ದಿನ ಭವಿಷ್ಯ: ಜನವರಿ 5 ಈ ದಿನ ನಿಮ್ಮ ರಾಶಿಫಲ ಹೇಗಿದೆ?

ಜ್ಯೋತಿಷ್ಯದ ಪ್ರಕಾರ ಈ ದಿನ(ಜನವರಿ 5) ಹೇಗಿರಲಿದೆ?

ಮೇಷ ರಾಶಿ
ಈ ದಿನ ನಿಮಗೆ ಅನುಕೂಲಕರವಾಗಿರಲಿದೆ. ಈ ವಾರ ಮನೆಯ ವಾತಾವರಣ ಚೆನ್ನಾಗಿರಲಿದೆ. ರಾಜಕಾರಣಿಗಳಿಗೆ ಈ ದಿನ ಉತ್ತಮವಾಗಿರಲಿದೆ. ವೈವಾಹಿಕ ಬದುಕು ಚೆನ್ನಾಗಿರಲಿದೆ. ಆರ್ಥಿಕವಾಗಿ ಈ ದಿನ ಉತ್ತಮವಾಗಿರಲಿದೆ.

Daily Horoscope January

ವೃಷಭ ರಾಶಿ
ಈ ದಿನ ಪ್ರಮುಖ ಕೆಲಸ ಪೂರ್ಣವಾಗುವುದರಿಂದ ಖುಷಿಯಾಗಲಿದೆ. ಈ ದಿನ ಆರ್ಥಿಕವಾಗಿ ಉತ್ತಮವಲ್ಲ, ಸಾಲ ಮಾಡಿದ್ದರೆ ಅದನ್ನು ಮರಳಿಸುವ ಒತ್ತಡ ನಿಮ್ಮ ಮೇಲಿರಬಹುದು. ವೃತ್ತಿ ಬದುಕಿನಲ್ಲಿ ಕೆಲ ಸಮಸ್ಯೆಗಳು ಬಂದರೆ ಸಮಧಾನದಿಂದ ಬಗೆಹರಿಸಲು ಪ್ರಯತ್ನಿಸಿ.

ಮಿಥುನ ರಾಶಿ
ಈ ದಿನ ನೀವು ಜಾಗ್ರತೆವಹಿಸಿ,ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕೆಲಸದ ಜಾಗದಲ್ಲಿ ನೀವು ತುಂಬಾ ಜಾಗ್ರತೆವಹಿಸಬೇಕು. ಚಿಕ್ಕ ತಪ್ಪು ದೊಡ್ಡ ನಷ್ಟ ಉಂಟಾಗಬಹುದು. ಬಜೆಟ್‌ ಮೀರಿ ಹಣ ಖರ್ಚು ಮಾಡ ಹೋಗಬೇಡಿ. ನಿಮ್ಮ ಹಾಗೂ ಸಂಗಾತಿ ನಡುವೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ತಾಳ್ಮೆಯಿಂದ ಬಗೆಹರಿಸಿ.

ಕರ್ಕ ರಾಶಿ
ಈ ದಿನ ಅನುಕೂಲಕರವಾಗಿದೆ, ಈ ದಿನ ಕೆಲಸ ಕಾರ್ಯಗಳು ಉತ್ತಮವಾಗಿ ನಡೆಯಲಿದೆ. ಆರೋಗ್ಯ ವಿಷಯದಲ್ಲಿ ಈ ದಿನ ಅನುಕೂಲಕರವಾಗಿದೆ. ಇನ್ನು ಕೆಲವೊಂದು ಸಂದರ್ಭದಲ್ಲಿ ನೀವು ತಾಳ್ಮೆಯಿಂದ ನಡೆದುಕೊಳ್ಳಬೇಕು, ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾದರೆ ಕೋಪ ನಿಯಂತ್ರಿಸಿ ಮಾತನಾಡಿ ಬಗೆಹರಿಸಲುಪ್ರಯತ್ನಿಸಿ.

ಸಿಂಹ ರಾಶಿ
ಈ ದಿನ ಆರ್ಥಿಕವಾಗಿ ನಿಮಗೆ ತುಂಬಾನೇ ಚೆನ್ನಾಗಿರಲಿದೆ. ಷೇರು ಮಾರುಕಟ್ಟೆಯಲ್ಲಿ ಹಣದ ನಷ್ಟ ಉಂಟಾಗಬಹುದು. ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ.

ಕನ್ಯಾ ರಾಶಿ
ಈ ದಿನ ಮಿಶ್ರಫಲ, ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಹಣಕಾಸಿನ ವಿಷಯದಲ್ಲಿ ಉತ್ತಮವಾಗಿದೆ, ಆದರೆ ಬಜೆಟ್‌ ಮೀರಿ ಖರ್ಚು ಮಾಡಬೇಡಿ. ಇನ್ನು ನಿಮಗೆವಹಿಸಿರುವ ಕೆಲಸದಲ್ಲಿ ತಪ್ಪಾಗದಂತೆ ಜಾಗ್ರತೆವಹಿಸಿ.

ತುಲಾ ರಾಶಿ
ಈ ದಿನ ನೀವು ಸ್ವಲ್ಪ ಜಾಗ್ರತೆವಹಿಸಬೇಕು, ಅನಗ್ಯತ ವಿಷಯಗಳ ಕಡೆಗೆ ಗಮನಕೊಡದಿರುವುದು ಒಳ್ಳೆಯದು. ಇನ್ನು ಪ್ರಮುಖ ಕೆಲಸ ಅಪೂರ್ಣವಾಗಿದ್ದರೆ ಅದನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು. ಮಕ್ಕಳ ನಡವಳಿಕೆ ಕಡೆ ಗಮನಹರಿಸಿ.

ವೃಶ್ಚಿಕ ರಾಶಿ
ಈ ದಿನ ಕೆಲಸ ಕಾರ್ಯದಲ್ಲಿ ಉತ್ತಮವಾಗಿದೆ, ಆದರೆ ಹಣದ ವಿಷಯದಲ್ಲಿ ನೋಡುವುದಾದರೆ ಖರ್ಚು ಹೆಚ್ಚಿರಲಿದೆ. ಮನೆಯವರ ಜೊತೆಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ಹೆಚ್ಚು ವಾದ ಮಾಡಲು ಹೋಗಬೇಡಿ, ತಾಳ್ಮೆಯಿಂದ ವರ್ತಿಸಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ.

ಧನು ರಾಶಿ
ಈ ದಿನ ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ಅಪೂರ್ಣವಾಗಿರುವ ಕೆಲಸಗಳು ವೇಗ ಪಡೆಯಲಿದೆ. ವ್ಯಾಪಾರಸ್ಥರಿಗೆ ಈ ದಿನ ಉತ್ತಮವಾಗೊರಲಿದೆ. ಹಣ ನಷ್ಟವಾಗದಿರಲು ಖರ್ಚು ಮಾಡುವಾಗ ಅಥವಾ ಹೂಡಿಕೆ ಮಾಡುವಾಗ ಜಾಗ್ರತೆವಹಿಸಿ. ಮನೆಯ ವಾತಾವರಣ ಚೆನ್ನಾಗಿರಲಿದೆ.

ಮಕರ ರಾಶಿ
ಈ ದಿನ ಸ್ವಲ್ಪ ಜಾಗ್ರತೆವಹಿಸಿ, ಈ ದಿನ ನಿಮ್ಮ ಚಿಂತೆಗೆ ಹಲವು ವಿಷಯಗಳು ಕಾರಣವಾಗಿರಬಹುದು. ಹಣಕಾಸಿನ ದೃಷ್ಟಿಯಿಂದ ಈ ದಿನ ಮಿಶ್ರಫಲ, ಹಣದ ಸಮಸ್ಯೆ ಇರಲ್ಲ, ಆದರೆ ಖರ್ಚು ಹೆಚ್ಚಿರಲಿದೆ. ವಾಹ ಖರೀದಿಗೆ ಈ ಅವಧಿ ಉತ್ತಮವಾಗಿರಲಿದೆ.

ಕುಂಭ ರಾಶಿ
ಈ ದಿನ ಅನಗ್ಯತ ವಿಷಯಗಳ ಕಡೆ ಗಮನಹರಿಸಬೇಡಿ, ಬೇರೆಯವರ ವಿಷಯದಲ್ಲಿ ಮೂಗು ತೂರಿಸಬೇಡಿ.ನಿಮ್ಮ ಹಾಗೂ ಸಂಗಾತಿ ನಡುವೆ ಏನಾದರು ಭಿನ್ನಾಭಿಪ್ರಾಯವಿದ್ದರೆ ಅದನ್ನು ಮಾತನಾಡಿ ಬಗೆಹರಿಸಿಕೊಳ್ಳುವುದು ಸೂಕ್ತ. ಪ್ರಮುಖ ಕೆಲಸವನ್ನು ನಾಳೆಗೆ ಅಂತ ಮುಂದೂಡಬೇಡಿ.

ಮೀನ ರಾಶಿ

ಈ ದಿನ ಯಾವುದೇ ನಿರ್ಧಾರವಾದರೂ ಆಲೋಚಿಸಿ ತೆಗೆದುಕೊಳ್ಳಬೇಕು. ಮನೆಯ ಸೌಕರ್ಯ ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಕಡೆಗೆ ಗಮನಹರಿಸಿ. ಕೆಲಸದಲ್ಲಿ ಬದಲಾವಣೆ ಮಾಡಲು ಪ್ರಯತ್ನ ಮಾಡುವುದು ಒಳ್ಳೆಯದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

Story first published: Saturday, January 4, 2025, 22:56 [IST]
X
Desktop Bottom Promotion