ದಿನ ಭವಿಷ್ಯ: ಜುಲೈ 8: ವಾರದ ಮೊದಲ ದಿನ ನಿಮ್ಮ ರಾಶಿಗೆ ಹೇಗಿರಲಿದೆ?

ಶುಭ ದಿನ, ಜುಲೈ 8ರ ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ಈ ದಿನ ನಿಮಗೆ ಅನುಕೂಲಕರವಾಗಿದೆ, ನಿಮ್ಮೆಲ್ಲಾ ಕೆಲಸ ಕಾರ್ಯ ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ರಾಜಕಾರಣಿಗಳಿಗೆ ಈ ದಿನ ಶುಭವಾಗಿದೆ, ವ್ಯಾಪಾರಿಗಳು ಧನ ಲಾಭ ಗಳಿಸುತ್ತೀರಿ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಯಲಿದೆ. ಇನ್ನು ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ, ಏನಾದರೂ ಸಮಸ್ಯೆಯಿದ್ದರೆ ಕೂತು ಬಗೆಹರಿಸಲು ನೋಡಿ.

Dina Bhavishya

ವೃಷಭ ರಾಶಿ

ನಿಮ್ಮಲ್ಲಿರುವ ಧೈರ್ಯವೊಂದೇ ಸಾಕು ಎಲ್ಲಾ ಸಮಸ್ಯೆ ಬಗೆಹರಿಸಲು. ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ಕೊನೆಯಾಗಲಿದೆ. ವ್ಯಾಪಾರಿಗಳಿಗೂ ಈ ದಿನ ಸರಾಸರಿಯಾಗಿದೆ. ಈ ದಿನ ನೀವು ಹಣದ ವ್ಯವಹಾರ ಮಾಡುವಾಗ ಜಾಗ್ರತೆವಹಿಸಿ. ಕುಟುಂಬದಲ್ಲಿ ಸಮಸ್ಯೆ ಉಂಟಾಗದಂತೆ ಜಾಗ್ರತೆವಹಿಸಿ. ಈ ದಿನ ನಿಮಗೆ ಧನಾತ್ಮಕವಾಗಿರಲಿದೆ, ಖುಷಿಯಿಂದ ದಿನ ಕಳೆಯುತ್ತೀರಿ.

ಮಿಥುನ ರಾಶಿ

ನಿಮ್ಮಲ್ಲಿ ಸರಿಯಾದ ಆರ್ಥಿಕ ಪ್ರಯೋಜನ ಇಲ್ಲದಿದ್ದರೆ ಕಷ್ಟಗಳನ್ನು ಎದುರಿಸಬೇಕಾಗುವುದು. ವ್ಯಾಪಾರಿಗಳು ತಮ್ಮ ಸಮಸ್ಯೆಗೆ ಅನುಭವಿ ವ್ಯಕ್ತಿಯ ಸಲಹೆ ಪಡೆದರೆ ಒಳ್ಳೆಯದು. ಕುಟುಂಬದಲ್ಲಿ ಸಂತೋಷ , ನೆಮ್ಮದಿ ಇರಲಿದೆ, ಪ್ರೇಮಿಗಳು ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗದಿರಿ.

ಕರ್ಕ ರಾಶಿ

ಅಹಂ ನಿಮ್ಮ ಸ್ನೇಹದ ಮೇಲೆ ಅಥವಾ ಕುಟುಂಬದ ಮೇಲೆ ಪರಿಣಾಮ ಬೀರುವುದು, ಹಾಗಾಗಿ ಅಹಂಕಾರ ಒಳ್ಳೆಯದಲ್ಲ, ಕೋಪ ಕೂಡ ನಿಯಂತ್ರಿಸಬೇಕು. ಇನ್ನು ಕಾನೂನು ಬಾಹಿರ ಕಾರ್ಯಗಳನ್ನು ಮಾಡಲು ಹೋಗಬೇಡಿ, ಉದ್ಯೋಗಿಗಳಿಗೆ ಈ ದಿನ ಅನುಕೂಲಕರವಾಗಿದೆ. ವಿವಾಹಿತರ ನಡುವೆ ಪ್ರೀತಿ ಹೆಚ್ಚಾಗಲಿದೆ. ನಿಮಗೆ ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.

ಸಿಂಹ ರಾಶಿ

ಈ ದಿನ ಕೆಲಸವನ್ನು ಹೆಚ್ಚು ಜಾಗ್ರತೆವಹಿಸಿ ಮಾಡಿ. ಚಿಕ್ಕ ತಪ್ಪು ಕೂಡ ಆಗದಂತೆ ಜಾಗ್ರತೆವಹಿಸಬೇಕು. ವ್ಯಾಪಾರಿಗಳಿಗೆ ಈ ದಿನ ಸರಾಸರಿಯಾಗಿರಲಿದೆ. ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ವಿವಾಹಿತರಿಗೆ ಈ ದಿನ ಸಕತ್‌ ಸ್ಪೆಷಲ್ ಆಗಿರುತ್ತದೆ, ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರುವುದು.

ಕನ್ಯಾ ರಾಶಿ

ನಿಮ್ಮ ವೃತ್ತಿ ಬದುಕಿನ ಸಮಸ್ಯೆ ದೂರಾಗಲಿದೆ, ಶೀಘ್ರದಲ್ಲಿಯೇ ನೀವು ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ವ್ಯಾಪಾರಿಗಳು ಗ್ರಾಹಕ ತೃಪ್ತಿ ಕಡೆಗೆ ಗಮನಹರಿಸಬೇಕು, ನಿರ್ಲಕ್ಷ್ಯ ಮಾಡಬೇಡಿ. ನೀವು ಬೇಡದ ವಿಷಯದ ಕಡೆಗೆ ಗಮನ ನೀಡದೆ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸುವುದು ಒಳ್ಳೆಯದು. ನೀವು ಕೆಲಸ ಕೆಲಸ ಅಂತ ಆರೋಗ್ಯ ನಿರ್ಲಕ್ಷ್ಯ ಮಾಡದಿರಿ.

ತುಲಾ ರಾಶಿ

ಈ ಅವಧಿಯಲ್ಲಿ ಹಲವು ಗೊಂದಲಗಳು ನಿಮ್ಮ ಮನಸ್ಸಿನಲ್ಲಿರುತ್ತದೆ, ತಾಳ್ಮೆಯಿಂದ ಯೋಚಿಸಿ ಅಥವಾ ಸೂಕ್ತ ವ್ಯಕ್ತಿಯ ಸಲಹೆ ಪಡೆಯಿರಿ. ವ್ಯಾಪಾರಿಗಳು ಅನಗ್ಯತ ರಿಸ್ಕ್‌ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಲಾಗುವುದು. ವೈವಾಹಿಕ ಬದುಕು ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ಮೈಗ್ರೇನ್‌ ಸಮಸ್ಯೆವಿರಬಹುದು.

ವೃಶ್ಚಿಕ ರಾಶಿ

ನೀವು ವೃತ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ವ್ಯಾಪಾರಿಗಳು ಈ ದಿನ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಮನೆಯಲ್ಲಿ ಪೂಜೆ ಮುಂತಾದ ಶುಭ ಕಾರ್ಯವಿರಬಹುದು. ನೀವು ವಿವಾಹಿತರಾಗಿದ್ದರೆ ಸಂಗಾತಿ ಭಾವನೆ ಕಡೆಗೂ ಗಮನಹರಿಸಬೇಕು. ಆರೋಗ್ಯ ಸಮಸ್ಯೆಗಳಿರಬಹುದು, ಸಮಯ ಸಮಯಕ್ಕೆ ಔಷಧ ತೆಗೆದುಕೊಳ್ಳಬೇಕು.

ಧನು ರಾಶಿ

ನೀವು ಬೇಡದ ವಿಷಯದಲ್ಲಿ ತಲೆ ಹಾಕಿದರೆ ದೊಡ್ಡ ತೊಂದರೆಗೆ ಸಿಲುಕಬಹುದು. ಅಲ್ಲದೆ ನಿಮ್ಮ ಪ್ರಮುಖ ಕೆಲಸ ಕೂಡ ಅಪೂರ್ಣವಾಗಿ ಉಳಿಯುವುದು, ಇದರಿಂದ ನಷ್ಟ ನಿಮಗೇ, ಈ ಬಗ್ಗೆ ಜಾಗ್ರತೆವಹಿಸಿ. ಆಸ್ತಿ ವ್ಯವಹಾರ ಮಾಡುವುದಾದರೆ ಅವಸರ ಬೇಡ. ಹಣದ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ಆರೋಗ್ಯ ಸಮಸ್ಯೆವಿರಬಹುದು.


ಮಕರ ರಾಶಿ

ಕುಟುಂಬದಲ್ಲಿ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲದೆ ನೀವು ಕೆಲಸದ ಕಡೆಗೆ ತುಂಬಾನೇ ಗಮನಹರಿಸುವುದರಿಂದ ಅದರ ಫಲ ಕೂಡ ಪಡೆಯುತ್ತೀರಿ. ವ್ಯಾಪಾರಿಗಳು ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿರಲಿದೆ. ವಿವಾಹಿತರಿಗೂ ಈ ದಿನ ಉತ್ತಮವಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.

ಕುಂಭ ರಾಶಿ

ಈ ದಿನ ನಿಮ್ಮ ಎಲ್ಲಾ ಕೆಲಸವು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತದೆ. ಸ್ಥಾನಮಾನ ಮತ್ತು ಪ್ರತಿಷ್ಠೆಯೂ ಹೆಚ್ಚಾಗುವುದು. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ನಿಮ್ಮ ತಂದೆಯ ಆರೋಗ್ಯ ಚಿಂತೆ ನಿಮಗಿದ್ದರೆ ಆ ಚಿಂತೆ ದೂರಾಗಲಿದೆ, ಅವಾಹಿತರು ಈ ದಿನ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಆರೋಗ್ಯ ಚೆನ್ನಾಗಿರಲಿದೆ.

ಮೀನ ರಾಶಿ

ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಬಗ್ಗೆ ಸಂಪೂರ್ಣ ಗಮನ ಹರಿಸಬೇಕು , ಇನ್ನು ಹೆಚ್ಚು ಹಣ ಖರ್ಚು ಮಾಡಲು ಹೋಗದಿರಿ. ಎಲ್ಲಾ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ಪ್ರೇಮಿಗಳಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಬೇಡ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope Prediction for 8th July 2024: Dina Bhavishya for All Zodiac Signs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada:
Story first published: Sunday, July 7, 2024, 21:34 [IST]
X
Desktop Bottom Promotion