Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆಬ್ರವರಿ 17: ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ ನೋಡೋಣ
ಜ್ಯೋತಿಷ್ಯದ ದೃಷ್ಟಿಯಿಂದ ಫೆಬ್ರವರಿ 17 ಹೇಗಿರಲಿದೆ ನೋಡೋಣ:
ಮೇಷ ರಾಶಿ
ಈ ದಿನ ವೃತ್ತಿ ಬದುಕಿನ ದೃಷ್ಟಿಯಿಂದ ನಿಮಗೆ ಉತ್ತಮವಾಗಿರಲಿದೆ, ನೀವು ಯಾವುದೇ ನಿರ್ಧಾರವಾದರೂ ಸೋಲು-ಗೆಲುವು ಅಂತ ಚಿಂತೆ ಮಾಡದೆ ಧೈರ್ಯದಿಂದ ತೆಗೆದುಕೊಳ್ಳಿ ಎಂದು ಸಲಹೆ ನೀಡಲಾಗುವುದು. ನಿಮ್ಮ ಇಚ್ಛೆಗೆ ತಕ್ಕಂತೆ ಒಳ್ಳೆಯ ಅವಕಾಶ ಹುಡುಕಿಕೊಂಡು ಬರಲಿದೆ, ನಿಮ್ಮ ಕನಸುಗಳನ್ನು ಬೆನ್ನಟ್ಟಿ ಹೋಗಲು ಹಿಂದೇಟು ಹಾಕಬೇಡಿ.

ವೃಷಭ ರಾಶಿ
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗಲಿದೆ, ವ್ಯಾಪಾರಸ್ಥರಿಗೆ ಧನ ಲಾಭವಾಗಲಿದೆ, ಏನಾದರು ಸವಾಲು ಎದುರಾದರೆ ಅದನ್ನು ಸುಲಭವಾಗಿ ಬಗೆಹರಿಸಲು ಸಾಧ್ಯವಾಗುವುದು. ಕುಟುಂಬ ಬದುಕಿನ ಕಡೆಗೆ ಗಮನಹರಿಸಿ.
ಮಿಥುನ ರಾಶಿ
ಕುಟುಂಬದ ಜೊತೆಗೆ ಸಂತೋಷದಿಂದ ಸಮಯ ಕಳೆಯಲು ಸಾಧ್ಯವಾಗುವುದು, ನಿಮ್ಮ ಹಾಗೂ ಸಂಗಾತಿ ನಡುವಿನ ಬಾಂಧವ್ಯ ಚೆನ್ನಾಗಿರಲಿದೆ. ಕೆಲಸಕ ಕಾರ್ಯಗಳು ಚೆನ್ನಾಗಿರಲಿದೆ, ಆರ್ಥಿಕ ಖರ್ಚು ಹೆಚ್ಚಿದ್ದರೂ ಅದು ಖುಷಿ ನೀಡಲಿದೆ.
ಕರ್ಕ ರಾಶಿ
ಹೊಸ ಯೋಜನೆಯಲ್ಲಿ ತೊಡಗಿಕೊಳ್ಳಲು ಉತ್ತಮವಾಗಿದೆ, ಕೆಲಸದಲ್ಲಿ ನಿಮಗೆ ಉತ್ತಮವಾಗಿದೆ, ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪ್ರತಿಫಲ ಸಿಗಲಿದೆ, ಆರ್ಥಿಕವಾಗಿ ಈ ದಿನ ಉತ್ತಮವಾಗಿದೆ, ಕುಟುಂಬ ಬದುಕು ಕೂಡ ಉತ್ತಮವಾಗಿರಲಿದೆ.
ಸಿಂಹ ರಾಶಿ
ಈ ದಿನ ಕೆಲ ಪ್ರತಿಕೂಲ ಪರಿಸ್ಥಿತಿ ಎದುರಾಗಬಹುದು, ಆದರೆ ಅದನ್ನೆಲ್ಲಾ ಎದುರಿಸಲು ಸಾಧ್ಯವಾಗುವುದು, ಅಲ್ಲದೆ ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕಬೇಡಿ, ನಿಮ್ಮ ಪ್ರಯತ್ನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುವುದು.
ಕನ್ಯಾ ರಾಶಿ
ಸವಾಲುಗಳನ್ನು ತಾಳ್ಮೆಯಿಂದ ಎದುರಿಸಲು ಪ್ರಯತ್ನಿಸಿ, ನೀವು ಅನಗ್ಯತ ಚಿಂತೆ ಬಿಟ್ಟು ನಿಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿ, ಆರೋಗ್ಯ ಸಮಸ್ಯೆವಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ತುಲಾ ರಾಶಿ
ಬೇಡದ ವಿಷಯಗಳಲ್ಲಿ ನಿಮ್ಮ ಶಕ್ತಿ ವ್ಯಯ ಮಾಡಬೇಡಿ ಎಂದು ಸಲಹೆ ನೀಡಲಾಗುವುದು, ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನಹರಿಸಿ, ಇದು ನಿಮಗೆ ಯಶಸ್ಸು ತಂದು ಕೊಡಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.
ವೃಶ್ಚಿಕ ರಾಶಿ
ನೀವು ಸಂವಹನದ ಕಡೆಗೆ ಗಮನಹರಿಸಿ, ನಿಮ್ಮ ಮಾತುಗಳಿಂದ ಯಾರನ್ನೂ ನೋಯಿಸಬೇಡಿ, ನಿಮ್ಮ ಪ್ರಮುಖ ಕೆಲಸವನ್ನು ನಿರ್ಲಕ್ಷ್ಯ ಮಾಡಬೇಡಿ. ಸಮಸ್ಯೆಯನ್ನು ಬುದ್ಧಿವಂತಿಕೆಯಿಂದ ಬಗೆಹರಿಸಲು ಪ್ರಯತ್ನಿಸಿ.
ಧನು ರಾಶಿ
ನಿಮ್ಮ ಗುರಿಯ ಕಡೆಗೆ ಗಮನಹರಿಸಿ, ನಿಮ್ಮ ಆತ್ಮವಿಶ್ವಾಸ ಉತ್ತಮವಾಗಿರಲಿದೆ, ನಿಮ್ಮ ವೃತ್ತಿ ಬದುಕಿನ ಕಡೆಗೆ ಗಮನಹರಿಸಿ, ಯಾವುದೇ ನಿರ್ಧಾರ
ತೆಗೆದುಕೊಳ್ಳುವುದಾದರೆ ಜಾಗ್ರತೆವಹಿಸಿ.
ಮಕರ ರಾಶಿ
ಹಳೆಯ ತಪ್ಪುಗಳನ್ನು ಮತ್ತೆ ಮಾಡದಂತೆ ಜಾಗ್ರತೆವಹಿಸಿ, ಈ ದಿನ ನೀವು ತೆಗೆದುಕೊಳ್ಳುವ ನಿರ್ಧಾರ ಪ್ರಮುಖವಾಗಿರುತ್ತದೆ, ಕುಟುಂಬ ಜೀವನದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ.
ಕುಂಭ ರಾಶಿ
ನಿಮಗೆ ಹಿರಿಯರು ನೀಡಿರುವ ಸಲಹೆ ನಿರ್ಲಕ್ಷ್ಯ ಮಾಡಬೇಡಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ, ನಿಮ್ಮ ಕೆಲಸ ಕಾರ್ಯಗಳು ನೀವು ಊಹಿಸಿರುವುದಕ್ಕಿಂತಲೂ ಉತ್ತಮವಾಗಿ ನಡೆಯಲಿದೆ.
ಮೀನ ರಾಶಿ
ಸಂಬಂಧದ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ, ವೃತ್ತಿ ಬದುಕಿನ ದೃಷ್ಟಿಯಿಂದ ಈ ದಿನ ಉತ್ತಮವಾಗಿರಲಿದೆ. ಆರ್ಥಿಕ ದೃಷ್ಟಿಯಿಂದ, ಆರೋಗ್ಯ ವಿಯಷದಲ್ಲಿಯೂ ಈ ದಿನ ಉತ್ತಮವಾಗಿದೆ.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications