Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿಯ 9ನೇ ದಿನದಂದು ನಿಮ್ಮ ರಾಶಿಫಲ: ಯಾವ ರಾಶಿಯವರಿಗೆ ಶುಭ ನೋಡಿ
ವೈದಿಕಶಾಸ್ತ್ರದ ಪ್ರಕಾರ ನವರಾತ್ರಿ 9ನೇ ದಿನ ನಿಮ್ಮ ರಾಶಿಫಲ ಹೇಗಿದೆ?
ಮೇಷ ರಾಶಿ
ಆಯುಧಪೂಜೆಯ ವೇಳೆ ಈ ರಾಶಿಯ ಜನರಿಗೆ ಅತ್ಯುತ್ತಮ ರೀತಿಯಲ್ಲಿ ಕೆಲಸಗಳು ಅನುಕೂಲಕರಾಗಿ ಬದಲಾಗಲಿದೆ. ನೀವು ಸಹೋದರ ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತೀರಿ. ಅವರಿಂದಲೂ ಕೆಲವು ಒಳ್ಳೆಯ ಸುದ್ದಿಗಳು ಸಿಗಬಹುದು. ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಬೇಡ. ಈ ಹಬ್ಬದಲ್ಲಿ ನಿಮ್ಮ ಅದೃಷ್ಟ ಬದಲಾಗಬಹುದು. ದೇವಿಯ ಪೂಜೆ ಮಾಡಿ. ದೇವಿಯ ಮಂತ್ರ ಪಠಿಸಿ ದೇವಾಲಯ ಭೇಟಿ ಮಾಡಿ.

ವೃಷಭ ರಾಶಿ
ವೃಷಭ ರಾಶಿ ಜನರಿಗೆ ಈ ದಿನ ಅತ್ಯಂತ ಶುಭವಾಗಿರಲಿದೆ. ನಿಮ್ಮ ಹಲವು ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣವಾಗುವ ಸಮಯವಿದು. ಹಾಗೆ ಆರ್ಥಿಕ ಲಾಭ, ಸಂಪತ್ತು ವೃದ್ಧಿಯ ಸಾಧ್ಯತೆ ಇದೆ. ಹಾಗೆ ಆರೋಗ್ಯದಲ್ಲೂ ಸುಧಾರಣೆಯಾಗಲಿದೆ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಅನುಕೂಲಕರವಾಗಿದೆ.
ಮಿಥುನ ರಾಶಿ
ವ್ಯಾಪಾರಿಗಳು ದೊಡ್ಡ ಲಾಭದ ನಿರೀಕ್ಷೆ ಇದೆ. ಉದ್ಯೋಗಿಗಳಿಗೂ ಕೂಡ ಇದು ಒಳ್ಳೆಯ ದಿನವಾಗಿದೆ. ಈ ಹಬ್ಬದ ದಿನದಂದು ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ಹಾಗೆ ಸಾಲದ ವಿಚಾರವಾಗಿಯೂ ಎಚ್ಚರಿಕೆ ಇರಲಿ. ನಿಮ್ಮ ಖರ್ಚು ಮತ್ತು ಆದಾಯದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ನಿಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೆಚ್ಚು ಚಿಂತಿಸಬೇಡಿ. ಸೂಕ್ತ ಸಮಯ ಬಂದಾಗ ನಿಮ್ಮ ಸಮಸ್ಯೆ ಖಂಡಿತಾ ಪರಿಹಾರವಾಗುತ್ತದೆ. ಇನ್ನು ಕೆಲ ಕೆಲಸದಲ್ಲಿ ಅಡೆತಡೆ ಇರಬಹುದು, ಆದರೆ ನೀವು ಕೆಲಸದ ಕಡೆಗೆ ಗಮನಹರಿಸಿ. ದೂರ ಪ್ರಯಾಣ, ದೇವಾಲಯ ಭೇಟಿಯ ಸಾಧ್ಯತೆ ಇದೆ. ಆದರೆ ಕೆಲವೊಂದು ತಾತ್ಕಾಲಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಕೆಲಸದಲ್ಲಿ ಶ್ರದ್ಧೆ ಇಡಿ.
ಸಿಂಹ ರಾಶಿ
ನೀವು ಕೆಲಸದ ಸ್ಥಳದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ಇಂದು ನಿಮ್ಮ ದಿನ ಲಾಭದಾಯಕವಾಗಿ ಬದಲಾಗಲಿದೆ. ಹಳೆಯ ಸಾಲ ಮರುಪಾವತಿಯಾಗಲಿದೆ. ಹಾಗೆ ನಿಮ್ಮ ಕೌಟುಂಬಿಕ ಜೀವನದಲ್ಲಿ ಉತ್ತಮ ದಿನವಾಗಿರಲಿದೆ. ಯಾವುದೇ ಹಣಕಾಸಿನ ವ್ಯವಹಾರವನ್ನು ಎಚ್ಚರಿಕೆಯಿಂದ ಮಾಡಿ.
ಕನ್ಯಾ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸಾಮಾನ್ಯ ದಿನಕ್ಕಿಂತಲೂ ಚೆನ್ನಾಗಿರಲಿದೆ. ಹಣದ ಕೊರತೆಯಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ಹಿರಿಯರ ಕುರಿತು ಕಾಳಿ ವಹಿಸಿ. ದೂರ ಪ್ರಯಾಣದ ಕೆಲಸದಲ್ಲಿ ಜಾಗೃತೆ ವಹಿಸಿ. ಪರಿಶ್ರಮದ ಕೆಲಸಕ್ಕೆ ಫಲ ಸಿಗಲಿದೆ.
ತುಲಾ ರಾಶಿ
ಹಣದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಸಾಲ ನೀಡುವುದನ್ನು ತಪ್ಪಿಸಿ. ಭವಿಷ್ಯದಲ್ಲಿ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ಸಂಗಾತಿಯೊಂದಿಗೆ ಇಂದು ಅನ್ಯೋನ್ಯತೆ ಇರಲಿದೆ. ಬಹಳ ದಿನದ ನಿಮ್ಮ ಆಸೆ ಈಡೇರುವ ದಿನ ಹತ್ತಿರವಾಗಲಿದೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ವೈವಾಹಿಕ ಬದುಕಿನಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಸಿ. ಆರೋಗ್ಯದ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ನಿಮ್ಮ ಯಾವುದೇ ಕಷ್ಟಕರವಾದ ಕೆಲಸವನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಲಾಗುವುದು. ವೈವಾಹಿ ಜೀವನದಲ್ಲಿ ಸಮಸ್ಯೆಯಿದ್ದರೆ ಅದು ಬಗೆಹರಿಸಲು ಪ್ರಯತ್ನಿಸಿ. ನಿಮ್ಮ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ಧನು ರಾಶಿ
ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಮಯವನ್ನು ಉಳಿಸಲು, ನೀವು ಕಠಿಣ ಪರಿಶ್ರಮದ ಜೊತೆಗೆ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ವ್ಯಾಪಾರಿಗಳು ದೀರ್ಘ ಪ್ರಯಾಣವನ್ನು ತಪ್ಪಿಸಲು ಸಲಹೆ ನೀಡಲಾಗುವುದು. ಈ ದಿನ ನೀವು ದೇವಿಯ ಪೂಜೆ ನೆರವೆರಿಸಿ. ಉತ್ತಮ ಕಾರ್ಯಗಳತ್ತ ಗಮನ ಹರಿಸಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊರಗಿನ ಊಟ ತಿಂಡಿ ಸವಿಯುವುದನ್ನು ಇಂದು ತಪ್ಪಿಸಿ.
ಮಕರ ರಾಶಿ
ಕಾರ್ಯಕ್ಷೇತ್ರದಲ್ಲಿ ಇದ್ದ ಸಮಸ್ಯೆ ಬಗೆಹರಿಯಲಿದೆ. ಪ್ರಮುಖ ನಿರ್ಧಾರಗಳಲ್ಲಿ ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಪಡೆಯುತ್ತೀರಿ. ವಾಹನ ಲಾಭದ ನಿರೀಕ್ಷೆ ಇದೆ. ಉದ್ಯಮಿಗಳು, ಸಣ್ಣ ವ್ಯಾಪಾರಿಗಳಿಗೆ ಇಂದು ಲಾಭದ ದಿನವಾಗಿದೆ. ಕುಟುಂಬ ಸದಸ್ಯರೊಂದಿಗೆ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ. ತಂದೆಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ.
ಕುಂಭ ರಾಶಿ
ಇಂದು ಏನಾದರು ದಾನ ಮಾಡಿದರೆ ಉತ್ತಮ ಆರ್ಥಿಕ ಸ್ಥಿತಿಯನ್ನು ಅನುಭವಿಸುತ್ತೀರಿ. ಮಾನಸಿಕ ನೆಮ್ಮದಿ ನಿಮಗೆ ಸಿಗಲಿದೆ. ಇಂದು ವ್ಯಾಪಾರಸ್ಥರಿಗೆ ಉತ್ತಮ ದಿನವಾಗಿರುತ್ತದೆ. ಎಲ್ಲರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಲಿದೆ. ಆರೋಗ್ಯ ಸುಧಾರಿಸಲಿದೆ.
ಮೀನ ರಾಶಿ
ಈ ದಿನ ನಿಮ್ಮ ಎಲ್ಲಾ ಕೆಲಸಗಳು ಯೋಜನೆಯ ಪ್ರಕಾರ ಪೂರ್ಣಗೊಳ್ಳುತ್ತವೆ. ವ್ಯಾಪಾರಿಗಳು ಹಣಕಾಸಿನ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ನೀವು ಸ್ನೇಹಿತನೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಿದ್ದರೆ, ನಿಮ್ಮ ನಡುವೆ ಎಲ್ಲವೂ ಸಾಮಾನ್ಯವಾಗಬಹುದು. ಧನಲಾಭದ ದಿನವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications