Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇ 17 ದಿನ ಭವಿಷ್ಯ : ಶುಕ್ರವಾರ ಈ ದಿನ 12 ರಾಶಿಗಳಿಗೆ ಹೇಗಿರಲಿದೆ?
ಮೇ 17 ಶುಕ್ರವಾರ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಇಂದು ಕಚೇರಿಯಲ್ಲಿ ನಿಮಗೆ ವಹಿಸಿದ ಕೆಲಸದ ಕಡೆಗೆ ತುಂಬಾನೇ ಗಮನಹರಿಸಬೇಕು. ಕೌಟುಂಬಿಕ ಜೀವನದಲ್ಲಿ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಕುಟುಂಬ ಸದಸ್ಯರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಈ ದಿನ ನಿಮಗೆ ಮಿಶ್ರಫಲ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಆ ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಬೇಕು.

ವೃಷಭ ರಾಶಿ
ಇಂದು ನೀವು ವಾಹನವನ್ನು ತುಂಬಾ ಎಚ್ಚರಿಕೆಯಿಂದ ಚಲಾಯಿಸಬೇಕು. ಇನ್ನು ಹಣ ಸಾಲ ಪಡೆದಿದ್ದರೆ ಅದನ್ನು ಮರಳಿ ಪಡೆಯುತ್ತೀರಿ. ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ವ್ಯಾಪಾರಸ್ಥರಿಗೆ ಈ ದಿನ ಸಾಮಾನ್ಯ ದಿನವಾಗಿರುತ್ತದೆ. ಮಕ್ಕಳ ಹಠಮಾರಿ ಸ್ವಭಾವವು ನಿಮ್ಮ ಚಿಂತೆಗೆ ಕಾರಣವಾಗಿರಬಹುದು.
ಮಿಥುನ ರಾಶಿ
ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗುವುದು. ನೀವು ಹಿಂದೆ ಮಾಡಿದ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ವೈವಾಹಿಕ ಜೀವನ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಖರ್ಚು ಮಿತಿಯಲ್ಲಿ ಮಾಡಿ.
ಕರ್ಕ ರಾಶಿ
ಹಣದ ವಿಷಯದಲ್ಲಿ ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ. ಅಲ್ಲದೆ ನೀವು ಚಿಕ್ಕ ಹೂಡಿಕೆಯ ಬಗ್ಗೆ ಆಲೋಚಿಸಬಹುದು. ವ್ಯಾಪಾರಿಗಳು ಗ್ರಾಹಕರ ಜೊತೆಗೆ ವಾಗ್ವಾದ ಮಾಡಬೇಡಿ. ನಿಮಗೆ ಗ್ಯಾಸ್, ಅಸಿಡಿಟಿ, ಅಜೀರ್ಣ ಇತ್ಯಾದಿ ಸಮಸ್ಯೆಗಳಿರಬಹುದು.
ಸಿಂಹ ರಾಶಿ
ಇತರರ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬೇಡಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳನ್ನು ಹೆಚ್ಚು ನಂಬಬೇಡಿ, ನಿಮ್ಮ ಕೆಲಸ ನೀವೇ ಮಾಡಿ. ನಿಮ್ಮ ಕುಟುಂಬದ ಕೆಲವು ಸದಸ್ಯರೊಂದಿಗೆ ನೀವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ನೀವು ಶಾಂತಿಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ನಿಮ್ಮ ಭಾಗವನ್ನು ಪ್ರಸ್ತುತಪಡಿಸಲು ಪ್ರಯತ್ನಿಸಿದರೆ ಅದು ಉತ್ತಮವಾಗಿರುತ್ತದೆ. ಬಿಪಿ ಸಮಸ್ಯೆ ಇರುವವರು ಆರೋಗ್ಯದ ಕಡೆಗೆ ಗಮನಹರಿಸಬೇಕು.
ಕನ್ಯಾ ರಾಶಿ
ಉದ್ಯೋಗಿಗಳಿಗೆ ಈ ಸಮಯ ಬಹಳ ಮುಖ್ಯವಾಗಿದೆ. ಈ ದಿನ ನೀವು ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯಲು ಸಾಧ್ಯವಾಗುವುದು. ಈ ದಿನ ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ದಿನ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.
ತುಲಾ ರಾಶಿ
ಉದ್ಯೋಗಿಗಳಿಗೆ, ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ಸಂಗಾತಿಯೊಂದಿಗಿನ ಸಂಬಂಧ ಚೆನ್ನಾಗಿರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶೀಘ್ರದಲ್ಲಿಯೇ ನಿಮ್ಮ ಸಾಲ ತೀರಿಸಲು ಸಾಧ್ಯವಾಗುವುದು. ನಿಮಗೆ ಯಕೃತ್ತಿನ ಸಂಬಂಧಿತ ಸಮಸ್ಯೆಗಳಿದ್ದರೆ, ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ವೃಶ್ಚಿಕ ರಾಶಿ
ಚಿಕ್ಕ-ಪುಟ್ಟ ವಿಷಯಗಳನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ನೀವು ಹಣ ಸಂಪಾದಿಸಲು ಉತ್ತಮ ಅವಕಾಶವನ್ನು ಪಡೆಯಬಹುದು.
ವ್ಯಾಪಾರಿಗಳಿಗೆ ಈ ದಿನ ವ್ಯವಹಾರ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ.
ಧನು ರಾಶಿ
ಇಂದು ಕೆಲಸದಲ್ಲಿ ಹೇಳುವುದಾದರೆ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಲಿದೆ. ವ್ಯವಹಾರದಲ್ಲಿ ತೊಡಗಿರುವ ಜನರು ಇತರರಿಂದ ದಾರಿತಪ್ಪಿಸದಂತೆ ಸಲಹೆ ನೀಡಲಾಗುವುದು. ವೈವಾಹಿಕ ಜೀವನದ ಕಡೆಗೆ ಗಮನಹರಿಸಿ. ಈ ದಿನ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಅಜಾಗರೂಕತೆಯಿಂದ ಆರೋಗ್ಯ ಹದಗೆಡಬಹುದು ಜಾಗ್ರತೆವಹಿಸಿ.
ಮಕರ ರಾಶಿ
ಆರೋಗ್ಯ ಸಮಸ್ಯೆ ಇರುವವರು ಈ ದಿನ ಜಾಗ್ರತೆವಹಿಸಬೇಕು. ನಿಮ್ಮ ಒರಟು ವರ್ತನೆ ನಿಮ್ಮ ಮನೆಯವರ ಮನಸ್ಸಿಗೆ ನೋವುಂಟಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದು ಬಗೆಹರಿಯಲಿದೆ. ಹಣದ ವಿಷಯದಲ್ಲಿ ದಿನವು ಸಾಮಾನ್ಯವಾಗಿರುತ್ತದೆ.
ಕುಂಭ ರಾಶಿ
ಕೆಲಸದಲ್ಲಿ ಅತೃಪ್ತಿ ಇರಬಹುದು. ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ವ್ಯಾಪಾರಿಗಳಿಗೆ ಈ ದಿನ ತುಂಬಾ ಒಳ್ಳೆಯದಿದೆ. ಈ ದಿನ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿದೆ, ನಿವು ಪ್ರಯತ್ನಪಟ್ಟರೆ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ಮೀನ ರಾಶಿ
ವ್ಯಾಪಾರಿಗಳು ಇಂದು ಜಾಗರೂಕರಾಗಿರಲು ಸಲಹೆ ನೀಡಲಾಗುವುದು. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರೊಂದಿಗೆ ಸಂವಹನ ನಡೆಸುವಾಗ ನಿಮ್ಮ ಪದಗಳನ್ನು ಚಿಂತನಶೀಲವಾಗಿ ಬಳಸಿ. ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications