ದಿನ ಭವಿಷ್ಯ: ಜೂನ್ 29, ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ?

ಶುಭ ಶನಿವಾರ, ದ್ವಾದಶ ರಾಶಿಗಳ ರಾಶಿಫಲ....

ಮೇಷ ರಾಶಿ

ಈ ದಿನ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳು ಅಪೇಕ್ಷಿತ ಲಾಭ ಪಡೆಯುತ್ತೀರಿ. ಈ ದಿನ ನೀವು ವಿಸೇಷ ವ್ಯಕ್ತಿಯನ್ನು ಭೇಟಿಯಾಗಲು ಸಾಧ್ಯವಿದೆ. ಅವರಿಂದ ಮಾರ್ಗದರ್ಶನ ಪಡೆಯುತ್ತೀರಿ. ಆರ್ಥಿಕ ಸಮಸ್ಯೆ ಇರಲ್ಲ, ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಈಗಾಗಲೇ ಆರೋಗ್ಯ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ.

Dina Bhavishya
ವೃಷಭ ರಾಶಿ

ಈ ದಿನ ಆರ್ಥಿಕವಾಗಿ ತೊಂದರೆಯಿಲ್ಲ, ಆದರೆ ಹಣಕಾಸಿನ ವಹಿವಾಟುಗಳನ್ನು ಬಹಳ ಆಲೋಚಿಸಿ ಮಾಡಬೇಕಾಗುತ್ತದೆ. ಮಧ್ಯಾಹ್ನದ ನಂತರದ ಸಮಯವು ನಿಮಗೆ ಉತ್ತಮವಾಗಿರುತ್ತದೆ. ಈ ದಿನ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಈ ದಿನ ಅತಿಯಾದ ಆತ್ಮವಿಶ್ವಾಸವನ್ನು ತಪ್ಪಿಸಿ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.

ಮಿಥುನ ರಾಶಿ

ಅತಿಯಾದ ಖರ್ಚಿನಿಂದಾಗಿ ಹಣದ ಚಿಂತೆ ಹೆಚ್ಚಾಗಬಹುದು. ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿದರೆ ಒಳ್ಳೆಯದು. ಉದ್ಯಮಿಗಳು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಮನೆಯಲ್ಲಿ ಉತ್ತಮ ವಾತಾವರಣ ಇರಲಿದೆ. ನೀವು ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಇನ್ನು ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ಕರ್ಕ ರಾಶಿ

ಈ ದಿನ ನಿಮ್ಮ ಪ್ರೀತಿಪಾತ್ರರ ಮನಸ್ಸಿಗೆ ನೋವುಂಟು ಮಾಡದಿರಿ. ವ್ಯಾಪಾರಿಗಳಿಗೆ ಸವಾಲಿನ ದಿನ, ಆರ್ಥಿಕವಾಗಿಯೂ ಈ ಸಮಯ ಅಷ್ಟು ಒಳ್ಳೆಯದಲ್ಲ. ಕೆಲಸದಲ್ಲಿ ತಪ್ಪುಗಳಾಗದಂತೆ ಜಾಗ್ರತೆವಹಿಸಿ. ಸಂಗಾತಿ ಹಾಗೂ ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಮಾತಿನ ಮೂಲಕ ಬಗೆಹರಿಸಲು ಪ್ರಯತ್ನಿಸಿ, ಬಿಪಿ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಯಿದ್ದರೆ ಜಾಗ್ರತೆವಹಿಸಿ.

ಸಿಂಹ ರಾಶಿ

ಆದಾಯ ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನ ಮಾಡುವ ಪ್ರಯಾಣದಿಂದ ಉತ್ತಮ ಲಾಭ ಪಡೆಯುತ್ತೀರಿ. ಇನ್ನು ಆಸ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಬಗೆಹರಿಯಲಿದೆ.
ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಕಡೆಗೆ ಗಮನಹರಿಸಿ.

ಕನ್ಯಾ ರಾಶಿ

ಕೆಟ್ಟ ಆಲೋಚನೆ ಮನಸ್ಸಿನಿಂದ ದೂರವಿಡಿ, ಈ ರೀತಿಯ ಆಲೋಚನೆಗಳು ಒಂಟಿಯಾಗಿ ಕೂತಾಗ ಬರುತ್ತದೆ ಹಾಗಾಗಿ ನೀವು ಸ್ನೇಹಿತರ ಜೊತೆ ಸಮಯ ಕಳೆಯಿರಿ. ವ್ಯಾಪಾರಿಗಳಿಗೆ ಈ ದಿನ ಲಾಭ ಗಳಿಸಲು ಸಾಧ್ಯವಾಗುವುದು, ಕೆಲಸದ ಜಾಗದಲ್ಲಿ ಬೇರೆಯವರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ಕುಟುಂಬದ ಕಡೆಗೆ ಹೆಚ್ಚು ಗಮನಹರಿಸಿ, ಚಿಕ್ಕ ಸಮಸ್ಯೆ ಅಂತ ನಿರ್ಲಕ್ಷ್ಯ ಮಾಡಿದರೆ ಅದುವೇ ದೊಡ್ಡ ಸಮಸ್ಯೆಯಾಗುವುದು, ಅತಿಯಾದ ಮಾನಸಿಕ ಒತ್ತಡದಿಂದಾಗಿ ನಿದ್ರಾಹೀನತೆ ಸಮಸ್ಯೆವಿರಬಹುದು.

ತುಲಾ ರಾಶಿ

ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ನಿಮ್ಮ ಹಾಗೂ ಸಂಗಾತಿ ನಡುವೆ ಇರುವ ಭಿನ್ನಾಭಿಪ್ರಾಯ ದೂರಾಗಲಿದೆ, ಈ ದಿನ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ, ಮನೆಗೆ ಅತಿಥಿಗಳು ಬರಬಹುದು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಬೇಡ.

ವೃಶ್ಚಿಕ ರಾಶಿ

ನೀವು ಇತ್ತೀಚೆಗೆ ಕೆಲಸದಲ್ಲಿ ಏನಾದರೂ ಬದಲಾವಣೆ ಅಥವಾ ಹೊಸ ಕೆಲಸಕ್ಕೆ ಸೇರಿದ್ದರೆ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯಬಹುದು, ಕುಟುಂಬ ಜೀವನ ಚೆನ್ನಾಗಿರಲಿದೆ. ಸಂಗಾತಿ ಜೊತೆಗೆ ಯಾವುದೇ ಸುಳ್ಳು ಹೇಳಿದಿರಿ, ಇನ್ನು ಮನೆಯಲ್ಲಿ ಹಿರಿಯ ಸದಸ್ಯರಿದ್ದರೆ ಅವರ ಆರೋಗ್ಯದ ಕಡೆಗೆ ಗಮನಹರಿಸಿ.

ಧನು ರಾಶಿ

ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಆರ್ಥಿಕವಾಗಿಯೂ ಈ ದಿನ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಧನಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯ ಸಮಸ್ಯೆಯಿದ್ದರೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

ಮಕರ ರಾಶಿ

ಬೇಡದ ವಿಷಯಗಳಿಗೆ ಮತ್ತು ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಬೇಡಿ. ಸಂಬಂಧದಲ್ಲಿ ಸಮಸ್ಯೆ ಉಂಟಾಗದಿರಲು ನಿಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿ, ಕೋಪ ನಿಯಂತ್ರಿಸಿ. ಕಛೇರಿಯಲ್ಲಿ ನಡೆಯುತ್ತಿರುವ ಒಳ ರಾಜಕೀಯವು ನಿಮ್ಮನ್ನು ಕಾಡಬಹುದು. ನೀವು ಪ್ರೀತಿಯಲ್ಲಿದ್ದರೆ ಮನೆಯವರಿಗೆ ತಿಳಿಸಿ ಅವರ ಒಪ್ಪಿಗೆ ಪಡೆಯಬಹುದು.

ಕುಂಭ ರಾಶಿ

ಈ ಸಮಯವು ನಿಮಗೆ ಬಹಳ ಮುಖ್ಯವಾಗಿದೆ. ಹಾಗಾಗಿ ಬೇಡದ ವಿಚಾರಗಳತ್ತ ಗಮನಹರಿಸಬೇಡಿ. ವ್ಯಾಪಾರಿಗಳು ಈ ದಿನ ಯಾವುದೇ ರಿಸ್ಕ್‌ ತೆಗೆದುಕೊಳ್ಳಬೇಡಿ.
ಹೊಸ ಉಸ್ಯೋಗ ಹುಡುಕಲು ದಿನವು ಅನುಕೂಲಕರವಾಗಿರುತ್ತದೆ. ಕೋಪ ನಿಯಂತ್ರಿಸಿ, ಮನೆಯವರ ಮಾತನ್ನೂ ಆಲಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ತಲೆನೋವು ಮತ್ತು ಕಣ್ಣಿನ ಸಮಸ್ಯೆಗಳಿರಬಹುದು.

ಮೀನ ರಾಶಿ

ಬರಿ ಅದೃಷ್ಟ ನಂಬಿ ಕೂರಬೇಡಿ, ಈ ದಿನ ಉತ್ತಮ ಅವಕಾಶ ಸಿಗಲಿದೆ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾದರೆ ನಿಮ್ಮ ಎಲ್ಲಾ ತೊಂದರೆಗಳು ಪರಿಹಾರವಾಗುತ್ತವೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲಿದ್ದರೆ ಖಂಡಿತವಾಗಿಯೂ ನಿಮ್ಮ ಹಿರಿಯರ ಆಶೀರ್ವಾದ ಪಡೆಯಿರಿ. ಪ್ರೇಮಿಗಳಿಗೆ ಈ ದಿನ ಅನುಕೂಲಕರವಾಗಿದೆ. ಆರೋಗ್ಯಕ್ಕಾಗಿ ನಿದ್ದೆಗೆಡಬೇಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope Prediction for 29th June 2024: Dina Bhavishya for All Zodiac Signs

Explore Dina Bhavishya (ದಿನ ಭವಿಷ್ಯ) /Daily Horoscope Prediction For Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, And Pisces In Kannada:
Story first published: Friday, June 28, 2024, 23:32 [IST]
X
Desktop Bottom Promotion