Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಷ್ಣುವಿನ ನಕ್ಷತ್ರದಲ್ಲಿ 4 ಗ್ರಹಗಳ ಸಂಯೋಗ: ತೆರೆಯಲಿದೆ ಅದೃಷ್ಟದ ಬಾಗಿಲು, ಜೀವನ ಸುಂದರ!
ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳು ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಗ್ರಹಗಳ ಈ ಬದಲಾವಣೆಗಳು ಎಲ್ಲಾ ರಾಶಿ ಜನರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಪ್ರಸ್ತುತ ಸೂರ್ಯ ಮತ್ತು ಮಂಗಳ ಮಕರ ರಾಶಿಯಲ್ಲಿವೆ ಆದರೆ ಶ್ರವಣ ನಕ್ಷತ್ರದಲ್ಲಿ ಅಪರೂಪದ ಗ್ರಹಗಳ ಸಂಯೋಗವು ರೂಪುಗೊಳ್ಳುತ್ತಿದೆ.
ಶ್ರವಣ ನಕ್ಷತ್ರವು 27 ನಕ್ಷತ್ರಗಳಲ್ಲಿ 22ನೇ ನಕ್ಷತ್ರವಾಗಿದೆ. ಈಗ ಇದೇ ನಕ್ಷತ್ರದಲ್ಲಿ ಶುಕ್ರ, ಬುಧ, ಸೂರ್ಯ ಮತ್ತು ಮಂಗಳ ಗ್ರಹಗಳು ಸಂಯೋಗವಾಗುತ್ತಿವೆ. ಶುಕ್ರ, ಬುಧ ಮತ್ತು ಸೂರ್ಯ ಈಗಾಗಲೇ ಶ್ರವಣ ನಕ್ಷತ್ರದಲ್ಲಿದ್ದಾರೆ ಮತ್ತು ಗ್ರಹಗಳ ಅಧಿಪತಿ ಮಂಗಳ ಜನವರಿ 28 ರ ಇಂದು ಶ್ರವಣ ನಕ್ಷತ್ರಕ್ಕೆ ಚಲಿಸಲಿದ್ದಾನೆ. ಇದು 4 ಗ್ರಹಗಳ ಸಂಯೋಗ ರೂಪಿಸಲಿದೆ.

ಈ ಅಪರೂಪದ ಗ್ರಹಗಳ ಸಂಯೋಗವು ಎಲ್ಲಾ ರಾಶಿ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗೆ ಕೆಲವು ರಾಶಿ ಜನರಿಗೆ ಅನುಕೂಲಕರವಾಗಲಿದೆ. ಆರ್ಥಿಕ ಅವಕಾಶಗಳು, ವೈಯಕ್ತಿಕ ಬೆಳವಣಿಗೆಯಂತಹ ಪ್ರಯೋಜನಗಳನ್ನು ಸಾಧಿಸುತ್ತವೆ. ಹಾಗಾದ್ರೆ ಈ ಅಪರೂಪದ ಸಂಯೋಗದಿಂದ ಯಾರಿಗೆಲ್ಲಾ ಶುಭವಾಗಲಿದೆ. ಯಾರಿಗೆ ಲಾಭಕರ ದಿನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವೃಷಭ ರಾಶಿ
ವೃಷಭ ರಾಶಿಯ ಜನರಿಗೆ ಈ 4 ಗ್ರಹಗಳ ಸಂಯೋಗವು ಅನುಕೂಲಗಳಿವೆ. ನಿಮ್ಮ ಸಂವಹನ ಕೌಶಲ್ಯ ವೃದ್ಧಿಯಾಗಲಿದೆ. ನಿಮ್ಮ ಹಲವು ಸಮಸ್ಯೆಗಳು ನಿವಾರಣೆಯಾಗುವ ಸಮಯ ಇದಾಗಲಿದೆ. ಪರಿಣಾಮಕಾರಿಯಾಗಿ ನೀವು ಕೆಲಸಗಳನ್ನು ಮಾಡಿ ಮುಗಿಸುವಿರಿ. ನಿಮ್ಮ ಹಣಕಾಸು ಸಂಬಂಧಿತ ವಿಚಾರಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ನಿಮಗೆ ಶುಭಕರವಾಗಲಿವೆ. ನಿರುದ್ಯೋಗಿಗಳಿಗೆ ಈ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಅವಕಾಶಗಳು ಹುಡುಕಿ ಬರಲಿವೆ. ದಾಂಪತ್ಯ ವಿಚಾರದಲ್ಲಿ ಅನುಭವಿಸಿದ್ದ ಸಮಸ್ಯೆಗಳು ಸಹ ಈ ಸಮಯದಲ್ಲಿ ನಿವಾರಣೆಯಾಗಲಿವೆ. ಹೊಸ ವ್ಯವಹಾರಗಳು, ವ್ಯಾಪಾರ ಸಂಬಂಧಿ ವಿಚಾರಗಳು ನೀವು ಬಯಸಿದಂತಹ ಫಲಿತಾಂಶಗಳನ್ನು ತರಲಿದೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಈ ಅಪರೂಪದ ಗ್ರಹಗಳ ಸಂಯೋಗದಿಂದಾಗಿ ಸ್ಥಗಿತಗೊಂಡಿದ್ದ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ ಮತ್ತು ಅನೇಕರು ತಮ್ಮ ದೀರ್ಘಕಾಲದ ಕನಸುಗಳನ್ನು ಈಡೇರಿಸಲು ಅವಕಾಶಗಳನ್ನು ಪಡೆಯುತ್ತಾರೆ. ಉದ್ಯೋಗಾಕಾಂಕ್ಷಿಗಳು ಅಂತಿಮವಾಗಿ ಉತ್ತಮ ಕೆಲಸ ಪಡೆಯಬಹುದು. ನಿಮ್ಮ ಬಡ್ತಿ, ವೇತನ ಹೆಚ್ಚಳ, ವರ್ಗಾವಣೆ ಸಂಬಂಧವಾಗಿ ಇದ್ದಂತಹ ಅಡ್ಡಿಗಳು ನಿವಾರಣೆಯಾಗಲಿದೆ. ಆಪ್ತರಿಂದ ನಿಮಗೆ ಬರಬೇಕಿದ್ದ ಹಣ ಕೈ ಸಿಗಲಿದೆ. ಯಾರೊಂದಿಗಾದರು ನಿಮಗೆ ವಸ್ತು, ಹಣ ಸಂಬಂಧಿತ ವಿಚಾರವಾಗಿ ಉಂಟಾಗಿದ್ದ ಮನಸ್ತಾಪಗಳು ನಿವಾರಣೆಯಾಗಲಿದೆ. ಭೂಮಿ, ಆಸ್ತಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರುವ ನಿಮಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ನೋಡುತ್ತಾರೆ ಮತ್ತು ಅವರ ಆದಾಯವನ್ನು ಹೆಚ್ಚಿಸುವ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಗೃಹಿಣಿಯರು ಬಹಳ ಸಮಯದಿಂದ ಬಯಸಿದಂತಹ ಹಣಕಾಸಿನ ಲಾಭ ನೋಡುವಿರಿ. ನಿಮ್ಮ ಆದಾಯದಲ್ಲಿನ ಹೆಚ್ಚಳವು ನಿಮಗೆ ಹಲವು ರೀತಿಯಲ್ಲಿ ಶುಭದಾಯಕ ಹಾಗೆ ನೆಮ್ಮದಿ ತರಲಿದೆ. ಮನೆಗಾಗಿ ಈ ಸಮಯದಲ್ಲಿ ದುಬಾರಿ ವಸ್ತುಗಳು ಬರಲಿವೆ. ಸರ್ಕಾರಿ ಉದ್ಯೋಗದಲ್ಲಿರುವ ಮಂದಿಗೆ ಈ ಸಮಯ ಅದೃಷ್ಟ ತರಲಿದೆ. ವಾಹನ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹಿಂದಿನ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ನೀವು ಬಹು ವರ್ಷದಿಂದ ಮಾಡಬೇಕಿದ್ದ ಕೆಲಸಗಳಿಗೆ ಒಂದು ಹೆಜ್ಜೆ ಮುಂದೆ ಇಡುವಿರಿ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ನೀವು ಸುಧಾರಣೆ ನೋಡುವಿರಿ. ಬಹಳ ದಿನಗಳಿಂದ ಅವರ ಮನಸ್ಸಿನಲ್ಲಿದ್ದ ಗೊಂದಲ ಈಗ ಕೊನೆಗೊಳ್ಳುತ್ತದೆ.
ಉದ್ಯೋಗದಲ್ಲಿರುವವರು ತಮ್ಮ ಜೀವನದಲ್ಲಿ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಬಹುದು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬಹುದು. ವ್ಯಾಪಾರ ವಲಯದಲ್ಲಿ ದೊಡ್ಡ ಮಟ್ಟದ ಲಾಭವಿದೆ. ನೀವು ಬಯಸಿದಂತೆ ಮಕ್ಕಳ ವಿಚಾರವಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಆಗಿರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications