ಅಕ್ಟೋಬರ್ 10 ದಿನ ಭವಿಷ್ಯ: ಮಹಾಷ್ಟಮಿ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?

ವೈದಿಕಶಾಸ್ತ್ರದ ಪ್ರಕಾರ ನವರಾತ್ರಿ 8ನೇ ದಿನ ನಿಮ್ಮ ರಾಶಿಫಲ ಹೇಗಿದೆ?

ಮೇಷ ರಾಶಿ

ಈ ದಿನ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ. ಕುಟುಂಬದ ಕಡೆಗೆ ಗಮನಹರಿಸಿ. ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ.

Daily Horoscope October 10

ವೃಷಭ ರಾಶಿ

ನೀವು ಕುಟುಬದ ಕಡೆಗೆ ಗಮನಹರಿಸಿ, ವೃತ್ತಿ ಬದುಕಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕವಾಗಿಯೂ ಈ ದಿನ ನಿಮಗೆ ಅನುಕೂಲಕರವಾಗಿದೆ. ಕುಟುಂಬದಲ್ಲಿಯೂ ಈ ದಿನ ಉತ್ತಮವಾಗಿರಲಿದೆ. ಇನ್ನು ಆರೋಗ್ಯದ ಬಗ್ಗೆ ಹೇಳುವುದಾದರೆ ಅನ್ಯತ ಚಿಂತೆಯಿಂದ ದೂರವಿರಿ. ಇಲ್ಲಿದಿದ್ದರೆ ಅತಿಯಾದ ಮಾನಸಿಕ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಮಿಥುನ ರಾಶಿ

ಈ ದಿನ ನೀವು ಜಾಗ್ರತೆವಹಿಸಬೇಕು. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಗದಂತೆ ನೋಡಿಕೊಳ್ಳಿ. ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನಿಮ್ಮ ಖರ್ಚು ಮತ್ತು ಆದಾಯದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಿ. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.


ಕರ್ಕ ರಾಶಿ

ಇನ್ನು ಕೆಲವೊಂದು ವಿಷಯಗಳ ಬಗ್ಗೆ ಅತಿಯಾಗಿ ಚಿಂತೆ ಮಾಡಬೇಡಿ, ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ಇನ್ನು ಕೆಲ ಕೆಲಸದಲ್ಲಿ ಅಡೆತಡೆ ಇರಬಹುದು, ಆದರೆ ನೀವು ಕೆಲಸದ ಕಡೆಗೆ ಗಮನಹರಿಸಿ. ಆರೋಗ್ಯದ ಬಗ್ಗೆ ನೋಡುವುದಾದರೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆವಿರಬಹುದು. ಕುಟುಂಬ ಜೀವನ ಚೆನ್ನಾಗಿರಲಿದೆ.

ಸಿಂಹ ರಾಶಿ

ವೃತ್ತಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳಾಗಲಿವೆ. ಈ ದಿನ ನಿಮಗೆ ಅನುಕೂಲಕರವಾಗಿರಲಿಎ. ಆದರೆ ಯಾವುದೇ ದೊಡ್ಡ ಹಣಕಾಸಿನ ವಹಿವಾಟು ಮಾಡದಂತೆ ಜಾಗ್ರತೆವಹಿಸಬೇಕು. ವ್ಯಾಪಾರಿಗಳಿಗೆ ಈ ದಿನ ಸ್ವಲ್ಪ ಕಷ್ಟಕರವಾಗಿರಲಿದೆ. ಈ ದಿನ ಮನೆಯ ವಾತಾವರಣ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ತಲೆನೋವಿನ ಸಮಸ್ಯೆವಿರಬಹುದು.


ಕನ್ಯಾ ರಾಶಿ

ಈ ದಿನ ನಿಮ್ಮ ಮನಸ್ಸು ನಿಯಂತ್ರಣದಲ್ಲಿರಲ್ಲ. ಕೆಲಸದಲ್ಲಿ ಗಮನ ನೀಡು ಸಾಧ್ಯವಾಗಲ್ಲ, ಈ ದಿನ ಆರ್ಥಿಕವಾಗಿ ಉತ್ತಮವಾಗಿರಲಿದೆ. ನೀವು ನಿಮ್ಮ ವರ್ತನೆ ಕಡೆಗೆ ಗಮನಹರಿಸಿ. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಮನಸ್ತಾಪ ಬೀರಬಹುದು. ಕೆಲ ಆರೋಗ್ಯ ಸಮಸ್ಯೆಗಳಿರಬಹುದು.

ತುಲಾ ರಾಶಿ

ಈ ದಿನ ಏರಿಳಿತವಿರಬಹುದು. ಕೆಲಸದ ಕಾರಣದಿಂದ ಒತ್ತಡವಿರಲಿದೆ, ನೀವು ನಿಮ್ಮ ವೃತ್ತಿ ಬಗ್ಗೆ ಗಮನಹರಿಸಬೇಕು. ಪಾಲುದಾರಿಕೆಯ ವ್ಯವಹಾರ ಮಾಡುತ್ತಿದ್ದರೆ ಈ ದಿನ ನಿಮಗೆ ಲಾಭದಾಯಕವಾಗಿರಲಿದೆ. ಈ ದಿನ ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ಗ್ಯಾಸ್, ಅಜೀರ್ಣ, ಅಸಿಡಿಟಿ ಮುಂತಾದ ಸಮಸ್ಯೆಗಳಿರಬಹುದು.

ವೃಶ್ಚಿಕ ರಾಶಿ

ಕೆಲಸದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಹಣಕಾಸಿನ ಸ್ಥಿತಿ ಬಲವಾಗಿ ಉಳಿಯುತ್ತದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ನಿಮ್ಮ ಯಾವುದೇ ಕಷ್ಟಕರವಾದ ಕೆಲಸವನ್ನು ಬಹಳ ಸುಲಭವಾಗಿ ಪೂರ್ಣಗೊಳಿಸಲಾಗುವುದು. ವೈವಾಹಿ ಜೀವನದಲ್ಲಿ ಸಮಸ್ಯೆಯಿದ್ದರೆ ಅದು ಬಗೆಹರಿಸಲು ಪ್ರಯತ್ನಿಸಿ.

ಧನು ರಾಶಿ

ಈ ದಿನ ನೀವು ಎಲ್ಲಾ ಚಿಂತೆಗಳನ್ನು ಮರೆತು ನಿಮ್ಮ ಕೆಲಸದ ಕಡೆಗೆ ಗಮನಹರಿಸಬೇಕು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಅತಿಯಾಗಿ ಖರ್ಚು ಮಾಡಬೇಡಿ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಅನುಕೂಲಕರವಾಗಿದೆ.

ಮಕರ ರಾಶಿ

ಈ ದಿನ ನಿಮಗೆ ಅನುಕೂಲಕರವಾಗಿದೆ, ಆರೋಗ್ಯದಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಚೆನ್ನಾಗಿರಲಿದೆ. ಹಣದ ಕೊರತೆಯಿಂದ ಸ್ಥಗಿತಗೊಂಡಿದ್ದ ಕೆಲಸ ಪೂರ್ಣಗೊಳ್ಳಲಿದೆ. ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ.

ಕುಂಭ ರಾಶಿ

ಈ ದಿನ ನೀವು ಸಂತೋಷವಾಗಿರುತ್ತೀರಿ, ಆದರೆ ಏನಾದರು ಆರೋಗ್ಯ ಸಮಸ್ಯೆವಿದ್ದರೆ ಔಷಧವನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಕೆಲಸ ಹುಡುಕುತ್ತಿದ್ದರೆ ನಿಮಗೆ ಶುಭ ಸುದ್ದಿ ದೊರೆಯಲಿದೆ. ಈ ದಿನ ನಿಮಗೆ ಅನುಕೂಲಕರವಾಗಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ.

ಮೀನ ರಾಶಿ

ಆರ್ಥಿಕವಾಗಿ ಈ ದಿನ ಮಿಶ್ರಫಲ. ಬಜೆಟ್‌ ಅಸಮತೋಲನವಾಗಬಹುದು, ಈ ದಿನ ಹಣದ ವ್ಯವಹಾರ ಮಾಡುವುದು ಕಷ್ಟವಾಗಬಹುದು. ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು. ವೈವಾಹಿಕ ಬದುಕಿನಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೆ ಅದು ಬಗೆಹರಿಸಿ. ಆರೋಗ್ಯದ ಕಡೆಗೆ ಗಮನಹರಿಸಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope October 10: Effects On Each Zodiac Signs In Kannada

Daily Horoscope October 10: Here is effects on 12 zodiac signs, read on...
Story first published: Wednesday, October 9, 2024, 21:07 [IST]
X
Desktop Bottom Promotion