Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿ 23ರ ದಿನ ಭವಿಷ್ಯ ಪ್ರಕಾರ ಈ ದಿನ ಹೇಗಿರಲಿದೆ?
ವೈದಿಕಶಾಸ್ತ್ರದ ಪ್ರಕಾರ ಫೆಬ್ರವರಿ 23 ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ ಬನ್ನಿ:
ಮೇಷ ರಾಶಿ
ವ್ಯಾಪಾರಿಗಳು ಉತ್ತಮ ಲಾಭ ಗಳಿಸುವಿರಿ. ನಿಮ್ಮ ಪ್ರೀತಿಪಾತ್ರರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು. ಈ ದಿನ ನಿಮ್ಮ ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಹಾಗೆ ಬಹಳಷ್ಟು ಖರ್ಚು ಆಗುವಂತಹ ಸಂದರ್ಭಗಳು ಎದುರಾಗಬಹುದು. ಈ ದಿನ ನಿಮ್ಮ ದೊಡ್ಡ ಸಮಸ್ಯೆಯೊಂದು ಬಗೆಹರಿಯಬಹುದು. ನೀವು ಅತೀ ಹೆಚ್ಚು ಸಮಯ ಮನೆಯಿಂದ ಹೊರಗೆ ಕಳೆಬೇಕಾಗಬಹುದು.

ವೃಷಭ ರಾಶಿ
ಈ ದಿನ ನಿಮ್ಮ ಮನಸ್ಥಿತಿ ಹಾಗೂ ಮಾನಸಿಕ ನೆಮ್ಮದಿ ಹಾಳಾಗುವಂತಹ ವಿಚಾರಗಳು ನಡೆಯಬಹುದು. ನಿಮಗೆ ಈ ದಿನ ವಿಶ್ರಾಂತಿಯ ಅಗತ್ಯವಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಗಮನವಿರಲಿ. ಹಾಗೆ ನಿಮ್ಮ ಕೆಲವು ಕೆಲಸಗಳಿಂದ ಒತ್ತಡ ನಿವಾರಣೆಯಾಗಬಹುದು.
ಮಿಥುನ ರಾಶಿ
ಕುಟುಂಬ ಜೀವನದಲ್ಲಿ ಪರಿಸ್ಥಿತಿಯು ಏರಿಳಿತಗಳಿಂದ ಕೂಡಿರಲಿದೆ. ವಿವಾಹಿತರಾಗಿದ್ದರೆ ಒಂದಿಷ್ಟು ಮನಸ್ತಾಪಗಳು ಎದುರಾಗಬಹುದು. ಕೋಪವನ್ನು ಇಂದು ನಿಯಂತ್ರಿಸುವುದು ಒಳ್ಳೆಯದು, ದಿನದ ಕೊನೆಯಲ್ಲಿ ಹಣ ಲಾಭವಾಗುವ ನಿರೀಕ್ಷೆ ಇದೆ.
ಕರ್ಕ ರಾಶಿ
ವ್ಯಾಪಾರಿಗಳು ಈ ದಿನ ಹೊಸ ಹೂಡಿಕೆ ಮಾಡಲು ಹೋಗದಿದ್ದರೆ ಒಳ್ಳೆಯದು. ಸ್ನೇಹಿತರು, ಹಿತೈಷಿಗಳಿಂದ ಒಳ್ಳೆ ಸುದ್ದಿ ಕೇಳುವಿರಿ. ಆಹಾರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗೆ ನೀವು ತುತ್ತಾಗಬಹುದು. ಇಂದು ಖರ್ಚು ಕೂಡ ಹೆಚ್ಚಾಗಬಹುದು.
ಸಿಂಹ ರಾಶಿ
ಆರ್ಥಿಕವಾಗಿ ಉಳಿತಾಯ ಮಾಡಲು ಈ ದಿನ ಮುಂದಾಗಬಹುದು. ಹಾಗೆ ವೃತ್ತಿಪರರಿಗೆ ಈ ದಿನ ಶುಭಕರವಾಗಿರಲಿದೆ. ಒತ್ತಡ ಹಾಗೂ ಬಹುಕಾಲದ ದೊಡ್ಡ ಪ್ರಶ್ನೆಗೆ ಇಂದು ಉತ್ತರ ಸಿಗಬಹುದು. ಅವಿವಾಹಿತರು ಇಂದು ಶುಭ ಸುದ್ದಿ ಕೇಳಬಹುದು.
ಕನ್ಯಾ ರಾಶಿ
ಮಕ್ಕಳ ಪ್ರಗತಿಗೆ ಸಂಬಂಧಿಸಿದ ದೊಡ್ಡ ಚಿಂತೆ ದೂರಾಗಲಿದೆ. ವ್ಯಾಪಾರಿಗಳಿಗೆ ಸಂಬಂಧಿಸಿದ ಜನರಿಗೆ ಇಂದು ಬಹಳ ಲಾಭದಾಯಕ ದಿನವಾಗಲಿದೆ. ಬಹುಕಾಲದಿಂದ ಬಾಕಿ ಉಳಿದಿದ್ದ ನಿಮ್ಮ ಕೆಲಸ ಪೂರ್ಣಗೊಳಿಸುವುದು ಉತ್ತಮ.
ತುಲಾ ರಾಶಿ
ವ್ಯಾಪಾರಿಗಳಿಗೆ ಈ ದಿನ ಸವಾಲಿನಿಂದ ಕೂಡಿರಲಿದೆ. ಇಂದು ನೀವು ಹಣದ ವಿಷಯದಲ್ಲಿ ತುಂಬಾ ಅದೃಷ್ಟದ ದಿನ. ಕೆಲಸದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿರುತ್ತದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಇಂದು ಮನೆಯಲ್ಲಿ ಪೂಜೆ, ಹವನ ಇತ್ಯಾದಿಗಳನ್ನು ಆಯೋಜಿಸಬಹುದು. ಕೌಟುಂಬಿಕ ಜೀವನ ಚೆನ್ನಾಗಿರಲಿದೆ.
ವೃಶ್ಚಿಕ ರಾಶಿ
ಈ ದಿನ ನಿಮ್ಮ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗಬಹುದು. ಮನೆಗೆ ಹೊಸ ವಸ್ತು ಖರೀದಿಸಲು ನೀವು ಮುಂದಾಗಬಹುದು. ಮನೆಯಲ್ಲಿ ಶಾಂತಿ ಇರಲಿದೆ, ದೇವಾಲಯ ಭೇಟಿ ಸಾಧ್ಯತೆ ಇದೆ. ಸಂಬಂಧಿಗಳನ್ನು ಭೇಟಿಯಾಗಬಹುದು. ಆರೋಗ್ಯದ ಕಡೆ ಗಮನವಿರಲಿ. ಅವಕಾಶಕ್ಕಾಗಿ ಕಾಯುವುದಕ್ಕಿಂತ ನೀವಾಗಿಯೇ ಅವಕಾಶಗಳ ರಚಿಸುವುದು ಒಳಿತು.
ಧನು ರಾಶಿ
ವ್ಯಾಪಾರಿಗಳು ಯಾವುದೇ ಒಪ್ಪಂದ ಮಾಡುವುದಾದರೆ ಆತುರಬೇಡ, ಅದರಲ್ಲೂ ಹೊಸ ವ್ಯಾಪಾರ ವ್ಯವಹಾರ ಮಾಡುವುದಾದರೆ ಎಚ್ಚರಿಕೆ ವಹಿಸಿ. ಚಿಲ್ಲರೆ ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಬಹುದು.
ಮಕರ ರಾಶಿ
ವ್ಯಾಪಾರಿಗಳಿಗೆ ಈ ದಿನ ಲಾಭ ಪಡೆಯುತ್ತೀರಿ. ವಿಶೇಷವಾಗಿ ನೀವು ಪಾಲುದಾರಿಕೆ ವ್ಯಾಪಾರ ಮಾಡುವವರು ಉತ್ತಮ ಲಾಭ ಮಾಡಬಹುದು. ಹಾಗೆ ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿ ತೊಡಕ್ಕಿಲ್ಲದೆ ನಡೆಯಲಿದೆ.
ಕುಂಭ ರಾಶಿ
ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ನೀವು ಹೊಸದಾಗಿ ವ್ಯಾಪಾರ, ವಸ್ತು ಖರೀದಿಗೆ ಆಲೋಚಿಸಿದ್ದರೆ ದಿನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಯಾವುದೇ ಕೆಲಸ ಅಪೂರ್ಣ ಮಾಡಿ ಬಿಡಬೇಡಿ. ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ.
ಮೀನ ರಾಶಿ
ಉದ್ಯೋಗಿಗಳು ಶುಭ ಸುದ್ದಿಯನ್ನು ಪಡೆಯಬಹುದು. ಪ್ರೀತಿ ಪಾತ್ರರ ಭೇಟಿಗೆ ಇದು ಶುಭ ಕಾಲ. ನಿಮ್ಮ ಭವಿಷ್ಯದ ಬಗ್ಗೆ ಬಹುದೊಡ್ಡ ಮಾತುಕತೆಗೆ ನೀವು ಸಾಕ್ಷಿಯಾಗುತ್ತೀರಿ, ವಾಹನ ಮಾಲಿಕರಿಗೆ ಇಂದು ಎಚ್ಚರಿಕೆಯಿಂದ ಇರಲು ಸೂಚಿಸಲಾಗುವುದು. ಕುಟುಂಬದಲ್ಲಿ ಗೊಂದಲದ ವಾತಾವರಣ ಇರಬಹುದು. ನಿಮ್ಮ ಹಣಕಾಸು ಸಮಸ್ಯೆ ಹೆಚ್ಚಾಗಬಹುದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications