Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಾರ್ತಿಕ ಸೋಮವಾರ: ನವೆಂಬರ್ 25, ಈ ದಿನದ ದ್ವಾದಶ ರಾಶಿಗಳ ರಾಶಿಫಲ
ಶುಭ ಕಾರ್ತಿಕ ಸೋಮವಾರ, ನವೆಂಬರ್ 25ರ ದಿನ ರಾಶಿಫಲ ನೋಡೋಣ:
ಮೇಷ ರಾಶಿ
ಈ ದಿನ ನಿಮಗೆ ಶುಭವಾಗಿದೆ, ಹಣಕಾಸಿನ ದೃಷ್ಟಿಯಿಂದೀ ಅವಧಿ ತುಂಬಾ ಚೆನ್ನಾಗಿರಲಿದೆ, ಹಿಂದೆ ಮಾಡಿದ ಹೂಡಿಕೆಯಿಂದ ಲಾಭ ಪಡೆಯಬಹುದು, ಕೆಲಸ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವುದು, ವ್ಯಾಪಾರಿಗಳಿಗೂ ಈ ದಿನ ಉತ್ತಮವಾಗಿದೆ. ಕುಟುಂಬ ಜೀವನ ಕೂಡ ಚೆನ್ನಾಗಿರಲಿದೆ.

ವೃಷಭ ರಾಶಿ
ಈ ದಿನ ಸ್ವಲ್ಪ ಜಾಗ್ರತೆವಹಿಸಬೇಕು, ಕೆಲಸದ ಒತ್ತಡ ಅಧಿಕವಿರಲಿದೆ, ಕೆಲಸದ ಜಾಗದಲ್ಲಿ ಸುಳ್ಳು ಆರೋಪ ಬರಬಹುದು ಜಾಗ್ರತೆವಹಿಸಿ, ಇನ್ನು ಆರೋಗ್ಯ ಸಮಸ್ಯೆ ಕೂಡ ಕಾಡಬಹುದು, ಈ ದಿನ ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಿ.
ಮಿಥುನ ರಾಶಿ
ಈ ದಿನ ನಿಮಗೆ ತುಂಬಾ ಚೆನ್ನಾಗಿರಲಿದೆ, ಪ್ರಮುಖ ಸಮಸ್ಯೆಬಗೆಹರಿಯುವುದರಿಂದ ಖುಷಿಯಾಗಿರುತ್ತೀರಿ. ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಕೆಲಸ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ, ಮನೆಯಲ್ಲಿಯೂ ಸಂತೋಷದ ವಾತಾವರಣ ಇರಲಿದೆ.
ಕರ್ಕ ರಾಶಿ
ಈ ದಿನ ಅಪೂರ್ಣವಾಗಿರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು, ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ, ಆದರೆ ಕುಟುಂಬ ಜೀವನದ ಕಡೆಗೆ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು, ಸಮಧಾನದಿಂದ ಸಂಗಾತಿಯ ಮನವೊಲಿಸು ಪ್ರಯತ್ನಿಸಿ, ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ.
ಸಿಂಹ ರಾಶಿ
ಈ ದಿನ ಕೆಲಸದಲ್ಲಿ ಹೆಚ್ಚಿನ ಗಮನಹರಿಸಬೇಕು, ಹಣಕಾಸಿನ ವಿಚಾರದಲ್ಲಿಯೂ ನಿರ್ಲಕ್ಷ್ಯ ಮಾಡಿದರೆ ನಷ್ಟ ಉಂಟಾಗಬಹುದು, ಆದ್ದರಿಂದ ಹೂಡಿಕೆ ಸಂಬಂಧಿಸಿದ ವಿಷಯಗಳ ಕಡೆಗೆ ಹೆಚ್ಚಿನ ಗಮನಹರಿಸಿದರೆ ಒಳ್ಳೆಯದು.
ಕನ್ಯಾ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ನಿಮ್ಮ ಕೆಲಸ ಕಾರ್ಯಗಳು ಚೆನ್ನಾಗಿ ನಡೆಯಲಿದೆ, ಕೆಲಸದ ಜಾಗದಲ್ಲಿ ಯಾರ ಜೊತೆಯೂ ಕಿರಿಕ್ ಮಾಡಿಕೊಳ್ಳಲು ಹೋಗಬೇಡಿ, ಹೂಡಿಕೆ ಬಗ್ಗೆ ಆಲೋಚಿಸುತ್ತಿದ್ದರೆ ಅದರ ಬಗ್ಗೆ ಚೆನ್ನಾಗಿ ವಿಚಾರಿಸಿ ನಂತರವಷ್ಟೇ ಮಾಡಿ. ಸಂಗಾತಿಯ ಬೆಂಬಲ ನಿಮಗಿರಲಿದೆ.
ತುಲಾ ರಾಶಿ
ಈ ದಿನ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ವ್ಯಾಪಾರಿಗಳು ವ್ಯಾಪಾರದ ಕಡೆಗೆ ಹೆಚ್ಚು ಗಮನಹರಿಸಬೇಕು, ಆವಾಗ ಮಾತ್ರ ನೀವು ಬಯಸಿದಂತೆ ಲಾಭ ಪಡೆಯುತ್ತೀರಿ, ಹಣಕಾಸಿ ದೃಷ್ಟಿಯಿಂದ ನೋಡುವುದಾದರೆ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಮನೆಯ ಹಿರಿಯ ಸದಸ್ಯರಿಗೆ ಆರೋಗ್ಯ ಸರಿಯಿಲ್ಲದಿದ್ದರೆ ಅವರ ಆರೈಕೆ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಮಿಶ್ರಫಲ. ಯಾವುದೇ ನಿರ್ಧಾರ ಆತುರದಿಂದ ತೆಗೆದುಕೊಳ್ಳಬೇಡಿ. ಸೂಕ್ತ ಸಮಯ ಬಂದಾಗ ಎಲ್ಲವೂ ಬಗೆಹರಿಯಲಿದೆ, ಮಕ್ಕಳ ಬಗ್ಗೆ ಚಿಂತೆ ಹೆಚ್ಚಾಗಬಹುದು, ಅವರನ್ನು ತಿದ್ದುವ ಪ್ರಯತ್ನ ಮಾಡಬೇಕು, ಆರ್ಥಿಕವಾಗಿ ನೋಡುವುದಾದರೆ ಈ ದಿನ ಸರಾಸರಿಯಾಗಿರಲಿದೆ.
ಧನು ರಾಶಿ
ಈ ದಿನನಿಮಗೆ ಶುಭವಾಗಿದೆ, ಕೆಲಸದ ಹುಡುಕಾಟದಲ್ಲಿರುವವರು ಶುಭ ಸುದ್ದಿ ಪಡೆಯುತ್ತೀರಿ, ಕುಟುಂಬ ಜೀವನ ಚೆನ್ನಾಗಿರಲಿದೆ, ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು, ಕುಟುಂಬದಲ್ಲಿಯೂ ಸಂತೋಷದ ವಾತಾವರಣ ಇರಲಿದೆ.
ಮಕರ ರಾಶಿ
ಈ ದಿನ ನೀವು ಕೋಪ ನಿಯಂತ್ರಿಸಿದರೆ ಒಳ್ಳೆಯದು, ಅನಗ್ಯತ ವಿಷಯಗಳ ಬಗ್ಗೆ ಚಿಂತಿಸಿ ಮನಸ್ಸು ಕೆಡಿಸಿಕೊಳ್ಳುವ ಬದಲಿಗೆ ಕೆಲಸ ಕಾರ್ಯದ ಕಡೆಗೆ ಗಮನಹರಿಸಿ. ಬೇಡದ ಆಲೋಚನೆಗಳನ್ನು ಬಿಡಿ, ಮನಸ್ಸಿನ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ.
ಕುಂಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಹಣಕಾಸಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಷೇರು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡವರು ಉತ್ತಮ ಲಾಭ ಪಡೆಯುತ್ತೀರಿ.
ಮೀನ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿದೆ, ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ, ನಿಮ್ಮ ಕೆಲಸದಲ್ಲಿ ಗುರಿ ತಲುಪಲು ಪ್ರಯತ್ನ ಪಡುವಿರಿ, ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಕುಟುಂಬ ಜೀವನ ಚೆನ್ನಾಗಿರಲಿದೆ, ಆರ್ಥಿಕವಾಗಿಯೂ ಉತ್ತಮವಾಗಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










