Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ದಿನ ಭವಿಷ್ಯ: ಜುಲೈ 31, ಈ ಮಾಸದ ಕೊನೆಯ ದಿನ ನಿಮಗೆ ಹೇಗಿರಲಿದೆ?
ಈ ಮಾಸದ ಕೊನೆಯ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
ಮೇಷ ರಾಶಿ
ಇಂದು ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಡಿ, ಹೊಸ ಕೆಲಸಕ್ಕೆ ಈ ದಿನ ಸೂಕ್ತವಲ್ಲ, ಮನಸ್ಸಿನಲ್ಲಿ ಬೇಸರವಿರಬಹುದು, ಅರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ದಿನ ಉತ್ತಮವಾಗಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ, ಆಹಾರಕ್ರಮದ ಕಡೆಗೆ ಗಮನಹರಿಸಿದರೆ ಒಳ್ಳೆಯದು.

ವೃಷಭ ರಾಶಿ
ಈ ದಿನ ನಿಮಗೆ ಶುಭವಾಗಿದೆ, ನೀವು ಕೆಲಸ ಅಂತ ಆಯಾಸ ಮಾಡಿಕೊಳ್ಳದೆ ಆರೋಗ್ಯದ ಕಡೆಗೂ ಗಮನಹರಿಸಿ. ಕುಟುಂಬ ಜೀವನ ಚೆನ್ನಾಗಿರಲಿದೆ, ವೈವಾಹಿಕ ಜೀವನದಲ್ಲಿ ಉತ್ತಮ ಹೊಂದಾಣಿಕೆ ಇರಲಿದೆ, ಆರೋಗ್ಯ ಸಮಸ್ಯೆ ಇದ್ದರೆ ಸುಧಾರಣೆಯಾಗುವವರೆಗೆ ವಿಶ್ರಾಂತಿ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ಕುಟುಂಬದಲ್ಲಿನ ಪ್ರಮುಖ ಸಮಸ್ಯೆ ಬಗೆಹರಿಯಲಿದೆ, ಹಣವನ್ನು ಮಿತಿಯಲ್ಲಿ ಖರ್ಚು ಮಾಡಿದರೆ ಒಳ್ಳೆಯದು. ಉದ್ಯೋಗದಲ್ಲಿ ಈ ದಿನ ಉತ್ತಮವಾಗಿದೆ, ವೈವಾಹಿಕ ಜೀವನದಲ್ಲಿ ಅನುಮಾನ ಒಳ್ಳೆಯದಲ್ಲ, ಅಲ್ಲದೆ ಚಿಕ್ಕ ಸಮಸ್ಯೆ ದೊಡ್ಡದು ಮಾಡಬೇಡಿ.
ಕರ್ಕ ರಾಶಿ
ಈ ದಿನ ನೀವು ಕೆಲಸದ ಕಡೆಗೆ ತುಂಬಾ ಗಮನಹರಿಸುವುದು ಒಳ್ಳೆಯದು, ನಿಮ್ಮ ವೈಯಕ್ತಿಕ ಜೀವನದ ಬಗ್ಗೆ ಬೇರೆಯವರ ಜೊತೆ ಹೇಳಿಕೊಳ್ಳಲು ಹೋಗಬೇಡಿ. ವ್ಯಾಪಾರಿಗಳು ವ್ಯವಹಾರದ ಕಡೆಗೆ ಹೆಚ್ಚಿನ ಗಮನಹರಿಸಿದರೆ ಮಾತ್ರ ಲಾಬ ಗಳಿಸಲು ಸಾಧ್ಯವಾಗುವುದು, ಇನ್ನು ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ, ಆದರೆ ಹಠದ ಸ್ವಭಾವದಿಂದ ಸಮಸ್ಯೆಯನ್ನುಂಟು ಮಾಡದಿರಿ. ಆರೋಗ್ಯದ ಕಡೆಗೆ ಗಮನಹರಿಸಬೇಕು.
ಸಿಂಹ ರಾಶಿ
ಕೆಲಸಕ್ಕೆ ಸಂಬಮಧಿಸಿದಂತೆ ಜಾಗ್ರತೆವಹಿಸಿ, ಅದರೆ ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ,
ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ಕುಟುಂಬದಲ್ಲಿ ಸಂತೋಷಕ್ಕಾಗಿ ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ. ಆರೋಗ್ಯ ಸಮಸ್ಯೆ ಇದ್ದರೆ ಜಾಗ್ರತೆವಹಿಸಿ.
ಕನ್ಯಾ ರಾಶಿ
ಈ ದಿನ ಆರ್ಥಿಕವಾಗಿ ಉತ್ತಮವಿದೆ, ಕೆಲಸ-ಕಾರ್ಯಗಳು ಉತ್ತಮವಾಗಿ ಪೂರ್ಣಗೊಳ್ಳಲಿದೆ. ಬೇಡದ ವಿಷಯಗಳ ಕಡೆ ಗಮನಹರಿಸಬೇಡಿ, ವೈವಾಹಿಕ ಜೀವನ ಚೆನ್ನಾಗಿರಲಿದೆ, ಆರೋಗ್ಯ ಸಮಸ್ಯೆಗಳಿರಬಹುದು, ನಿರ್ಲಕ್ಷ್ಯ ಮಾಡದಿರಿ.
.
ತುಲಾ ರಾಶಿ
ಇಂದು ಯಾವುದೇ ನಿರ್ಧಾರವಾದರೂ ಆಲೋಚಿಸಿ ತೆಗೆದುಕೊಳ್ಳುವುದು ಒಳ್ಳೆಯದು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಬಾರದು, ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ.
ಕಚೇರಿಯಲ್ಲಿ ಏನಾದರೂ ಸಮಸ್ಯೆವಿದ್ದರೆ ಕೋಪಪಡಬೇಡಿ, ಬುದ್ಧಿವಂತಿಕೆಯಿಂದ ನಿಭಾಯಿಸಿ. ಆರೋಗ್ಯ ಸಮಸ್ಯೆಗಳಿರಬಹುದು.
ವೃಶ್ಚಿಕ ರಾಶಿ
ಕೆಲವೊಂದು ಹೊಸ ಯೋಜನೆಯ ಕೆಲಸ ಪ್ರಾರಂಭಿಸಲಿದ್ದರೆ ಈ ದಿನ ನಿಮಗೆ ಶುಭವಾಗಿದೆ, ಆರ್ಥಿಕ ವ್ಯವಹಾರ ಜಾಗ್ರತೆಯಿಂದ ಮಾಡಿ. ಸಾಲ ಕೊಡುವುದಾಗಲಿ ಪಡೆಯುವುದಾಗಲಿ ಮಾಡದಿರಿ, ಕೆಲವೊಂದು ಪ್ರಮುಖ ವ್ಯವಹಾರದಲ್ಲಿ ದಾಖಲೆ ತುಂಬಾನೇ ಮುಖ್ಯ. ವೈವಾಹಿಕ ಬದುಕಿನಲ್ಲಿ ಅಥವಾ ಕುಟುಂಬದ ಇತರ ಸದಸ್ಯರ ಜೊತೆಗೆ ಕೆಲ ಭಿನ್ನಾಭಿಪ್ರಾಯವಿರಬಹುದು. ಆರೋಗ್ಯ ಸಮಸ್ಯೆವಿದ್ದರೆ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು, ನಿರ್ಲಕ್ಷ್ಯ ದುಬಾರಿಯಾಗುವುದು.
ಧನು ರಾಶಿ
ಈ ದಿನ ನಿಮಗೆ ಶುಭವಾಗಿದೆ, ಪ್ರಮುಖ ತಲೆನೋವು ದೂರಾಗಲಿದೆ, ನಿಮ್ಮ ವ್ಯಾಪಾರ ಯೋಜನೆಗಳನ್ನು ರಹಸ್ಯವಾಗಿಡಲು ಪ್ರಯತ್ನಿಸಿ ಇಲ್ಲದಿದ್ದರೆ ನಿಮ್ಮ ವಿರೋಧಿಗಳು ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಈ ದಿನ ಶುಭವಾಗಿದೆ, ವೈವಾಹಿಕ ಹಾಗೂ ಕುಟುಂಬ ಜೀವನದ ದೃಷ್ಟಿಯಿಂದಲೂ ಈ ಸಮಯ ಉತ್ತಮವಾಗಿದೆ, ಆರೋಗ್ಯದ ಬಗ್ಗೆ ಹೇಳುವುದಾದರೆ ಆಹಾರಕ್ರಮದತ್ತ ಗಮನಹರಿಸಿ.
ಮಕರ ರಾಶಿ
ಈ ದಿನ ನಿಮಗೆ ಅನುಕೂಲಕರವಲ್ಲ, ಕೆಲ ಸಮಸ್ಯೆಗಳು ನಿಮ್ಮ ಆತ್ಮವಿಶ್ವಾಸ ಕಡಿಮೆ ಮಾಡಬಹುದು, ವ್ಯಾಪಾರಿಗಳಿಗೆ ಈ ದಿನ ಧನ ಲಾಭವಾಗಲಿದೆ. ಕುಟುಂಬದಲ್ಲಿ ಕೆಲ ಸಮಸ್ಯೆಗಳಿರಬಹುದು, ನೀವು ಅವರ ನಂಬಿಕೆಗೆ ಪೆಟ್ಟಾಗುವಂತೆ ವರ್ತಿಸಬೇಡಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯೂ ಇರಬಹುದು.
ಕುಂಭ ರಾಶಿ
ಈ ದಿನ ನಿಮಗೆ ಅಷ್ಟೊಂದು ಅನುಕೂಲಕರವಲ್ಲ, ಹಣದ ಚಿಂತೆ ಇರುತ್ತದೆ. ಆರೋಗ್ಯದಲ್ಲಿ ಹಠಾತ್ ಕ್ಷೀಣತೆಯಿಂದಾಗಿ ನಿಮ್ಮ ದಿನನಿತ್ಯದ ಯೋಜನೆಗಳಿಗೆ ಅಡ್ಡಿಯಾಗುವುದು. ಉದ್ಯೋಗಿಗಳ ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುತ್ತದೆ, ವೈವಾಹಿಕ ಬದುಕಿನಲ್ಲಿ ಅಹಂ ದೂರವಿಟ್ಟರೆ ಎಲ್ಲವೂ ಸರಿಯಾಗಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಮೀನ ರಾಶಿ
ಆರ್ಥಿಕ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ, ಉದ್ಯೋಗಿಗಳ ಕೆಲಸ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳಲಿದೆ. ನಿಮ್ಮ ಕೋಪ ಮತ್ತು ಹಠಮಾರಿ ಸ್ವಭಾವವು ಕೆಲವೊಮ್ಮೆ ಕುಟುಂಬದ ಸದಸ್ಯರ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ. ಆರೋಗ್ಯವಾಗಿರಲು, ನಕಾರಾತ್ಮಕತೆಯಿಂದ ದೂರವಿರಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










