ದಿನ ಭವಿಷ್ಯ ಜುಲೈ 3, ದ್ವಾದಶಿ ದಿನ ನಿಮ್ಮ ರಾಶಿಗೆ ಹೇಗಿರಲಿದೆ?

ಶುಭ ಬುಧವಾರ, ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ಈ ದಿನ ನಿಮಗೆ ಅನುಭವಿ ವ್ಯಕ್ತಿಗಳ ಮಾತು ಕಷ್ಟವನ್ನು ಗೆಲ್ಲುವ ಶಕ್ತಿ ನೀಡುತ್ತದೆ. ವ್ಯಾಪಾರಿಗಳು ತಮ್ಮ ವ್ಯವಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು.
ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.

Dina Bhavishya

ವೃಷಭ ರಾಶಿ

ಈ ದಿನದ ಆರಂಭ ತುಂಬಾ ಚೆನ್ನಾಗಿರಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಉತ್ತಮ ಅವಕಾಶಗಳನ್ನು ಪಡೆಯಬಹುದು. ವ್ಯಾಪಾರಿಗಳು ಅಪೇಕ್ಷಿತ ಲಾಭವನ್ನು ಸಾಧಿಸಬಹುದು. ಕೆಲಸ ಮಾಡುವ ರೀತಿಯಲ್ಲಿ ನೀವು ಯಾವುದೇ ಬದಲಾವಣೆಗಳನ್ನು ಮಾಡಿದ್ದರೆ, ನೀವು ಉತ್ತಮ ಫಲಿತಾಂಶಗಳನ್ನು ಕಾಣಬಹುದು.
ಕುಟುಂಬ ಜೀವನದಲ್ಲಿ ಸಂಬಂಧ ಚೆನ್ನಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ.

ಮಿಥುನ ರಾಶಿ

ಈ ದಿನ ನಿಮ್ಮ ಕೆಲಸ ಆರ್ಯಗಳಿಗೆ ಅನುಕೂಲಕರವಾಗಿದೆ. ವ್ಯಾಪಾರಿಗಳಿಗೆ ಇಂದಿನ ವ್ಯವಹಾರ ನಿರ್ಧಾರ ಭವಿಷ್ಯದಲ್ಲಿ ನಿಮಗೆ ಪ್ರಯೋಜನಕಾರಿಯಾಗಿದೆ. ಕೆಲಸದ ಕಡೆಗೆ ನಿರ್ಲಕ್ಷ್ಯ ಬೇಡ. ವಿವಾಹಿತರ ವೈವಾಹಿಕ ಜೀವನ ಚೆನ್ನಾಗಿರಲಿದೆ. ಗ್ಯಾಸ್, ಅಸಿಡಿಟಿ ಮುಂತಾದ ಆರೋಗ್ಯ ಸಮಸ್ಯೆಗಳಿರಬಹುದು.

ಕರ್ಕ ರಾಶಿ

ಈ ದಿನ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ನಿಮ್ಮ ಮನಸ್ಸಿನಲ್ಲಿ ನಕರಾತ್ಮಕ ಭಾವನೆ ಇರಬಹುದು, ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಬೇಡಿ.
ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿರುತ್ತದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ನಿಮ್ಮ ಪ್ರಯತ್ನ ಚುರುಕುಗೊಳಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಸಿಂಹ ರಾಶಿ

ಈ ದಿನ ನಿಮಗೆ ಶುಭವಾಗಿದೆ. ಭವಿಷ್ಯಕ್ಕೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಮಾಡಲು ದಿನವು ಅನುಕೂಲಕರವಾಗಿದೆ. ವ್ಯಾಪಾರಿಗಳು ನಿಮ್ಮ ಶ್ರಮಕ್ಕೆ ತಕ್ಕ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ದಿನ ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ವೈವಾಹಿಕ ಜೀವನದಲ್ಲಿನ ತಪ್ಪು ಕಲ್ಪನೆ ದೂರಾಗಲಿದೆ.
ಬಿಡುವಿಲ್ಲದ ಕೆಲಸ ಆಯಾಸ ಉಂಟು ಮಾಡಬಹುದು.

ಕನ್ಯಾ ರಾಶಿ

ನಿಮ್ಮ ನಡವಳಿಕೆಯಲ್ಲಿ ನೀವು ಬದಲಾವಣೆ ಮಾಡಿಕೊಳ್ಳಿ, ಕೋಪ ನಿಯಂತ್ರಿಸಿ, ಕುಟುಂಬದಲ್ಲಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ವ್ಯಾಪಾರಿಗಳಿಗೆ ಕೆಲ ಸವಾಲುಗಳು ಎದುರಾಗಬಹುದು. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ವಿವಾಹಿತರಿಗೆ ಈ ದಿನ ರೊಮ್ಯಾಂಟಿಕ್ ಆಗಿರಲಿದೆ. ಆರೋಗ್ಯ ಸಮಸ್ಯೆಗಳಿರಬಹುದು.

ತುಲಾ ರಾಶಿ

ಕೆಲಸದಲ್ಲಿ ನಿರೀಕ್ಷೆ ಮಾಡಿದಷ್ಟು ಫಲ ಸಿಗದೆ ನಿರಾಸೆ ಉಮಟಾಗಬಹುದು. ಆದರೆ ನೀವು ನಿಮ್ಮ ಪ್ರಯತ್ನಗಳನ್ನು ಮುಂದುವರಿಸಬೇಕು. ಆಸ್ತಿ ಸಂಬಂಧಿತ ಕೆಲಸ ಮಾಡುವವರು ಜಾಗರೂಕರಾಗಿರಬೇಕು ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ಕೆಲಸ ಬದಲಾವಣೆಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಕೋಪ ನಿಯಂತ್ರಿಸಿ, ಬೆನ್ನು ಅಥವಾ ಭುಜಗಳಲ್ಲಿ ನೋವು ಇರಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಶುಭವಾಗಿದೆ. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿದೆ. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ಆರೋಗ್ಯದ ಬಗ್ಗೆ ಕಾಳಜಿಹಿಸಬೇಕು, ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಧನು ರಾಶಿ

ಮಿತಿ ಮೀರಿದ ಕೋಪವೇ ಸಮಸ್ಯೆಗೆ ಕಾರಣವಾಗಬಹುದು. ಕೆಲಸದ ದೃಷ್ಟಿಯಿಂದ ಗ್ರಹಗಳ ಸ್ಥಾನವು ನಿಮಗೆ ಅನುಕೂಲಕರವಲ್ಲ. ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಉಂಟಾಗಬಹುದು. ಕೆಲಸದಲ್ಲಿ ನಿರ್ಲಕ್ಷ್ಯ ತೋರಿಸಬೇಡಿ, ನಿಮ್ಮ ಪ್ರಗತಿಗೆ ಸಮಸ್ಯೆ ಉಂಟಾಗಬಹುದು. ಕುಟುಂಬ ಜೀವನದಲ್ಲಿ ನೀವು ಹಿರಿಯರ ಮಾತುಗಳನ್ನು ಕೇಳಬೇಕು. ಅಲ್ಲದೆ ನಿಮ್ಮ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಬೇಡ್ವೆ ಬೇಡ.

ಮಕರ ರಾಶಿ

ನಿಮ್ಮ ಸಂಪೂರ್ಣ ಗಮನವು ನಿಮ್ಮ ಕೆಲಸದ ಮೇಲೆ ಇದ್ದರೆ ಒಳ್ಳೆಯದು, ನಿಮ್ಮ ಶ್ರಮಕ್ಕೆ ಖಂಡಿತ ಯಶಸ್ಸು ಸಿಗುತ್ತದೆ. ವ್ಯಾಪಾರಿಗಳಿಗೆ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ ಸಿಗಲಿದೆ. ಚಿಕ್ಕ ವಿಷಯವನ್ನು ನಿರ್ಲಕ್ಷ್ಯ ಮಾಡಿ, ಅದನ್ನು ಮನಸ್ಸಿಗೆ ತೆಗೆದುಕೋಳ್ಳಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಗಂಟಲಿನ ಸೋಂಕು ಇರಬಹುದು.

ಕುಂಭ ರಾಶಿ

ಈ ದಿನ ನಿಮಗೆ ತುಂಬಾ ಶುಭವಾಗಿದೆ. ಇಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮನೆಯ ಹಿರಿಯರ ಅಭಿಪ್ರಾಯ ಕೇಳಿ. ವ್ಯಾಪಾರಿಗಳು ಈ ದಿನ ಉತ್ತಮ ಫಲ ನೀಡಲಿದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ಈ ದಿನ ಎಣ್ಣೆ ಪದಾರ್ಥಗಳನ್ನು ತಿನ್ನಬೇಡಿ.

ಮೀನ ರಾಶಿ

ಕುಟುಂಬದ ಸದಸ್ಯರೊಂದಿಗಿನ ನಿಮ್ಮ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಆರ್ಥಿಕ ಸಮಸ್ಯೆ ಇರಲಿದೆ. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿರಲಿದೆ.
ಕೆಲಸದಲ್ಲಿ ತಪ್ಪು ಉಂಟಾಗದಂತೆ ಜಾಗ್ರತೆವಹಿಸಿ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಈ ದಿನ ಮಹಿಳೆಯರು ಹೆಚ್ಚು ಜಾಗ್ರತೆವಹಿಸಬೇಕು, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಬೇಡ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope Prediction for 3rd July 2024: Dina Bhavishya for All Zodiac Signs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada:
Story first published: Tuesday, July 2, 2024, 21:29 [IST]
X
Desktop Bottom Promotion