Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ದಿನ ಭವಿಷ್ಯ: ಜುಲೈ 13ರ ಶನಿವಾರದಂದು ನಿಮ್ಮ ಭವಿಷ್ಯ ಏನಾಗಿರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಧನಾತ್ಮಕವಾಗಿರುತ್ತದೆ. ನಿಮ್ಮ ಗುರಿ ತಲುಪುವ ಕಡೆಗೆ ನಿಮ್ಮ ಗಮನವಿರಲಿ. ವ್ಯಾಪಾರದಲ್ಲಿ ಉತ್ತಮವಾದ ವೃದ್ಧಿ ಹಾಗೂ ಬಹಳ ದೊಡ್ಡ ಸವಾಲುಗಳು ಬಹುಬೇಗ ನಿವಾರಣೆಯಾಗಲಿದೆ. ನಿಮ್ಮ ಸೃಜನಶೀಲತೆ ನಿಮಗೆ ಉತ್ತಮ ಯಶಸ್ಸನ್ನು ತರುತ್ತದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ, ನಿಮಗೆ ದೊಡ್ಡ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬರಬಹುದು.

ವೃಷಭ ರಾಶಿ
ಈ ದಿನದ ಆರಂಭದಲ್ಲಿ ನಿಮಗೆ ಉತ್ತಮ ಧನಲಾಭವಾಗಬಹುದು. ನೀವು ಸಕಾರಾತ್ಮಕವಾಗಿ ಕೆಲಸ ಮಾಡಿರುವ ಫಲವಾಗಿ ಅದರ ಪ್ರತಿಫಲವೂ ನಿಮಗೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಇದು ಶುಭ ಕಾಲ. ಬಹುಕಾಲದ ಹಣದ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ. ಇನ್ನೊಂದೆಡೆ ನಿಮ್ಮ ಆರೋಗ್ಯ ಸುಧಾರಿಸಲಿದೆ.
ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಇಂದು ಬಹಳ ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯ ಮತ್ತಷ್ಟು ಸುಧಾರಿಸಲಿದೆ. ಆದರೆ ನಿಮ್ಮ ಮನೆಯಲ್ಲಿ ಹಿರಿಯರು ಇದ್ದರೆ ಅವರ ಆರೋಗ್ಯದ ಬಗ್ಗೆ ಗಮನವಿಡಿ. ದೂರ ಪ್ರಯಾಣ ಸಂಭವವಿದೆ. ಅದರೆ ಇದು ನಿಮ್ಮ ಸಂತೋಷಕ್ಕೆ ಕಾರಣವಾಗಲಿದೆ.
ಕರ್ಕ ರಾಶಿ
ನೀವು ಇತರರ ಮಾತಿನ ಮೇಲೆ ನಿರ್ಧಾರ ತೆಗೆದುಕೊಳ್ಳುವುದು ಅಪಾಯಕ್ಕೆ ದಾರಿಯಾಗಬಹುದು. ಅಲ್ಲದೆ ನಿಮ್ಮ ಮುಂದೆ ನಡೆಯಬಹುದಾದ ದೊಡ್ಡ ಶುಭ ಕಾರ್ಯಕ್ಕೆ ನೀವು ಮುನ್ನುಡಿ ಬರೆಯಬಹುದು. ಸ್ವಂತ ಹಣದಲ್ಲಿ ದೊಡ್ಡ ವಸ್ತು ಖರೀದಿಗೆ ಮುಂದಾಗುತ್ತೀರಿ. ಇಂದು ನೀವು ಸಾಲ ನೀಡುವುದನ್ನು ಆದಷ್ಟು ತಪ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಇಂದು ಅತ್ಯುತ್ತಮ ದಿನವಾಗಿರಲಿದೆ. ನಿಮಗೆ ಬರಬೇಕಾದ ಹಣ ವಾಪಾಸು ಬರಲಿದೆ. ಬಹುಕಾಲದಿಂದ ಬಗೆಹರಿಯದೆ ಇದ್ದ ಸಮಸ್ಯೆ ಬಗೆಹರಿಯಲಿದೆ. ಕೌಟುಂಬಿಕ ಕಲಹ ನಿವಾರಣೆ. ಮನೆಯ ಹಿರಿಯರ ಗೌರವಿಸಿ, ಇದು ನಿಮ್ಮ ದಿನವನ್ನು ಸುಂದರವಾಗಿಸಲಿದೆ.
ಕನ್ಯಾ ರಾಶಿ
ಯಾವುದೇ ಬಾಕಿಯಿರುವ ಕೆಲಸವು ಪೂರ್ಣಗೊಳ್ಳುತ್ತದೆ ಮತ್ತು ನಿಮಗೆ ಹೆಚ್ಚಿನ ಪರಿಹಾರ ಸಿಗುತ್ತದೆ. ನಿಮ್ಮ ಕೆಲಸದ ಸಾಮರ್ಥ್ಯವನ್ನು ಸುಧಾರಿಸಲು, ನಿಮ್ಮ ದಿನಚರಿಯಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಇಂದು ಉತ್ತಮ ದಿನವಾಗಿರಲಿದೆ. ಶನಿ ದೇವರ ದರ್ಶನಕ್ಕೆ ಇಂದು ಒಳ್ಳೆಯ ದಿನ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ತುಲಾ ರಾಶಿ
ಈ ದಿನ ಕುಟುಂಬ ಜೀವನದಲ್ಲಿ ಕೆಲ ಭಿನ್ನಾಭಿಪ್ರಾಯಗಳಿರಬಹುದು. ಜೊತೆಗೆ ಆರ್ಥಿಕ ನಷ್ಟ ಕೂಡ ನಿಮ್ಮ ಚಿಂತೆ ಹೆಚ್ಚಿಸುವುದು. ವ್ಯಾಪಾರಿಗಳುತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡದಂತೆ ಸಲಹೆ ನೀಡಲಾಗುವುದು. ನೀವು ಯಾವುದೇ ವಿವಾದಾತ್ಮಕ ವಿಷಯವನ್ನು ಚರ್ಚಿಸುವುದನ್ನು ತಪ್ಪಿಸಿದರೆ ಉತ್ತಮ. ನೀವು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ವೃಶ್ಚಿಕ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ. ಆದರೆ ನೀವಯ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡುವ ತಪ್ಪು ಮಾಡಬೇಡಿ. ನಿಮ್ಮ ಆದಾಯ ಹೆಚ್ಚಾಗಬಹುದು. ಆರೋಗ್ಯ ಚೆನ್ನಾಗಿರಲಿದೆ. ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆಯಿರಿ.
ಧನು ರಾಶಿ
ವ್ಯಾಪಾರಿಗಳು ಹೆಚ್ಚಿನ ಲಾಭವನ್ನು ಪಡೆಯಲು ಮೋಸದ ಮಾರ್ಗ ಹಿಡಿದರೆ ನಷ್ಟವನ್ನು ಅನುಭವಿಸಬಹುದು. ವೈವಾಹಿಕ ಜೀವನ ಚೆನ್ನಾಗಿರಲಿದೆ, ವೃತ್ತಿ ಬದುಕಿನಲ್ಲಿ ನೀವು ಊಹಿಸಿದಂತೆಯೇ ಫಲ ಸಿಗಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಪಂಚೇಂದ್ರಿಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು.
ಮಕರ ರಾಶಿ
ವ್ಯಾಪಾರಿಗಳು ಈ ದಿನ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಉದ್ಯೋಗಿಗಳಿಗೆ ಈ ದಿನ ಕೆಲಸದ ಒತ್ತಡವಿರಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಇಂದು ನೀವು ಕೆಲವು ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಕುಂಭ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರಲಿದೆ. ನೀವು ಉಳಿತಾಯದ ಕಡೆಗೆ ಗಮನಹರಿಸಿ. ಕುಟುಂಬ ಜೀವನದಲ್ಲಿ ಶಾಂತಿ ಇರಲಿದೆ. ಕುಟುಂಬದಲ್ಲಿ ಇಂದು ಶಾಂತಿ ನೆಲೆಸಲಿದೆ. ದೂರ ಪ್ರಯಾಣಕ್ಕೆ ದಿನ ನಿಗದಿ ಮಾಡುವ ಸಂದರ್ಭದಲ್ಲಿ ಜಾಗೃತೆ ವಹಿಸಿ. ವಾಹನ ಮಾಲೀಕರು ಹೆಚ್ಚು ಜಾಗೃತೆಯಿಂದಿರಿ.
ಮೀನ ರಾಶಿ
ಕೆಲಸದ ಒತ್ತಡ ಹೆಚ್ಚಾಗಲಿದೆ, ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ನಿಮ್ಮ ಆದಾಯವನ್ನು ಗಮನದಲ್ಲಿಟ್ಟುಕೊಂಡು ಮಾತ್ರ ಖರ್ಚು ಮಾಡುವುದು ಉತ್ತಮ. ಹೃದಯ ಸಂಬಂಧಿ ಸಮಸ್ಯೆ ಇರುವವರು ಹೆಚ್ಚು ಕಾಳಜಿವಹಿಸಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
