ದಿನ ಭವಿಷ್ಯ: ಡಿಸೆಂಬರ್ 18ರ ಬುಧವಾರ ನಿಮ್ಮ ರಾಶಿಯಲ್ಲಿ ಯಾವ ಲಾಭವಿದೆ ನೋಡಿ..!

ವೈದಿಕ ಶಾಸ್ತ್ರದ ಪ್ರಕಾರ ಡಿಸೆಂಬರ್ 18ರಂದು ನಿಮಗೆ ಹೇಗಿರಲಿದೆ ಎಂದು ನೋಡೋಣ....

ಮೇಷ ರಾಶಿ

ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವ ಜನರು ಇಂದು ದೊಡ್ಡ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆಯಿದೆ. ವ್ಯಾಪಾರಿಗಳು ಇಂದು ಉತ್ತಮ ಯಶಸ್ಸನ್ನು ಪಡೆಯಬಹುದು. ದಿನದ ದ್ವಿತೀಯಾರ್ಧದಲ್ಲಿ ಆರೋಗ್ಯದಲ್ಲಿ ಹಠಾತ್ ಹದಗೆಡುವ ಸಾಧ್ಯತೆಯಿದೆ. ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ನೀವು ಮಾಡಬೇಕೆಂದಿದ್ದ ಕೆಲಸಗಳು ತಡವಾಗಬಹುದು.

Which Zodiac Signs Have A Good Day Today In Kannada

ವೃಷಭ ರಾಶಿ

ಇಂದು ಹಣದ ವಿಷಯದಲ್ಲಿ ದುಬಾರಿ ದಿನವಾಗಿರುತ್ತದೆ. ನಿಮ್ಮ ಕೈಯಿಂದ ಒಂದಿಷ್ಟು ಖರ್ಚಾಗಬಹುದು. ಕೆಲಸದ ಒತ್ತಡ ಅಧಿಕವಿರಲಿದೆ. ವ್ಯಾಪಾರಸ್ಥರಿಗೆ ಸರಾಸರಿ ದಿನವಾಗಿರುತ್ತದೆ. ಈ ಕೆಲಸದ ಹೊರೆ ನಿಮ್ಮನ್ನು ಕೆರಳಿಸಬಹುದು. ಮಾನಸಿಕ ಒತ್ತಡ ಹೆಚ್ಚಾಗಿರಲಿದೆ, ದಿನದ ಅಂತ್ಯದಲ್ಲಿ ನೆಮ್ಮದಿ ಸಿಗಲಿದೆ.

ಮಿಥುನ ರಾಶಿ

ಉದ್ಯಮಿಗಳು ಯಾವುದೇ ಹಳೆಯ ಸಾಲದಿಂದ ಪರಿಹಾರವನ್ನು ಪಡೆಯಬಹುದು. ನಿಮ್ಮಿಂದ ಯಾರಾದರು ಹಣ ಕೇಳಿ ಪಡೆದರೆ ಅದರಿಂದ ನಿಮಗೂ ಲಾಭವಾಗಲಿದೆ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿರುತ್ತದೆ. ಹಲ್ಲು ನೋವಿಗೆ ಸಂಬಂಧಿಸಿದ ಸಮಸ್ಯಗೆ ನೀವು ತುತ್ತಾಗಬಹುದು.

ಕರ್ಕ ರಾಶಿ

ಇಂದು ನೀವು ನಿಮ್ಮ ಮನೆಗೆ ಇಲ್ಲವೆ ಸ್ವಂತಕ್ಕೆ ಹೊಸದೇನಾದರು ಖರೀದಿಸಲು ಚಿಂತಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಹೆಚ್ಚು ಹಣ ಖರ್ಚು ಮಾಡಬೇಕಾದ ಸ್ಥಿತಿಯಲ್ಲಿ ನೀವು ಸಿಲುಕಬಹುದು. ನಿಮ್ಮ ನಾಯಕತ್ವದ ಗುಣದಿಂದ ಇಂದು ನೀವು ಗುರುತಿಸಲ್ಪಡುತ್ತೀರಿ.

ಸಿಂಹ ರಾಶಿ

ವ್ಯಾಪಾರಸ್ಥರು ಇದ್ದಕ್ಕಿದ್ದಂತೆ ಇಂದು ದೀರ್ಘ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿರಲಿದೆ. ದಿನದ ಆರಂಭದಲ್ಲಿ ನಿಮಗೆ ಉತ್ತಮ ಲಾಭಗಳು ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ.

ಕನ್ಯಾ ರಾಶಿ

ವ್ಯಾಪಾರಿಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಉದ್ಯೋಗದ ಜೊತೆಗೆ ಚಿಕ್ಕ ವ್ಯವಹಾರ ಮಾಡಲು ಬಯಸುವುದಾದರೆ ಅದರತ್ತ ಗಮನಹರಿಸಿ. ನೀವಿಂದು ಮಾಡಬೇಕಿದ್ದ ಕೆಲಸಕ್ಕೆ ಒಂದಿಷ್ಟು ಅಡ್ಡಿ ಬರಬಹುದು. ಅನಗತ್ಯ ಚರ್ಚೆ, ಮಾತುಕತೆ, ಗಲಾಟೆ, ಗೊಂದಲದಲ್ಲಿ ನೀವು ಭಾಗಿಯಾಗಬೇಡಿ.

ತುಲಾ ರಾಶಿ

ಹಣದ ವಿಷಯದಲ್ಲಿ ಯಾವುದೇ ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳಬೇಡಿ. ಹೂಡಿಕೆ, ಬಡ್ಡಿ, ವ್ಯವಹಾರಸ್ಥರಿಗೆ ಇಂದು ಶುಭವಾಗಲಿದೆ. ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಆರೋಗ್ಯದಲ್ಲೂ ಸಣ್ಣ ಪುಟ್ಟ ಸಮಸ್ಯೆ ಎದುರಾಗಬಹುದು.

ವೃಶ್ಚಿಕ ರಾಶಿ

ಕೌಟುಂಬಿಕ ಸಮಸ್ಯೆಗಳಿಂದ ಸಂಬಂಧಿಸಿದಂತೆ ಇಂದು ಈ ಸಮಸ್ಯೆಯ ತೀವ್ರತೆ ಹೆಚ್ಚಾಗುವ ಸಂಭವವಿದೆ. ಮಾತುಕತೆಯಿಂದ ನಿಮ್ಮ ಸಮಸ್ಯೆಗಳ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ಯಾವುದೇ ಕಾರಣಕ್ಕೂ ಇಂದು ಸಾಲವಾಗಿ ಯಾರಿಗೂ ಹಣಕಾಸು ನೆರವು ನೀಡಬೇಡಿ. ಅವಿವಾಹಿತರಿಗೆ ಇಂದು ಶುಭ ಸುದ್ದಿ ಕಾದಿದೆ. ಪ್ರೀತಿ, ಪ್ರೇಮದಲ್ಲಿರುವವರು ತಮ್ಮ ಸಂಬಂಧದಲ್ಲಿ ಗಟ್ಟಿತನ ಮೂಡಲಿದೆ.

ಧನು ರಾಶಿ

ಮಾನಸಿಕ ವ್ಯಾಕುಲತೆ ನಿಮ್ಮ ಸಮಸ್ಯೆಗಳನ್ನು ಹೆಚ್ಚಿಸಬಹುದು. ಸಣ್ಣ ವ್ಯಾಪಾರಿಗಳಿಗೆ ಈ ದಿನ ಮಿಶ್ರ ಫಲ ನೀಡಲಿದೆ. ನಿಮ್ಮ ಹಣವನ್ನು ಕೆಲವು ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ ಈ ಸಮಯವು ಸರಿಯಾಗಿದೆ. ಮನೆಯಲ್ಲಿ ನಿಮ್ಮಿಂದ ಸಂತಸದ ವಾತಾವರಣ ಇರಲಿದೆ. ದೂರ ಪ್ರಯಾಣ ಮಾಡಬೇಕಾಗಬಹುದು. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ.

ಮಕರ ರಾಶಿ

ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ. ಹಣಕಾಸು ವಿಚಾರದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸುತ್ತೀರಿ. ಹಿರಿಯರ ಮಾತುಗಳ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಹಿರಿಯರ ಮಾತುಗಳ ಕುರಿತು ನಿರ್ಲಕ್ಷ್ಯ ಮಾಡಬೇಡಿ. ಕುಟುಂಬಸ್ಥರಲ್ಲಿ ಹಣಕಾಸು ವಿಚಾರವಾಗಿ ಸಣ್ಣ ಮನಸ್ಥಾಪ ಉಂಟಾಗಬಹುದು.

ಕುಂಭ ರಾಶಿ

ಸರ್ಕಾರಿ ಹುದ್ದೆಯಲ್ಲಿರುವವರಿಗೆ ಈ ದಿನ ಶುಭ ತರಲಿದೆ. ವಾಹನ ಮಾಲಿಕರಲ್ಲಿ ಉತ್ತಮ ಲಾಭದಾಯಕ ದಿನವಾಗಲಿದೆ. ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಆಸ್ತಿ ಖರೀದಿಯಂತಹ ನಿಮ್ಮ ಕೆಲಸಗಳಿಗೆ ಇಂದು ಒಂದು ಹೆಜ್ಜೆ ಹತ್ತಿರವಾಗುವ ಸಂಭವವಿದೆ. ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಾಣಲಿದ್ದೀರಿ.

ಮೀನ ರಾಶಿ

ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆ ಇದೆ. ಈ ದಿನ ನೀವು ಕೋಪ ನಿಯಂತ್ರಿಸಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿ ಪಡೆಯಬಹುದು. ವಿದ್ಯಾರ್ಥಿಗಳು ಹಿನ್ನಡೆ ಎದುರಿಸಬಹುದು. ಮನೆಯ ಹಿರಿಯರ ಆರೋಗ್ಯದ ಮೇಲೆ ಗಮನವಿಡಿ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

X
Desktop Bottom Promotion