Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮೇ 13 ದಿನ ಭವಿಷ್ಯ, ಸೋಮವಾರ: 12 ರಾಶಿಗಳಲ್ಲಿ ಯಾವೆಲ್ಲಾ ರಾಶಿಗಳು ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು
ಮೇ 13, ಸೋಮವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ:
ಮೇಷ ರಾಶಿ
ಈ ದಿನ ನೀವು ವೈವಾಹಿಕ ಜೀವನದ ಕಡೆಗೆ ತುಂಬಾ ಗಮನಹರಿಸಬೇಕು. ನೀವಾಡುವ ಮಾತು ಹಾಗೂ ನಿಮ್ಮ ವರ್ತನೆ ಬಗ್ಗೆ ಈ ದಿನ ಗಮನಹರಿಸಿ, ಇಲ್ಲದಿದ್ದರೆ ನಿಮ್ಮ ಹಾಗೂ ಸಂಗಾತಿಯ ನಡುವಿನ ಸಂಬಂಧ ಹಾಳಾಗುವುದು. ಹಣದ ವಿಷಯದಲ್ಲಿ ಈ ದಿನ ತುಂಬಾ ಚೆನ್ನಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ಲಾಭದಾಯಕವಾಗಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಬಗ್ಗೆ ಗಮನಹರಿಸಿ.

ವೃಷಭ ರಾಶಿ
ಇಂದು ನೀವು ಆರೋಗ್ಯದ ಕಡೆಗೆ ಗಮನಹರಿಸಿ, ತುಂಬಾ ಆಯಾಸವಾಗಿದ್ದರೆ ವಿಶ್ರಾಂತಿ ಕಡೆಗೆ ಗಮನಹರಿಸಬೇಕು. ಈ ದಿನ ನೀವು ತುಂಬಾ ಜಾಗ್ರತೆವಹಿಸಿ. ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬಹುದು. ಉದ್ಯೋಗಿಗಳು ಕೆಲಸದ ಕಡೆಗೆ ಗಮನಹರಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಪ್ರೀತಿ ತುಂಬಾ ಚೆನ್ನಾಗಿರಲಿದೆ.
ಮಿಥುನ ರಾಶಿ
ಈ ದಿನ ನಿಮಗೆ ಹಣದ ಕಾರಣದಿಂದಾಗಿ ಕೆಲವು ತೊಂದರೆಗಳು ಇರಬಹುದು. ಕೆಲಸದ ಕಡೆಗೆ ತುಂಬಾನೇ ಗಮನಹರಿಸಿ. ವ್ಯಾಪಾರಿಗಳಿಗೂ ಈ ದಿನ ಉತ್ತಮವಾಗಿರಲಿದೆ. ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆ ಕಂಡು ಬರಲಿದೆ.
ಕರ್ಕ ರಾಶಿ
ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರೂ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸದ ಜಾಗದಲ್ಲಿ ಯಾವುದೇ ವಾಗ್ವಾದಕ್ಕೆ ಹೋಗದಿರಿ. ವ್ಯಾಪಾರಿಗಳು ಬಯಸಿದ ಫಲಿತಾಂಶ ಸಿಗದಿದ್ದರೆ ತಾಳ್ಮೆಯಿಂದಿರಿ. ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ ಮಾಡಬೇಡಿ.
ಸಿಂಹ ರಾಶಿ
ನೀವು ನಿಮ್ಮ ಕುಟುಂಬ ಜೀವನದ ಕಡೆಗೆ ಗಮನಹರಿಸಿ. ಹಣದ ವಿಷಯದಲ್ಲಿ ಇಂದು ನಿಮಗೆ ಸರಾಸರಿ ದಿನವಾಗಲಿದೆ. ಈ ಹಣ ಹೆಚ್ಚು ಖರ್ಚು ಮಾಡಲು ಹೋಗದಿರಿ. ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅದರಲ್ಲಿ ಸುಧಾರಣೆ ಕಂಡು ಬರಲಿದೆ.
ಕನ್ಯಾ ರಾಶಿ
ಈ ದಿನ ನಿಮ್ಮ ಮನಸ್ಥಿತಿ ಅಷ್ಟು ಸರಿಯಿರಲ್ಲ, ಮನೆಯ ವಿಷಯ ನಿಮ್ಮ ಬೇಸರಕ್ಕೆ ಕಾರಣವಾಗಿರಬಹುದು. ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಶೀಘ್ರದಲ್ಲಿಯೇ ಎಲ್ಲವೂ ಸರಿಯಾಗಲಿದೆ. ಇನ್ನು ಹಣದ ನಿರ್ಧಾರದಲ್ಲಿ ಯಾವುದೇ ಆತುರಪಡಬೇಡಿ. ಕೆಲಸದಲ್ಲಿ ಮಿಶ್ರ ಫಲಿತಾಂಶ. ಆರೋಗ್ಯದ ಕಡೆಗೆ ಗಮನಹರಿಸಿ.
ತುಲಾ ರಾಶಿ
ಉದ್ಯೋಗಿಗಳಿಗೆ ಈ ದಿನ ಕೆಲಸದ ಒತ್ತಡ ಹೆಚ್ಚರಿಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಇಂದು ನಿಮಗೆ ಸರಾಸರಿ ದಿನವಾಗಲಿದೆ. ಆದರೆ ನೀವು ಆರೋಗ್ಯದ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ವೈವಾಹಿಕ ಜೀವನ ಚೆನ್ನಾಗಿರಲಿದೆ, ಪ್ರೇಮಿಗಳಿಗೂ ಈ ದಿನ ವಿಶೇಷವಾಗಿರಲಿದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಈ ದಿನ ಖರ್ಚು ಹೆಚ್ಚಿರಲಿದೆ. ಉದ್ಯಮಿಗಳಿಗೆ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗಬಹುದು. ಆರೋಗ್ಯದ ದೃಷ್ಟಿಯಿಂದ ಕೂಡ ಈ ದಿನ ಉತ್ತಮವಾಗಿರಲಿದೆ.
ಧನು ರಾಶಿ
ವೈವಾಹಿಕ ಜೀವನ ಚೆನ್ನಾಗಿರಲುದೆ. ಹಣದ ವಿಷಯದಲ್ಲಿ ಈ ದಿನ ಜಾಗ್ರತೆವಹಿಸಿ. ಈ ಸಮಯದಲ್ಲಿ ನೀವು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಉದ್ಯೋಗ ಅಥವಾ ವ್ಯವಹಾರವಾಗಿರಲಿ ಈ ದಿನ ತುಂಬಾ ಚೆನ್ನಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಮಕರ ರಾಶಿ
ಈ ದಿನ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು. ಹಣದ ಸ್ಥಿತಿ ಚೆನ್ನಾಗಿರಲಿದೆ, ಆದರೆ ಮಿತಿಯಾದ ಖರ್ಚು ನಿಮಗೆ ಒಳ್ಳೆಯದು. ವ್ಯಾಪಾರಿಗಳು ಈ ದಿನ ಯಾವುದೇ ದೂರದ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಗುವುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಲು ಯೋಚಿಸುತ್ತಿದ್ದರೆ ಇದರ ಬಗ್ಗೆ ಮತ್ತೊಮ್ಮೆ ಆಲೋಚಿಸಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ಇಂದು ನೀವು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವ್ಯಾಪಾರಿಗಳಿಗೆ ಈ ದಿನ ತುಂಬಾ ಚೆನ್ನಾಗಿರಲಿದೆ. ನೀವು ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ.
ಮೀನ ರಾಶಿ
ಇಂದು ನೀವು ಕುಟುಂಬ ಸದಸ್ಯರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ, ಇಲ್ಲದಿದ್ದರೆ ನಿಮ್ಮ ಈ ಅಭ್ಯಾಸವು ಇಂದು ನಿಮಗೆ ದುಬಾರಿಯಾಗಬಹುದು. ವ್ಯಾಪಾರಸ್ಥರು ತಮ್ಮ ಪ್ರತಿಸ್ಪರ್ಧಿಗಳ ಬಗ್ಗೆ ಜಾಗರೂಕರಾಗಿರಬೇಕು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











