Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಜುಲೈ 27, ಆಷಾಢ ಕೊನೆಯ ಶನಿವಾರದ ದಿನ ನಿಮಗೆ ಹೇಗಿದೆ?
ಜ್ಯೋತಿಷ್ಯ ಪ್ರಕಾರ ಜುಲೈ 27ರ ದ್ವಾದಶ ರಾಶಿಗಳ ರಾಶಿಫಲ:
ಮೇಷ ರಾಶಿ
ವೈಯಕ್ತಿಕ ವಿಷಯಗಳಿಂದ ಕೆಲಸ ಕಡೆ ಹೆಚ್ಚು ಗಮನಹರಿಸಬೇಡಿ. ಆದರೆ ನೀವು ಕೆಲಸದ ಕಡೆಗೂ ಗಮನಹರಿಸಿ, ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ, ಕುಟುಂಬ ಜೀವನ ಚೆನ್ನಾಗಿರಲಿದೆ, ಅರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡಬೇಡಿ.

ವೃಷಭ ರಾಶಿ
ಆರ್ಥಿಕ ಜೀವನ ಚೆನ್ನಾಗಿರಲಿದೆ, ವ್ಯಾಪಾರಿಗಳಿಗೆ ಉತ್ತಮವಾಗಿದೆ, ಧನ ಲಾಭವಾಗಿರಲಿದೆ, ಉದ್ಯೋಗಿಗಳಿಗೆ ಈ ಅವಧಿ ಉತ್ತಮವಾಗಿರಲಿದೆ. ಸಂಬಂಧದಲ್ಲಿ ಅಹಂ ತೋರಿಸಬೇಡಿ. ವಿವಾಹಿತರು ಬೇರೆ ಕಡೆ ಆಕರ್ಷಿತರಾಗಬಹುದು, ಆರೋಗ್ಯದ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ಈ ದಿನ ನಿಮ್ಮ ಮನಸ್ಸು ಸರಿ ಇರಲ್ಲ, ಕುಟುಂಬದಲ್ಲಿನ ಸಮಸ್ಯೆ ಮನಸ್ಸಿನ ಮೇಲೆ ತುಂಬಾನೇ ಪ್ರಭಾವ ಬೀರುವುದು. ಆರ್ಥಿಕವಾಗಿ ಜಾಗ್ರತೆವಹಿಸಿ, ವ್ಯಾಪಾರಿಗಳು ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಕರ್ಕ ರಾಶಿ
ಆರ್ಥಿಕವಾಗಿ ಈ ಅವಧಿ ಉತ್ತಮವಾಗಿರಲಿದೆ. ಬಾಕಿ ಇರುವ ಕೆಲಸ ಪೂರ್ಣಗೊಳಿಸಲು ಗಮನಹರಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ, ಇನ್ನು ಪ್ರೇಮಿಗಳು ಮದುವೆಯ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ. ಆರೋಗ್ಯ ಸಂಬಂಧಿ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಸಿಂಹ ರಾಶಿ
ನೀವು ಅನಗ್ಯತ ಚಿಂತೆ ಮಾಡದೆ ನಿಮ್ಮ ಸಾಮರ್ಥ್ಯದ ಕಡೆಗೆ ಗಮನಹರಿಸುವುದು ಒಳ್ಳೆಯದು. ಕೆಲಸದಲ್ಲಿ ಅಡೆತಡೆಗಳಿರಬಹುದು. ವ್ಯಾಪಾರಿಗಳು ಯಾವುದೇ ಹೂಡಿಕೆ ಮಾಡುವ ಮುನ್ನ ವಿಚಾರಿಸಿದರೆ ಒಳ್ಳೆಯದು. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.
ಕನ್ಯಾ ರಾಶಿ
ಈ ದಿನ ಕೆಲ ಸಮಸ್ಯೆಗಳಿರಬಹುದು ಆದರೆ ತಾಳ್ಮೆಯಿಂದ ಬಗೆಹರಿಸಲು ಪ್ರಯತ್ನಿಸಿ. ಅನಗ್ಯತ ವಾದಗಳನ್ನು ತಪ್ಪಿಸಿ. ವ್ಯವಹಾರವನ್ನು ವಿಸ್ತರಿಸಲು ಯೋಜನೆಗಳನ್ನು ಮಾಡಬಹುದು. ಅಗತ್ಯಕ್ಕಿಂತ ಹೆಚ್ಚು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ.
ತುಲಾ ರಾಶಿ
ನೀವು ಬೇರೆಯವರ ಸಹಾಯ ಮಾಡುವುದು ಸರಿ ಆದರೆ ನಿಮಗೆ ತೊಂದರೆ ಮಾಡಿಕೊಂಡು ಮಾಡಲು ಹೋಗಬೇಡಿ. ವ್ಯಾಪಾರಗಳಿಗೆ ಧನ ಲಾಭವಾಗಲಿದೆ.
ನೀವು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ನೀವು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಆರೋಗ್ಯ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಜಾಗರೂಕರಾಗಿರಬೇಕು. ವ್ಯಾಪಾರಿಗಳು ಬೇರೆಯವರ ಮಾತು ಕೇಳಿ ಹೂಡಿಕೆ ಮಾಡಬೇಡಿ. ಕುಟುಂಬದ ಕಡೆಗೆ ಗಮನಹರಿಸಿದರೆ ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ.
ಧನು ರಾಶಿ
ಬೇಡದ ವಿಚಾರಗಳತ್ತ ಗಮನಹರಿಸಬೇಡಿ. ಆರೋಗ್ಯದ ಕಡೆಗೆ ಗಮನಹರಿಸಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರೋಗ್ಯಕರ ಜೀವನ ಶೈಲಿ ಕಡೆಗೆ ಗಮನಹರಿಸಿದರೆ ಒಳ್ಳೆಯದು.
ಮಕರ ರಾಶಿ
ವ್ಯಾಪಾರಿಗಳು ಚಿಕ್ಕ ಲಾಭ ಅಂತ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಿಗಳು ತುಂಬಾ ಜಾಗ್ರತೆವಹಿಸಿ, ಇಲ್ಲದಿದ್ದರೆ ನಷ್ಟ ಉಂಟಾಗುವುದು. ಸಂಬಂಧದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲು ಬಿಡಬೇಡಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು.
ಕುಂಭ ರಾಶಿ
ಕೆಲಸಕ್ಕೆ ಸಂಬಂಧಿಸಿದಂತೆ ಈ ದಿನ ಉತ್ತಮವಾಗಿದೆ. ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತದೆ, ವ್ಯಾಪಾರಿಗಳಿಗೆ ದನ ಲಾಭವಾಗಲಿದೆ. ನೀವು ಕೋಪದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಈ ದಿನ ಆರೋಗ್ಯ ಚೆನ್ನಾಗಿರಲಿದೆ.
ಮೀನ ರಾಶಿ
ಈ ದಿನ ವೃತ್ತಿ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಬೇಕು. ನಿಮ್ಮ ಕೋಪವೇ ಶತ್ರುವಾಗಬಹುದು, ಜಾಗ್ರತೆವಹಿಸಿ. ಕೆಲಸ ಹುಡುಕುತ್ತಿದ್ದರೆ ಕೆಲಸ ಸಿಗಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಸಮಸ್ಯೆಗಳಿದ್ದರೆ ನಿರ್ಲಕ್ಷ್ಯ ಬೇಡ, ಸೂಕ್ತ ವೈದ್ಯರನ್ನು ಭೇಟಿಯಾಗಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications