Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ ನವೆಂಬರ್ 15: ಕಾರ್ತಿಕ ಹಣ್ಣಿಮೆಯ ದಿನ ದ್ವಾದಶ ರಾಶಿಗಳಿಗೆ ಹೇಗಿದೆ?
ಕಾರ್ತಿಕ ಹುಣ್ಣಿಮೆಯ ಶುಭಾಶಯಗಳು.... ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
ಮೇಷ ರಾಶಿ
ಈ ದಿನ ಕೆಲಸದಲ್ಲಿ ಕೆಲಾಡೆತಡೆಗಳುಬರಬಹುದು, ಆದರೆ ನೀವು ತಾಳ್ಮೆಯಿಂದ ವರ್ತಿಸುವಂತೆ ಸಲಹೆ ನೀಡಲಾಗುವುದು, ನೀವು ಕೆಲಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಆರ್ಥಿಕವಾಗಿಯೂ ಈ ದಿನ ಉತ್ತಮವಾಗಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ, ಆದರೆ ನಿಮ್ಮ ಕೋಪ ಅದನ್ನು ಹಾಳು ಮಾಡಬಹುದು, ಜಾಗ್ರತೆವಹಿಸಿ.

ವೃಷಭ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಆದರೆ ಈ ದಿನ ಯಾವುದೇ ವಿಷಯವಾಗಿರಲಿ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ ಎಂದು ಸಲಹೆ ನೀಡಲಾಗುವುದು. ಸಂಬಂಧದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ನೀವು ಸಮಸ್ಯೆಯನ್ನು ಮಾತನಾಡಿ ಬಗೆಹರಿಸಲು ಪ್ರಯತ್ನಿಸಿ.
ಮಿಥುನ ರಾಶಿ
ಕೆಲಸದ ಕಾರ್ಯದ ದೃಷ್ಟಿಯಿಂದ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ, ಆರ್ಥಿಕವಾಗಿಯೂ ಈ ದಿನ ಯಾವುದೇ ಸಮಸ್ಯೆ ಇರಲ್ಲ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ, ವೃತ್ತಿ ಬದುಕು ಹಾಗೂ ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯವಾಗುವುದು.
ಕರ್ಕ ರಾಶಿ
ನೀವು ಕೆಲಸದ ಕಡೆಗೆ, ನಿಮಗೆ ವಹಿಸಿರುವ ಜವಾಬ್ದಾರಿ ಕಡೆಗೆ ತುಂಬಾನೇ ಗಮನಹರಿಸಬೇಕು, ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿ ಅದರಂತೆ ಕೆಲಸ ಮಾಡಿದರೆ ಒಳ್ಳೆಯದು, ಬಜೆಟ್ ಕಡೆ ಕೂಡ ಗಮನಹರಿಸಬೇಕು. ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಸಿಂಹ ರಾಶಿ
ಈ ದಿನ ನಿಮಗೆ ತುಂಬಾನೇ ಅನುಕೂಲಕರವಾಗಿರಲಿದೆ, ನಿಮ್ಮ ವೃತ್ತಿ ಬದುಕಿನ ಸಮಸ್ಯೆ ದೂರಾಗಲಿದೆ, ಇಂದಿನಿಂದ ಹೊಸ ಬದಲಾವಣೆ ಕಂಡು ಬರಲಿದೆ, ನೀವು ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ತಲುಪಲು ಸಾಧ್ಯವಾಗುವುದು, ಉದ್ಯೋಗ ಬದಲಾವಣೆ ಅಥವಾ ಸ್ವಂತ ವ್ಯವಹಾರದ ಬಗ್ಗೆ ಆಲೋಚನೆ ಮಾಡುತ್ತಿದ್ದರೆ ಅದಕ್ಕೆ ಸಿದ್ಧತೆ ಪ್ರಾರಂಭಿಸಬಹುದು, ಈ ಅವಧಿ ನಿಮಗೆ ತುಂಬಾನೇ ಉತ್ತಮವಾಗಿದೆ.
ಕನ್ಯಾ ರಾಶಿ
ಕೆಲಸದಲ್ಲಿ ಹೆಚ್ಚು ಜಾಗ್ರತೆವಹಿಸಿ, ದಾಖಲೆಗಳ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಏನಾದರೂ ಸಂಶಯವಿದ್ದರೆ ಪ್ರಶ್ನಿಸಿ, ನಿಮ್ಮ ಕ್ರೆಡಿಟ್ ಬೇರೆಯವರು ತೆಗೆದುಕೊಳ್ಳದಂತೆ ಜಾಗ್ರತೆವಹಿಸಬೇಕು. ಕುಟುಂಬದಲ್ಲಿ ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಮಾತನಾಡಿ ಬಗೆಹರಿಸುವುದು ಒಳ್ಳೆಯದು.
ತುಲಾ ರಾಶಿ
ನೀವು ವೃತ್ತಿ ಜೀವನದಲ್ಲಿ ಏನಾದರು ಬದಲಾವಣೆ ಬಯಸುತ್ತಿದ್ದರೆ ಅದರತ್ತ ಗಮನಹರಿಸುವುದು ಒಳ್ಳೆಯದು, ನಿಮ್ಮ ಪ್ರಯತ್ನಕ್ಕೆ ಖಂಡಿತ ಫಲ ಸಿಗಲಿದೆ. ಆರ್ಥಿಕವಾಗಿ ಈ ದಿನ ಅನುಕೂಲಕರವಾಗಿದೆ, ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ.
ವೃಶ್ಚಿಕ ರಾಶಿ
ವೈವಾಹಿಕ ಜೀವನದಲ್ಲಿ ಈ ದಿನ ಹೆಚ್ಚು ರೊಮ್ಯಂಟಿಕ್ ಆಗಿರುತ್ತೀರಿ, ನಿಮ್ಮ ಪ್ರೀತಿ ಮತ್ತಷ್ಟು ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿಯೂ ಪರಿಸ್ಥಿತಿ ಅನುಕೂಲಕರವಾಗಿರಲಿದೆ, ಹಣಕಾಸಿನ ಪರಿಸ್ಥಿತಿ ಚೆನ್ನಾಗಿರಲಿದೆ, ಆದರೆ ಹಣದ ನಿರ್ಧಾರ ತೆಗೆದುಕೊಳ್ಳುವಾಗ ಮಾತ್ರ ಚೆನ್ನಾಗಿ ಅಲೋಚಿಸಿ ತೆಗೆದುಕೊಳ್ಳಬೇಕು.
ಧನು ರಾಶಿ
ವ್ಯಾಪಾರಿಗಳಿಗೆ ಈ ದಿನ ಧನಾತ್ಮಕವಾಗಿರಲಿದೆ, ವೃತ್ತಿ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ಕುಟುಂಬ ಪರಿಸ್ಥಿತಿ ಚೆನ್ನಾಗಿರಲಿದೆ, ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಚೆನ್ನಾಗಿ ನಿಭಾಯಿಸಿಕೊಂಡು ಹೋಗಲು ಸಾಧ್ಯವಾಗುವುದು. ಆರ್ಥಿಕವಾಗಿಯೂ ಈ ದಿನ ನಿಮಗೆ ಅನುಕೂಲಕರವಾಗಿರಲಿದೆ.
ಮಕರ ರಾಶಿ
ಈ ದಿನ ನಿಮಗೆ ಉತ್ತಮವಾಗಿರಲಿದೆ, ನಿಮಗೆ ವಹಿಸಿರುವ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯವಾಗುವುದು. ಕುಟುಂಬ ಜೀವನದಲ್ಲಿ ಹೊಂದಾಣಿಕೆ ಇರಲಿದೆ, ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ, ಒಟ್ಟಿನಲ್ಲಿ ಈ ದಿನ ನಿಮಗೆ ಅನುಕೂಲಕರವಾಗಿದೆ.
ಕುಂಭ ರಾಶಿ
ಕೆಲಸದಲ್ಲಿ ನೀವು ಹೆಚ್ಚು ಜಾಗ್ರತೆವವಹಿಸಬೇಕು, ಇಲ್ಲದಿದ್ದರೆ ನಿಮ್ಮ ಅವಕಾಶ ನಿಮ್ಮ ಸ್ಪರ್ಧಿಗಳು ಬಳಸಿಕೊಳ್ಳಬಹುದು, ಕೋಪವನ್ನು ನಿಯಂತ್ರಿಸಿ, ನಿಮ್ಮ ಕೆಲಸದ ಕಡೆಗೆ ಗಮನಹರಿಸಿ. ಬಜೆಟ್ ಮೀರಿ ಖರ್ಚು ಮಾಡದಿರಿ. ಕುಟುಂಬದಲ್ಲಿಯೂ ಕೋಪದಿಂದ ವರ್ತಿಸಬೇಡಿ.
ಮೀನ ರಾಶಿ
ಈ ದಿನ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ, ಹೀಗಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರಿಗಳಿಗೂ ಲಾಭ ಗಳಿಸಲು ಸಾಧ್ಯವಾಗುವುದು, ಕುಟುಂಬದಲ್ಲಿ ಪರಿಸ್ಥಿತಿ ಚೆನ್ನಾಗಿರಲಿದೆ, ಒಟ್ಟಿನಲ್ಲಿ ದಿನ ನಿಮಗೆ ಅನುಕೂಲಕರವಾಗಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










