋಡಬಹುದು. ಅದರಲ್ಲೂ ನಿಮ್ಮ ದೈನಂದಿನ ಆಗು ಹೋಗುಗಳ ಮೇಲೂ ಪ್ರಭಾವ ಬೀರುವುದು ನೋಡಬಹುದು. ಶನಿ ನಿಧಾನವಾಗಿ ಚಲಿಸುವ ಗ್ರಹ ಆಗಿರುವುದರಿಂದ ಆತನ ಚಲನೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ.

ಸದ್ಯ ಈಗ ಶುಕ್ರನು ಶನಿಯೊಂದಿಗೆ ಸಂಯೋಗವಾಗದಿದ್ದರೂ ಶನಿ ಹಾಗೂ ಶುಕ್ರನ ಒಂದೇ ರೀತಿಯ ಚಲನೆಯು ಪರಿಣಾಮಕಾರಿ ಯೋಗಕ್ಕೆ ಕಾರಣವಾಗುತ್ತಿದೆ. ಶನಿ ಮೀನ ರಾಶಿಯಲ್ಲಿ ಚಲಿಸುವುದು ದಶಾಂಕ ಯೋಗಕ್ಕೆ ಕಾರಣವಾಗುತ್ತಿದೆ. ಇದು ಮೂರು ರಾಶಿ ಜನರಿಗೆ ಅತ್ಯಂತ ಶುಭಕರವಾಗುತ್ತಿದೆ. ಹಾಗಾದ್ರೆ ಯಾವ ಮೂರು ರಾಶಿಯವರಿಗೆ ಈ ದಶಾಂಕ ಯೋಗ ಧನಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಶುಕ್ರ-ಶನಿಯ ದಶಾಂಕ ಯೋಗವು ಈ ಮಿಥುನ ರಾಶಿಯರಿಗೆ ಹಿಂದೆಂದು ನೋಡಿರದಂತಹ ಯೋಗವೊಂದನ್ನು ತರಬಹುದು. ನಿಮ್ಮ ಆರ್ಥಿಕ ಸಮಸ್ಯೆಗೆ ಕಾರಣವಾಗಿದ್ದ ಅಡ್ಡಿಯೊಂದು ನಿವಾರಣೆಯಾಗಲಿದೆ. 10ನೇ ಮನೆಯಲ್ಲಿ ಶನಿ ಇರುವುದರಿಂದ ಕರ್ಮ ಲಾಭಗಳು ಹೆಚ್ಚಾಗುತ್ತವೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು ಖಚಿತ. ವ್ಯವಹಾರದ ಕ್ಷೇತ್ರದಲ್ಲಿದ್ದ ತಾಂತ್ರಿಕ ಸಮಸ್ಯೆಯೊಂದು ನಿವಾರಣೆಯಾಗಲಿದೆ, ನೀವು ವಾಹನ ಸಂಬಂಧಿ ಮೂಲದಿಂದ ಆದಾಯ ಗಳಿಸುತ್ತಿದ್ದರೆ ಉತ್ತಮ ದಿನಗಳು ಕಾದಿವೆ. ಉಳಿತಾಯಗಳಲ್ಲಿ ಹೆಚ್ಚಳ ಆಗುವುದು, ದಾಂಪತ್ಯದಲ್ಲಿ ದಿಢೀರ್ ಬದಲಾವಣೆಗಳ ನೋಡಬಹುದು. ಹಾಗೆ ಅವಿವಾಹಿತರಲ್ಲಿ ಶುಭ ಸುದ್ದಿ ಕೇಳಿಬರುವ ಕಾಲ ಎನ್ನಬಹುದು.
ಕುಂಭ ರಾಶಿ
ಶನಿ-ಶುಕ್ರನ ದಶಾಂಕ ಯೋಗವು ಕುಂಭ ರಾಶಿಯ ಮಂದಿಗೆ ಬಹಳ ಅನುಕೂಲಕರವಾಗಿರುತ್ತದೆ. ಶನಿ ಸಾಡೇ ಸಾತಿಯ ಕೊನೆಯ ಹಂತ ತಲುಪಲಿದ್ದಾರೆ. ಇದರಿಂದ ನಿಮ್ಮ ಅನೇಕ ಕಾರ್ಯಗಳಲ್ಲಿ ಅಡ್ಡಿ ಆತಂಕ ದೂರಾಗಬಹುದು. ಹಲವು ಶ್ರಮಗಳು ಪರಿಣಾಮಕಾರಿಯಾಗಿ ನಿಮಗೆ ಶುಭಫಲ ತರಬಹುದು. ಹಾಗೆ ಹಣಕಾಸು ಸ್ಥಿತಿಯಲ್ಲಿದ್ದ ಆತಂಕ ದೂರಾಗಿ ನಿಮ್ಮ ದೈನಂದಿನ ಜೀವನ ಸುಧಾರಣೆ ನೋಡಬಹುದು. ಉದ್ಯೋಗಿಗಳು ಕೆಲಸ ಬದಲಾಯಿಸುವುದು ಅಥವಾ ಹೊಸದಾಗಿ ಕೆಲಸ ಹುಡುಕುತ್ತಿದ್ದ ಮಂದಿಗೆ ಉತ್ತಮ ಅವಕಾಶಗಳು ಹುಡುಕಿ ಬರಬಹುದು. ಸವಾಲುಗಳನ್ನು ಎದುರಿಸುವ ನಿಮ್ಮ ಮನೋಬಲ ಹೆಚ್ಚಾಗಬಹುದು. ಕುಟುಂಬಸ್ಥರೊಂದಿಗೆ ಇದ್ದ ದೊಡ್ಡ ಮನಸ್ತಾಪ ದೂರಾಗಬಹುದು. ಆಸ್ತಿ ಸಂಬಂಧಿಸಿದ ಕಹಿ ನೆನಪು ಅಥವಾ ಕಷ್ಟಗಳು ದೂರಾಗಬಹುದು.
ಕರ್ಕ ರಾಶಿ
ಶುಕ್ರ-ಶನಿಯ ದಶಾಂಕ ಯೋಗವು ಕರ್ಕ ರಾಶಿಯವರಲ್ಲಿ ಬಹಳ ಧನಾತ್ಮಕ ಪರಿಣಾಮಕ್ಕೆ ಕಾರಣವಾಗುತ್ತದೆ. ಆರ್ಥಿಕ ಹೂಡಿಕೆ ಹೆಚ್ಚಾಗುತ್ತದೆ. ಸ್ವಂತ ಉದ್ಯಮ ನಡೆಸುತ್ತಿದ್ದವರಿಗೆ ಎದುರಾದ ಸಮಸ್ಯೆಗಳು ದೂರಾಗಲಿವೆ. ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದಂತೆ ಜಾಗದ ವಿಚಾರವಾಗಿ ಯಾವುದಾದರ ತಕರಾರು ಇದ್ದರೆ ಈ ಸಮಯದಲ್ಲಿ ನಿವಾರಣೆ ಸಂಭವವಿದೆ. ವೆಚ್ಚಗಳು ಕಡಿಮೆಯಾಗಲಿವೆ, ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ. ವಾಹನ ಲಾಭದೊಂದಿಗೆ ನಿಮಗೆ ಹತ್ತಾರು ರೀತಿಯ ಹೊಸ ವಸ್ತುಗಳ ಲಾಭ ಸಹ ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications

