Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿನ ಭವಿಷ್ಯ: ಅಕ್ಟೋಬರ್ 31..ಈ ದೀಪಾವಳಿ ಯಾರಿಗೆಲ್ಲಾ ಶುಭ ತರಲಿದೆ?
ಈ ದಿನ ಯಾವ ರಾಶಿಯವರಿಗೆ ಶುಭವಾಗಲಿದೆ, ಈ ದೀಪಾವಳಿ ಯಾರಿಗೆಲ್ಲಾ ಶುಭ ತರಲಿದೆ ಎಂಬುದನ್ನು ನೋಡಿ.
ಮೇಷ ರಾಶಿ
ಈ ದಿನ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸ್ಥಿರತೆ ಇರಲಿದೆ. ಮನಸ್ಸಿಗೆ ಶಾಂತಿ ಇರುವ ದಿನ ಇದಾಗಿರಲಿದೆ. ಯಾವುದೇ ಒತ್ತಡಕ್ಕೆ ನೀವು ಒಳಗಾಗುವುದಿಲ್ಲ. ದಿನದ ಅಂತ್ಯದಲ್ಲಿ ನೀವು ಮಾಡಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಿ, ಹೆಚ್ಚು ವಿಶ್ರಾಂತಿ ಪಡೆಯುವತ್ತ ಗಮನವಿಡಿ. ಬಹುದಿನಗಳಿಂದ ಉಳಿದಿದ್ದ ಕೆಲಸಗಳನ್ನು ಮುಂದೂಡಬೇಡಿ.

ವೃಷಭ ರಾಶಿ
ಈ ರಾಶಿಯವರಿಗೆ ಕುಟುಂಬದ ಜೊತೆಗೆ ತೊಡಗಿಸಿಕೊಂಡರೆ ಹಾಗೂ ಅವರೊಂದಿಗೆ ಹಣಕಾಸಿನ ವಿವರಗಳನ್ನು ಚರ್ಚಿಸಿಕೊಂಡರೆ ಹಣದ ಉಳಿತಾಯದಲ್ಲಿ ಅಗತ್ಯ ಒಳನೋಟ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ಧಿ ಕಾಣಲಿದ್ದೀರಿ. ನಿಮ್ಮಿಂದ ಒಳ್ಳೆಯ ಕಾರ್ಯಗಳಿಗೆ ಹಣ ವೆಚ್ಚವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಮಿಥುನ ರಾಶಿ
ಈ ದಿನ ನಿಮಗೆ ಶುಭ ತರುವಂತಹ ದಿನವಾಗಿರಲಿದೆ. ಆರ್ಥಿಕ ಸ್ಥಿತಿ ಸುಧಾರಣೆಗೆ ಸಾಕ್ಷಿಯಾಗಲಿದ್ದೀರಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ. ಈ ದಿನ ನಿವು ಕೋಪ ನಿಯಂತ್ರಣದಲ್ಲಿಟ್ಟರೆ ತುಂಬಾನೇ ಒಳ್ಳೆಯದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಎಚ್ಚರಿಕೆ ಇಂದ ಇರಿ.
ಕರ್ಕ ರಾಶಿ
ವ್ಯಾಪಾರಿಗಳಿಗೆ ಈ ದಿನ ಕೆಲ ಸವಾಲು ಎದುರಾಗಬಹುದು. ಪ್ರೇಮಿಗಳಿಗೆ, ವಿವಾಹಿತರಿಗೆ ಈ ದಿನ ಶುಭತರಲಿದೆ. ಹೊಸ ವಸ್ತು ಖರೀದಿಯ ನಿಮ್ಮ ಕನಸಿಗೆ ಇಂದು ಹೊಸ ಬಲ ಬರಲಿದೆ. ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರಮುಖ ಮೈಲಿಗಲ್ಲೊಂದನ್ನು ಸಾಧಿಸುವ ಕ್ಷಣವು ಎದುರಾಗಿದೆ. ಮನೆಯಲ್ಲಿ ಹಿರಿಯರ ಆರೋಗ್ಯದ ಮೇಲೆ ನೀವು ಗಮನವಿಡಿ.
ಸಿಂಹ ರಾಶಿ
ಈ ದಿನ ನಿಮ್ಮ ಬದುಕಿನಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ದಿನವಾಗಿರಲಿದೆ. ಯಾವುದೇ ಕೆಲಸ ಮಾಡುವಾಗ ಗಮನವಿಟ್ಟು ತಾಳ್ಮೆಯಿಂದ ಮಾಡುವುದು ಉತ್ತಮ. ವಾಹನ ಚಾಲಕರು ಎಚ್ಚರಿಕೆ ವಹಿಸಿ. ದಿನದ ಅಂತ್ಯದಲ್ಲಿ ಆರ್ಥಿಕ ಲಾಭದ ನಿರೀಕ್ಷೆ ಇದೆ. ಆಸ್ತಿ, ಕೋರ್ಟ್ ವ್ಯಾಜ್ಯಗಳ ಕುರಿತು ಒಳ್ಳೆಯ ಸಂದೇಶ ಕೇಳುವಿರಿ.
ಕನ್ಯಾ ರಾಶಿ
ನಿಮ್ಮ ಕುಟುಂಬದಲ್ಲಿ ಪರಿಸ್ಥಿತಿ ಉತ್ತಮವಾಗಲಿದೆ. ಕುಟುಂಬದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿದೆ. ವ್ಯವಹಾರದಲ್ಲಿರುವ ಜನರು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ನಿರುದ್ಯೋಗಿಗಳು ಒಳ್ಳೆಯ ಉದ್ಯೋಗವನ್ನು ಪಡೆಯಲಿದ್ದಾರೆ. ಸಹೋದರ ಮತ್ತು ಸಹೋದರಿಯ ನಡುವಿನ ಕಲಹವು ಕೊನೆಗೊಳ್ಳಲಿದೆ. ಕೆಟ್ಟವರ ಸಹವಾಸದಿಂದ ನೀವು ಸಮಸ್ಯೆಯನ್ನು ಎದುರಿಸಬಹುದು.
ತುಲಾ ರಾಶಿ
ನೀವು ಅನಗ್ಯತ ವಿಷಯಗಳ ಕಡೆ ಗಮನ ನೀಡದೆ ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನವಿಡಿ. ಸಣ್ಣ ವ್ಯಾಪಾರಿಗಳಿಗೆ ಇಂದು ಒಳ್ಳೆಯ ದಿನವಾಗಲಿದೆ. ಗೃಹಿಣಿಯರಿಗೆ ಲಾಭದಾಯಕ ದಿನವಾಗಲಿದೆ. ಮನೆಯಲ್ಲಿ ಪೂಜೆ, ಪ್ರವಚನಗಳನ್ನು ಆಯೋಜಿಸುವ ಸಾಧ್ಯತೆ ಇದ್ದು, ಅತಿಥಿಗಳನ್ನು ಸತ್ಕರಿಸಲಿದ್ದೀರಿ. ಪರಿಶ್ರಮ ಮತ್ತು ಪ್ರಯತ್ನದಿಂದ ಕೆಲಸದಲ್ಲಿ ಯಶಸ್ಸು ಕಾಣುವಿರಿ.
ವೃಶ್ಚಿಕ ರಾಶಿ
ಈ ದಿನ ನಿಮಗೆ ಅತ್ಯುತ್ತಮ ಸಂಪತ್ತು, ಶುಭ ತರುವ ದಿನವಾಗಿರಲಿದೆ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. ಇಂದು ನಿಮ್ಮ ದಿನ ಆಧ್ಯಾತ್ಮಿಕವಾಗಿ ಬದಲಾಗಲಿದೆ. ಕುಟುಂಬದಲ್ಲಿ ಉಂಟಾಗಿರುವ ಸಣ್ಣ ಪುಟ್ಟ ಮನಸ್ಥಾಪಗಳನ್ನು ಇಂದು ಬಗೆಹರಿಸಿಕೊಳ್ಳಿ. ಹಿರಿಯರಲ್ಲಿ ವಿನಯದಿಂದಿರಿ.
ಧನು ರಾಶಿ
ಇಂದು ನಿಮ್ಮ ಯಾವುದೇ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಬಹುದು. ವ್ಯಾಪಾರಿಗಳು ಈ ದಿನ ನಷ್ಟ ಉಂಟಾಗದಂತೆ ಜಾಗ್ರತೆವಹಿಸಿ. ನಿಮ್ಮ ಆದಾಯ ಹೆಚ್ಚಾದರು ಅದರಿಂದ ಮತ್ತಷ್ಟು ಖರ್ಚುಗಳಿಗೂ ದಾರಿಯಾಗಲಿದೆ. ವಯೋ ಸಹಜ ಸಮಸ್ಯೆಗಳಿಗೆ ಒಳಗಾಗಿರುವವರು ಇಂದು ಚೇತರಿಸಿಕೊಳ್ಳಲಿದ್ದಾರೆ.
ಮಕರ ರಾಶಿ
ಇಂದು ನಿಮಗೆ ಎಲ್ಲಾ ರೀತಿಯಿಂದಲೂ ಉತ್ತಮವಾಗಿದೆ, ನಿಮ್ಮ ದೈನಂದಿನ ಆದಾಯದಲ್ಲಿ ಹೆಚ್ಚಳ ಸಾಧಿಸುವುದಕ್ಕಾಗಿ ನೀವು ಹೊಸ ಮೂಲವನ್ನು ಪಡೆಯಲಿದ್ದೀರಿ. ಆರೋಗ್ಯದ ದೃಷ್ಟಿಯಿಂದ ದಿನವು ಉತ್ತಮವಾಗಿರುತ್ತದೆ. ಅವಿವಾಹಿತರು ಶುಭ ಸುದ್ದಿ ಕೇಳಲಿದ್ದೀರಿ.
ಕುಂಭ ರಾಶಿ
ಬಾಕಿ ಉಳಿದಿರುವ ಕೆಲಸಗಳನ್ನು ಇಂದು ಪೂರ್ಣ ಮಾಡಲಿದ್ದೀರಿ. ಒಟ್ಟಿಗೆ ನೀವು ಕುಟುಂಬದ ಯೋಗಕ್ಷೇಮಕ್ಕಾಗಿ ಶ್ರಮಿಸಲಿದ್ದೀರಿ. ನಿಮ್ಮ ವ್ಯವಹಾರದಲ್ಲಿ ನೀವು ಮಾಡಿರುವ ಪ್ರಯತ್ನಕ್ಕೆ ತಕ್ಕುದಾದ ಫಲ ದೊರೆಯಲಿದೆ. ನಿರುದ್ಯೋಗಿಗಳು ಶೀಘ್ರದಲ್ಲಿ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ. ವ್ಯವಹಾರಕ್ಕೆ ಸಂಬಂಧಿಸಿದ ಜನರ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮೀನ ರಾಶಿ
ಆದಾಯ ಹೆಚ್ಚಾಗುವ ಸಂಕೇತ ಸಿಗುವುದು ಆದರೆ ಖರ್ಚು ನೋಡಿಕೊಂಡು ಮಾಡಿ. ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ. ನಿಮ್ಮ ಯಾವುದೇ ಕೆಲಸವನ್ನುಪೂರ್ಣಗೊಳಿಸದೆ ಬಿಡಬೇಡಿ. ಹಣದ ಖರ್ಚು ಕೂಡ ಅಧಿಕವಿರಲಿದೆ. ಪ್ರಯಾಣಕ್ಕಾಗಿ ನೀವು ಮಾಡುವ ಖರ್ಚು ಸರಿಯಾಗಿ ವಿನಿಯೋಗವಾಗಲಿದೆ. ನಿಮ್ಮ ಸಹೋದರನ ವಿವಾಹದಲ್ಲಿ ಎದುರಾಗುವ ಸವಾಲುಗಳು ನಿವಾರಣೆಯಾಗಲಿವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications