Latest Updates
-
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಗೆ ಸುಸ್ತಾದ್ರಾ? ಈ ಪಾನೀಯಗಳಿದ್ದರೆ ಸಾಕು, ಬೇಸಿಗೆಯಲ್ಲೂ ಇರುತ್ತೀರಿ ಫ್ರೆಶ್! -
ಮೆಟ್ ಗಾಲಾ 2026: ಕರಣ್ ಜೋಹರ್ ಎಂಟ್ರಿಯಿಂದ ಫ್ಯಾಷನ್ ಲೋಕದಲ್ಲಿ ಸಂಚಲನ, ಭಾರತದಲ್ಲಿ ವೀಕ್ಷಿಸುವುದು ಹೇಗೆ?
ದಿನ ಭವಿಷ್ಯ: ಜುಲೈ 10: ಶುಭ ದಿನ, ಈ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
ಶುಭ ದಿನ, ಜುಲೈ 10ರ ದ್ವಾದಶ ರಾಶಿಗಳ ರಾಶಿಫಲ....
ಮೇಷ ರಾಶಿ
ನೀವು ನಿಮ್ಮ ಪ್ರಗತಿ ಕಡೆಗೆ ಗಮನಹರಿಸಿ, ಕೆಟ್ಟ ಸಂಘದಿಂದ ದೂರವಿರಿ. ಪ್ರತಿದಿನ ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮಗೆ ತುಂಬಾ ಪ್ರಯೋಜನಕಾರಿ. ಇನ್ನು ಯಾವುದಾದರೂ ಹೊಸ ಕೆಲಸ ಮಾಡುವುದಾದರೆ ನೀವು ಅನುಭವಿಗಳ ಮಾರ್ಗದರ್ಶನ ಪಡೆಯುತ್ತೀರಿ, ಕೆಲಸದಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ಪ್ರತಿಕೂಲ ಸಂದರ್ಭದಲ್ಲಿ ಸಂಗಾತಿಯ ಬೆಂಬಲ ಇರಲಿದೆ. ಆರೋಗ್ಯದ ಕಡೆಯೂ ಗಮನಹರಿಸಿ.

ವೃಷಭ ರಾಶಿ
ವೈವಾಹಿಕ ಬದುಕಿನಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ. ವೃತ್ತಿ ಬದುಕು ತುಂಬಾ ಚೆನ್ನಾಗಿರಲಿದೆ. ನೀವು ದೊಡ್ಡ ಉದ್ಯಮಿಯಾಗಿದ್ದರೆ ನೀವು ಉದ್ಯೋಗಿಗಳ ಜೊತೆಗೆ ಕೋಪದಿಂದ ವರ್ತಿಸಬೇಡಿ. ಉದ್ಯೋಗಿಗಳು ಯಾವುದೇ ಕೆಲಸವನ್ನು ಅಪೂರ್ಣವಾಗಿ ಬಿಡಬೇಡಿ. ತಂದೆಯ ಮಾತುಗಳನ್ನು ನಿರ್ಲಕ್ಷಿಸಬೇಡಿ. ಕುಟುಂಬ ಬದುಕು ಚೆನ್ನಾಗಿರಲಿದೆ. ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು.
ಮಿಥುನ ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಲಾಭ ದೊರೆಯಲಿದೆ. ನೀವು ನಿಮ್ಮ ಕಠಿಣ ಪರಿಶ್ರಮ ಮುಂದುವರೆಸಿ, ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಶೀಘ್ರದಲ್ಲೇ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಕುಟುಂಬದಲ್ಲಿ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗಿನ ಸಮಸ್ಯೆ ಬಗೆಹರಿಸಲು ಬುದ್ಧಿವಂತಿಕೆಯಿಂದ ವರ್ತಿಸಿ, ಜಗಳ ಮಾಡಬೇಡಿ. ಆರೋಗ್ಯ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ಈ ದಿನ ಆರ್ಥಿಕವಾಗಿ ಒಳ್ಳೆಯದಿದೆ, ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ವ್ಯಾಪಾರಿಗಳು ನೀವು ಯಾವುದಾದರು ಹೊಸ ಕೆಲಸ ಪ್ರಾರಂಭಿಸುವ ಮೊದಲು, ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ ಇಲ್ಲದಿದ್ದರೆ ಅದು ಕಷ್ಟವಾಗಬಹುದು. ಕೆಲಸದ ಒತ್ತಡ ಅಧಿಕವಿರಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಅಲರ್ಜಿ ಅಥವಾ ಸೋಂಕು ಉಂಟಾಗಬಹುದು.
ಸಿಂಹ ರಾಶಿ
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಶಾಂತವಾಗಿರಿ , ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಾದರೆ ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಿ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುತ್ತವೆ , ಆರ್ಥಿಕವಾಗಿ ಜಾಗ್ರತೆವಹಿಸಿ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ದಿನ ನಿಮಗೆ ಉತ್ತಮವಾಗಿದೆ. ಕುಟುಂಬಲ್ಲಿ ಸಮಸ್ಯೆ ಕಂಡು ಬರುವುದು, ಕೋಪ ನಿಯಂತ್ರಿಸಿ.
ಕನ್ಯಾ ರಾಶಿ
ಈ ದಿನ ನೀವು ಅಷ್ಟೊಂದು ಅನುಕೂಲಕರವಲ್ಲ, ಆದರೆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತೀರಿ. ವ್ಯಾಪಾರಿಗಳ ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಉದ್ಯೋಗಿಗಳಿಗೆ ಈ ದಿನ ಉತ್ತಮವಾಗಿದೆ. ವೈವಾಹಿಕ ಬದುಕಿನಲ್ಲಿ ಒತ್ತಡವಿರಲಿದೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ತುಲಾ ರಾಶಿ
ನೀವು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿರಬಹುದು, ಕೆಲಸದ ಬಗ್ಗೆ ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯ ತೋರಬೇಡಿ. ಕುಟುಂಬದೊಂದಿಗೆ ಉತ್ತಮವಾಗಿ ಸಮಯ ಕಳೆಯುತ್ತೀರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆಗಳಿರಬಹುದು.
ವೃಶ್ಚಿಕ ರಾಶಿ
ನಿಮ್ಮ ವೃತ್ತಿಜೀವನದ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಈ ಅವಧಿ ಉತ್ತಮವಾಗಿದೆ, ನೀವು ಉತ್ತಮ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಮನೆಯಲ್ಲಿ ಧನಾತ್ಮಕ ವಾತಾವರಣ ಇರುತ್ತದೆ. ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ಪರಿಹಾರ ಕಂಡು ಬರುವುದು.
ಧನು ರಾಶಿ
ನೀವು ಅನಗ್ಯತ ಚಿಂತೆ ದೂರವಿಡಿ. ಯಾವುದೇ ಹೊಸ ವ್ಯಾಪಾರ ಚಟುವಟಿಕೆಯನ್ನು ಪ್ರಾರಂಭಿಸಲು ದಿನವು ಸೂಕ್ತವಲ್ಲ. ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಬದುಕು ತುಂಬಾ ಚೆನ್ನಾಗಿರಲಿದೆ, ಅಧಿಕ ರಕ್ತದೊತ್ತಡ ಇರುವವರು ಜಾಗರೂಕರಾಗಿರಬೇಕು.
ಮಕರ ರಾಶಿ
ಈ ದಿನ ನೀವು ಜಾಗ್ರತೆವಹಿಸಿ, ಯಾವುದೇ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ದೊಡ್ಡ ಹೂಡಿಕೆಗಳನ್ನು ಮಾಡಲು ಈ ಅವಧಿ ಅನುಕೂಲಕರವಲ್ಲ.
ಕುಟುಂಬದಲ್ಲಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಡಿ. ಸಂಬಂಧದಲ್ಲಿ ಏರಿಳಿತಗಳಿರುತ್ತವೆ. ನೀವು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
ಆರೋಗ್ಯದ ಕಡೆಗೆ ಗಮನಹರಿಸಬೇಕು.
ಕುಂಭ ರಾಶಿ
ನೀವು ಕೆಲಸದ ಕಡೆಗೆ ಗಮನಹರಿಸಬೇಕು, ಅಪೂರ್ಣವಾಗಿದ್ದ ಕೆಲಸ ಪೂರ್ಣಗೊಳಿಸಲು ಗಮನಹರಿಸಿ. ನೀವು ವೃತ್ತಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ಇದು ಸರಿಯಾದ ಸಮಯ. ನೀವು ಕೋಪ ನಿಯಂತ್ರಿಸಿದರೆ ಮನೆಯಲ್ಲಿ ನೆಮ್ಮದಿ ಇರಲಿದೆ,ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಅಜೀರ್ಣ, ಅಸಿಡಿಟಿ ಸಮಸ್ಯೆವಿರಬಹುದು.
ಮೀನ ರಾಶಿ
ಈ ದಿ ಯಾವುದೇ ಸಂದರ್ಭದಲ್ಲಿ ಕೋಪದಿಂದ ವರ್ತಿಸಬೇಡಿ, ಆರ್ಥಿಕವಾಗಿ ಉತ್ತಮವಾಗಿದೆ, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ನೀವು ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸಿದರೆ, ನಿಮಗೆ ಉತ್ತಮ ಅವಕಾಶ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. ಆರೋಗ್ಯ ಉತ್ತಮವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications