ದಿನ ಭವಿಷ್ಯ: ಸೆಪ್ಟೆಂಬರ್ 14, ನಿಮ್ಮ ರಾಶಿಗೆ ಈ ದಿನ ಹೇಗಿರಲಿದೆ?

ಶುಭ ದಿನ, ಜ್ಯೋತಿಷ್ಯ ಪ್ರಕಾರ ಈ ದಿನದ ರಾಶಿಫಲ ನೋಡೋಣ

ಮೇಷ ರಾಶಿ

ಈ ದಿನ ನಿಮಗೆ ಶುಭವಾಗಿದೆ, ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದರೆ ಒಳ್ಳೆಯ ಸುದ್ದಿ ಸಿಗಲಿದೆ. ಇನ್ನು ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ಆರೋಗ್ಯ ಉತ್ತಮವಾಗಿರುತ್ತದೆ.

Dina Bhavishya

ವೃಷಭ ರಾಶಿ

ದಿನದ ಆರಂಭವು ಉತ್ತಮವಾಗಿರುತ್ತದೆ. ಕೆಲಸದಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ಬಗೆಹರಿಯುವುದರಿಂದ ಚಿಂತೆ ದೂರಾಗಲಿದೆ. ವ್ಯಾಪಾರಿಗಳಿಗು ಈ ದಿನ ಧನ ಲಾಭವಾಗಲಿದೆ. ಪ್ರೇಮ ವಿವಾಹ ಆಗ ಬಯಸುವುದಾದರೆ ಆತುರಪಡಬೇಡಿ. ವೈವಾಹಿಕ ಜೀವನ ಬಗ್ಗೆ ನೀವು ಹೆಚ್ಚು ಗಮನಹರಿಸಬೇಕು. ಈ ದಿನ ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.

ಮಿಥುನ ರಾಶಿ

ಈ ದಿನ ನಮಗೆ ಶುಭವಾಗಿದೆ. ನೀವು ಹಠಾತ್ ಆರ್ಥಿಕ ಲಾಭವನ್ನು ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಕುಟುಂಬದ ಯಾವುದೇ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಯಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.

ಕರ್ಕ ರಾಶಿ

ಈ ದಿನ ನಿಮಗೆ ಶುಭವಾಗಿದೆ ಕೆಲವು ಒಳ್ಳೆಯ ಕೆಲಸಗಳಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯ ದೂರಾಗಲಿದೆ. ಮನೆಯಲ್ಲಿ ವಾತಾವರಣ ತುಂಬಾ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಕೆಲವು ಧನಾತ್ಮಕ ಬದಲಾವಣೆಗಳಿರಬಹುದು. ನಿಮ್ಮ ಸಂಬಂಧವು ಮತ್ತಷ್ಟು ಗಟ್ಟಿಯಾಗುವುದು.

ಸಿಂಹ ರಾಶಿ

ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ನೀವು ಬಯಸಿದ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ಹಣಕಾಸಿನ ಸಮಸ್ಯೆಯು ಪರಿಹರಿಸಲ್ಪಡುತ್ತದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರುತ್ತದೆ. ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯವಿರಬಹುದು. ದಿನಾ ನಡೆಯುವ ವ್ಯಾಯಾಮ ಮಾಡುವುದು ಒಳ್ಳೆಯದು.

ಕನ್ಯಾ ರಾಶಿ

ಕೆಲಸ ಕಾರ್ಯಗಳಲ್ಲಿ ಈ ದಿನ ಉತ್ತಮವಾಗಿದೆ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ನಡೆಯುತ್ತಿದ್ದರೆ ವಕೀಲರಿಂದ ಕಾನೂನು ಸಲಹೆ ಪಡೆಯುವುದು ಒಳ್ಳೆಯದು, ಆರೋಗ್ಯದ ಕಡೆಗೆ ಗಮನಹರಿಸಿ. ಬಾಕಿಯಿರುವ ಕೆಲಸವು ಪೂರ್ಣಗೊಳ್ಳಲಿದೆ. ಕೆಲಸದಲ್ಲಿ ಸಮಸ್ಯೆ ಬಗೆಹರಿಯಲಿದೆ. ವೈವಾಹಿಕ-ಪ್ರೀತಿ ಬದುಕು ಚೆನ್ನಾಗಿರಲಿದೆ.

ತುಲಾ ರಾಶಿ

ಈ ದಿನ ನಿಮಗೆ ಮಿಶ್ರಫಲಿತಾಂಶ. ಜೀವನದ ಕೆಲವು ಕ್ಷೇತ್ರಗಳಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆದಾಯಕ್ಕಿಂತ ನಿಮ್ಮ ಖರ್ಚುಗಳು ಹೆಚ್ಚಾಗಿರುವುದರಿಂದ ಹಣದ ಚಿಂತೆ ಕಾಡಬಹುದು, ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿನ ಸಮಸ್ಯೆ ಬಗೆಹರಿಯಲಿದೆ. ಮೈಗ್ರೇನ್ ಸಮಸ್ಯೆ ಇರುವವರು ಜಾಗ್ರತೆವಹಿಸಿ.

ವೃಶ್ಚಿಕ ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ, ಕೆಲಸದ ಬಗ್ಗೆ ಅನಗ್ಯತ ಚಿಂತೆ ಬಿಡಿ. ನಿಮ್ಮ ಆದಾಯ ಹೆಚ್ಚಾಗಬಹುದು. ಈ ದಿನ ಖುಷಿಯಿಂದ ಸಮಯ ಕಳೆಯುತ್ತೀರಿ, ಕಟುಂಬದ ಜೊತೆಗೆ ಅಥವಾ ಫ್ರೆಂಡ್ಸ್‌ ಜೊತೆಗೆ ಖುಷಿಯಾಗಿರುತ್ತೀರಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ, ಆದಾಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ವೃತ್ತಿಗೆ ಸಂಬಂಧಿಸಿದ ಆತಂಕ ಶೀಘ್ರದಲ್ಲಿಯೇ ಬಗೆಹರಿಯಲಿದೆ. ನಿಮ್ಮ ಕೆಲಸ ಕಾರ್ಯವು ಚೆನ್ನಾಗಿ ನಡೆಯಲಿದೆ. ನಿಮ್ಮ ಸಂಗಾತಿಯ ದುಂದುವೆಚ್ಚದ ಸ್ವಭಾವವು ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಆರೋಗ್ಯದ ಕಡೆಗೆ ಗಮನಹರಿಸಿ.

ಮಕರ ರಾಶಿ

ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ಕೂಡಿರಲಿದೆ. ಹಣಕಾಸಿನ ವಿಷಯಗಳಲ್ಲಿ, ನಿಮ್ಮ ನಿರ್ಧಾರಗಳನ್ನು ನೀವು ಬಹಳ ಆಲೋಚಿಸಿ ತೆಗೆದುಕೊಳ್ಳಬೇಕು. ಕೆಲಸದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ನೀವು ಸಾಲ ಪಡೆಯಲು ಯೋಚಿಸುತ್ತಿದ್ದರೆ ನಿಮಗೆ ಸಾಲ ಸಿಗಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಉತ್ತಮವಾಗಿರಲಿದೆ.

ಕುಂಭ ರಾಶಿ

ಕೆಲಸದ ಕಡೆಗೆ ಗಮನಹರಿಸಲು ಕಷ್ಟವಾಗುವುದು, ಅಪರಿಚಿತ ವ್ಯಕ್ತಿಯನ್ನು ನಂಬಬೇಡಿ, ಕೋಪ ನಿಯಂತ್ರಿಸಿ, ಕೆಲಸಕ್ಕೆ ಸಂಬಂಧಿಸಿದ ನಿರ್ಧಾರ ಆತುರದಲ್ಲಿ ತೆಗೆದುಕೊಳ್ಳಬೇಡಿ. ಕೋಪ ನಿಯಂತ್ರಿಸಿದರೆ ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯದ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.

ಮೀನ ರಾಶಿ

ಈ ದಿನ ಉತ್ತಮವಾಗಿರಲಿದೆ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶವನ್ನು ಪಡೆಯುವುದರಿಂದ ಈ ದಿನ ಖುಷಿಯಾಗಿರುತ್ತದೆ. ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗಲಿದೆ. ಪ್ರಣಯ ಜೀವನದಲ್ಲಿ ದೊಡ್ಡ ಬದಲಾವಣೆಯ ಸಾಧ್ಯತೆ ಇದೆ. ನೀವು ಮದುವೆಗೆ ತೀರ್ಮಾನ ತೆಗೆದುಕೊಳ್ಳಬಹುದು, ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope Prediction for September 14: Dina Bhavishya for All Zodiac Signs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada
X
Desktop Bottom Promotion