ದಿನ ಭವಿಷ್ಯ: ಡಿಸೆಂಬರ್ 31ರ ದಿನ ಭವಿಷ್ಯದಲ್ಲಿ ನಿಮಗೆ ಯಾವ ಫಲ ಇದೆ ನೋಡಿ..!

ಶುಭ ದಿನ, ಈ ದಿನ ಯಾವ ರಾಶಿಗೆ ಹೇಗಿದೆ ನೋಡೋಣ:

ಮೇಷ ರಾಶಿ

ನಿಮ್ಮ ಬಜೆಟ್‌ಗೆ ಅನುಗುಣವಾಗಿ ನೀವು ಖರ್ಚು ಮಾಡಬೇಕಾಗುತ್ತದೆ ಇಲ್ಲದಿದ್ದರೆ ನೀವು ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ವ್ಯಾಪಾರಿಗಳು ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ಸಾಧಿಸಲು, ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯ ಇರಲಿದೆ. ಆರೋಗ್ಯ ದುರ್ಬಲವಾಗಿರುತ್ತದೆ.

Daily Horoscope December 31 Today s Prediction For 12 Zodiac Signs

ವೃಷಭ ರಾಶಿ

ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ, ವೃತ್ತಿಯಲ್ಲಿ ಬದಲಾವಣೆಯಾಗಬಹುದು. ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ, ವೃತ್ತಿಯಲ್ಲಿ ಬದಲಾವಣೆಯಾಗಬಹುದು. ಕೋಪವನ್ನು ನಿಯಂತ್ರಿಸಿದರೆ ಜಗಳ ತಪ್ಪಿಸಬಹುದು. ಸಣ್ಣ ವ್ಯಾಪಾರಿಗಳಲ್ಲಿ ಅಧಿಕ ಲಾಭ ನೋಡಬಹುದು.

ಮಿಥುನ ರಾಶಿ

ಯಾವುದೇ ಕೆಲಸಕ್ಕೆ ಸಂಬಂಧಿಸಿದ ಚಿಂತೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವ್ಯಾಪಾರಿಗಳಿಗೆ ಧನ ಲಾಭವಾಗಲಿದೆ. ಈ ರಾಶಿಯ ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಫಲಿತಾಂಶಗಳನ್ನು ಪಡೆಯಬಹುದು. ದೂರ ಪ್ರಯಾಣದಂತಹ ಕೆಲಸಕ್ಕೆ ನೀವು ಮುಂದಾಗಬೇಕಾಗಬಹುದು. ಇಂದು ಹಣದ ವಿಷಯದಲ್ಲಿ ಯಾವುದೇ ಶುಭ ಸೂಚನೆಗಳಿರುವುದಿಲ್ಲ.

ಕರ್ಕ ರಾಶಿ

ಆದಾಯ ಹೆಚ್ಚಾಗುವುದು, ಕೆಲಸ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರಿಗಳಿಗೆ ಇಂದು ಉತ್ತಮ ದಿನ. ಮಾತಿನ ಮೂಲಕ ಒಂದಿಷ್ಟು ಸಮಸ್ಯೆಗಳ ತಂದುಕೊಳ್ಳಬಹುದು. ಹಳೆಯ ಅನಾರೋಗ್ಯ ಸಮಸ್ಯೆಗಳು ಮತ್ತೆ ನಿಮಗೆ ಕಾಡಬಹುದು. ಅದರಲ್ಲೂ ಕೀಲು, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅದು ಹೆಚ್ಚಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಿರಲಿದೆ. ನಿಮ್ಮ ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಬಹುದೊಡ್ಡ ವಿಚಾರಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಕೆಲಸದ ವಿಚಾರದಲ್ಲಿ ಉತ್ತಮ ದಿನ.

ಕನ್ಯಾ ರಾಶಿ

ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಬಾಕಿಯಿರುವ ಕೆಲಸ ಪೂರ್ಣಗೊಳಿಸಲು ಸಾಧ್ಯವಾಗುವುದು. ವ್ಯಾಪಾರಿಗಳಿಗೆ ಒಳ್ಳೆಯ ದಿನವಾಗುತ್ತೆ. ನಿಮ್ಮ ಮಕ್ಕಳ ಆರೋಗ್ಯದ ಮೇಲೆ ವಿಶೇಷ ಗಮನವಿಡಿ. ಹಣಕಾಸಿನ ವ್ಯವಹಾರ ಮಾಡುವಾಗ ಹಲವು ಬಾರಿ ಯೋಚಿಸಿ. ವಾಹನ ಚಾಲಕರು ಎಚ್ಚರಿಕೆಯಿಂದ ಇರಿ.

ತುಲಾ ರಾಶಿ

ಕೆಲಸದ ಸ್ಥಳದಲ್ಲಿ ನೀವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಸಾಲದ ಸಮಸ್ಯೆ ಮತ್ತೆ ಕಾಡಬಹುದು. ಉಳಿತಾಯದ ಒಂದಿಷ್ಟು ಹಣ ನೀವು ಬೇರೆ ಕೆಲಸಕ್ಕೆ ವಿನಿಯೋಗಿಸಿಕೊಳ್ಳಬೇಕಾಗಬಹುದು. ಹೊಸ ವಸ್ತುವನ್ನು ನೀವು ಮನೆಗೆ ತರಬಹುದು. ದಿನದ ಅಂಗತ್ಯದಲ್ಲಿ ಒತ್ತಡ ಬರಬಹುದು. ಬ್ಯಾಂಕಿಂಗ್, ಕೋರ್ಟ್ ಸೇರಿ ಯಾವುದೇ ವ್ಯವಹಾರದಲ್ಲಿ ಕೊಂಚ ಹಿನ್ನಡೆ ಅನುಭವಿಸಬೇಕಾಗಬಹುದು.

ವೃಶ್ಚಿಕ ರಾಶಿ

ದಿನದ ಆರಂಭ ಧನಾತ್ಮಕವಾಗಿರುತ್ತದೆ. ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ನಿಮ್ಮ ಸ್ವಭಾವದಿಂದ ಸಮಸ್ಯೆ ಹೆಚ್ಚಾಗಬಹುದು. ಹಲವರಲ್ಲಿ ಇಂದು ಅಶಾಂತಿ ಕಾಡಬಹುದು, ಇದಕ್ಕೆ ಕುಟುಂಬಸ್ಥರು ಕಾರಣರಾಗಬಹುದು. ಕಟ್ಟಡ ಕೆಸಲಗಾರರು, ದಿನಗೂಲಿ ನೌಕರರಿಗೆ ಒಳ್ಳೆಯ ದಿನವಾಗಬಹುದು. ಸಣ್ಣ ಪುಟ್ಟ ವಿಚಾರದಿಂದ ಉಂಟಾದ ಮನಸ್ಥಾಪ ಬಗೆಹರಿಸಿಕೊಳ್ಳಿ.

ಧನು ರಾಶಿ

ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ನೀವು ಎಚ್ಚರಿಕೆ ಅಗತ್ಯ. ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ದಿನವು ಸೂಕ್ತವಲ್ಲ. ಹಣಕಾಸು ವ್ಯವಹಾರ ಅಥವಾ ಸಾಲ ನೀಡುವುದು, ಹೂಡಿಕೆ ಮಾಡುವ ಕಾರ್ಯವನ್ನು ಮುಂದೂಡುವುದು ಉತ್ತಮ. ಖರ್ಚುಗಳ ಕಡೆಗೆ ಇಂದು ಗಮನವಿಡಿ.

ಮಕರ ರಾಶಿ

ಕಚೇರಿಯಲ್ಲಿ ಕೆಲಸದ ಹೊರೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ಒತ್ತಡವನ್ನು ಅನುಭವಿಸುವಿರಿ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಬಹುದು. ವ್ಯಾಪಾರ ಯೋಜನೆಗಳು ಯಶಸ್ವಿಯಾಗುತ್ತವೆ. ಒಂದಿಷ್ಟು ಒಳ್ಳೆಯ ಕಾರ್ಯಗಳಿಗೆ ನೀವು ಸಾಕ್ಷಿಯಾಗುತ್ತೀರಿ. ಆರೋಗ್ಯದ ಕಡೆಗೆ ಗಮನವಿರಲಿ.

ಕುಂಭ ರಾಶಿ

ಕೆಲಸದಲ್ಲಿ ಈ ದಿನ ಉತ್ತಮವಾಗಿದೆ, ಕೆಲಸದ ಹೊರೆ ಕಡಿಮೆ ಇರಲಿದೆ. ಅವಿವಾಹಿತರಿಗೆ ಶುಭ ಸುದ್ದಿ ಕೇಳಬಹುದು. ದೂರ ಪ್ರಯಾಣ ಮಾಡಬೇಕಾಗಿ ಬರಬಹುದು. ವಾಹನ ಚಲಾಯಿಸುವಾಗ ಎಚ್ಚರ ಇರಬೇಕು. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರಿಗೆ ದಿನವು ಲಾಭದಾಯಕವಾಗಿರುತ್ತದೆ. ಸಂಗಾತಿ ಜೊತೆಗೆ ಕಲಹ ಉಂಟಾಗಬಹುದು.

ಮೀನ ರಾಶಿ

ವ್ಯಾಪಾರಿಗಳಿಗೆ ತೊಂದರೆಗಳು ಹೆಚ್ಚಾಗುತ್ತಿವೆ. ಇಂದು, ಯಾವುದೇ ಆತುರದ ನಿರ್ಧಾರದಿಂದ ನಿಮ್ಮ ನಷ್ಟ ಸಾಧ್ಯ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಬೇರೆಯವರ ಮಾತಿನ ಮೇರೆಗೆ ಯಾವುದೇ ದೊಡ್ಡ ಕೆಲಸಗಳ ಮಾಡಬೇಡಿ. ಈ ದಿನ ಸಾಮಾನ್ಯವಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Daily Horoscope December 31: Today's Prediction For 12 Zodiac Signs

Daily Horoscope December 31: Here is effects on 12 zodiac signs, read on...
Story first published: Tuesday, December 31, 2024, 5:45 [IST]
X
Desktop Bottom Promotion