ದಿನ ಭವಿಷ್ಯ: ಜುಲೈ 6 ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ?

ಶುಭ ಶನಿವಾರ, ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ಈ ದಿನ ನೀವು ಕೆಲವೊಂದು ಪರಿಸ್ಥಿತಿಯಲ್ಲಿ ತಾಳ್ಮೆಯಿಂದಿರಬೇಕು ಹಾಗೂ ಧೈರ್ಯವಾಗಿ ಇರಬೇಕು. ವ್ಯಾಪಾರಿಗಳು ಬಯಸಿದ ಲಾಭ ಪಡೆಯಲು ಹೆಚ್ಚಿನ ಶ್ರಮ ಹಾಕಬೇಕು. ನಿಮ್ಮ ಯೋಜನೆಯಂತೆ ಕೆಲಸವನ್ನು ಮಾಡಿದರೆ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುವುದು. ಈ ದಿನ ನಿವು ಕೋಪ ನಿಯಂತ್ರಣದಲ್ಲಿಟ್ಟರೆ ತುಂಬಾನೇ ಒಳ್ಳೆಯದು. ನಿದ್ರಾಹೀನತೆ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

Dina Bhavishya

ವೃಷಭ ರಾಶಿ

ನೀವು ಬೇಡದ ಚಿಂತೆಯಿಂದ ಹೊರಬಂದು ಧನಾತ್ಮಕವಾಗಿರುವುದು ತುಂಬಾ ಒಳ್ಳೆಯದು. ವ್ಯಾಪಾರಿಗಳಿಗೆ ಈ ದಿನ ಕೆಲ ಸವಾಲು ಎದುರಾಗಬಹುದು, ನೀವು ಕೋಪ, ಅಸಮಧಾನದ ಬದಲಿಗೆ ತಾಳ್ಮೆಯಿಂದ ಬಗೆಹರಿಸಿ. ಮನೆಯ ವಾತಾವರಣ ಚೆನ್ನಾಗಿಲಿದೆ, ವಿವಾಹಿತರಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗದಿರಿ.

ಮಿಥುನ ರಾಶಿ

ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ದಿನ ನಿಮಗೆ ಉತ್ತಮವಲ್ಲ. ಈ ದಿನ ನೀವು ತುಂಬಾನೇ ತಾಳ್ಮೆಯಿಂದ ವರ್ತಿಸಿದಷ್ಟು ನಿಮಗೆ ಒಳ್ಳೆಯದು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಇನ್ನು ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.

ಕರ್ಕ ರಾಶಿ

ನೀವು ಕೆಲಸದ ಕಡೆಗೆ ಗಮನಹರಿಸಬೇಕು. ವೈಯಕ್ತಿಕ ಬದುಕಿನ ಸಮಸ್ಯೆ ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಆರೋಗ್ಯ ಚೆನ್ನಾಗಿರಲಿದೆ.
ವ್ಯಾಪಾರಿಗಳಿಗೆ ಈ ದಿನ ಲಾಭ ಗಳಿಸಲು ಸಾಧ್ಯವಾಗುವುದು. ಇನ್ನು ಕೆಲಸದ ಜಾಗದಲ್ಲಿ ನಿಮ್ಮ ವೈಯಕ್ತಿಕ ವಿಷಯಗಳನ್ನು ಹೇಳಿಕೊಳ್ಳದಿದ್ದರೆ ಒಳ್ಳೆಯದು. ಕುಟುಂಬದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿದೆ. ಈ ದಿನ ಗಡಿಬಿಡಿಯಲ್ಲಿ ಗಾಡಿ ಓಡಿಸುವುದು ಅಥವಾ ಕೆಲಸ ಮಾಡುವುದು ಮಾಡಬೇಡಿ.

ಸಿಂಹ ರಾಶಿ

ಈ ದಿನ ನಿಮಗೆ ಶುಭವಾಗಿದೆ. ನಿಮ್ಮ ಕುಟುಂಬದಲ್ಲಿ ಪರಿಸ್ಥಿತಿ ಉತ್ತಮವಾಗಲಿದೆ. ನೀವು ಅತಿಯಾದ ಆತ್ಮವಿಶ್ವಾಸದಿಂದ ದೂರವಿರಬೇಕು. ಇಲ್ಲದಿದ್ದರೆ ಮುಜುಗರ ಉಂಟಾಗುವುದು, ಕುಟುಂಬದಲ್ಲಿ ಪ್ರೀತಿ ಇರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆರೋಗ್ಯ ಸಮಸ್ಯೆಯಿದ್ದರೆ ನಿಯಮಿತ ಔಷಧ ಸೇವಿಸಬೇಕು.

ಕನ್ಯಾ ರಾಶಿ

ಈ ದಿನ ಆರ್ಥಿಕವಾಗಿ ಉತ್ತಮವಾಗಿದೆ, ನೀವು ವ್ಯಾಪಾರಿ ಆಗಿದ್ದರೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಪಡೆಯಲು ಸಾಧ್ಯವಾಗುವುದು, ಕೆಲಸದ ಜಾಗದಲ್ಲಿಈ ದಿನ ನಿಮಗೆ ಶುಭವಾಗಿದೆ, ಕೆಲಸ ಕಾರ್ಯವನ್ನು ನೀವು ಊಹಿಸಿದಂತೆಯೇ ಪೂರ್ಣಗೊಳಿಸಲು ಸಾಧ್ಯವಾಗುವುದು. ವಿವಾಹಿತರಿಗೆ , ಪ್ರೇಮಿಗಳಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ.
ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಪರಿಹಾರ ಸಿಗಲಿದೆ.

ತುಲಾ ರಾಶಿ

ನೀವು ಹಿರಿಯರನ್ನು ಗೌರವಿಸುವುದು ಒಳ್ಳೆಯದು. ಹೆಚ್ಚುತ್ತಿರುವ ಒತ್ತಡದಿಂದಾಗಿ, ಸಣ್ಣ ಸಮಸ್ಯೆಯೂ ನಿಮಗೆ ದೊಡ್ಡದಾಗಿ ಕಾಣಬಹುದು, ಇನ್ನು ಕೆಲವು ಪ್ರಮುಖ ಡಾಕ್ಯೂಮೆಂಟ್‌ಗಳ ಹಾಳಾಗದಂತೆ ಜಾಗ್ರತೆವಹಿಸಿ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ, ಇನ್ನು ಕುಟುಂಬದಲ್ಲಿ ಸಮಧಾನ ನಷ್ಟವಾಗದಂತೆ ಜಾಗ್ರತೆವಹಿಸಿ. ವೈವಾಹಿಕ ಜೀವನದಲ್ಲಿ ಅಂತರ ಹೆಚ್ಚಾಗದಂತೆ ನೋಡಿಕೊಳ್ಳಿ, ಮಾನಸಿಕ ಒತ್ತಡ ಆರೋಗ್ಯದ ಮೇಲೂ ಪರಿಣಾಮ ಬೀರುವುದು.

ವೃಶ್ಚಿಕ ರಾಶಿ

ನೀವು ಅನಗ್ಯತ ವಿಷಯಗಳ ಕಡೆ ಗಮನ ನೀಡದೆ ನಿಮ್ಮ ಕೆಲಸ ಗಮನಿಸುವುದು ಒಳ್ಳೆಯದು. ವ್ಯಾಪಾರಿಗಳಿಗೆ ಈ ದಿನ ಧನಾತ್ಮಕವಾಗಿದೆ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ.
ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ, ನೀವು ಸಂಗಾತಿ ಮನಸ್ಸು ಅರಿಯಲು ಪ್ರಯತ್ನಿಸಿ. ನೀವು ಅರೋಗ್ಯಕ್ಕಾಗಿ ಪ್ರತಿದಿನ ವ್ಯಾಯಾದ ಕಡೆ ಗಮನ ಹರಿಸುವುದು ಒಳ್ಳೆಯದು.

ಧನು ರಾಶಿ

ಬೇಡದ ವಿಷಯಗಳ ಕಡೆಗೆ ಗಮನಹರಿಸಿದರೆ ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ನೀವು ಗಮನ ಹರಿಸಿ. ಇಂದು ನಿಮ್ಮ ಯಾವುದೇ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಬಹುದು. ವ್ಯಾಪಾರಿಗಳು ಈ ದಿನ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕಾಡಬಹುದು, ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡದಿರಿ.

ಮಕರ ರಾಶಿ

ಪರಿಸ್ಥಿತಿಗೆ ಅನುಗುಣವಾಗಿ ನಿಮ್ಮಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಿಸಿ. ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುವ ಗಪ್ಪು ಮಾಡದಿರಿ. ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಭಿನ್ನಾಭಿಪ್ರಾಯ ಕಡಿಮೆಯಾಗಲಿದೆ, ಆರೋಗ್ಯದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿದೆ.

ಕುಂಭ ರಾಶಿ

ನೀವು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸುವುದರಿಂದ ಕೆಲಸವು ಉತ್ತಮವಾಗಿ ಪೈರ್ಣಗೊಳ್ಳಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಕೋಪ ಮತ್ತು ಅಹಂಕಾರವು ನಿಮ್ಮ ಅಭಿವೃದ್ಧಗೆ ತಡೆಯಾಗಬಹುದು. ವೈವಾಹಿಕ ಜೊತೆಗೆ ಏನಾದರೂ ಭಿನ್ನಾಭಿಪ್ರಾಯವಿದ್ದರೆ ಮುಕ್ತವಾಗಿ ಮಾತನಾಡಿ. ಆರೋಗ್ಯ ಸಾಧಾರಣವಾಗಿರಲಿದೆ.

ಮೀನ ರಾಶಿ

ಈ ದಿನ ನೀವು ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಚಿಂತೆ ದೂರಾಗಲಿದೆ. ಆದಾಯ ಹೆಚ್ಚಾಗುವುದು, ಆದರೆ ಖರ್ಚು ನೋಡಿಕೊಂಡು ಮಾಡಿ. ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ. ಕುಟುಂಬದಲ್ಲಿ, ವೈವಾಹಿಕ ಜೀವನದಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯ ವಿಷಯದಲ್ಲ ಸ್ವಲ್ಪ ಗಮನಹರಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope Prediction for 6th July 2024: Dina Bhavishya for All Zodiac Signs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada:
Story first published: Friday, July 5, 2024, 20:59 [IST]
X
Desktop Bottom Promotion