ಅಕ್ಟೋಬರ್ 28ರ ರಾಶಿಫಲ ಹೆಚ್ಚಿನ ರಾಶಿಗಳಿಗೆ ತುಂಬಾ ಶುಭವಾಗಿದೆ

ಶುಭ ದಿನ,

ಈ ದಿನದ ರಾಶಿಫಲ ನೋಡೋಣ...

ಮೇಷ ರಾಶಿ

ಈ ದಿನ ಶುಭವಾಗಿದೆ,ಈ ದಿನ ಆರ್ಥಿಕವಾಗಿ ಯಾವುದೇ ತೊಂದರೆಯಿಲ್ಲ, ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಈ ದಿನ ಮನೆಯ ವಾತಾವರಣ ಚೆನ್ನಾಗಿರಲಿದೆ, ಕುಟುಂಬದಲ್ಲಿ ಪ್ರೀತಿ ಇರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 18
ಶುಭ ಸಮಯ: ಸಂಜೆ 4:20 ರಿಂದ 7 ರವರೆಗೆ

daily horoscope

ವೃಷಭ ರಾಶಿ

ಈ ದಿನ ನಿಮಗೆ ಶುಭವಾಗಿದೆ, ಕೆಲಸದಲ್ಲಿ ನೀವು ಅಂದುಕೊಂಡಂತೆ ಫಲಿತಾಂಶ ದೊರೆಯಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ವ್ಯಾಪಾರಿಗಳು ಈ ದಿನ ನಿರೀಕ್ಷೆ ಮಾಡದಂಥ ಲಾಭ ಗಳಿಸುತ್ತೀರಿ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 6
ಶುಭ ಸಮಯ: ಮಧ್ಯಾಹ್ನ 2 ರಿಂದ 4:30 ರವರೆಗೆ

ಮಿಥುನ ರಾಶಿ

ಈ ದಿನ ತುಂಬಾ ತಾಳ್ಮೆಯಿಂದಿರಬೇಕು. ಸಂಗಾತಿಯೊಂದಿಗೆ ಕೆಲ ಭಿನ್ನಾಭಿಪ್ರಾಯಗಳಿರಬಹುದು, ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ, ವ್ಯಾಪಾರಿಗಳು ಈ ದಿನ ತುಂಬಾ ಜಾಗ್ರತೆವಹಿಸಬೇಕು, ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಕುಟುಂಬದಲ್ಲಿ ಕೆಲ ನಿರ್ಧಾರಗಳನ್ನು ಆತುರದಿಂದ ತೆಗೆದುಕೊಳ್ಳಬೇಡಿ. ಆರೋಗ್ಯದಲ್ಲಿಯೂ ಏರಳಿತವಿರಬಹುದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಬೆಳಗ್ಗೆ 6:50 ರಿಂದ 9:20 ರವರೆಗೆ

ಕರ್ಕ ರಾಶಿ

ಕೆಲಸದಲ್ಲಿ ಈ ದಿನ ಚೆನ್ನಾಗಿರಲಿದೆ, ಆರ್ಥಿಕವಾಗಿಯೂ ಸಮಸ್ಯೆವಿರಲ್ಲ, ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು, ಅವರೊಂದಿಗೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಸರಿಯಾಗಲಿದೆ.
ವ್ಯಾಪಾರಿಗಳು ಈ ದಿನ ಹೂಡಿಕೆ ಸಂಬಂಧಿಸಿದಂತೆ ದೊಡ್ಡ ವ್ಯವಹಾರ ಮಾಡಬೇಡಿ. ಆರೋಗ್ಯ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಗಾಢ ಕೆಂಪು
ಅದೃಷ್ಟದ ಸಂಖ್ಯೆ: 21
ಶುಭ ಸಮಯ: ಸಂಜೆ 5:10 ರಿಂದ 8:10 ರವರೆಗೆ


ಸಿಂಹ ರಾಶಿ

ಈ ದಿನ ಅನಗ್ಯತ ವಾದ ತಪ್ಪಿಸಿ, ಇನ್ನು ಯಾವುದೇ ನಿರ್ಧಾರವಾಗಿರಲಿ ತಾಳ್ಮೆಯಿಂದ ತೆಗೆದುಕೊಳ್ಳಬೇಕು, ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ಅವರೊಂದಿಗಿನ ಸಂಬಂಧ ಕಾಪಾಡಿಕೊಳ್ಳಿ, ಚಿಕ್ಕ ವಿಷಯಕ್ಕೆ ಭಿನ್ನಾಭಿಪ್ರಾಯವಾಗದಂತೆ ಜಾಗ್ರತೆವಹಿಸಿ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 4
ಶುಭ ಸಮಯ: ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ

ಕನ್ಯಾ ರಾಶಿ

ಈ ದಿನ ಜಾಗ್ರತೆವಹಿಸಬೇಕು, ವೈಯಕ್ತಿಕ ಅಥವಾ ವೃತ್ತಿಪರ ಜೀವನ, ನೀವು ಪ್ರತಿಕೂಲ ಸಂದರ್ಭಗಳನ್ನು ಎದುರಿಸಬೇಕಾಗಬಹುದು. ಆರೋಗ್ಯದ ಕಡೆಗೆ ಗಮನಹರಿಸಿ, ನೀವು ಹಣದ ಬಗ್ಗೆ ಜಾಗ್ರತೆವಹಸಿ. ಉದ್ಯೋಗದ ದೃಷ್ಟಿಯಿಂದ ಈ ದಿನ ನಿಮಗೆ ಉತ್ತಮವಾಗಿರಲಿದೆ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಿಕ್ಕೆ ಒಳ್ಳೆಯ ಫಲ ಸಿಗಲಿದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಬೆಳಗ್ಗೆ 4:30 ರಿಂದ 8:50 ರವರೆಗೆ


ತುಲಾ ರಾಶಿ

ಕೆಲಸದ ದೃಷ್ಟಿಯಿಂದ ಈ ದಿನ ಉತ್ತಮವಲ್ಲ. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ವ್ಯಾಪಾರಿಗಳು ಹೊಸ ಹೂಡಿಕೆ ಮಾಡಬೇಡಿ, ಕೆಲಸದ ಕಡೆಗೆ ಗಮನಹರಿಸಬೇಕು. ವೈಯಕ್ತಿಕ ವಿಷಯಗಳಲ್ಲಿ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಕುಟುಂಬದಲ್ಲಿ ಕೆಲ ಮನಸ್ತಾಪವಿರಬಹುದು. ಆರೋಗ್ಯದ ಬಗ್ಗೆ ಹೇಳುವುದಾದರೆ ಆಯಾಸ ಹೆಚ್ಚಿರಲಿದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 15
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ

ವೃಶ್ಚಿಕ ರಾಶಿ

ನೀವು ನಿರುದ್ಯೋಗಿಗಳಾಗಿದ್ದರೆ ನಿಮ್ಮ ಕೆಲಸದ ಪ್ರಯತ್ನಕ್ಕೆ ಉತ್ತಮ ಫಲ ಸಿಗಲಿದೆ. ವ್ಯಾಪಾರಿಗಳಲ್ಲಿ ಉತ್ತಮ ಬೆಳವಣಿಎ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಆರೋಗ್ಯದಲ್ಲಿ ದೊಡ್ಡ ಸುಧಾರಣೆ ಕಂಡುಬರಲಿದೆ.ಆರ್ಥಿಕ ಲಾಭದ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಈ ದಿನ ಧಣಾತ್ಮಕವಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಬೆಳಿಗ್ಗೆ 6 ರಿಂದ 9 ರವರೆಗೆ

ಧನು ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ, ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯ ಕೂಡ ಚೆನ್ನಾಗಿರಲಿದೆ. ಈ ದಿನ ಹೊಸ ಹೂಡಿಕೆಗೆ ದಿನ ಉತ್ತಮವಾಗಿದೆ. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಒಟ್ಟಿನಲ್ಲಿ ಈ ದಿನ ನಿಮಗೆ ಶುಭವಾಗಿದೆ.
ಅದೃಷ್ಟದ ಬಣ್ಣ: ಬೆಳ್ಳಿ
ಅದೃಷ್ಟದ ಸಂಖ್ಯೆ: 7
ಶುಭ ಸಮಯ: ಮಧ್ಯಾಹ್ನ 1:30 ರಿಂದ 4:30 ರವರೆಗೆ

ಮಕರ ರಾಶಿ

ಈ ದಿನ ಚೆನ್ನಾಗಿರಲಿದೆ. ಆರ್ಥಿಕ ದೃಷ್ಟಿಯಿಂದ ಉತ್ತಮವಾಗಿರಲಿದೆ, ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಹಣಕಾಸಿನ ದೃಷ್ಟಿ ಚೆನ್ನಾಗಿರಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಸಂಜೆ 5:45 ರಿಂದ 7:05 ರವರೆಗೆ

ಕುಂಭ ರಾಶಿ

ಈ ದಿನ ಶುಭವಾಗಿದೆ, ಈ ದಿನ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ನೀವು ಪರಿಹಾರ ಪಡೆಯುತ್ತೀರಿ. ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಂಡು ಬರಲಿದೆ. ಕುಟುಂಬದಲ್ಲಿ ವಾತಾವರಣ ಉತ್ತಮವಾಗಿರಲಿದೆ.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ

ಮೀನ ರಾಶಿ

ಉದ್ಯಮಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಈ ದಿನ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಉದ್ಯೋಗದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳಿಗೆ ಈ ದಿನ ದಿನ ಚೆನ್ನಾಗಿರಲಿದೆ, ಆರೋಗ್ಯವು ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 32
ಶುಭ ಸಮಯ: ಸಂಜೆ 6 ರಿಂದ ರಾತ್ರಿ 8:30 ರವರೆಗೆ

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily horoscope October 28: Effect On 12 Zodiac Signs In Kannada

As per astrology Today's horoscope prediction given, This Monday most of zodiac get more fruitful result, have a look.
Story first published: Monday, October 28, 2024, 5:37 [IST]
X
Desktop Bottom Promotion