Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ರಾಶಿಫಲ ಮಾರ್ಚ್ 9: ಈ ಭಾನುವಾರ ಯಾವ ರಾಶಿಯವರಿಗೆ ಶುಭ ಫಲ!
ಶುಭೋದಯ... ಜ್ಯೋತಿಷ್ಯದ ಪ್ರಕಾರ ಈ ದಿನದ ರಾಶಿಫಲ ನೋಡೋಣ..
ಮೇಷ ರಾಶಿ
ಈ ದಿನ ನಿಮ್ಮ ಜೀವನದ ಬಹುಮುಖ್ಯ ಘಟನೆ ಸಂಭವಿಸಬಹುದು. ಸಮಾಧಾನಕರವಾದ ಜೀವನ ನಿಮಗೆ ಲಭ್ಯವಾಗುತ್ತದೆ. ಬಂಧು ಮಿತ್ರರಿಂದಲೂ ಸಂಪೂರ್ಣ ಸಹಕಾರ ಲಭಿಸಲಿದೆ. ವ್ಯಾಪಾರ ವಹಿವಾಟುಗಳಲ್ಲಿ ಅಧಿಕ ಪ್ರಮಾಣದ ಲಾಭಾಂಶ ಪಡೆಯುವ ಸಾಧ್ಯತೆ ಅಧಿಕವಾಗಿದೆ. ನಿಮ್ಮ ಆರೋಗ್ಯದಲ್ಲಿಂದು ಏರುಪೇರು ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಕೊಡುವುದು ಒಳಿತು. ಆರ್ಥಿಕವಾಗಿಯೂ ಈ ದಿನ ಏರುಪೇರು ಉಂಟಾಗುವುದು. ಹೆಚ್ಚು ಖರ್ಚು ನಿಮ್ಮಿಂದ ನಿರೀಕ್ಷಿಸಲಾಗಿದೆ. ಹಾಗೆ ಮನೆಗೆ ಹೊಸ ವಸ್ತುವೊಂದನ್ನು ಖರೀದಿಸಬಹುದು. ಇದು ನಿಮ್ಮ ಮನೆಯಲ್ಲಿ ಸಂತಸ ತರಲಿದೆ. ಮನೆಯಲ್ಲಿದ್ದ ಸಮಸ್ಯೆಯೊಂದನ್ನು ಕುಳಿತು ಮಾತುಕತೆಯ ಮೂಲಕ ನಿವಾರಿಸಿಕೊಳ್ಳಿ.

ವೃಷಭ ರಾಶಿ
ಈ ದಿನ ವೃಷಭ ರಾಶಿಯರಲ್ಲಿ ಅತ್ಯಧಿಕ ಲಾಭ ನೋಡಬಹುದು. ನೀವು ವ್ಯಾಪಾರ ಕ್ಷೇತ್ರದಲ್ಲಿದ್ದರೆ ಅದರಲ್ಲೂ ಪಾಲುದಾರಿಕೆ ವ್ಯವಹಾರದಲ್ಲಿದ್ದರೆ ಲಾಭ ಹೆಚ್ಚಳವಾಗಲಿದೆ. ನಿಮ್ಮ ದಿನ ಶಾಂತಿಯಿಂದ ಕೂಡಿರಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮತ್ತೊಮ್ಮೆ ಸಲಹೆ ಅಥವಾ ಯೋಚಿಸಿ ಮುಂದುವರೆಯುವುದು ಬಹಳ ಉತ್ತಮ. ನಿಮ್ಮ ಸಂಬಂಧಿಕರು ಇಂದು ನಿಮ್ಮನ್ನು ಭೇಟಿ ಮಾಡಿ ಒಂದಿಷ್ಟು ಸಲಹೆ ಸಹಕಾರಕ್ಕೆ ಕಾರಣರಾಗಲಿದ್ದಾರೆ.
ಮಿಥುನ ರಾಶಿ
ವಿಪರೀತವಾತ ಆರೋಗ್ಯ ಸಮಸ್ಯೆಯಿಂದ ವೈದ್ಯರನ್ನು ಭೇಟಿಯಾಗಬೇಕಾಗುವುದು. ವಾಹನ ಮಾಲೀಕರು ಎಚ್ಚರಿಕೆಯಿಂದ ಇರುವುದು ಒಳಿತು. ಯಾವುದೇ ಕಾರಣಕ್ಕೂ ಈ ದಿನ ಸಾಲ ನೀಡಬೇಡಿ. ನಿಮ್ಮ ಮನೆಯಲ್ಲಿ ನಿಮ್ಮ ಕುರಿತಾದ ಮಾತುಕತೆಗಳು ನಡೆಯಲಿದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಎಲ್ಲಾ ಕೆಲಸಗಳು ಅಡೆತಡೆಯಿಲ್ಲದೆ ನೆರವೇರಲಿದೆ. ಆದಷ್ಟು ಇಂದು ತಾಳ್ಮೆಯಿಂದ ವರ್ತಿಸುವುದು ನಿಮಗೆ ಒಳಿತಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಈ ದಿನದಂದು ಲಾಭ ಗಳಿಸುವ ದಿನ ಎನ್ನಲಾಗಿದೆ, ನಿಮ್ಮ ಜಾತಕ ಫಲದ ಪ್ರಕಾರ ನೀವು ಇಂದು ಮಾಡುವ ಎಲ್ಲಾ ಕೆಲಸಗಳು ಬಹಳ ಅಚ್ಚುಕಟ್ಟಾಗಿ ಎಲ್ಲರಿಗೂ ಇಷ್ಟವಾಗುವಂತವು, ಪ್ರೀತಿ ಪ್ರೇಮದ ವಿಚಾರದಲ್ಲಿ ಈ ದಿನ ನಿಮ್ಮ ಪರವಾಗಿರಲಿದೆ. ಹೊಸ ಆಸ್ತಿ, ಮನೆ ಖರೀದಿಗೆ ಮುಂದಾಗುವವರು ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಇಡಿ. ಮನೆಯ ಸದಸ್ಯರ ಆರೋಗ್ಯದ ಕುರಿತು ಗಮನವಿಡಿ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಕಾಣುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನ ಕಡಿಮೆ ಮಾತನಾಡುವುದು ಬಹಳ ಒಳ್ಳೆಯದು. ನಿಮ್ಮ ಸ್ಮೇಹಿಯರು, ಹಿತ ಬಯಸುವವರಿಂದ ನೀವು ಈ ದಿನ ನೋವಿಗೆ ಒಳಗಾಗಬಹುದು, ಹಾಗೆ ಕಣ್ಣಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆ ಎದುರಿಸಬಹುದು. ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಫಲ ದೊರೆಯುವುದು. ಅನುಕೂಲಕರ ವಾತಾವರಣವು ಸೃಷ್ಟಿಯಾಗುವುದು. ಈ ದಿನ ಉತ್ತಮ ಕೆಲಸಕ್ಕೆ ನೀವು ಹೆಚ್ಚು ಖರ್ಚು ಮಾಡುತ್ತೀರಿ. ಯಾವುದೇ ಕೆಲಸವನ್ನು ಪೂರ್ಣ ಮಾಡದೆ ಹಾಗೆ ಅರ್ಧಕ್ಕೆ ಬಿಡಬೇಡಿ. ಹಲವು ದಿನಗಳಿಂದ ಇಟ್ಟುಕೊಂಡ ಕನಸೊಂದು ನನಸಾಗಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ನೀವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ರಿಯಲ್ ಎಸ್ಟೇಟ್ ಉದ್ಯಮಿಗಳು ಹೆಚ್ಚಿನ ಲಾಭದ ನಿರೀಕ್ಷೆ ಮಾಡಬೇಡಿ. ತೀರ್ಮಾನಿಸಿದ ಕೆಲಸದಲ್ಲಿ ಅನೇಕ ಅಡೆ ತಡೆಗಳು ಉಂಟಾಗುವುದು, ಮನೆಯ ವಾತಾವರಣ ಶಾಂತವಾಗಿರಲಿದೆ. ಹಾಗೆ ನೀವು ಅವಿವಾಹಿತರಾಗಿದ್ದರೆ ಅತ್ಯುತ್ತಮ ಲಾಭವಿದೆ. ನಿಮ್ಮ ಆದಾಯ ಇಂದು ಹೆಚ್ಚಾಗುವ ಸಾಧ್ಯತೆ ಇದೆ. ಯಾವ ಕೆಲಸವನ್ನಾದರು ಮಾಡಿ ಮುಗಿಸುವುದು ಒಳಿತು.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಈ ದಿನ ಅತ್ಯುತ್ತಮ ಲಾಭ ನೋಡಬಹುದು. ನೀವು ಮನೆಗಿಂತಲೂ ಹೊರಗೆ ಇಂದು ಹೆಚ್ಚು ಸಮಯ ಕಳೆಯಲಿದ್ದೀರಿ. ಕಷ್ಟಗಳ ನಿವಾರಣೆಗೆ ದೇವಾಲಯ ಭೇಟಿ ನೀಡುವ ಸಾಧ್ಯತೆ ಇದೆ. ನೀವು ಮಾಡುತ್ತಿರುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಭೇಟಿಯು ನಿಮಗೆ ಶುಭ ಸುದ್ದಿ ತರಲಿದೆ. ಯಾವುದೇ ಕಾರಣಕ್ಕೂ ಈ ದಿನ ಸಾಲ ನೀಡಲು ಹೋಗಬೇಡಿ. ಮಾತುಗಳಿಂದ ಈ ದಿನ ಸಮಸ್ಯೆ ಎದುರಿಸಬೇಕಾಗಬಹುದು. ಹಲವು ಕೆಲಸಗಳು ನಿಮ್ಮ ಪರವಾಗಿ ನಡೆಯಲಿವೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗ ಬದಲಿಸುವ ನಿಮ್ಮ ಆಲೋಚನೆಗೆ ಈ ದಿನ ಮತ್ತೊಂದು ಹೆಜ್ಜೆ ಮುಂದೆ ಇಡಲಿದ್ದೀರಿ.
ವೃಶ್ಚಿಕ ರಾಶಿ
ಈ ದಿನ ಸಮಾಧಾನಕರ ಬದುಕನ್ನು ಕಾಣುವಿರಿ. ಹಾಗೆ ಮಿಶ್ರ ದಿನವಾಗಿ ಕಾಣಿಸಬಹುದು. ನಿಮ್ಮ ಆರೋಗ್ಯದಲ್ಲಿ ಸುಧಾರಣೆಯಾಗಬಹುದು, ಹಾಗೆ ಈ ದಿನ ಹೆಚ್ಚು ಖರ್ಚು ಮಾಡಬೇಕಾಗಬಹುದು, ಅಲ್ಲದೆ ಅನಿವಾರ್ಯ ಕಾರಣಗಳಿಂದ ನೀವು ದೂರ ಪ್ರಯಾಣಕ್ಕೆ ಮುಂದಾಗಬೇಕಾಗಬಹುದು. ನಿಮ್ಮ ಮಾನಸಿಕ ಸ್ಥಿತಿಯಲ್ಲಿ ನೆಮ್ಮದಿ ಇರಲಿದೆ. ಮನೆಯ ಹೊರಗೆ ನಿಮ್ಮ ಗೌರವ ಮತ್ತಷ್ಟು ಹೆಚ್ಚಾಗಲಿದೆ. ಹಾಗೆ ಭವಿಷ್ಯದ ದೃಷ್ಟಿಯಿಂದ ನೀವು ದೊಡ್ಡ ನಿರ್ಧಾರಗಳ ತೆಗೆದುಕೊಳ್ಳಬಹುದು.
ಧನು ರಾಶಿ
ಧನು ರಾಶಿಯವರಿಗೆ ಇಂದು ಸಕಲ ಕೆಲಸದಲ್ಲೂ ಧನಾತ್ಮಕ ಬದಲಾವಣೆ ನೋಡಬಹುದು. ಕುಟುಂಬಸ್ಥರಿಂದ ಒಂದಿಷ್ಟು ಮಾನಸಿಕ ನೆಮ್ಮದಿ ಹಾಳಾಗುವ ಕೆಲಸ ಆಗಬಹುದು. ಎಲ್ಲಿಯೂ ನೀವು ಈ ದಿನ ಸುಳ್ಳು ಹೇಳುವ ಕೆಲಸ ಮಾಡಬೇಡಿ. ಇದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ದೂರ ಪ್ರಯಾಣದ ನಿರೀಕ್ಷೆ ಇದೆ. ಶುಭ ಕಾರ್ಯದಲ್ಲೂ ನೀವು ಭಾಗಿಯಾಗಬಹುದು.
ಮಕರ ರಾಶಿ
ಈ ದಿನದಂದು ಬಂಧು ಮಿತ್ರರಿಂದ ಕಿರಿಕಿರಿ, ನಿರೀಕ್ಷಿತ ಮಟ್ಟದ ಯಶಸ್ಸು ಲಭಿಸದೆ ಇರಬಹುದು. ವಾಹನ ಚಲಾಯಿಸುವಾಗ ಕಾಳಜಿ ವಹಿಸಿ. ನೀವು ಹೂವು, ಹಣ್ಣು, ದಿನಸಿ, ವ್ಯಾಪಾರದಲ್ಲಿ ತೊಡಗಿದ್ದರೆ ಲಾಭ ಹೆಚ್ಚಾಗಬಹುದು. ಸ್ವಂತ ಉದ್ಯೋಗ ಮಾಡುತ್ತಿರವವರಲ್ಲಿ ಈ ದಿನ ಲಾಭಾಂಶ ಹೆಚ್ಚಾಗಲಿದೆ. ಸಮಸ್ಯೆಗಳ ನಿವಾರಣೆಗೆ ಶಿವನ ದೇವಾಲಯ ಭೇಟಿ ನೀಡಿ. ಅವಿವಾಹಿತರಿಗೆ ಶುಭವಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯ ಜನರು ಈ ದಿನದಂದು ಉತ್ತಮ ಲಾಭ ನೋಡಲಿದ್ದಾರೆ. ನಿಮ್ಮ ಆದಾಯ ಹೆಚ್ಚಳವಾಗುವ ಕೆಲಸ ಮಾಡುವಿರಿ. ಆದರೆ ದಿನದ ಅಂತ್ಯದಲ್ಲಿ ಖರ್ಚು ಕೂಡ ಹೆಚ್ಚಾಗಲಿದೆ, ಯಾವುದೇ ಕೆಲಸವನ್ನು ಅರ್ಧಕ್ಕೆ ಬಿಡಬೇಡಿ. ನಿಮ್ಮ ಮನೆಯ ವಾತಾವರಣ ಶಾಂತ ರೀತಿಯಲ್ಲಿರಲಿದೆ.
ಮೀನ ರಾಶಿ
ಮೀನ ರಾಶಿಯವರಲ್ಲಿ ಈ ದಿನ ಬಹಳ ಜಾಗ್ರತೆ ವಹಿಸಿ. ಹೆಚ್ಚು ಕಾಲ ಮನೆಯಿಂದ ಹೊರಗುಳಿಯುವ ಸಾಧ್ಯತೆ ಇರಲಿದ್ದು ಎಚ್ಚರಿಕೆ ಅಗತ್ಯವಾಗಿ ತೆಗೆದುಕೊಳ್ಳಿ. ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ಅನಗತ್ಯ ಚರ್ಚೆ, ಗಲಾಟೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











