Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ ಪ್ರಕಾರ ಅಕ್ಟೋಬರ್ 25 ಈ ದಿನ ದ್ವಾದಶ ರಾಶಿಗಳಿಗೆ ಹೇಗಿದೆ?
ಜ್ಯೋತಿಷ್ಯ ಪ್ರಕಾರ ಈ ದಿನದ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಆರ್ಥಿಕವಾಗಿ ಸಮಸ್ಯೆ ಇರಲ್ಲ, ಆದರೆ ಕೆಲಸದಲ್ಲಿ ಒತ್ತಡವಿರಲಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತೀರಿ. ಆರೋಗ್ಯ ಕೂಡ ಚೆನ್ನಾಗಿರಲಿದೆ.
ಅದೃಷ್ಟದ ಬಣ್ಣ: ಕೆನೆ
ಅದೃಷ್ಟದ ಸಂಖ್ಯೆ: 9
ಶುಭ ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ

ವೃಷಭ ರಾಶಿ
ಕೆಲಸದಲ್ಲಿ ಈ ದಿನ ಅನುಕೂಲಕರ ಫಲಿತಾಂಶ ಪಡೆಯುತ್ತೀರಿ, ಆರ್ಥಿಕವಾಗಿಯೂ ಈ ದಿನ ಉತ್ತಮವಾಗಿರಲಿದೆ. ವ್ಯಾಪಾರಿಗಳು ಅಧಿಕ ಲಾಭ ಗಳಿಸಲು ಸಾಧ್ಯವಾಗುವುದು. ಕುಟುಂಬ ಜೀವನದಲ್ಲಿ ಹೊಂದಾಣಿಕೆ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ವಿಶ್ರಾಂತಿ ಕಡೆಗೆ ಹೆಚ್ಚಿನ ಗಮನಹರಿಸಿ
.ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 25
ಶುಭ ಸಮಯ: ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ
ಮಿಥುನ ರಾಶಿ
ಈ ದಿನ ನೀವು ಕೋಪನಿಯಂತ್ರಿಸಿದರೆ ಒಳ್ಳೆಯದು, ವಾದ ವಿವಾದಕ್ಕೆ ಹೋಗಬೇಡಿ. ವ್ಯವಹಾರದ ದೃಷ್ಟಿಯಿಂದ ದಿನವು ತುಂಬಾ ಲಾಭದಾಯಕವಾಗಿರುತ್ತದೆ. ಇದರಿಂದಾಗಿ ಇತ್ತೀಚಿನ ಯಾವುದೇ ನಷ್ಟವನ್ನು ಸರಿದೂಗಿಸಬಹುದು. ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದ ಬಗ್ಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 4
ಶುಭ ಸಮಯ: ಬೆಳಿಗ್ಗೆ 11:30 ರಿಂದ ಸಂಜೆ 4 ರವರೆಗೆ
ಕರ್ಕ ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ, ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಹೊರಗಿನವರು ಹೆಚ್ಚು ಹಸ್ತಕ್ಷೇಪ ಮಾಡಲು ಬಿಡದಿದ್ದರೆ ಉತ್ತಮ. ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿರಲಿದೆ. ಉದ್ಯೋಗಿಗಳಿಗೆ ಕೆಲಸದ ಕಡೆಗೆ ಹೆಚ್ಚು ಗಮನಹರಿಸಲು ಸಲಹೆ ನೀಡಲಾಗುವುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 12
ಶುಭ ಸಮಯ: ಸಂಜೆ 5 ರಿಂದ ರಾತ್ರಿ 8 ರವರೆಗೆ
ಸಿಂಹ ರಾಶಿ
ಈ ದಿನ ಕೆಲಸ ಕಾರ್ಯಗಳು ನೀವಂದುಕೊಂಡಂತೆಯೇ ಪೂರ್ಣಗೊಳ್ಳಲಿದೆ,ಆರ್ಥಿಕವಾಗಿ ನೋಡುವುದಾದರೆ ಬರಬೇಕಾಗಿರುವ ಹಣ ಕೈ ಸೇರಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ನೋಡುವುದಾದರೆ ತಲೆನೋವಿನ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ:42
ಶುಭ ಸಮಯ: ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ
ಕನ್ಯಾ ರಾಶಿ
ವ್ಯಾಪಾರಿಗಳಿಗೆ ಈ ದಿನ ಲಾಭ ಪಡೆಯಲು ಸಾಧ್ಯವಾಗುವುದು. ಕೆಲಸದ ಕಡೆಗೆ ಹೆಚ್ಚು ಗಮನಹರಿಸಿ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುವಿರಿ, ಇದರಿಂದ ಅವರು ಕೂಡ ಖುಷಿಯಾಗಿರುತ್ತಾರೆ. ಹಣಕಾಸಿನ ಬಗ್ಗೆ ಹೇಳುವುದಾದರೆ ಹೂಡಿಕೆಗೆ ಈ ದಿನ ಅಷ್ಟು ಸೂಕ್ತವಲ್ಲ. ಆರೋಗ್ಯದಲ್ಲಿಯೂ ಏರಳಿತವಿರಬಹುದು.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 5
ಶುಭ ಸಮಯ: ಸಂಜೆ 4:30 ರಿಂದ 7 ರವರೆಗೆ
ತುಲಾ ರಾಶಿ
ಸಂಬಂಧಗಳ ವಿಷಯದಲ್ಲಿ ದಿನವು ಉತ್ತಮವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿ ತುಂಬಾ ಚೆನ್ನಾಗಿರಲಿದೆ, ಕೆಲಸಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು.
ಯಾವುದೇ ಹಣಕಾಸಿನ ವ್ಯವಹಾರವನ್ನು ಅವಸರದಲ್ಲಿ ಮಾಡಬೇಡಿ ಇಲ್ಲದಿದ್ದರೆ ನಷ್ಟ ಸಂಭವಿಸಬಹುದು. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 23
ಶುಭ ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ
ವೃಶ್ಚಿಕ ರಾಶಿ
ಬೇಡದ ಚಿಂತೆಯಿಂದಾಗಿ ನಿಮ್ಮ ಪ್ರಮುಖ ಕಾರ್ಯಗಳ ಮೇಲೆ ಸರಿಯಾಗಿ ಗಮನಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಧನಾತ್ಮಕವಾಗಿ ಉಳಿಯಬೇಕು.ನೀವು ಹಿಂದೆ ಮಾಡಿದ ಕಠಿಣ ಪರಿಶ್ರಮದಿಂದ ಸೂಕ್ತ ಫಲಿತಾಂಶಗಳನ್ನು ಪಡೆಯಬಹುದು.ಹೊಸ ಕೆಲಸವನ್ನು ಪ್ರಾರಂಭಿಸಲು ಆತುರಪಡಬೇಡಿ.ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಜವಾಬ್ದಾರಿಗಳು ಹೆಚ್ಚಾಗಬಹುದು. ಇದರಿಂದ ಕೂಡ ಮಾನಸಿಕ ಒತ್ತಡ ಉಂಟಾಗುವುದು, ಇದು ವೈವಾಹಿಕ ಜೀವನ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 20
ಶುಭ ಸಮಯ: ಸಂಜೆ 4 ರಿಂದ ರಾತ್ರಿ 9 ರವರೆಗೆ
ಧನು ರಾಶಿ
ಈ ದಿನವು ಶುಭಕರವಾಗಿರುತ್ತದೆ. ಕಡಿಮೆ ಪ್ರಯತ್ನದಿಂದ ಉತ್ತಮ ಯಶಸ್ಸನ್ನು ಸಾಧಿಸಬಹುದು. ವ್ಯಾಪಾರಿಗಳಿಗೆ ಉತ್ತಮ ರೀತಿಯಲ್ಲಿ ಲಾಭ ದೊರೆಯಲಿದೆ. ಮನೆಯ ಜವಾಬ್ದಾರಿಗಳನ್ನು ಪೂರೈಸುವಲ್ಲಿ ನೀವು ಪ್ರೀತಿಪಾತ್ರರಿಂದ ಬೆಂಬಲವನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ನೋಡುವುದಾದರೆ ಮೈಕೈ ನೋವಿನ ಸಮಸ್ಯೆವಿರಬಹುದು.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 19
ಶುಭ ಸಮಯ: ಸಂಜೆ 5:30 ರಿಂದ ರಾತ್ರಿ 8:30 ರವರೆಗೆ
ಮಕರ ರಾಶಿ
ಬೇಡದ ಆಲೋಚನೆಯಿಂದ ದೂರವಿರಿ, ಕೆಲವು ಪ್ರಮುಖ ಕೆಲಸಗಳಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಇದರಿಂದ ರ್ಥಿಕ ನಷ್ಟ ಕೂಡ ಉಂಟಾಗಬಹುದು, ಹಾಗಾಗಿ ಕೆಲಸ ಕಾರ್ಯದಲ್ಲಿ ಹೆಚ್ಚು ಜಾಗ್ರತೆವಹಿಸಿ. ನಿಮ್ಮ ಹಾಗೂ ಸಂಗಾತಿ ನಡುಎ ಸಾಮರಸ್ಯವಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ನರಗಳಿಗೆ ಸಂಬಂಧಿಸಿದ ಸಮಸ್ಯೆ ಇರಬಹುದು.
ಅದೃಷ್ಟದ ಬಣ್ಣ: ಕಡು ಹಸಿರು
ಅದೃಷ್ಟದ ಸಂಖ್ಯೆ: 27
ಶುಭ ಸಮಯ: ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ
ಕುಂಭ ರಾಶಿ
ಈ ದಿನ ನಿಮಗೆ ಉತ್ತಮವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಸಂಗಾತಿಯೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ವ್ಯಾಪಾರಿಗಳು ಹಿಂದೆ ಮಾಡಿದ ಯಾವುದೇ ಹೂಡಿಕೆಯು ಅನುಕೂಲಕರ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಮಲಬದ್ಧತೆ, ಅಸಿಡಿಟಿ ಮುಂತಾದ ಸಮಸ್ಯೆಗಳಿರಬಹುದು.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 6
ಶುಭ ಸಮಯ: ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ
ಮೀನ ರಾಶಿ
ವ್ಯಾಪಾರಸ್ಥರಿಗೆ ಈ ದಿನ ಪ್ರಯೋಜನಕಾರಿಯಾಗಿದೆ, ಆರ್ಥಿಕ ಸ್ಥಿತಿಯು ಬಲವಾಗಿ ಉಳಿಯುತ್ತದೆ. ಹಣದ ಕೊರತೆಯಿಂದ ಯಾವುದೇ ಕೆಲಸ ಸ್ಥಗಿತಗೊಂಡರೆ ಪೂರ್ಣಗೊಳಿಸಬಹುದು. ನೀವು ಇತ್ತೀಚೆಗೆ ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಿದ್ದರೆ ಅದರ ಅನುಕೂಲಕರ ಫಲಿತಾಂಶ ಸಿಗಬಹುದು. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ ಆರೋಗ್ಯದ, ಆರೋಗ್ಯ ಸಮಸ್ಯೆ ನಿರ್ಲಕ್ಷ್ಯ
ಮಾಡಬೇಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 10
ಶುಭ ಸಮಯ: ಸಂಜೆ 4 ರಿಂದ ಸಂಜೆ 7 ರವರೆಗೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










